ಈ ಭೂಮಿಯ ಮೇಲಿನ ಕೊಟ್ಯಂತರ ಮಕ್ಕಳ ಪಾಲಿಗೆ ದೇವರ ರೂಪದಲ್ಲಿ ಬಂದು ಫೋಲಿಯೋ ಹನಿಗಳನ್ನು ಕೊಡುಗೆಯಾಗಿ ಕೊಟ್ಟು ಹೋದ ಮಹಾನುಭಾವ ಜೋನಾಸ್ ಸಾಲ್ಕ್.🌿
1950ರ ದಶಕದಲ್ಲಿ ಅಣು ಬಾಂಬ್ ನಷ್ಟೇ ವಿನಾಶಕಾರಿ ಎಂಬ ಅಪಖ್ಯಾತಿ ಗಳಿಸಿದ್ದ ಫೋಲಿಯೋ ರೋಗಕ್ಕೆ ಚುಚ್ಚು ಮದ್ದು ಕಂಡು ಹಿಡಿದಿದ್ದು ಇವರ ವಿದ್ಯೆ-ಬುದ್ದಿವಂತಿಕೆಗೆ ಸಾಕ್ಷಿಯಾದರೆ, ತಾವು ಕಂಡು ಹಿಡಿದ ಈ ಚುಚ್ಚು ಮದ್ದಿಗೆ ಪೇಟೆಂಟ್ ಪಡೆಯದೇ ಯಾರಾದರು, ಯಾವ ದೇಶವಾದರೂ ಪುಕ್ಕಟೆಯಾಗಿ ಈ ಔಷಧಿಯನ್ನು ಬಳಸಿಕೊಳ್ಳಿ, ಇದಕ್ಕೆ ನನ್ನ ಅನುಮತಿ ಬೇಕಿಲ್ಲ ಎಂದದ್ಡು ಅವರಲ್ಲಿದ್ದ ಮಾನವೀಯತೆಗೆ ಸಾಕ್ಷಿ.
ಭಾನುವಾರ ಪೊಲೀಯೋ ಲಸಿಕೆ ದಿನ.. ನಮ್ಮ ಸರಕಾರಗಳು, ನಮ್ಮ ಜನನಾಯಕರು ಈ ಪೊಲೀಯೋ ಲಸಿಕೆ ಕಾರ್ಯಕ್ರಮದ ಪೋಸ್ಟರ್ ಗಳಲ್ಲಿ ಸಿನಿಮಾ ನಟರ ಪಕ್ಕ ಇವರಿಗೂ ಒಂದು ಅಂಗುಲ ಜಾಗ ನೀಡುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ.
"ನೂರಾರು ಕೋಟಿ ಸಂಪಾದಿಸಬಹುದಾಗಿದ್ದ ಈ ಲಸಿಕೆಗೆ ನೀವು ಏಕೆ ಪೇಟೆಂಟ್ ಪಡೆಯಲಿಲ್ಲ?" ಎಂದು ಯಾರೋ ಕೇಳಿದ ಪ್ರಶ್ನೆಗೆ ಜೋನಾಸ್ ರವರ ಉತ್ತರ ಹೀಗಿತ್ತಂತೆ..
“Well, the people. There is no patent. Could you patent the sun?”
Comments
Post a Comment