Blog number 1902. ಬ್ಯಾಂಕ್ ಮಾಫಿಯಾ ವಿರುದ್ಧ ಜನ ಜಾಗೃತಿ ಆಗದಿದ್ದರೆ ಬಡ ಮಾಧ್ಯಮ ಕುಟುಂಬಗಳ ಆತ್ಮಹತ್ಯೆ ಕೂಡ ತಡೆಯಲಾಗದು.
#ಶ್ರೀಮತಿ_ರೂಪಾ_ರಾಜೀವ್_ಹೋರಾಟ
#ಸರ್ಪೆಸಿ_ಆಕ್ಟ್_ಬ್ಯಾಂಕಿನಿಂದ_ಸಾಲಪಡೆದವರ_ರಕ್ಷಣೆಗೆ_ಇದೆಯಾ?
#ಈ_ಕಾನೂನು_ದುರುಪಯೋಗದಿಂದ_ಅನೇಕರು_ಆತ್ಮಹತ್ಯೆ_ಮಾಡಿಕೊಂಡಿದ್ದಾರೆ
#ಸಾಲ_ಕಟ್ಟಲಾಗದವನನ್ನು_ಶೋಷಣೆ_ಮಾಡುವ_ಬ್ಯಾಂಕ್_ಮಾಫಿಯಾ
#ಸಾಲಪಡೆದವರನ್ನು_ಅವಮಾನಿಸುವ_ಬೀದಿಗೆ_ತಳ್ಳುವ_ದುಷ್ಟಪಡೆಗಳ_ವಿರುದ್ದ
#ಒಂಟಿ_ಮಹಿಳೆ_ಹೋರಾಟಕ್ಕೆ_ಬೆಂಬಲಿಸಿ
#ಅಮೇರಿಕಾದ_ಕ್ಲಾಸ್_ಆಕ್ಷನ್_ಸೂಟ್_ಭಾರತದಲ್ಲಿ_ಸಾಧ್ಯವಾಗಲಿ
ಮೊನ್ನೆ ಬೆಂಗಳೂರಿನ ರೂಪ ರಾಜೀವೆಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಅವರು ಸಾಲ ಪಡೆದಿದ್ದ ಬ್ಯಾಂಕ್ ಅವರನ್ನು ಮನೆಯಿಂದ ಬಲತ್ಕಾರವಾಗಿ ಹೊರ ಹಾಕುವ ಪ್ರಯತ್ನವನ್ನು ಎದುರಿಸಿ ಲೈವ್ ಮಾಡಿದ್ದು ವೈರಲ್ ಆಗಿತ್ತು.
📸 Watch this video on Facebook
https://www.facebook.com/share/p/sTjk2XxF5FpBmqTX/?mibextid=qi2Omg
ಇವರ ಪತಿಯದ್ದು ನರ್ಸಿಂಗ್ ಹೋಮ್ ಇದೆ,ಇವರು 60 ಚದರದ ಮನೆಗೆ ಈ ಬ್ಯಾಂಕಿನಿಂದ ಒಂದು ಕೋಟಿ ಅರವತ್ತು ಲಕ್ಷ ಸಾಲ ಪಡೆದಿದ್ದರು ಆದರೆ ಲಾಕ್ ಡೌನ್ ಮತ್ತು ಇವರ ಪತಿಯ ಅನಾರೋಗ್ಯ ಇವರಿಗೆ ಸಾಲದ ಮರುಪಾವತಿ ಸರಿಯಾಗಿ ಮಾಡಲು ಆಗಲಿಲ್ಲ.
ಇವರು ಸಾಲದ ಕಂತಿನ ಮಾರ್ಪಾಡು ಮಾಡಿಕೊಡಿ ಅಂದರೆ ರೀ ಷೆಡ್ಯೂಲ್ ಅರ್ಜಿ ಸಲ್ಲಿಸಿದರು ಬ್ಯಾಂಕ್ ಸಹಕರಿಸಿಲ್ಲ ಮತ್ತು ಇವರು ಕೇಳಿದ ಮಾಹಿತಿ ಬ್ಯಾಂಕ್ ನೀಡಿಲ್ಲ.
ಇವರ ಸಾಲದ ಖಾತೆ ಎನ್ಪಿಎ ಆಗಿದೆ ಆಸ್ತಿಯನ್ನು ಬ್ಯಾಂಕ್ ತನ್ನ ಸುಪರ್ದಿಗೆ ಆರ್.ಬಿ.ಐ.ಆಕ್ಟ್ ಸರ್ಫೇಸಿ ಮೂಲಕ ಪಡೆದುಕೊಂಡಿದೆ, ಈ ಹಂತದಲ್ಲಿ ಈ ಆಕ್ಟ್ ಪ್ರಕಾರ ಬ್ಯಾಂಕ್ ಸಾಲ ಪಡೆದುಕೊಂಡು ಸಾಲದ ಕಂತು ಪಾವತಿ ಮಾಡಲಿಕ್ಕೆ ಸಾಧ್ಯವಾಗದವರ ಪರವಾಗಿ ಅವರ ಆಸ್ತಿ ನ್ಯಾಯವಾದ ಬೆಲೆಯಲ್ಲಿ ಮಾರಾಟ ಮಾಡಿ ತಮ್ಮ ಬ್ಯಾಂಕಿನ ಸಾಲದ ಬಗ್ಗೆ ಆ ಹಣದಿಂದ ಪಾವತಿ ಮಾಡಿಕೊಂಡು ಉಳಿದ ಹಣ ಆಸ್ತಿ ಕಳೆದುಕೊಂಡವರಿಗೆ ಪಾವತಿಸಬೇಕಿತ್ತು.
ಆದರೆ ಸದರಿ ಬ್ಯಾಂಕ್ ಸಿಬ್ಬಂದಿಗಳು ಮಧ್ಯವರ್ತಿಗಳ ಜೊತೆಗೆ ಶಾಮೀಲಾಗಿ ಇವರನ್ನು ಮನೆಯಿಂದ ಹೊರ ಹಾಕಿ ಈ ಆಸ್ತಿಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದಂತೆ ತೋರಿಸಿ ಬ್ಯಾಂಕ್ ಸಾಲ ತೀರ್ಮಾನ ಮಾಡಿ ಉಳಿದ ಹಣ ಹಂಚಿಕೊಳ್ಳುವ ಹುನ್ನಾರ ಜಗಜ್ಜಾಹಿರವಾಗಿದೆ ಇದು ಇವತ್ತಿನ ದಿನಗಳಲ್ಲಿ ಸಾಲಗಾರನನ್ನು ಹರಿದು ತಿನ್ನುವ ಬ್ಯಾಂಕ್ ಸಿಬ್ಬಂದಿಗಳ ಮತ್ತು ಮಧ್ಯವರ್ತಿಗಳ ವ್ಯವಹಾರವಾಗಿದೆ.
ಸಾಲ ಪಡೆದ ಕುಟುಂಬ ತನ್ನ ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ, ಈ ಅಸಹಾಯಕತೆ ಅವಮಾನ ಅನೇಕ ಗೌರವಸ್ಥರ ಆತ್ಮಹತ್ಯೆಗೆ ಕಾರಣವಾಗಿದೆ.
ಇಲ್ಲಿ ಧೈರ್ಯವಂತ ಮಹಿಳೆ ಶ್ರೀಮತಿ ರೂಪ ರಾಜೀವ್ ಇದ್ದಿದ್ದರಿಂದ ಅಂತಹ ದುರಂತ ನಡೆಯಲಿಲ್ಲ ಮತ್ತು ಅವರು ಸದರಿ ಬ್ಯಾಂಕ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಅಷ್ಟೇ ಅಲ್ಲ ರಾಜ್ಯದ್ಯಂತ ಇಂತಹ ನೊಂದ ಕುಟುಂಬಗಳಿಗೆ ಆಸರೆಯಾಗುವ ಒಂದು ವೇದಿಕೆಯನ್ನು ಟ್ರಸ್ಟ್ ಅನ್ನು ಸದ್ಯದಲ್ಲೇ ಪ್ರಾರಂಭಿಸಿ ಜನಜಾಗೃತಿ ಮಾಡುವ ತೀರ್ಮಾನ ಮಾಡಿದ್ದಾರೆ.
ಇವತ್ತು ಫೇಸ್ಬುಕ್ ಅಲ್ಲಿ ಲೈವ್ ಮಾಡಿ ತಮ್ಮ ಅನುಭವ ತಾವು ಸಾಲ ಪಡೆದಾಗ ಅನುಭವಿಸಿದ್ದು ಈಗ ಅದನ್ನು ಎದುರಿಸಿದ್ದು ವಿವರಿಸಿದ್ದಾರೆ.
📸 Watch this video on Facebook
https://www.facebook.com/share/v/1YA6k1ftSpGtZSX1/?mibextid=qi2Omg
ನಾನು ಇವರ ಧೈರ್ಯವನ್ನು ಮೆಚ್ಚಿದ್ದೇನೆ ಇವರ ಹೋರಾಟಕ್ಕೆ ನನ್ನ ವೈಯಕ್ತಿಕ ಬೆಂಬಲವಿದೆ, ಸಾಮಾಜಿಕ ಜಾಲತಾಣದ ಸಮಾನಮನಸ್ಕರು ಇವರನ್ನು ಬೆಂಬಲಿಸಲು ವಿನಂತಿಸುತ್ತೇನೆ.
ಹಣ ಮತ್ತು ಆಸ್ತಿ ವಿಚಾರದಲ್ಲಿ ಗೆಳೆಯರು ರಕ್ತ ಸಂಬಂಧಿಗಳು ಅಸಹಾಯಕರು ಶೋಷಣೆಗೆ ಮುಂದಾಗುವುದು ನಿತ್ಯ ನೋಡುತ್ತೇವೆ 2000 ಇಸವಿಯಲ್ಲಿ ನಾನು ನಮ್ಮ ಅಕ್ಕಿ ಗಿರಣಿಗೆ ಪಡೆದಿದ್ದ ಕೆ ಎಸ್ ಎಫ್ ಸಿ ಸಾಲ ಮರುಪಾವತಿಯಾಗದೆ ಸದರಿ ಬ್ಯಾಂಕ್ ನನ್ನ ಆಸ್ತಿ ಹರಾಜಿಗೆ ಪತ್ರಿಕೆಗಳಲ್ಲಿ ಪ್ರಕಟಿಸಿದಾಗ ಅದನ್ನು ಪಡೆಯಲು ಹೋದವರು ನನ್ನ ಖಾಸಾ ಗೆಳೆಯರು.
ನನಗೆ ಗೊತ್ತಿಲ್ಲದಂತೆ ನನ್ನ ಚೆಕ್ ಬೌನ್ಸ್ ಮಾಡಿ ನನ್ನಿಂದ ಹೆಚ್ಚು ಹಣ ಪೀಕಿದ ಗೆಳೆಯರು ಬಂಧುಗಳು ನನಗೆ ಜೀವನದ ಪಾಠ ಕಲಿಸಿದ್ದಾರೆ.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಉದ್ಯಮಕ್ಕಾಗಿ, ಮನೆ ನಿರ್ಮಾಣಕ್ಕಾಗಿ ಸಾಲ ಪಡೆಯುವಾಗ ಹೆಚ್ಚು ಜಾಗೃತರಾಗಿರಬೇಕು ಯಾರನ್ನು ನಂಬಬಾರದು ನಮ್ಮ ಕೈ ನಮ್ಮ ತಲೆ ಮೇಲೆ ಎಂಬುದು ಮರೆಯಬಾರದು.
ಎನ್ ಪಿ ಎ ಮತ್ತು ಸರ್ಫೇಸಿ ಆಕ್ಟ್ ಜಾರಿಗೆ ತಂದದ್ದು ಯುಪಿಎ ಗವರ್ನಮೆಂಟ್ ಮತ್ತು ಇದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಬಿಜೆಪಿ ಸರ್ಕಾರ ಇದರ ಬಗ್ಗೆ ಹೋರಾಟ ಮಾಡಬೇಕಾದ ರಾಜಕೀಯ ಪಕ್ಷಗಳು ತಟಸ್ಥವಾಗಿದೆ.
ಈ ಆಕ್ಟ್ ಗಳು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗಿಲ್ಲ, ಸಾಲ ಮಾಡಿ ಉದ್ಯೋಗ ಸೃಷ್ಟಿ ಮಾಡಿಕೊಳ್ಳುವ ಬಹು ಜನ ಯುವ ಉದ್ದಿಮೆದಾರರಿಗೆ ಇದು ಕಂಟಕವಾಗಿದೆ.
ಸಾಲ ಪಡೆದು ಸಾಲ ತೀರಿಸಲಾಗದಿದ್ದರೆ ಅವರಿಗೆ ಸೂಕ್ತ ಕಾಲಾವಕಾಶ ನೀಡದೆ ಅವರ ಆಸ್ತಿಯನ್ನು ಬೇಕಾಬಿಟ್ಟಿಯಾಗಿ ಮಾರಾಟ ಮಾಡುವ ಈ ಕಾನೂನು ಸರಿಯೇ?.
ರೂಪ ರಾಜೇವವರು ಅಮೆರಿಕದಲ್ಲಿದ್ದರೆ ಇದೇ ಸಮಸ್ಯೆಯನ್ನು ಹೊತ್ತಿರುವ ಜನರನ್ನು ಒಟ್ಟುಗೂಡಿಸಿ ನೂರಾರು ಕೇಸುಗಳನ್ನು ಹಾಕಿಸಿ ಹೋರಾಟ ಮಾಡಿದ್ದರೆ ಇದು ಅಲ್ಲಿನ ಜನಜಾಗೃತಿಗೆ ಕಾರಣವಾಗುತ್ತಿತ್ತು.
ಅಮೇರಿಕಾದಲ್ಲಿ ಕ್ಲಾಸ್ ಆಕ್ಷನ್ ಸೂಟ್ ಪರಿಣಾಮಗಳು ದೊಡ್ಡದು,ಭಾರತದಲ್ಲಿ ಮುಂದಿನ ದಿನಗಳಲ್ಲಿ ಇದು ಸಾಧ್ಯವಿದೆ ಇದರಿಂದ ಸರ್ಕಾರಗಳು ಸರಿಯಾದ ನಿಲುವುತಾಳಬೇಕು ಇಲ್ಲದಿದ್ದಲ್ಲಿ ಅನೇಕ ಮುಗ್ಧ ಬಡ ಮಧ್ಯಮ ವರ್ಗದ ಸಂಸಾರಗಳು ಬೀದಿಗೆ ಬೀಳಲಿದೆ.
ಜನಪರ ಸಂಘಟನೆಗಳು ರೈತ ಸಂಘಟನೆಗಳು ಇಂತಹ ನೊಂದವರ ಪರವಾಗಿ ಮುಂದೆ ನಿಲ್ಲಬೇಕು ಅವರಿಗೆ ನ್ಯಾಯ ಕೊಡಿಸಬೇಕು ಈ ಮೂಲಕ ಬ್ಯಾಂಕ್ ಸಿಬ್ಬಂದಿಗಳ ಮತ್ತು ಮಧ್ಯವರ್ತಿ ಬಡ್ಡಿ ಮಾಫಿಯಗಳ ದೌರ್ಜನ್ಯ ತಡೆ ಹಿಡಿಯಬೇಕು.
ಹೆಚ್ಚಿನ ಜನಕ್ಕೆ ಇದು ಅರ್ಥವಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚು ಹೆಚ್ಚಾಗಿ ಜನ ಪ್ರತಿಭಟಿಸುವ ಕಾಲ ಬರಲಿದೆ.
ಧೈರ್ಯದಿಂದ ಈ ಸಂದಿಗ್ದ ಪರಿಸ್ಥಿತಿ ಎದುರಿಸಿದ ಸಹೋದರಿ ಶ್ರೀಮತಿ ರೂಪ ರಾಜೀವ್ ಅವರಿಗೆ ಪ್ರಶಂಶಿಸುತ್ತೇನೆ ಮತ್ತು ಇಂತಹ ನೊಂದ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವ ಅವರ ಟ್ರಸ್ಟ್ ಗೆ ನನ್ನ ಬೆಂಬಲವನ್ನು ಸೂಚಿಸುತ್ತೇನೆ
Comments
Post a Comment