# ಇವರಲ್ಲಿ ಮಲೇಷಿಯಾದ ಹೊಸ ಹಲಸಿನ ತಳಿ ಇದೆ#
ಈ ಹಲಸು 3 ವಷ೯ಕ್ಕೆ ಫಲ ನೀಡುತ್ತೆ, ದಸರಾದಿಂದ ಪ್ರಾರಂಭವಾಗಿ ಯುಗಾದಿ ಹಬ್ಬದ ತನಕ ಹಣ್ಣು ಸಿಗುತ್ತೆ .
ಸ್ಥಳೀಯ ಹಲಸು ಈ ಕಾಲದಲ್ಲಿ ಸಿಗುವುದಿಲ್ಲ ಅಂತ ಮೊನ್ನೆ ನನ್ನ ಬೇಟಿ ಮಾಡಲು ಹಲವು ವಷ೯ದ ನಂತರ ಬಂದ ರಿಪ್ಪನ್ ಪೇಟೆಯ ಅಂಕುರ್ ನಸ೯ರಿಯ ಅನಂತಮೂತಿ೯ ಜವುಳಿ ತಿಳಿಸಿದರು.
ಇವರ ಸೆಲ್ ನಂಬರ್ 9448554514.
ಈ ಬಗ್ಗೆ ಅವರು ಮಾತಾಡುವಾಗ ಅವರಿಗೆ ಗೊತ್ತಾಗದಂತೆ ರೆಕಾಡ್೯ ಮಾಡಿದ ವಿಡಿಯೋ ಇದೆ ನೋಡಿ.
ಇವರ ಹಿನ್ನೆಲೆ ದೊಡ್ಡದಿದೆ ಈ ನಸ೯ರಿ 11 ಎಕರೆ ಪಿತ್ರಾಜಿ೯ತವಾಗಿ ಇವರಿಗೆ ಬಂದ ಆಸ್ತಿ, ಈ ವರೆಗೆ ಸಕಾ೯ರದ ಸಹಾಯಧನ ಪಡೆದಿಲ್ಲ, ಉಚಿತ ವಿದ್ಯುತ್ ಪಡೆದಿಲ್ಲ, ನಸ೯ರಿ ಪ್ರಾರಂಬಿಸಿ 6 ತಿಂಗಳಲ್ಲೇ ಲಾಭ ಪಡೆಯಲು ಪ್ರಾರ೦ಬಿಸಿದ್ದಾರೆ.
ಲಂಚ ಕೊಡುವುದಿಲ್ಲ ಹಾಗು ಲಂಚ ಪಡೆಯುವುದಿಲ್ಲ ಎಂಬ ಇವರ ಶಪತದಿಂದ ಬಹುಸಂಖ್ಯಾತ ಬ್ರಷ್ಟರು 1980ರ ದಶಕದಲ್ಲಿ ಕೆ.ಇ.ಬಿ. ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯಟೀವ್ ಇಂಜಿನೀಯರ್ ಆಗಿದ್ದ ಇವರಿಂದ ತೊಂದರೆ ಪಟ್ಟು ಎಲ್ಲಾ ರೀತಿಯ ಸಾಮ, ಬೇದ ಮತ್ತು ದಂಡ ಪ್ರಯೋಗ ಮಾಡಿದರೂ ಇವರನ್ನ ಬದಲಿಸಲಾಗಲಿಲ್ಲ ಕೊನೆಗೆ ಇವರೇ ಸಕಾ೯ರಿ ಕೆಲಸಕ್ಕೆ ಸಲಾಂ ಹೊಡೆದು ಈ ಸ್ವಂತ ಕೃಷಿ ಉದ್ದಿಮೆ ಸ್ಥಾಪಿಸಿದ್ದಾರೆ.
ಕೆಲಸ ಬಿಟ್ಟ ಬಗ್ಗೆ ನಿಮಗೆ ಈಗಲಾದರೂ ತಪ್ಪು ಅನಿಸಿದೆಯಾ? ಅಂದೆ, ಖಂಡಿತಾ ಇಲ್ಲ ಈ ಸ್ವಾತಂತ್ರ ಅಲ್ಲಿ ಇರುತ್ತಿರಲಿಲ್ಲ ಅಂದರು.
ನಿಮ್ಮ ಪತ್ನಿ, ಅಂದು ಬಂದುಗಳು ಅಗ ಏನು ಹೇಳಿದರು ಅಂತ ಕೇಳಿದ್ದಕ್ಕೆ ಅವರು ಹೇಳಿದ್ದು
" ನನ್ನ ಪತ್ನಿ ಸಂತೋಷ ಪಟ್ಟರು ಒತ್ತಡದ ಕೆಲಸ ಬೇಡ ಬಿಡಿ ಅಂದರು, ಕೆಲಸದಲ್ಲಿ ಮುಂದುವರಿದಿದ್ದರೆ ನಾನು ಜೀವ೦ತ ಇರಲು ಅವರೆಲ್ಲ ಬಿಡುತ್ತಿರಲಿಲ್ಲ, ಗೆಳೆಯರು ಇಂತ ಒಳ್ಳೆ ಕೆಲಸ ಬಿಡಬಾರದಿತ್ತು ಅಂದರು, ನಾನು ಅವರಿಗೆ ಹೇಳಿದ್ದು 20 ರೂಪಾಯಿ ಪೋಸ್ಟಲ್ ಆಡ೯ರ್ ಅಷ್ಟೆ ನಾನು ಖಚು೯ ಮಾಡಿದ್ದು ಅಂತ ಅಂದೆ ಅಂತ ಹೇಳಿದರು.
ಭ್ರಷ್ಟಾಚಾರದ ನನ್ನ ಅನೇಕ ಹೋರಾಟದಲ್ಲಿ ನನಗೆ ಸದಾ ನೆನಪಾಗುವುದು ಈ ಅನಂತ ಮೂತಿ೯ ಜವುಳಿ, ನಾವು 1978ರಲ್ಲಿ ಆನಂದಪುರದಿಂದ ಸಾಗರಕ್ಕೆ ಶಾಲೆಗೆ ಹೋಗುವಾಗ ರೈಲಿನಲ್ಲಿ ಈ ಜವುಳಿ ನಮಗೆ ಹಿರಿಯ ಸಹ ಪ್ರಯಾಣಿಕ ಗೆಳೆಯರಾಗಿದ್ದರು.
ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಾಮಾಣಿಕರು ಬದುಕಲು ಕಷ್ಟ ಸಾಧ್ಯವಲ್ಲವೆ?.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment