ಮ್ಯಾನ್ಯೂಯಲ್ ಕ್ಲಿಪ್ಪರ್ ಎಂಬ ಜೈಲಿನ ಬಂದಿಗಳಿಗೆ ಮತ್ತು ಸೈನ್ಯದ ಸೈನಿಕರಿಗೆ ಕ್ಷೌರಕ್ಕಾಗಿ ಬಳಸುತ್ತಿದ್ದ ಕೂದಲು ತೆಗೆಯುವ ಕೈ ಕಟಿಂಗ್ ಮೆಷಿನ್ ಬಳಕೆ ಒಂದು ಕಾಲದಲ್ಲಿ ಭಾರತದ ಸಲೂನಿನಲ್ಲಿ ಅನಿವಾಯ೯ ಅನ್ನಿಸಿ ಬಿಟ್ಟಿತ್ತು, ಇದರಿಂದ ಮಕ್ಕಳು ಸಲೂನಿಗೆ ಹೋಗಲು ನಿರಾಕರಿಸುತ್ತಿದ್ದರು.
ನಿನ್ನೆ ನನ್ನ ಬಾಲ್ಯದಲ್ಲಿ ಪ್ರಬಾವ ಬೀರಿದ ಡುಮಿಂಗ್ ರೆಬೆಲೋ ಲೇಖನ ಬರೆದಿದ್ದೆ ಅದರಲ್ಲಿ ಅವರು ಪ್ರತಿ ತಿಂಗಳು ಆನಂದಪುರದ ರಾಮಣ್ಣನ ಸಲೂನಿನಲ್ಲಿ ಕಷ್ಟಪಟ್ಟು ನನ್ನ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದ ಬಗ್ಗೆ ಅಲ್ಲಿನ ಮಿಷನ್ ಒಂದರ ಬಗ್ಗೆ ಬರೆದಿದ್ದೆ, ಆ ಕಾಲಮಾನದ ಬಾಲ್ಯದಲ್ಲಿದ್ದ ಅನೇಕರಿಗೆ ಈ ಯಂತ್ರ ಯಮಯಾತನೆ ನೀಡಿತ್ತಂತೆ.
ಹಾಗಾಗಿ ನನಗೂ ಆ ಯಂತ್ರದ ಬಗ್ಗೆ ಕುತೂಹಲ ಹೆಚ್ಚಾಗಿ ಅಂತರ್ ಜಾಲದಲ್ಲಿ ಮಾಹಿತಿಗಾಗಿ ಹುಡುಕಿದಾಗ ಸಿಕ್ಕಿದ ವಿವರ ಇಲ್ಲದೆ.
ಇದರ ಹೆಸರು ಮ್ಯಾನ್ಯೂಯಲ್ ಕ್ಲಿಪ್ಪರ್ ಇದನ್ನು ಸೆರಿಬಿಯನ್ ದೇಶದ ಬಾಬ೯ರ್ ನಿಕೋಲಾ ಬಿಜುಮಿಲ್ ಎಂಬಾತ 1850-1890 ರ ಅವದಿಯಲ್ಲಿ ತಯಾರಿಸಿ ಅದನ್ನು ಕಾಲಕಾಲಕ್ಕೆ ಅಭಿವೃದ್ದಿ ಮಾಡುತ್ತಾನೆ.
ಈ ಮ್ಯಾನ್ಯೂಯಲ್ ಕ್ಲಿಪ್ಪರ್ ನ ಆ ಕಾಲದ ಸೈನಿಕರ ಕ್ಷೌರಕ್ಕಾಗಿ ಮಿಲಿಟರಿಗಳಲ್ಲಿ, ಜೈಲಿನ ಖೈದಿಗಳ ಕ್ಷೌರಕ್ಕಾಗಿ ಜೈಲಿನಲ್ಲಿ ನಂತರ ಶಾಲಾ ವಿದ್ಯಾಥಿ೯ಗಳಾದ ಗಂಡು ಮಕ್ಕಳ ಕ್ಷೌರಕ್ಕಾಗಿ ಬಳಸುತ್ತಿದ್ದರಂತೆ.
ರಷಿಯಾದ ಸ್ಯೆನ್ಯದಲ್ಲಿ ಇದನ್ನ ಬಳಸಿ ಸೈನಿಕರ ಕ್ಷೌರ ಮಾಡುತ್ತಿದ್ದರಂತೆ.
ಗ್ರೀಸ್ ನಲ್ಲಿ 1950-1960 ರಲ್ಲಿ ಶಿಕ್ಷೆಗಾಗಿ ಇದರಿಂದ ಕ್ಷೌರ ಮಾಡಿಸುತ್ತಿದ್ದರಂತ ವಿವರ ಇದೆ.
#ಹಾಗಾದರೆ_ಬಾರತದಲ್ಲಿ_ಯಾಕಾಗಿ_ನಮ್ಮ_ಬಾಲ್ಯದಲ್ಲಿ_ಇದನ್ನು_ನಮ್ಮ_ತಲೆಗೆ_ಶಿಕ್ಷೆ_ನೀಡಿದರು?
Comments
Post a Comment