ಕೇರಳದ ಎಲ್ಲಾ ರೆಸ್ಟೋರಂಟ್ ಗಳಲ್ಲಿ ಬೆಳಗಿನ ಉಪಹಾರಕ್ಕೆ ಹಬೆಯಲ್ಲಿ ಬೇಯಿಸಿದ ನೇಂದ್ರ ಬಾಳೆ ಹಣ್ಣು ದೊರೆಯುತ್ತದೆ.
ಸ್ಥಳಿಯರಿಗೆ ಕುಚುಲಕ್ಕಿ, ತೆಂಗಿನ ತುರಿ ಸೇರಿಸಿದ ಪುಟ್ಟು ಮತ್ತು ಕಡಲೇ ಕಾಳಿನ ಪಲ್ಯದ ಜೊತೆ ಈ ಬೇಯಿಸಿದ ನೇಂದ್ರ ಬಾಳೆ ಹಣ್ಣು ಬೇಕೇ ಬೇಕು ನಂತರ ಒಂದು ಬ್ಲಾಕ್ ಟೀ ಅವರ ಪೆವರಿಟ್ ಬ್ರೇಕ್ ಪಾಸ್ಟ್.
ಕೇರಳದ ನೇಂದ್ರ ಬಾಳೆ ಹಣ್ಣು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಬಂಗಾಲಿಕೋಡನ್ ಹಳ್ಳಿಗೆ GEOGRAPHICAL IDENTIFICATION ಸಿಕ್ಕಿದೆ.
ಕೇರಳದ ನೇಂದ್ರ ಬಾಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪಾಸ್ಪರಸ್, ಐರನ್ ಮತ್ತು ಪೈಬರ್ ಅಂಶ ಹೆಚ್ಚಿದೆ ಮತ್ತು ಕೊಲೆಸ್ಟ್ರಾಲ್ ಇಲ್ಲ.
ಒಂದು ಸಾದಾರಣ ನೇಂದ್ರ ಬಾಳೆ ಹಣ್ಣಿನಲ್ಲಿ 105 ಕ್ಯಾಲೋರಿ ಇದೆ, ಬೇಯಿಸಿದ ಬಾಳೆ ಹಣ್ಣು ಕಿಡ್ನಿಸ್ಟೋನ್, ಹೈ ಬ್ಲಡ್ ಪ್ರಶರ್ ಮತ್ತು ಪಾಶ್ವ೯ವಾಯು ತಡೆಯುತ್ತದೆ, ಮಲಬದ್ದತೆ ಗುಣಪಡಿಸುತ್ತದೆ ಹಾಗೂ ಜೀಣ೯ ಸಹಾಯಕ ಅಂತ ಆಯುವೇ೯ದ ಉಲ್ಲೇಖವೂ ಇದೆ.
ಚಿಕ್ಕ ಮಕ್ಕಳಿಗೆ ಇದು ಅತ್ಯುತ್ತಮ ಪೋಶಕಾಂಶ ಇದನ್ನು ಸೇವಿಸಿದರೆ ತ೦ಡಿ, ಶೀಥ ಮತ್ತು ಕಫ ಆಗುವುದಿಲ್ಲ ಅನ್ನುತ್ತಾರೆ.
ನೇಂದ್ರ ಬಾಳೆ ತಳಿಯ ಮೂಲ ಹೊನಾಲುಲು ಅಲ್ಲಿ ಹ್ಯಾಂಬಗ೯ ತಯಾರಿಯಲ್ಲಿ ಈ ಬಾಳೆ ಬಳಸುತ್ತಾರೆ ಮತ್ತು ಬಾಳೆಯ ಮೂಲ ಭಾರತ ಇದು ಅರಬ್ ವ್ಯಾಪಾರಿಗಳಿಂದ ಕ್ರಿಸ್ತ ಪೂವ೯ 327 ರಲ್ಲಿ ಪಶ್ಚಿಮ ದೇಶಗಳಿಗೆ ಪರಿಚಯ ಆಯಿತೂ ಅಂತ ಮಾಹಿತಿ ಇದೆ.
Comments
Post a Comment