Blog number 1923. ಅಯೋಧ್ಯಯಲ್ಲಿ ದಿನಾಂಕ 22 ಜನವರಿ 2024ರಂದು ಬಾಲರಾಮನ ವಿಗ್ರಹದ ಪ್ರತಿಷ್ಟಾಪನೆಯ ದಿನ ಭಾರತ ದೇಶವನ್ನ ಭ್ರಷ್ಟಾಚಾರ ಮುಕ್ತ ರಾಮರಾಜ್ಯವಾಗಿ ನಿರ್ಮಾಣ ಮಾಡುವ ಸಂಕಲ್ಪ ದಿನವಾಗಿ ಆಚರಿಸಲಿ
#ಚರ್ಚೆಯ_ಮುನ್ನಲೆಗೆ_ಬಂದ_ರಾಮರಾಜ್ಯ.
#ಮಹಾತ್ಮಾಗಾಂಧೀಜಿ_1921ರಲ್ಲಿ_ಅಯೋಧ್ಯೆಗೆ_ಬೇಟಿ_ನೀಡಿದ್ದರು.
#ನವಜೀವನ್_ಪತ್ರಿಕೆಯಲ್ಲಿ_ದಾಖಲಿಸಿದ್ದಾರೆ
#ಹಿಂದ್_ಸ್ಟರಾಜ್_ಪತ್ರಿಕೆಯಲ್ಲಿ_ರಾಮರಾಜ್ಯದ_ಬಗ್ಗೆ_ಬರೆದಿದ್ದಾರೆ.
#ಇಂದಿನ_ಯುವ_ಜನಾಂಗ_ಭ್ರಷ್ಟಾಚಾರ_ಮುಕ್ತ_ಭಾರತ_ನಿರ್ಮಾಣಕ್ಕೆ_ಮುಂದಡಿ_ಇಡಲಿ
#ಬಾಲರಾಮನನ್ನ_ಅಯೋಧ್ಯಯಲ್ಲಿ_ಪ್ರತಿಷ್ಟಾಪನೆ_ಮಾಡಿದ_ದಿನವೇ_ರಾಮರಾಜ್ಯ_ಸಂಕಲ್ಪ_ದಿನವಾಗಲಿ.
ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ಬಾಲ ರಾಮನ ವಿಗ್ರಹದ ಪ್ರತಿಷ್ಟಾಪನೆ ನಾಳೆ 22- ಜನವರಿ- 2024 ರ ಸೋಮವಾರ ನಡೆಯುವ ಸುಸಂದರ್ಭದಲ್ಲಿ ಭಾರತೀಯರ ಮನಸ್ಸಿನಲ್ಲಿ ರಾಮ ರಾಜ್ಯದ ಚರ್ಚೆ ಮುನ್ನಲೆಗೆ ಬರುತ್ತಿರುವುದು ತಪ್ಪೇನಲ್ಲ.
ಇವತ್ತು ಭಾರತ ದೇಶದ ಸರ್ಕಾರದ ಆದಾಯ ಸಮರ್ಪಕ ವಿನಿಯೋಗ ಆಗುತ್ತಿದೆಯಾ? ಸರ್ಕಾರಿ ಉದ್ಯೋಗಗಳು ಅರ್ಹರಿಗೆ ದೊರೆಯುತ್ತಿದೆಯಾ? ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆಯಾ? ಬಡವರಿಗೆ ಇಂಜಿನಿಯರಿಂಗ್ ವೈದ್ಯಕೀಯ ಶಿಕ್ಷಣಗಳು ಸುಲಭವಾ? ಊಚಿತ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸಿಗುತ್ತಿದೆಯಾ? ಜನಸಾಮಾನ್ಯರಿಗೆ ನ್ಯಾಯ ಸುಲಭವಾ?....ಇಂತಹ ನೂರಾರು ಪ್ರಶ್ನೆಗಳು ಭಾರತೀಯ ಯುವ ಜನತೆಯ ಮನಸ್ಸಿನಲ್ಲಿ ಸುಪ್ತವಾಗಿ ಉಳಿದ ಪ್ರಶ್ನೆಗಳು.
ಸಾವಿರಾರು ಕೋಟಿ ಹಣ ರಾಮಮಂದಿರ ನಿರ್ಮಾಣಕ್ಕೆ ಹರಿದು ಬಂದಿರುವ ಹಿಂದಿನ ಉದ್ದೇಶವೇ ರಾಮ ರಾಜ್ಯದಂತ ಆಡಳಿತ ಭಾರತದೇಶದಲ್ಲಿ ಬರಲಿ ಎಂಬ ಅಂತರ್ಯದ ಬಯಕೆಯ ಒಂದು ರೂಪವಾಗಿದೆ.
ರಾಜಕೀಯ ಪಕ್ಷಗಳು ರಾಮ ಮುಂದಿರದ ವಿಷಯವನ್ನು ರಾಜಕೀಯವಾಗಿ ಲಾಭ ಪಡೆಯಲು ಬಳಸಿಕೊಳ್ಳುವುದು ಅವುಗಳ ಬುದ್ಧಿವಂತಿಕೆ ಮಾತ್ರ ಆದರೆ ಭಾರತೀಯರ ಮನಸ್ಸಿನ ಬಯಕೆಯ ಆಂತರ್ಯ ಗಾಂಧೀಜಿ ಕನಸಿನ ರಾಮರಾಜ್ಯ ಮಾತ್ರ.
1921ರಲ್ಲಿ ಮಹಾತ್ಮಾ ಗಾಂಧೀಜಿ ಅಯೋಧ್ಯೆಗೆ ಭೇಟಿ ನೀಡುತ್ತಾರೆ ಈ ಬಗ್ಗೆ 1921ರ ಮಾರ್ಚ್ 20ರ ನವ ಜೀವನ ಪತ್ರಿಕೆಯಲ್ಲಿ ಬರೆಯುತ್ತಾರೆ ರಾಮ ಸೀತೆಯರ ವಿಗ್ರಹಗಳು ಮಸ್ಲೀನ್ ಬಟ್ಟೆಗಳಿಂದ ಅಲಂಕರಿಸಿದ್ದನ್ನು ನೋಡಿ ಅವರ ಸ್ವದೇಶಿ ಚಳವಳಿಯ ಶುದ್ಧ ಖಾದಿ ಬಟ್ಟೆಯಲ್ಲಿ ಅಲಂಕರಿಸಲು ವಿನಂತಿಸುತ್ತಾರೆ ಅದು ಆಚರಣೆಗೆ ಬರುವ ಬಗ್ಗೆ ಅನುಮಾನವಿದೆ ಎಂದು ಬರೆಯುತ್ತಾರೆ.
1929 ರ ಹಿಂದ್ ಸ್ವರಾಜ್ ಪತ್ರಿಕೆಯಲ್ಲಿ ಅವರ ಕನಸಿನ #ರಾಮ_ರಾಜ್ಯ ದ ಬಗ್ಗೆ ವಿವರಿಸಿದ್ದಾರೆ... ರಾಮ ರಾಜ್ಯವೆಂದರೆ ಒಂದು ಧರ್ಮದ ರಾಜ್ಯವಲ್ಲ ಅದು ದೇವರ ರಾಜ್ಯ - ದೇವರ ರಾಜದಾನಿ ರಾಮ-ರಹೀಮರು ಇಬ್ಬರೂ ಒಂದೇ ಅಲ್ಲಿ ಸರ್ವರಿಗೂ ನ್ಯಾಯ ಸಮಾನತೆಗಳು ಇರುವ ಬಡವ ಬಲ್ಲಿದ ಎನ್ನದ ಭ್ರಷ್ಟಾಚಾರ ಮುಕ್ತವಾದ ಆಡಳಿತದ ರಾಜ್ಯ ಎಂದಿದ್ದಾರೆ.
ಅಯೋಧ್ಯಯ ಬಾಲರಾಮನ ಪ್ರತಿಷ್ಟಾಪನೆಯ ನಾಳೆಯ ದಿನ (22- ಜನವರಿ-2024) ರಾಮ ರಾಜ್ಯ ನಿರ್ಮಾಣದ ಸಂಕಲ್ಪ ದಿನವಾಗಲಿ ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿರುವ ರಾಮ ರಾಜ್ಯದ ಕನಸು ಕಾಣುತ್ತಿರುವ ಸಜ್ಜನರು, ರಾಮ ಮುಂದಿರದ ನಿರ್ಮಾಣದ ಹೊಣೆ ಹೊತ್ತಿರುವ ವಿಶ್ವ ಹಿಂದೂ ಪರಿಷತ್ ಈ ಎಲ್ಲಾ ರಾಮ ಮುಂದಿರದ ಹೋರಾಟದ ಹಿಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ಬಗ್ಗೆ ರಾಮ ರಾಜ್ಯದಂತಾ ಭ್ರಷ್ಟಾಚಾರ ಮುಕ್ತವಾದ ಸರ್ವರಿಗೂ ನ್ಯಾಯ ಸಮಾನತೆಯ ಆಡಳಿತದ ಕನಸು ನನಸು ಮಾಡಲು ಮುಂದಡಿ ಇಡಬೇಕು.
ಹಳ್ಳಿಯಿಂದ ಡೆಲ್ಲಿವರೆಗೆ ಹೆಜ್ಜೆ ಹೆಜ್ಜೆಗೂ ಲಂಚಾವತಾರ - ಅನ್ಯಾಯ- ಅಸಮಾನತೆಗಳಿಂದ ಜನ ರೋಸಿ ಹೋಗುತ್ತಿದ್ದಾರೆ.
Comments
Post a Comment