# ನನ್ನ ಕವಿ ಕುವೆಂಪು ಅವರ 113 ರ ಹುಟ್ಟು ಹಬ್ಬ ಈ ದಿನ. (ಜನನ 29- ಡಿಸೆಂಬರ್- 1904, ಮರಣ 11 ಡಿಸೆಂಬರ್ 1994).#
ಮೊನ್ನೆ ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್ದರು ಇಲ್ಲಿನ ವಿವರ ನೀಡುತ್ತೀರಾ ಅಂದೆ ಖಂಡಿತಾ ಅಂದ ಅವರ ಬಾಯಲ್ಲಿ ಕುವೆಂಪುರವರ ಹುಟ್ಟು ಸಾವಿನ ಮದ್ಯದ ಘಟನೆಗಳು, ಕವನಗಳ ಸಾಲು ಸಾಲು, ಸಂಬಂದಿಗಳ ಹೆಸರು, ಮಕ್ಕಳು ಮರಿ ಮಕ್ಕಳುಗಳ ವಿವರಗಳು ತೆರೆ ತೆರೆಯಾಗಿ ಬಂತು, ಇದ ಕೇಳಿ ಸಂತೋಷ ಆಯಿತು ಇವರ ನೆನಪಿನ ಶಕ್ತಿ ನೋಡಿ ಆಶ್ಚಯ೯ವಾಯಿತು.
ಇವರಿಗೆ ಟ್ರಸ್ಟ ಮಾಸಿಕ ವೇತನ 10 ಸಾವಿರ ನೀಡುತ್ತದೆ, ವಷ೯ದಿಂದ ವಷ೯ಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆಯ೦ತೆ, ಈಗ ವಾಷಿ೯ಕ ಒಂದು ಲಕ್ಷದ ಅರವತ್ತು ಸಾವಿರ ಜನ ಭೇಟಿ ನೀಡುತ್ತಿದ್ದಾರಂತೆ.
ಮಳೆಗಾಲದಲ್ಲಿ ಬರುವವರು ಕಡಿಮೆ ಇರಬೇಕು ಅಂದೆ ಅದಕ್ಕೆ ಅವರು ಹೇಳಿದ್ದು ಮಳೆಗಾಲದಲ್ಲಿ ಬೆಂಗಳೂರಿನವರು ಅತಿ ಹೆಚ್ಚು ಬರುತ್ತಾರೆ ಅಂದರು.
ಬರುವಾಗ ಗೈಡ್ಗೆ ಹಣ ಕೊಡಲು ಹೋದಾಗ ನಿರಾಕರಿಸಿದರು.
Comments
Post a Comment