Blog number 1168. ಜಿಗಳೆಮನೆ ಗಣಪತಿ ಭಟ್ಟರು ರಾಮಚಂದ್ರಾಪುರ ಮಠದ ಅನೈತಿಕ ಸಂಬಂಧ ವಿರುದ್ದ ಹೋರಾಟ ರೂಪಿಸಿದ್ದಾರೆ ಅವರು ನನ್ನ ಬಗ್ಗೆ ಬರೆದ ಲೇಖನ ಇಲ್ಲಿದೆ.
#ಜಿಗಳೆಮನೆಗಣಪತಿ ಭಟ್ಟರು ಮತ್ತು ಕುಗ್ವೆ ನಿರಂಜರನ್ನ ಸುಳ್ಳು ಕೇಸಲ್ಲಿ ಬಂದಿಸಿದ್ದರಿಂದ ನನಗೆ ಈ ವಿಚಾರದಲ್ಲಿ ಆಸಕ್ತಿ ಉ೦ಟಾಯಿತು.#
ಇವರಿಬ್ಬರ ಬಂದನದ ಕಾರಣ ತಿಳಿದರೂ ಇವರನ್ನ ಬೆಂಬಲಿಸದ ಸಮಾಜ ಮತ್ತು ಪತ್ರಿಕೆಗಳಲ್ಲಿ ಸುದ್ದಿಯೂ ಆಗದ ಬಗ್ಗೆ ಬೇಸರ ಆಗಿತ್ತು, ಇದೇ ರೀತಿ ಜಿಲ್ಲಾ ಪಂಚಾಯತನಲ್ಲಿ ಅವ್ಯವಹಾರದ ವಿರುದ್ಧ ಹೋರಾಟ ಮಾಡಿದ್ದು, ಕೃಷಿ ಇಲಾಖೆಯ ಕೋಟ್ಯಾ೦ತರ ರೂಪಾಯಿ ಅವ್ಯವಹಾರ ಬಯಲಿಗೆಳೆದು ಆಗಿನ ಕೃಷಿ ಮಂತ್ರಿ ಬೈರೇ ಗೌಡರನ್ನ ಸ್ಥಳಕ್ಕೆ ಕರೆಸಿ ತನಿಖೆ ಮಾಡಿದಾಗ ಅವರು 8 ಕೃಷಿ ಇಲಾಖೆ ಅಧಿಕಾರಗಳನ್ನೆ ಜೈಲಿಗೆ ಕಳಿಸಿದ್ದು ನನ್ನ ಹೋರಾಟದ ದಾಖಲೆ ಆದರೆ ಇದಕ್ಕೆ ಸಿಗಬೇಕಾಗಿದ್ದ ಪುರಸ್ಕಾರ, ಪಕ್ಷದಲ್ಲಿ ಸ್ಥಾನಮಾನ ಸಿಗದೆ ಜೈಲು, ಗೂOಡಾ ಪಟ್ಟಿಗಳು ಕೊಟ್ಟರು ಹಾಗಾಗಿ ನನಗೆ ಇವರಿಬ್ಬರ ಹೋರಾಟಕ್ಕೆ ಬೆಂಬಲಿಸಿದೆ ಇವತ್ತು "ಕಾಮುಕ ಸ್ವಾಮಿ ಸನ್ಯಾಸಿ ಅಲ್ಲ ಅವನನ್ನ ಇಳಿಸಿ ಮಠ ಉಳಿಸಿ" ಎನ್ನುವ ಹೋರಾಟದ ನೇತಾರ ಜಿಗಳೆಮನೆ ಗಣಪತಿ ಭಟ್ಟರು ಒಂದು Post ಬರೆದಿದ್ದಾರೆ ಸೂಕ್ಷ್ಮ ಮನಸ್ಸಿನ ಅವರು ನನ್ನ ಗುಣ ಸ್ವಭಾವವನ್ನು ಗ್ರಹಿಸಿದ್ದು ಆಶ್ಚಯ೯ ಮತ್ತು ಸಂತೋಷ ಉoಟು ಮಾಡಿದೆ.
ಇಲ್ಲಿ ಕೆಳಗೆ ಚಿತ್ರದ ರೂಪದಲ್ಲಿ ಹಾಕಿದ ಲೇಖನ ಶ್ರೀ ಅರುಣ ಪ್ರಸಾದ್ ಅವರದ್ದು.
ಅರುಣ ಪ್ರಸಾದ್ ಅವರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು,ರಾಮಚಂದ್ರಾಪುರ ಮೂಲಮಠಕ್ಕೆ ಹತ್ತಿರ ಇರುವ ಅನಂತಪುರದವರು.ಇವರ ಅರ್ಧಾಂಗಿ ಹವ್ಯಕರು. ಹೊಸ ನೆಂಟಸ್ತಾನ ದೀಕ್ಷಿತರೊಬ್ಬರೊಂದಿಗೆ ಆಗಿದೆ.ಬಾಲ್ಯದಲ್ಲಿಯೇ ಬ್ರಹ್ಮಚರ್ಯ ವೇ ಜೀವನ ವೀರ್ಯ ನಾಶವೇ ಮೃತ್ಯು ಎಂಬಂತಹ ಪುಸ್ತಕಗಳನ್ನು ಓದಿ ಬ್ರಾಹ್ಮಣ್ಯವನ್ನು ತಡಕಾಡಿದವರು.ಬ್ರಾಹ್ಮಣರು ಬ್ರಾಹ್ಮಣ್ಯ ಕಾಪಾಡಿಕೊಳ್ಳ ಬೇಕೆಂದು ಬಯಸುವವರು.ತಾತ್ವಿಕ ವಾದ ಬ್ರಾಹ್ಮಣ್ಯವನ್ನು ಗೌರವಿಸುವವರು.ಬ್ರಾಹ್ಮಣ್ಯ ದ ಆಚರಣೆ ಇಲ್ಲದೆ ಬ್ರಾಹ್ಮಣರ ದೊಡ್ಡಸ್ತಿಕೆ ತೋರಿಸುವುದನ್ನು ವಿರೋಧಿಸಲು ಹಿಂದೆಗೆಯದವರು.ಬ್ರಾಹ್ಮಣ್ಯದ ಆಚರಣೆ ಇಲ್ಲದೆ ಕೇವಲ ಹುಟ್ಟಿನಿಂದ ಬ್ರಾಹ್ಮಣರು ಎಂದುಕೊಂಡು ತಮ್ಮದು ಮೇಲ್ವರ್ಗ ಎಂಬ ಗರ್ವವನ್ನು ಒಪ್ಪದವರು.ಬ್ರಾಹ್ಮಣ್ಯ ಆಚರಿಸಿ ಗೌರವ ಪಡೆಯಿರಿ ಎಂಬುದು ಅವರ ವಾದ.ಯಾವ ಆದರ್ಶವನ್ನು ಪೋಷಿಸಿಕೊಳ್ಳದೆ ಕುಡಿದು ತಿಂದು ಮಾಡುವಂತಹದೆನೆಲ್ಲಾ ಮಾಡಿ ದೊಡ್ಡ ವಿಭೂತಿ, ಮಡಿ ಉಟ್ಟು ಬ್ರಾಹ್ಮಣಿಕೆಯ ದೌಲು ಹಾರಿಸುವುದು ಇವರಿಗೆ ಹಿಡಿಸುವುದಿಲ್ಲ.ಹಣಕ್ಕಿಂತ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟು ಭಾಳ್ವೆ ಮಾಡುವ ಬ್ರಾಹ್ಮಣರ ಬಗ್ಗೆ ಇವರಿಗಿರುವ ಗೌರವವನ್ನು ನಾನಂತೂ ಕಂಡಿದ್ದೇನೆ.
ಮುಂಚೆ ರಾಜಕೀಯ ದಲ್ಲಿ ಇದ್ದು ಕೆಲವು ಚೌಕಟ್ಟು ಗಳಿಗೆ ಬಂಧಿಯಾಗಿದ್ದರು.ಈಗ ಯಾವ ಮುಲಾಜು ಇಲ್ಲದೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪಡಕೊಂಡಿದ್ದಾರೆ.ಭಗವಂತ ಕೂಡ ವಿನಾಧೈನ್ಯೇನ ಜೀವನಕ್ಕೆ ಬೇಕಾದ ಅನುಕೂಲ ಕೊಟ್ಟಿದ್ದಾನೆ.ಎಲ್ಲಾ ಜಾತಿಯಲ್ಲೂ, ಎಲ್ಲಾ ಪಕ್ಷಗಳಲ್ಲೂ ಮಿತ್ರರನ್ನು ಹೊಂದಿದ್ದಾರೆ.ಪಾಸಿಟಿವ್ ಚಿಂತಕರು.ಬಹಳಷ್ಟು ಮಟ್ಟಿಗೆ ಒಳ್ಳೆಯದನ್ನು ಗುರುತಿಸಿ ಬ್ಲಾಗ್ ಬರೆಯುತ್ತಾರೆ. ಕೆಲವೊಮ್ಮೆ ತೀರಾ ಅಸಹನೀಯ ಎನ್ನಿಸಿದಾಗ ಮಾತ್ರ ನೆಗೆಟಿವ್ ಲೇಖನಗಳು ಪ್ರಕಟವಾಗುತ್ತದೆ. ಅನೇಕ ಪತ್ರಕರ್ತ ಮಿತ್ರರನ್ನು ಹೊಂದಿದ್ದಾರೆ.
ಸತ್ಯಶೋಧ ದಲ್ಲಿ ಒಬ್ಬರು ತೀರಾ ಅಶ್ಲೀಲ ವಾಗಿ ಬರೆದಾಗ ಸತ್ಯಶೋದಧ ಸಂಬಂಧ ಕಡಿದುಕೊಳ್ಳಲು ಹಿಂದೆಗೆಯಲಿಲ್ಲ.ನಂತರ ಯೋಗಾಯೋಗ ಅದೇ ವ್ಯಕ್ತಿಯನ್ನು ಬೇಟಿಯಾದ ಮೇಲೆ ಅವರ ಅಸಹನೆಯ ಮೂಲವನ್ನು ಗುರುತಿಸಿದರು.ಪಾಸಿಟಿವ್ ಚಿಂತನೆಯೇ ಹೆಚ್ಚಿರುವುದರಿಂದ ನಮ್ಮ ಏಕಪಕ್ಷೀಯ ನೆಗೆಟಿವ್ ಲೇಖನಗಳು ಅವರಿಗೆ ಅಷ್ಟು ಸಮಾಧಾನ ಕೊಡುವುದಿಲ್ಲ.
ಪರಮಾತ್ಮ ಕೊಟ್ಟ ವಿಮರ್ಶ ಶಕ್ತಿ ಯಿಂದಾಗಿ ಸತ್ಯವನ್ನು ಗುರುತಿಸುವ ಸಾಮರ್ಥ್ಯ ಇದೆ.ಅದೇ ನಮ್ಮ ಕಡೆ ಓಲವನ್ನು ತಂದುಕೊಟ್ಟಿದೆ.ಸಾಧ್ಯವಾದ ಮಟ್ಟಿಗೆ ದಾಖಾಲೆ, ಪ್ರಮಾಣಗಳು ಇದ್ದುಕೊಂಡೆ ಪ್ರಕಟವಾಗುವ ಲೇಖನಗಳನ್ನು ಗುರ್ತಿಸಲು ಶಕ್ತರಿದ್ದಾರೆ.ಅವರ ಪೇಸ್ಬುಕ್ ಲೇಖನಗಳ ಓದುಗರು ಎಷ್ಟು ,ಯಾವ ರೀತಿಯವರು ಎಂಬುದಕ್ಕೆ ಪೇಸ್ಬುಕ್ ನವರೇ ಪ್ರಕಟಿಸಿದ ಒಂದು ಮಾಹಿತಿ ಪತ್ರ ಇದೆ.
ಹವ್ಯಕರೊಂದಿಗೆ ಬಹಳ ಒಡನಾಟ ಇರುವ ಅವರಿಗೆ ಈ ವಿಚಾರವೊಂದರಲ್ಲಿ, ರಾಮಚಂದ್ರಾಪುರ ಮಠದ ವಿಚಾರದಲ್ಲಿ, ಹವ್ಯಕರು ಹೀಗೇಕೆ ವರ್ತಿಸುತ್ತಿದ್ದಾರೆ ಎಂಬ ವಿಸ್ಮಯ ವೂ ಇದೆ.
ತಾಮ್ರಶಾಸನದ ಬಗ್ಗೆ ಒಂದು ಬ್ಲಾಗ್ ನಂತರ ಈಗ ಈ ಕೆಳಗಿನ ಬ್ಲಾಗ್ ಪ್ರಕಟಿಸಿದ್ದಾರೆ.ಅವರ ಒಡನಾಡಿ ಹವ್ಯಕರು ಕಣ್ತೆರೆದು ನೋಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ.
ಜಿಗಳೆಮನೆ ಗಣಪತಿ ಭಟ್ಟ
Comments
Post a Comment