#Blog number 1205. ಶಂಭೂರಾಮನಿಗೆ ಎಳೆ ಸೌತೆಕಾಯಿ ಎಂದರೆ ಬಲು ಪ್ರೀತಿ, ಕರ ಕರ ಅಂತ ಕತ್ತರಿಸಿ ಸವಿಯುವುದನ್ನು ನೋಡಲೇ ಚಂದ.
https://youtu.be/bEyKat6T0Jw
#ಶಂಭೂರಾಮನ_ಗುಣಗಾನ_ಮಾಡದಿರಲುಂಟೆ?
#ನನ್ನ_ಬೆಳಗಿನ_ಒಂದು_ಗಂಟೆಯ_ವಾಕಿಂಗ್_ಸಂಗಾತಿ
#ಹಾಗಂತ_ನನ್ನನ್ನು_ಎಬ್ಬಿಸಿ_ವಾಕಿಂಗ್_ಮಾಡಿಸುವವ_ಇವನೆ.
#ಇವನಿಗೆ_ಇಷ್ಟವಾದ_ತರಕಾರಿ_ಹಣ್ಣು_ತಂದಿಟ್ಟಿರಲೇ_ಬೇಕು.
#ಎಳೆ_ಸೌತೇ_ಕಾಯಿ_ಇವನಿಗೆ_ಪಂಚಪ್ರಾಣ
ಸಾಕು ಪ್ರಾಣಿಗಳಲ್ಲಿ ನಾಯಿಗಳನ್ನು ಮನುಷ್ಯ ಅಷ್ಟೇಕೆ ಹಚ್ಚಿಕೊಳ್ಳುತ್ತಾನೆ, ಅದರ ಆರೋಗ್ಯ ಏರುಪೇರಾದರೆ, ಅವುಗಳು ಇಹಲೋಕ ತ್ಯಜಿಸಿದರೆ ಅಷ್ಟೇಕೆ ಚಡಪಡಿಕೆ -ದುಃಖ ಅಂತ ಅರ್ಥವಾಗಬೇಕಾದರೆ ಸಾಕು ಪ್ರಾಣಿಯ ಒಡನಾಟ ಮಾಡಿಯೇ ನೋಡಬೇಕು.
ಅನ್ನ ಹಾಕುವವರ ಜೊತೆ ಮಿತ್ರದ್ರೋಹ, ಕಪಟ, ದ್ವೇಷಸಾದನೆ ಮಾಡದೆ ಸದಾ ಪ್ರೀತಿಯ ನಿರಂತರ ದಾರೆ ಹರಿಸುವ ಎಚ್ಚರದಲ್ಲಿ ಆಗಲಿ ನಿದ್ದೆಯಲ್ಲಾಗಲಿ ತನ್ನ ಯಜಮಾನನ ಕಾಳಜಿ ವಹಿಸುವುದೇ ತನ್ನ ಜೀವಮಾನದ ಸಾಧನೆ ಅಂತ ನಿರ್ದರಿಸಿ ಬಿಡುವ ಸಾಕು ನಾಯಿಗಳು ಆ ಕಾರಣದಿಂದಲೇ ಅಚ್ಚುಮೆಚ್ಚಾಗಿ ಬಿಡುವುದು.
ಮುಂದಿನ ಮಾಚ್೯ 23ಕ್ಕೆ ಎರೆಡು ವರ್ಷ ಪೂರೈಸುವ ನಮ್ಮ ಶಂಭೂರಾಮನಿಗೆ ಎಳೆ ಸೌತೆಕಾಯಿ ಅಂದರೆ ಅಚ್ಚುಮೆಚ್ಚು ಅಷ್ಟೆ ಅಲ್ಲ ಕ್ಯಾರೆಟ್, ಅಲಸಂದೆ, ಬೀನ್ಸ್, ಬಾಳೆ ಹಣ್ಣು, ಸಪೋಟ, ಕಲ್ಲ೦ಗಡಿ ಮಾವಿನ ಹಣ್ಣು, ಹಲಸಿನ ಹಣ್ಣು ಹೀಗೆ ಆಯಾ ಕಾಲದ ಹಣ್ಣುಗಳು ಅವನಿಗೆ ಪ್ರಿಯವಾಗಿದೆ (ಹುಳಿ ಇರುವ ಹಣ್ಣು, ಗಾಡ ಬಣ್ಣದ ತರಕಾರಿ ನಾಯಿಗಳಿಗೆ ಕೊಡಬಾರದೆಂಬ ವೆಟನರಿ ವೈದ್ಯರ ಶಿಪಾರಸ್ಸಿನಂತೆ ಕೊಡಬಾರದು).
ಸಣ್ಣಿಂದಲೇ ಸಾಕು ಪ್ರಾಣಿಗಳಿಗೆ ತರಕಾರಿ ಮತ್ತು ಹಣ್ಣು ತಿನ್ನುವ ಅಭ್ಯಾಸ ಮಾಡಿದರೆ ಇದೆಲ್ಲ ಸಾಧ್ಯವಿದೆ.
ನಿನ್ನೆ ಮಧ್ಯಾಹ್ನ ಎಳೆ ಸೌತೆಕಾಯಿಯನ್ನು ಅವನು ಕರ ಕರ ಅಂತ ಕತ್ತರಿಸಿ ಚಪ್ಪರಿಸುತ್ತಾ ತಿನ್ನುತ್ತಿರುವ ವಿಡಿಯೋ ಇಲ್ಲಿದೆ.
Comments
Post a Comment