Blog number 1934. ಅರಸೀಕೆರೆ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಮೆಮೋರಿಯಲ್ ಟ್ರಸ್ಟ್ ನಿಂದ ವಿಧಾಯ ಘೋಷಿಸಿದ 75 ರ ವಯೋಮಾನದ ನಾರಾಯಣ ರಾವ್ ಶರ್ಮಾರ ಸಾರ್ಥಕ ಸೇವೆ ಶ್ಲಾಘನೀಯ ಮತ್ತು ಸ್ಮರಣೀಯ.
#ಅರಸಿಕರೆ_ಕಸ್ತೂರಬಾ_ಆಶ್ರಮದ_ನಾರಾಯಣ_ರಾವ್_ಶರ್ಮ
#ದಿನಾಂಕ_14_ಫೆಬ್ರುವರಿ_2024ಕ್ಕೆ_75_ವಷ೯
#ಎಲ್ಲಾ_ಜವಾಬ್ದಾರಿಗಳಿಂದ_ನಿವೃತ್ತಿ_ಘೋಷಿಸಿದ್ದಾರೆ
#ಸ್ವಾತಂತ್ರ್ಯ_ಹೋರಾಟಗಾರ_ದಂಪತಿಗಳು_ಮಂತ್ರಿಗಳೂ_ಆಗಿದ್ದ_ಹೆಚ್_ದಾಸಪ್ಪ_ಮತ್ತು_ಯಶೋಧರಮ್ಮ
#ಸ್ಥಾಪಿಸಿದ_ಅರಸಿಕೆರೆಯ_ಕಸ್ತೂರಬಾ_ರಾಷ್ಟ್ರೀಯ_ಸ್ಮಾರಕ_ಟ್ರಸ್ಟ್
#ಇಲ್ಲಿ_ಮಹಾತ್ಮಾ_ಗಾಂಧಿ_ಚಿತಾಭಸ್ಮ_ತಂದು_ಗಾಂಧೀಜಿ_ಸಮಾದಿ_ನಿರ್ಮಿಸಿದ್ದಾರೆ.
ಇವತ್ತು ಅರಸಿಕೆರೆಯ ಕಸ್ತೂರಬಾ ರಾಷ್ಟ್ರೀಯ ಟ್ರಸ್ಟಿನ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ, ಇಲ್ಲಿನ ಭಾರತೀಯ ಗೋ ಪರಿವಾರ ಚಾರಿಟಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಜಿನಾಮೆ ಸಲ್ಲಿಸಲಿದ್ದೇನೆ ಎಂದು ನಾರಾಯಣ ರಾವ್ ಶರ್ಮಾ ಘೋಷಿಸಿದ್ದಾರೆ.
ಇವರ 75ನೇ ಹುಟ್ಟು ಹಬ್ಬ ಇದೇ ಬರುವ ಫೆಬ್ರುವರಿ 14 ಕ್ಕೆ ಇದೆ ಆದರೆ ಅವರು ಅದನ್ನು ಆಚರಿಸುವುದಿಲ್ಲ ಅವರೇ ಬರೆದು ಕೊಂಡಂತೆ ಅವರಿಗೆ 20 ವರ್ಷದ ಪ್ರಾಯ ತಲುಪುವ ತನಕ ಹುಟ್ಟು ಹಬ್ಬದ ಆಚರಣೆ ರಾಷ್ಟ್ರೀಯ ನಾಯಕರು ಮಾತ್ರ ಆಚರಿಸುವುದು ಎಂದು ಬಾವಿಸಿದವರು.
ಪೇಸ್ ಬುಕ್ ಗೆಳೆಯರಾಗಿರುವ ಇವರ ಎಲ್ಲಾ ಕಾರ್ಯಚಟುವಟಿಕೆ ಗಮನ ಸೆಳೆಯುತ್ತಿತ್ತು, ಅದರಲ್ಲಿ ವಿಶೇಷವಾಗಿ ಅರಸಿಕೆರೆಯ ಪ್ರಥಮ ಮತ್ತು ಏಕೈಕ ಸಾವಯವ ತರಕಾರಿ ಮಾರಾಟ ಕೇಂದ್ರ ಅಲ್ಲಿ ಟೋಮೋಟೋ ಕಾರ್ಡ್ ಪಡೆದರೆ ವರ್ಷಪೂರ್ತಿ ಕೇವಲ 10 ರೂಪಾಯಿಗೆ ಒಂದು ಕಿಲೋ ಸಾವಯವ ಟೋಮೋಟೋ ಸಿಗುತ್ತದೆ ಮಾರುಕಟ್ಟೆಯಲ್ಲಿ 80 ರೂಪಾಯಿಗೆ ಟೋಮೋಟೋ ಬೆಲೆ ಇದ್ದಾಗಲೂ,
ನನ್ನ ಲೇಖನಗಳು ಅವರಿಗೆ ಇಷ್ಟವಾದದ್ದು ಅನೇಕ ಬಾರಿ ಶೇರ್ ಮಾಡಿದ್ದಾರೆ ಇವರನ್ನು ಬೇಟಿ ಮಾಡಬೇಕು ಮತ್ತು ದೇಶದಲ್ಲೇ ಗಾಂಧಿ ಚಿತಾಭಸ್ಮ ಇರುವ ದೆಹಲಿ ರಾಜಘಾಟ್ ಮತ್ತು ಗುಜರಾತಿನ ಸಬರಮತಿ ಬೇಟಿ ಮಾಡಿದ್ದೆ ಆದರೆ ಗಾಂಧಿ ಚಿತಾಭಸ್ಮ ತಂದು ಸಮಾದಿ ಮಾಡಿದ ಅರಸಿಕೆರೆಯಿಂದ ಮೈಸೂರಿಗೆ ತೆರಳುವ ರಸ್ತೆಯಲ್ಲಿ 2 ಕಿಮಿ ದೂರದಲ್ಲಿರುವ ಹಬ್ಬನಘಟ್ಟ ಬಳಿಯ ಕಸ್ತೂರ್ಬಾ ಗಾಂಧಿ ಸ್ಮಾರಕ ಟ್ರಸ್ಟ್ ಸಂದರ್ಶಿಸಬೇಕೆಂಬ ಬಯಕೆ ಇನ್ನೂ ಈಡೇರಿಲ್ಲ.
ಹೆಚ್.ದಾಸಪ್ಪ ಮತ್ತು ಅವರ ಪತ್ನಿ ಯಶೋದರಮ್ಮ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು ದಾಸಪ್ಪನವರು ನೆಹರೂ ಅವರ ಕೇಂದ್ರ ಸರ್ಕಾರದ ರೈಲ್ವೆ ಮಂತ್ರಿ ಆಗಿದ್ದರೆ ಅವರ ಪತ್ನಿ ಯಶೋದರಮ್ಮ ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದ ರಾಜ್ಯ ಸರ್ಕಾರದ ಸಂಪುಟದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಸಚಿವೆ.
ಗ್ರಾಮೀಣ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಆಸ್ಪತ್ರೆ, ವೃದ್ದಾಶ್ರಮ, ಶಾಲೆಗಳು ಇತ್ಯಾದಿ ಮಹಿಳೆಯರ ಸಬಲಿಕರಣಕ್ಕಾಗಿ ಅರಸೀಕೆರೆಯಲ್ಲಿ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಶ್ರೀಮತಿ ಯಶೋದರಮ್ಮ ದಾಸಪ್ಪ ಸ್ಥಾಪಿಸುತ್ತಾರೆ ಈ ಟ್ರಸ್ಟ್ ಗಾಗಿ 85 ಎಕರೆ ಜಮೀನು ರಾಜ್ಯ ಸರ್ಕಾರ ಮಂಜೂರು ಮಾಡುತ್ತದೆ ಈ ಟ್ರಸ್ಟ್ ಇಂದೂರ್ ನ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧೀನ ಸಂಸ್ಥೆ ಆಗಿದೆ ಮತ್ತು ದೇಶದಾದ್ಯಂತ ಇಂತಹ 27 ಕೇಂದ್ರಗಳನ್ನು ಹೊಂದಿದೆ.
ಶ್ರೀಮತಿ ಯಶೋದರಮ್ಮ ದಾಸಪ್ಪನವರ ಇಂತಹ ಸಮಾಜ ಸೇವೆಗಾಗಿ ಪದ್ಮಭೂಷಣ ಪ್ರಶಸ್ತಿ ಕೂಡ ಪಡೆದಿದ್ದರು.
ಅರಸಿಕೆರೆಯ ಈ ಆಶ್ರಮದಲ್ಲಿ ಮಹಾತ್ಮಾ ಗಾಂಧೀಜಿ ಅವರ ಚಿತಾಭಸ್ಮ ತಂದು ನಿರ್ಮಿಸಿದ ಗಾಂಧೀಜಿ ಸಮಾದಿ ಇರುವುದು ವಿಶೇಷ ಇದು ದೇಶದಲ್ಲೇ ಗಾಂಧೀಜಿ ಚಿತಾಭಸ್ಮದ ಮೂರನೆ ಸಮಾದಿ ಮತ್ತು ಕರ್ನಾಟಕ ರಾಜ್ಯದಲ್ಲಿರುವುದು ಹೆಮ್ಮೆಯ ವಿಷಯ.
75 ನೇ ವರ್ಷದವರೆಗೂ ನಿಸ್ವಾರ್ಥ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಘೋಷಿಸಿದ ಗಾಂಧೀವಾದಿ ನಾರಾಯಣ ರಾವ್ ಶರ್ಮಾ ನನಗೆ ವಿಶೇಷವಾಗಿ ಕಾಣುತ್ತಾರೆ ಇದೇ ಜನವರಿ 30 ಮಹಾತ್ಮಾ ಗಾಂಧೀಜಿ ಅವರ 76ನೇ ಪುಣ್ಯತಿಥಿ ಆಚರಣೆ ಸಂದರ್ಭದಲ್ಲಿ ಅವರ ನಿವೃತ್ತಿ ಬೇಸರ ಅನ್ನಿಸಿದರೂ ಅವರ ತೀಮಾ೯ನ ಸಕಾಲಿಕ.
ಅವರಿಗೆ 75 ಹುಟ್ಟು ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತಾ ಅವರು ಶತಾಯುಷಿಗಳಾಗಿ ಬದುಕಲಿ ಎಂದು ಹಾರೈಸುತ್ತಾ ಅದಷ್ಟು ಬೇಗ ಅವರನ್ನ ಭೇಟಿ ಮಾಡಬೇಕು ಎಂದು ಬಯಸಿದ್ದೇನೆ.
ಅವರ ಇವತ್ತಿನ ಪೇಸ್ ಬುಕ್ ಪೋಸ್ಟ್ ಯಾಕೋ ನನಗೆ ದುಃಖ ಉಮ್ಮಳಿಸಿ ಕಣ್ಣೀರು ತರಿಸಿತು ಅವರು ಬರೆದ ಪೋಸ್ಟ್ ಈ ಕೆಳಗೆ ಲಗತ್ತಿಸಿದ್ದೇನೆ...
#ನಾರಾಯಣ_ರಾವ್_ಶರ್ಮ
#ಕಸ್ತೂರ್ಬಾಗಾಂಧಿ_ನ್ಯಾಷನಲ್_ಮೆಮೋರಿಯಲ್_ಟ್ರಸ್ಟ್
#ಅರಸಿಕೆರೆ
"ಬರುವ ಫೆಬ್ರವರಿ 14ನೇ ತಾರೀಕಿಗೆ ನನಗೆ 75 ವರ್ಷ ತುಂಬಿ 76 ಆರಂಭವಾಗುತ್ತದೆ. ಇನ್ನು ವಿಶ್ರಾಂತ ಜೀವನ ಬೇಕು .ಆದುದರಿಂದ ಎಲ್ಲಾ ಸಾರ್ವಜನಿಕ ರಂಗದ ಸೇವೆಗಳನ್ನು ಇದೀಗ ಮುಕ್ತಾಯಗೊಳಿಸಲಾಗುತ್ತದೆ.
ಮೊದಲ ಹ೦ತವಾಗಿ ಕಸ್ತೂರ್ ಬಾ ಗಾಂಧಿ ನ್ಯಾಷನಲ್ ಮೆಮೊರಿಯಲ್ ಟ್ರಸ್ಟ್ ಇದರ ಕಾರ್ಯಕಾರಿ ಸಮಿತಿಗೆ ರಾಜೀನಾಮೆಯನ್ನು ಕೊಟ್ಟಿರುತ್ತೇನೆ.
ಭಾರತೀಯ ಗೋಪರಿವಾರ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ ಮತ್ತು ಟ್ರಸ್ಟಿ ಸ್ಥಾನಕ್ಕೆ ನಾಳೆ ರಾಜೀನಾಮೆ ಕೊಡುತ್ತೇನೆ.
ಯಾರು ಕೂಡ ಮದುವೆ, ರಿಸೆಪ್ಶನ್, ಉಪನಯನ ಇತ್ಯಾದಿಗಳಿಗೆ ಆಮಂತ್ರಿಸಬೇಡಿ. ನಾನು ನನ್ನಷ್ಟಕ್ಕೇ
ಇರುತ್ತೇನೆ.
ನಮ್ಮ ಮನೆ ಅರಸೀಕೆರೆ ರೋಟರಿ ಹೈಸ್ಕೂಲ್ ಪಕ್ಕದಲ್ಲೇ ಇದೆ. ಹುಡುಕುವುದು ಬಹಳ ಸುಲಭ. ಬರುವವರು ಫೋನ್ ಮಾಡಿ ಬರಬಹುದು. ನನ್ನ ಫೋನ್ ಸಂಖ್ಯೆ
81050 11122.
Comments
Post a Comment