#ಕುಂಸಿ_ಎಂಬ_ಮಿನಿಭಾರತ
#ಸತತ_50_ವಷ೯ದಿಂದ_ಜನರ_ವ್ಯಾಜ್ಯ_ಬಗೆಹರಿಸುವ_ಪಂಚಾಯಿತಿದಾರ_ಜೋಡಿ
ಶಿವಮೊಗ್ಗ ಸಾಗರ ಮಾಗ೯ದ ಕುಂಸಿ ಬಗ್ಗೆ ತಿಳಿದಷ್ಟು ಕಡಿಮೆ, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ನಿಲ್ದಾಣ ಹೊಂದಿರುವ ಈ ಊರು ತಾಲ್ಲೂಕ್ ಕೇಂದ್ರ ಆಗಬೇಕೆಂಬ ಬಹುಕಾಲದ ಜನರ ಒತ್ತಾಯ ಇನ್ನೂ ಈಡೇರಿಲ್ಲ.
ಈ ಊರಲ್ಲಿ ಜಾತಿಗೊಂದು ಕೇರಿ ಮತ್ತು ಕೇರಿಗೊಂದು ಜಾತಿಯ ದೇವಾಲಯ ಇದೆ.
ಬಹುಶಃ ಜಾತಿ ವ್ಯವಸ್ಥೆಯ ಊರಿನ ಕೇರಿಗಳು ಉಳಿದಿರುವ ರಾಜರ ಕಾಲದ ಪಳಿಯುಳಿಕೆ ಈ ಊರು.
ಉದಾಹರಣೆ ಉಪ್ಪಾರ ಕೇರಿ ಅಲ್ಲಿ ಆ ಸಮಾಜದ ದುಗ೯ಮ್ಮ ದೇವಾಲಯ,ಕುರುಬರ ಎರೆಡು ಕೇರಿ ಅಲ್ಲಿ ಮಾಯಮ್ಮ ಮತ್ತು ಸಿದ್ದೇಶ್ವರ ದೇವಾಲಯ, ಮಡಿವಾಳರ ಕೇರಿ ಅಲ್ಲಿ ಮಾಚಿದೇವರು ಮತ್ತು ಹಳದಮ್ಮ ದೇವಾಲಯ ಇದೆ, ಲಿಂಗಾಯಿತರ ಎರೆಡು ಕೇರಿ ಅಲ್ಲಿ ವೀರಭದ್ರ ಮತ್ತು ಬಸವಣ್ಣ ದೇವಾಲಯ ಇದೆ, ಬ್ರಾಹ್ಮಣರ ಕೇರಿ ಅಲ್ಲಿ ಆಂಜನೇಯ ಮತ್ತು ತಿರುಪತಿ ಶ್ರೀನಿವಾಸ, ಮೈಸೂರು ರಾಜಾಶ್ರಯದ ಜಟ್ಟಿಗಳ ಕೇರಿ ಅಲ್ಲಿ ನಿಂಬುಜಾ ದೇವಿ ದೇವಸ್ಥಾನ, ವಡ್ಡ ಬೋವಿ ಕಾಲೋನಿ ಅಲ್ಲಿ ಗುಳ್ಳಮ್ಮ ಮತ್ತು ದುರ್ಗಮ್ಮ ದೇವಸ್ಥಾನ, ಬ್ಯಾಡರ ಕೇರಿ ಅಲ್ಲಿ ದುರ್ಗಮ್ಮ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ, ಗಂಗಾಮತಸ್ಥರ ಕೇರಿ ಅಲ್ಲಿ ಗಂಗಾ ಪರಮೇಶ್ವರಿ ದೇವಸ್ಥಾನ, ಚೆಲುವಾದಿಯರಕೇರಿ, ಮೇದಾರ ಕೇರಿ, ಹರಿಜನರ ಕೇರಿಯಲ್ಲಿ ಯಾವುದೇ ದೇವಸ್ಥಾನ ಇಲ್ಲ, ಮುಸ್ಲಿಂ ರ ಕೇರಿ ಅಲ್ಲಿ 2 ಮಸೀದಿಗಳಿದೆ.
ಕುಂಸಿ ಇತಿಹಾಸ ಹೇಳುವ ಕುಂಬೇಶ್ವರ ದೇವಸ್ಥಾನ ಕೂಡ ಇಲ್ಲಿದೆ.
ಇಲ್ಲಿನವರೇ ಈಗ ಶಿವಮೊಗ್ಗದ ಖ್ಯಾತ ಉದ್ದಿಮೆದಾರರಾದ ಮಥುರಾ ಹೋಟೇಲ್ ಮಾಲಿಕರಾದ ನಾಗರಾಜರಾಯರ ಬಗ್ಗೆ ಇಡೀ ಕುಂಸಿಯಲ್ಲಿ ವಿಶಿಷ್ಟ ಗೌರವಾದಾರ ಇದೆ.
ಶಿವಮೊಗ್ಗದ Y H ನಾಗರಾಜ್ ಸಹೋದರರು ಮೂಲ ಕುಂಸಿಯವರೆ ಹಾಲಿ ಬೆಂಗಳೂರಿನ ಖ್ಯಾತ ಉದ್ದಿಮೆದಾರ ಆರ್.ಚಂದ್ರಪ್ಪ ಇಲ್ಲಿಯವರೆ.
ಹೀಗಿದ್ದರು ಕುಂಸಿಯಲ್ಲಿ ಸುಮಾರು 50 ವರ್ಷದಿಂದ ಊರಿನ ಮನೆ ಹಿಸ್ಸೆ, ಜಮೀನು ವ್ಯಾಜ್ಯ, ತರಲೆ ತಾಪತ್ರಾಯ ಗಳನ್ನು ಕಟ್ಟೆ ಪಂಚಾಯಿತಿ ಮಾಡಿ ಬಗೆಹರಿಸುವ ಜೋಡಿ ಪಂಚಾಯಿತಿದಾರರೆಂದರೆ ರಾಮಪ್ಪ ಮತ್ತು ಸಂಜೀವಪ್ಪ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.
ಇವರಿಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದವರು ಮತ್ತು ಪಿ.ಎಲ್.ಡಿ. ಬ್ಯಾ೦ಕ್ ಅಧ್ಯಕ್ಷರಾಗಿದ್ದವರು ಇವರಿಬ್ಬರ ದಿನಚರಿ ಪ್ರಾರಂಭ ಆಗುವುದೇ ಊರಿನ ಒಬ್ಬರಲ್ಲ ಒಬ್ಬರ ಪಂಚಾಯಿತಿಯಿಂದ ಮತ್ತು ಮುಗಿಯುವುದು ಹಾಗೆ.
ಇಡೀ ಕುಂಸಿಯ ಯಾವುದೇ ಹಿಸ್ಸೆ ಪಂಚಾಯಿತಿ, ಕೌಟುಂಬಿಕ ಬಿನ್ನಾಭಿಪ್ರಾಯಗಳಲ್ಲಿ ಇವರಿಬ್ಬರ ಹೆಸರು ಇದ್ದೇ ಇದೆ ಅಂದರೆ ಇವರಿಬ್ಬರ ಅನಿವಾಯ೯ತೆ ಅಥ೯ವಾದೀತು.
ಇವರಿಬ್ಬರೂ ಕಾಂಗ್ರೇಸ್ ಪಕ್ಷ ಆದರೆ ಪಂಚಾಯಿತಿ ರಾಜೀಕಬೂಲಿಗೆ ಪಕ್ಷವಿಲ್ಲ.
ಇವರ ಪೋಟೋಗಾಗಿ ಕುಂಸಿ ಗೆಳೆಯ ಕುಲದೀಪ್ ಸಿಂಗ್ ಗೆ ಪೋನ್ ಮಾಡಿ ಪಡೆದೆ ಅವರೂ ಹೇಳುವ ಅಭಿಪ್ರಾಯ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬಡವ ಅಥವ ಶ್ರೀಮಂತ ಬೇದ ಇಲ್ಲದೆ ಕುಂಸಿಯ ಎಲ್ಲಾ ಜನರು ಇವರಿಬ್ಬರನ್ನ ಗೌರವಿಸುತ್ತಾರೆ ಮತ್ತು ಊರಿನ ಪಂಚಾಯಿತಿಗೆ ಇವರಿಬ್ಬರು ಬೇಕೇ ಬೇಕು ಅಂತ.
ಬಹುಶಃ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಸತತ 50 ವರ್ಷದಿಂದ ನಿರಂತರ ಜನರ ವ್ಯಾಜ್ಯ ಬಗೆಹರಿಸುತ್ತಿರುವ ರಾಮಪ್ಪ ಮತ್ತು ಸಂಜೀವಪ್ಪರಂತ ಜೋಡಿ ಇನ್ನೊಂದಿಲ್ಲ.
ಕಟ್ಟೆ ಪಂಚಾಯಿತಿ ತೀಮಾ೯ನಗಳು ಗ್ರಾಮೀಣ ಜನರ ಮಾನಸಿಕ ಮತ್ತು ಆಥಿ೯ಕ ಸಮಾದಾನ ತರುತ್ತದೆಂದು ಒವ೯ ಸುಪ್ರಿಂ ಕೋಟ್೯ ಜಡ್ಜ್ ಬಹಳ ಹಿಂದೆ ನೀಡಿದ ಹೇಳಿಕೆ ಈ ಸಂದಭ೯ದಲ್ಲಿ ನೆನಪಿಸಿಕೊಳ್ಳಬಹುದು.
Comments
Post a Comment