#ನನ್ನ_ಪ್ರೀತಿಯ_ಶಂಭೂರಾಮನ_ಇವತ್ತಿನ_ಫಲಾಹಾರ
#ರಾಮ_ಫಲ.
#ರಾಟ್_ವೀಲರ್_ಗಳು_ಮಾಂಸ_ಬಿಟ್ಟು_ಹಣ್ಣು_ತರಕಾರಿ_ತಿನ್ನುವುದಿಲ್ಲ_ಎಂಬುದಕ್ಕೆ_ಅಪವಾದ
#ನಾವು_ಬೆಳೆಯುವ_ಬೆಳೆಸುವ_ಪರಿಸರವೇ_ನಮ್ಮ_ನಡೆ_ನುಡಿ_ಆಹಾರ_ಪದ್ಧತಿಗೆ_ಕಾರಣ
#ಎಲ್ಲಾ_ಹಣ್ಣುಗಳೂ_ತಿನ್ನುವ_ಆದರೆ_ಕೆಲ_ಹಣ್ಣು_ಕೊಡಬಾರದ್ದರಿಂದ_ನೀಡುವುದಿಲ್ಲ.
#ಆಯಾ_ಕಾಲದ_ಹಣ್ಣು_ಸಂಗ್ರಹಿಸಿ_ತಿನ್ನುವ_ನನ್ನ_ಖಯಾಲಿಗೆ
#ಶಂಭೂರಾಮನ_ಸಾಥ್.
https://youtu.be/w5k4WbPaarA?feature=shared
ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನ ಬೆಳಗಿನ ವಾಕಿಂಗ್ ನಂತರ ನಾವಿಬ್ಬರು ಮನೆಗೆ ಬಂದು ಅವತ್ತಿನ ಕೆಲ ಹಣ್ಣುಗಳನ್ನು ಸೇವಿಸುವುದು ಅಭ್ಯಾಸ ಆಗಿದೆ ಇವತ್ತು ರಾಮ ಫಲ ಹಣ್ಣಾಗಿತ್ತು ಅದನ್ನು ಇಡಿಯಾಗಿ ಶಂಭೂರಾಮನಿಗೆ ನೀಡಿ ನಾನು ಒಂದು ಕಿತ್ತಳೆ ಮತ್ತು ಮೂಸುಂಬಿ ಹಣ್ಣು ತಿಂದೆ.
ತಾಳಗುಪ್ಪ ಸಮೀಪದ #ಬೆಳ್ಳೆಣ್ಣೆ_ಶಂಭೂಲಿಂಗೇಶ್ವರ ನ ಪ್ರೀತ್ಯಾರ್ಥವಾಗಿ ಇವನಿಗೆ ಮಗ ಶ೦ಭೂ ಅಂತ ನಾಮಕರಣ ಮಾಡಿದ್ದ ಮುಂದಿನ ರಾಮ ನಾನು ಸೇರಿಸಿದೆ ಹಾಗಾಗಿ ಇವನು ಶಂಭೂ ರಾಮನಾಗಿದ್ದಾನೆ.
ಇವನನ್ನು ಜೊತೆಗೆ ಕರೆದು ಕೊಂಡು ಕಲ್ಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಗಾಣಗಾಪುರ ದತ್ತ ಮುಂದಿರಕ್ಕೆ ದರ್ಶನಕ್ಕೆ ಹೋಗುವ ಯಾತ್ರೆ ಸಂಕಲ್ಪ ಮಾಡಿದ್ದೇವೆ.
ಭಗವಾನ್ ದತ್ತರು ಶ್ವಾನಗಳು ಯಾವುದೇ ರೀತಿಯ ಆಸೆಗಳಿಲ್ಲದೆ ಯಾವತ್ತೂ ಸಂತೋಷ ಸಂತೃಪ್ತಿಯಿಂದ ಇರುವುದರಿಂದ ಶ್ವಾನಗಳನ್ನು ಗುರುವಾಗಿ ಸ್ವೀಕರಿಸಿ ಪೂಜಿಸಿದ್ದರಿಂದ ಎಲ್ಲಾ ದತ್ತ ಕ್ಷೇತ್ರದಲ್ಲಿ ಶ್ವಾನಗಳಿಗೆ ಪ್ರವೇಶವಿದೆ.
ಉತ್ತರ ಪ್ರದೇಶದ ಘೋರಕಪುರದ ನಾಥ ಪಂಥದ ಪೀಠದ ಮಹಾಂತರು ಈಗಿನ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರು ಅಲ್ಲಿಯೂ ಶ್ವಾನ ಪೂಜಾರ್ಹ ಮತ್ತು 12 ವರ್ಷಕ್ಕೊಮ್ಮೆ ನಾಸಿಕದ ಕುಂಭ ಮೇಳದ ಮರುದಿನ ಪ್ರಾರಂಭವಾಗಿ ಮಂಗಳೂರಿನ ಕದ್ರಿ ದೇವಾಲಯಕ್ಕೆ ನಡೆದು ಬರುವ ನೂರಾರು ಸಾದು ಸಂತರ ಬಾರಾಪಂಥ ಯಾತ್ರೆಯಲ್ಲಿ ಪಾತ್ರ ದೇವತೆ ಹೊತ್ತು ತರುತ್ತಾರೆ ಆರು ತಿಂಗಳ ಈ ಯಾತ್ರೆಯಲ್ಲಿ ಶ್ವಾನವೂ ಯಾತ್ರಾರ್ಥಿಯಾಗಿ ನಡೆದು ಬರುತ್ತದೆ ಅದಕ್ಕೂ ಈ ಯಾತ್ರೆಯಲ್ಲಿ ಸಂಗ್ರಹವಾಗುವ ಹಣದ ಪಾಲು ಮೀಸಲಿಟ್ಟು ನೀಡುವ ಪದ್ಧತಿಗೆ ಸಾವಿರ ವರ್ಷದ ಇತಿಹಾಸ ಇದೆ.
ಕೆಲವರು ನಾನು ಶಂಭೂರಾಮ ಎಂಬ ಹೆಸರು ನಮ್ಮ ರಾಟ್ ವೀಲರ್ ಗೆ ನಾಮಕರಣ ಮಾಡಿದ್ದು ಸರಿ ಅಲ್ಲ ದೇವರ ಹೆಸರು ಇಡಬಾರದೆಂದು ಬರೆದಿದ್ದರಿಂದ ಈ ಸಮರ್ಥನೆ.
ದೇವರ ಹೆಸರಿಟ್ಟುಕೊಂಡು ಮನುಷ್ಯ ಮಾಡುವ ಅನಾಚಾರಗಳು ಕಣ್ಣೆದುರಿಗೇ ಇದೆ.
ಅಯೋಧ್ಯಾ ರಾಮನ ಪ್ರತಿಷ್ಟಾಪನೆಯ ಈ ದಿನಗಳಲ್ಲಿ ರಾಮನ ಹೆಸರಿನ ರಾಮ ಫಲ ಶಂಭೂರಾಮ ಗುಳುಂ ಮಾಡಿದ ವಿಡಿಯೋ ಇಲ್ಲದೆ ನೋಡಿ.
100 ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಲೆಕ್ಕಾಹಾಕಿ ಹೇಳುವುದಾದರೆ, ಶಕ್ತಿ 101 ಕ್ಯಾಲೋರಿಗಳು, ಕಾರ್ಬೋಹೈಡ್ರೇಟುಗಳು - 25 ಗ್ರಾಂ, ಕರಗಬಲ್ಲ ನಾರು - 2.4 ಗ್ರಾಂ, ಕೊಬ್ಬು - 0.6 ಗ್ರಾಂ, ಪ್ರೋಟಿನ್ ಬಿ1.7%, ವಿಟಮಿನ್ ಬಿ3-3% ವಿಟಮಿನ್ ಬಿ5-3%, ಮೆಗ್ನೀಷಿಯಂ-5, ಕಬ್ಬಿನಾಂಶ -5% ಮತ್ತು ಪೋಸಾರಸ್-3% ಇಷ್ಟೊಂದು ಪೌಷ್ಟಿಕಾಂಶ ಒಳಗೊಂಡ ಹಣ್ಣು ಮತ್ತೊಂದಿಲ್ಲ.
Comments
Post a Comment