Blog number 1167. ಒಂದು ಕಾಲದ ಸಮುದಾಯದ ಮುಖಂಡರು ಆಗಿದ್ದ ಘಂಟಿನ ಕೊಪ್ಪದ ತಾರೇಸಿಕ್ಕಿ ಹಿರೇನಾಯಕರ ನೆನಪು ಅವರ ಮೊಮ್ಮಗಳಿಂದ
#ತಾರೇಸಿಕ್ಕಿ_ಹಿರೇನಾಯ್ಕರು_ತಾಲ್ಲೂಕು_ಬೋರ್ಡ್_ಮೆಂಬರ್_ಆಗಿದ್ದರು.
#ಅವರ_ಮಗ_ಯೋಗೇಂದ್ರಪ್ಪ_ಮತ್ತು_ಮೊಮ್ಮಗಳು_ಚಂದ್ರಕಲಾ_ನಿನ್ನೆ_ಬಂದಿದ್ದರು.
ಆನಂದಪುರಂ ಹೋಬಳಿ ಯಡೇಹಳ್ಳಿ ಗ್ರಾಮ ಪಂಚಾಯತ್ ನ ತಾರೇಸಿಕ್ಕಿ ಹಿರೇನಾಯ್ಕರು ಆರು ಅಡಿಗಿಂತ ಎತ್ತರದ ನೀಳಕಾಯರು, ಪಂಚಾಯ್ತಿ, ಸಭೆ ಸಮಾರಂಭದಲ್ಲಿ ಇವರ ಮಾತು ಕಥೆ ಮತ್ತು ಇವರ ದೈರ್ಯದ ಮುಂದೆ ಅವರ ಎದರು ನಿಂತು ಮಾತಾಡುವ ದೈಯ೯ ಯಾರಿಗೂ ಇರುತ್ತಿರಲಿಲ್ಲ ಆಗ ತಾಲ್ಲೂಕ್ ಬೋರ್ಡ್ ಅಧ್ಯಕ್ಷರು ಕಾಗೋಡು ತಿಮ್ಮಪ್ಪನವರು, ಹಿರೇನಾಯ್ಕರು ತಾಲ್ಲೂಕ್ ಬೋರ್ಡ್ ಮೆಂಬರ್ ಆಗಿದ್ದರಂತೆ.
1986-87ರ ಮಂಡಲ್ ಪಂಚಾಯತ್ ಪ್ರದಾನರ ಆಯ್ಕೆ ಚುನಾವಣೆಯಲ್ಲಿ ನಾನು ಮತ್ತು ತಾರೇಸಿಕ್ಕಿ ಹಿರೇನಾಯ್ಕರು ಒಂದಾಗಿ ಹೊಸಗುಂದದ ಕೋವಿ ನಾರಾಯಣಪ್ಪರನ್ನು ಪ್ರದಾನರಾಗಿ ಮತ್ತು ಹೊಸಗುಂದದ ಎ.ಕೆ. ಕೊಲ್ಲಪ್ಪರನ್ನು ಉಪ ಪ್ರದಾನರಾಗಿ ಆಯ್ಕೆ ಮಾಡಿದ್ದು ಇತಿಹಾಸ.
ಇವರ ಉಲ್ಲೇಖಿಸಿ ಪೇಸ್ ಬುಕ್ ನಲ್ಲಿ ಪೋಸ್ಟ್ ಒಂದು ಹಾಕಿದ್ದೆ.
ನಿನ್ನೆ ಬೆಳಿಗ್ಗೆ ಶಿವಮೊಗ್ಗದ ಮಿನಾಕ್ಷಿ ಭವನದ ಹತ್ತಿರದ ಬಾಪೂಜಿ ಕಾಲೇಜಿನ ಅಧ್ಯಾಪಕಿ ಶ್ರೀಮತಿ ಚಂದ್ರಕಲಾ ಪೋನ್ ಮಾಡಿದ್ದರು ನಂತರ ತಮ್ಮ ತಂದೆ ಜೊತೆ ಕಛೇರಿಗೆ ಬಂದಾಗಲೇ ಗೊತ್ತಾಗಿದ್ದು ಇವರು ತಾರೇಸಿಕ್ಕಿ ಹಿರೇನಾಯಕರ ಪುತ್ರ ಯೋಗೇಂದ್ರರ ಎರಡನೆ ಪುತ್ರಿ ಅಂತ.
ಇವರ ಅಜ್ಜ ಸಾಯುವಾಗ ಇವರಿಗೆ 3 - 4 ವರ್ಷವಾದ್ದರಿಂದ ಅವರ ನೆನಪು ಮಸಕು ಮಸುಕಾಗಿದೆ ಆದರೆ ಅಜ್ಜನ ಬಗ್ಗೆ ಹೆಚ್ಚು ತಿಳಿಯುವ ಆಸಕ್ತಿ ಮತ್ತು ಅಜ್ಜನ ನೆನಪು ಹಸಿರಾಗಿಡುವ ಆಸೆ ಮೊಮ್ಮಗಳಿಗೆ.
ಆದ್ದರಿಂದ ನಾನು ಬರೆದ ಪೋಸ್ಟ್ ಅವರ ವಾಟ್ಸಪ್ ಗೆ ಕಳಿಸಲು ವಿನಂತಿಸಿದರು,ಕೂಡಲೇ ಕಳಿಸಿದೆ ಮತ್ತು ನಿಮ್ಮ ಅಜ್ಜನ ಪೋಟೋ ವಾಟ್ಸಪ್ ಮಾಡಮ್ಮ ಅಂದಿದ್ದಕ್ಕೆ ಅವರ ಚೀಲದಲ್ಲಿದ್ದ ಅವರ ಅಜ್ಜನ ಪೋಟೋವನ್ನೆ ಹೊರತೆಗೆದರು ಅದನ್ನು ನಾನು ನನ್ನ ಮೊಬೈಲ್ ನಲ್ಲಿ ಸೆರೆ ಹಿಡಿದೆ.
ಅಜ್ಜನ ಪೋಟೋ ಹಳೆಯದಾಗಿದ್ದರಿಂದ ಅದನ್ನು ಸಾಗರಕ್ಕೆ ಒಯ್ದು ಹೊಸದಾಗಿ ಸ್ಟುಡಿಯೋದಲ್ಲಿ ಪ್ರತಿ ಮಾಡಿಸಿ ಪ್ರೇಂ ಹಾಕಿಸಿಕೊಂಡು ಊರಿಗೆ ಹೋಗುವಾಗ ನನ್ನ ಬೇಟಿಗೆ ಬಂದಿದ್ದರು ಅಪ್ಪ ಮತ್ತು ಮಗಳು.
Comments
Post a Comment