Blog number 1206. ಸಾಗರ ವಿಧಾನಸಭಾ ಸದಸ್ಯರಾದ ಹರತಾಳು ಹಾಲಪ್ಪನವರು ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ರಥೋತ್ಸವಕ್ಕೆ ಆಗಮಿಸಿದ್ದರು ಅವರನ್ನು ದೇವಾಲಯದ ಜಾತ್ರಾ ಸಮಿತಿವತಿಯಿಂದ ಸನ್ಮಾನಿಸಲಾಯಿತು,ಅವರು ದೇವಾಲಯದ ರಥಬೀದಿಯ ಕಾಂಕ್ರೀಟ್ ರಸ್ತೆ ನಿರ್ಮಿಸಿ ಕೊಟ್ಟಿದ್ದಾರೆ.
#ನಮ್ಮ_ಊರಿನ_ವರಸಿದ್ಧಿವಿನಾಯಕ_ದೇವರ_ಜಾತ್ರೆಯಲ್ಲಿ
#ದೇವಾಲಯದ_ಎದುರಿಗೆ_ಕಾಂಕ್ರೀಟ್_ರಸ್ತೆ_ಮಾಡಿಸಿದ್ದಾರೆ
#ಅನೇಕ_ಹಿಂದಿನ_ಸಂದರ್ಭಗಳ_ನೆನಪಿಸಿಕೊಂಡರು.
2018ರ ವಿಧಾನಸಭಾ ಚುನಾವಣೆಯ ದಿನಗಳ ಒಂದು ರಾತ್ರಿ ಹರತಾಳು ಹಾಲಪ್ಪನವರು ನನ್ನ ಹಳೇ ಕಛೇರಿಗೆ ಬಂದಿದ್ದರು, ನಂತರ ನನ್ನ ಮಗಳ ಮದುವೆಗೆ ಬಂದು ಶುಭ ಹಾರೈಸಿದಾಗ ನನಗೆ ಆಶ್ಚಯ೯ ಕೂಡ ಯಾಕೆಂದರೆ ವಿವಾಹ ಆಮಂತ್ರಣ ಮುದ್ದಾಂ ನೀಡಲಾಗದೆ ಅಂಚೆ ಮುಖಾಂತರ ಕಳಿಸಿದರೂ ಅವರೂ ಆಗಮಿಸಿದ್ದರು.
ನಂತರದ ಬೇಟಿ ಮೊನ್ನೆ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವದ ದಿನ (25- ಜನವರಿ -20 23ರ ಬುಧವಾರ) ಒಳ ಬರುತ್ತಲೇ "ಅರುಣ್ ಪ್ರಸಾದ್ ನಮ್ಮ ಹಳೆಯ ಗೆಳೆಯರು" ಅನ್ನುತ್ತಾ ಅವರು ಪದವಿ ಓದುವಾಗ ಸಾಗರದ ಸೊರಬ ರಸ್ತೆಯ ಹಳೆಯ ಯುನೈಟೆಡ್ ಟ್ರೇಡಿಂಗ್ ಕಂಪನಿ ಎದುರಿಗಿದ್ದ ಬಿಸಿಎಂ ಕಾಲೇಜು ಹಾಸ್ಟೆಲ್ ನಲ್ಲಿದ್ದಾಗ ನಾನು ಅದೇ ಕಟ್ಟಡದಲ್ಲಿದ್ದ ಮೆಟ್ರಿಕ್ ಹಾಸ್ಟೆಲ್ ನಲ್ಲಿ ಎಸ್ ಎಸ್ ಎಲ್ ಸಿ ಅದನ್ನು ನೆನಪು ಮಾಡಿಕೊಂಡರು.
ವಿದ್ಯಾರ್ಥಿ ಜೀವನದಲ್ಲೂ ಹಾಲಪ್ಪ ಮಾತುಗಾರರು, ಕವಿಗಳ ಪದ್ಯಗಳನ್ನು ಉಲ್ಲೇಖಿಸಿ ರಸವತ್ತಾಗಿ ಮಾತಾಡುತ್ತಾ ನೆರೆದವರೆಲ್ಲರನ್ನು ನಗಿಸುತ್ತಿದ್ದರು ಅದೇ ರೀತಿ ವಿದ್ಯಾರ್ಥಿ ಸಂಘಟನೆಯಲ್ಲೂ ಮುಂದಿದ್ದರು.
ರೈಲಿನ ಪ್ರಯಾಣದಲ್ಲಿ ಹೆಚ್ಚಾಗಿ ಪುಸ್ತಕ ಓದುತ್ತೇನೆ ಮೊನ್ನೆ ಒಂದು ಅತ್ಯುತ್ತಮ ಪುಸ್ತಕ ಓದಿದೆ ನಿಮಗೆ ಕಳಿಸುತ್ತೇನೆ ಅಂದರು.
ನಾನು ಅವರನ್ನು ಅವರು ಈ ಜಾತ್ರೆಯಲ್ಲಿ ದೇವಾಲಯದ ಎದುರಿನ ರಥಬೀದಿಗೆ ಕಾಂಕ್ರೀಟ್ ರಸ್ತೆ ಮಾಡಿಸಿದ್ದಕ್ಕಾಗಿ ವೈಯಕ್ತಿಕವಾಗಿ ಅಭಿನಂದಿಸಿದೆ ಕಾರಣ ದೇವಾಲಯದಿಂದ ಯಾವುದೇ ಮನವಿ ಮಾಡದಿದ್ದರೂ ಅವರೇ ದೇವಾಲಯದ ರಥಬೀದಿಯ ರಸ್ತೆಯ ಅನಿವಾರ್ಯತೆ ಗಮನಿಸಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪೂರ್ಣ ಮಾಡಿಸಿದ್ದು.
ಮುಂದಿನ ದಿನದಲ್ಲಿ ದೇವಾಲಯದ ಸುತ್ತಲೂ ಸುಸಜ್ಜಿತ ಕಂಪೌಂಡ್ ಗೋಡೆ ನಿರ್ಮಿಸುವುದಾಗಿ ತಿಳಿಸುವಾಗ ಅವರ ಜೊತೆಯವರು ಹೊಸನಗರ ರಸ್ತೆ ರಾಷ್ಟ್ರೀಯ ಹೆದ್ದಾರಿಗಾಗಿ ಅಗಲಿಕರಣ ಆಗಲಿದೆ ಅಂದಾಗ ಅವರು ಶಿಕಾರಿಪುರದಿಂದ ಹೊಸನಗರ ಹೋಗುವ ಹಾವೇರಿ-ಬೈಂದೂರು ರಾಷ್ಟೀಯ ಹೆದ್ದಾರಿ ದೇವಸ್ಥಾನದ ನಂತರ ಈ ರಸ್ತೆಗೆ ಸೇರಲಿದೆ ಅಂದಾಗ ನಾನು ಈ ಹಿಂದಿನ ಸರ್ವೆ ಗೇರುಬೀಸು ರಸ್ತೆಯಲ್ಲಿ ಬಂದು ಈ ರಸ್ತೆಗೆ ಸೇರಲಿತ್ತಲ್ಲ? ಅಂದದ್ದಕ್ಕೆ ಇಲ್ಲ ಬದಲಾಗಿದೆ ನಿಮಗೆ ಆ ನಕಾಶೆ ಕಳಿಸುವುದಾಗಿ ತಿಳಿಸಿದರು.
ಜಾತ್ರಾ ಸಮಿತಿಯಿಂದ ಶಾಸಕರನ್ನು ಸನ್ಮಾನಿಸಿ ಶ್ರೀ ವರಸಿದ್ಧಿವಿನಾಯಕ ದೇವರ ಚಿತ್ರ ಪಟ ನೆನಪಿನ ಕಾಣಿಕೆ ಆಗಿ ಸಮಿತಿಯವರು ನೀಡಿದರು ಶಾಸಕರಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ದೇವಾಲಯದ ಆವರಣದಲ್ಲಿ ಅರ್ಧ ಹೋಳಿಗೆ ಸ್ಟೀಕರಿಸಿದರು, ವಿಶ್ವವ್ಯಾಪಿ ಗಣೇಶ ಪ್ರಸಿದ್ದಿಯ ಗೋವರ್ದನ ಅಂಕೋಲೆಕರ್ ನೀಡಿದ ದೃಷ್ಟಿಗಣಪತಿ ಸ್ವೀಕರಿಸಿ ಅವರಿಂದ ಮಾಹಿತಿ ಪಡೆದರು.
ಖ್ಯಾತ ಭಜನಾ ಹಾಡುಗಾರರಾದ ಸಾಗರದ ಸಿದ್ದ ಸಮಾದಿ ಯೋಗದ ಗಣೇಶ್ ಗುರೂಜಿ ಅವರ ಬಗೆರ್ ಹುಕುಂ ಅರ್ಜಿಯ ಬಗ್ಗೆ ಅವರಿಗೆ ತಿಳಿಸಿದಾಗ ಮುಂದಿನ ಬಗರ್ ಹುಕುಂ ಸಭೆಯಲ್ಲೇ ಆ ಕಡತ ಮಂಡಿಸಲು ಅವರ ಆಪ್ತರಿಗೆ ಆದೇಶಿಸಿದರು.
Comments
Post a Comment