Blog number 1667. ಸುರಕ್ಷಿತ ಸುಖಕರ ಪ್ರಯಾಣದ ವ್ಯವಸ್ಥೆ ಮಾಡುವ ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ ರಿಪ್ಪನ್ ಪೇಟೆ ಅವರ ಸಿದ್ದಿ ವಿನಾಯಕ ಟೂರ್ & ಟ್ರಾವೆಲ್ಸ್ ಮಾಲಿಕರು.
#ಟ್ಯಾಕ್ಸಿ_ಉದ್ಯಮದಲ್ಲಿ_ಯಶಸ್ಸು_ಸಾದಿಸುವುದು_ಸುಲಭವಲ್ಲ
#ಪ್ರಯಾಣಿಕರಿಗೆ_ಸುಖಕರ_ಪ್ರಯಾಣ_ಚಾಲಕರ_ವಿನಯಪೂರ್ವಕ_ಸೇವೆ_ಅತ್ಯವಶ್ಯ.
#ಅತಿವೇಗದ_ಚಾಲನೆ_ಚಾಲನೆಯಲ್ಲಿ_ಮೊಬೈಲ್_ಬಳಸುವುದು_ಗುಟ್ಕಾ_ಮಧ್ಯಪಾನ_ಮಾಡಿ_ಚಾಲನೆ
#ಪ್ರಯಾಣಿಕರ_ಸತಾಯಿಸುವ_ಚಾಲಕರು.
#ಇಂತಹ_ಕಾಲದಲ್ಲಿ_ಅತ್ಯುತ್ತಮ_ ಟ್ಯಾಕ್ಸಿ_ಸೇವೆ_ನೀಡುವ_ರಿಪ್ಪನಪೇಟೆ_ಸಂಸ್ಥೆ.
#ಸಿದ್ದಿವಿನಾಯಕ_ಟೂರ್_ಟ್ರಾವೆಲ್ಸ್_ಮಾಲಿಕ_ಶಿವಕುಮಾರ್
#ಕೊರಾನಾ_ಸಮಯದಲ್ಲೂ_ಉತ್ತಮ_ಆರೋಗ್ಯಕರ_ವಾಹನ_ಸೇವೆ_ನೀಡಿದ್ದರು.
ಕೊರಾನಾ ವೈರಸ್ ಹರಡುವ ಆ ದಿನದಲ್ಲಿ ಟ್ಯಾಕ್ಸಿ ಮತ್ತು ಬಸ್ ಗಳ ಪ್ರಯಾಣ ತುಂಬಾ ಅಪಾಯಕಾರಿ ಆಗಿತ್ತು.
ಯಾಕೆಂದರೆ ವಾಹನ ಮಾಲಿಕರು ಸೋಪಿನಿಂದ ಕಾರಿನ ಹೊರಭಾಗ ತೊಳೆಯುತ್ತಾರೆ ಆದರೆ ದೀಘ೯ ಪ್ರಯಾಣ ಮಾಡಿದ ಒಳಬಾಗದ ಸೀಟ್ ಗಳು, ಡೋರ್ ಮತ್ತು ಒಳ ಮೇಲ್ಚಾವಣೆಗಳು ತೊಳೆಯಲು ಸಾಧ್ಯವಿಲ್ಲ ಆದರೆ ಅದನ್ನು ಡಿಸ್ ಇನ್ಪೆಕ್ಟ್ (ಸೊಂಕು ರಹಿತ) ಮಾಡ ಬಹುದು.
ಆದರೆ ಇದನ್ನ ಎಷ್ಟು ಜನ ಟ್ಯಾಕ್ಸಿ ಮಾಲಿಕರು ಮಾಡುತ್ತಾರೆ ಅಂತ ವಿಚಾರಿಸಿದರೆ ನಿಜಕ್ಕೂ ನಿರಾಶೆ ಆಗುತ್ತದೆ.
ಬಹಳ ಜನ ಟ್ಯಾಕ್ಸಿ ಮಾಲಿಕರು ಪ್ರತಿ ಟ್ರಿಪ್ ಹೋಗಿ ಬಂದ ಮೇಲೆ ತೊಳೆಯುತ್ತೇವೆ ಎನ್ನುತ್ತಾರೆ, ಒಳ ಭಾಗ ಹೇಗೆ ಅಂದರೆ ಸ್ಯಾನಿಟೈಸರ್ ಇಟ್ಟಿರುತ್ತೇವೆ ಅನ್ನುತ್ತಾರೆ ಆದರೆ ಇದು ಅನಾಹುತಕಾರಿ, ಆರೋಗ್ಯವಂತ ಪ್ರಯಾಣಿಕ ಇಂತಹ ಟ್ಯಾಕ್ಸಿ ಅಥವ ಬಸ್ಸಿನಲ್ಲಿ ಪ್ರಯಾಣ ಮಾಡಿದರೆ (ಮೊದಲು ಯಾರಾದರ ರೋಗ ಪೀಡಿತರು ಪ್ರಯಾಣಿಸಿದ್ದರೆ) ಮಾತ್ರ ಕೊರಾನಾ ರೋಗ ಪೀಡಿತರಾಗುವುದರಲ್ಲಿ ಅನುಮಾನ ಇಲ್ಲ.
ಆರೋಗ್ಯ ಇಲಾಖೆ ದೃಡೀಕರಿಸಿದ ಪ್ರಕಾರ ಸೋಡಿಯಂ ಹೈಪೋಕ್ಲೋರೈಡ್ 1ರಿಂದ 2 ಶೇ. ಮಿಶ್ರಣ ದ್ರವ ಸಿಂಪರಣೆ ಮಾಡಬೇಕು ಅದು ಅದುನಿಕ ಕೋಲ್ಡ್ ಪಾಗರ್ ನಿಂದ ಸಿಂಪರಣೆ ಮಾಡಿದರೆ ಡಿಸ್ ಇನ್ಪೆಕ್ಟ್ 100% ಗ್ಯಾರಂಟಿ.
ಇದನ್ನು ಪ್ರತಿ ಬಸ್ ನವರೂ ಮಾಡಬೇಕು ಆದರೆ ಮಾಡುವವರು ತುಂಬಾ ಕಡಿಮೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲುಕಿನ ರಿಪ್ಪನ್ ಪೇಟೆಯ ಉತ್ಸಾಹಿ ಯುವ ಉದ್ದಿಮೆದಾರ ಶಿವಕುಮಾರ್ ಮಾತ್ರ ಇಂತಹ ವಿಚಾರದಲ್ಲಿ ಪಕ್ಕಾ.
ಇವರ ಹತ್ತಿರ 3 ಮಿನಿ ಬಸ್ ಗಳು ಮತ್ತು ಅನೇಕ ಟ್ಯಾಕ್ಸಿ ಇದೆ, ಮನೆಯಲ್ಲೇ ಸ್ವಂತ ಸವಿ೯ಸ್ ಸ್ಟೇಷನ್ ಮಾಡಿಕೊಂಡಿದ್ದಾರೆ ಅಲ್ಲಿ ಸಕಾ೯ರದ ಆರೋಗ್ಯ ಇಲಾಖೆಯ ನಿರ್ದೇಶನದ ಪ್ರಕಾರ ಪ್ರತಿ ಪ್ರಯಾಣ ಮಾಡಿ ಬಂದ ವಾಹನ ಡಿಸ್ ಇನ್ಪೆಕ್ಟ್ ಮಾಡಿ ಮುಂದಿನ ಪ್ರಯಾಣಕ್ಕಾಗಿ ತಯಾರು ಮಾಡುತ್ತಾರೆ.
ಇವರ ಎಲ್ಲಾ ವಾಹನಕ್ಕೆ GPS ಅಳವಡಿಸಿದ್ದಾರೆ ಇದರಿ೦ದ ಪ್ರತಿ ವಾಹನದ ಮೇಲೆ ನಿಗಾವಹಿಸುತ್ತಾರೆ, ಮಿತಿ ಮೀರಿದ ವೇಗದಲ್ಲಿ ಚಲಿಸಿದ ವಾಹನದ ಮಾಹಿತಿ ಇವರ ಸೆಲ್ ಫೋನ್ ಅಲಾರಾಂ ಮಾಡುತ್ತದೆ.
ಇವೆಲ್ಲದರಿಂದ ಇವರ ಸಂಸ್ಥೆ ಟ್ಯಾಕ್ಸಿ ಮತ್ತು ಬಸ್ ಗಳನ್ನ ಸುರಕ್ಷಿತ, ಸುಖಕರ ಪ್ರಯಾಣಕ್ಕೆ ಅನೇಕರು ಇವರನ್ನೇ ಅವಲಂಬಿಸಿದ್ದಾರೆ.
ಇವರ ಸಂಸ್ಥೆ ಸಿಬ್ಬಂದಿಗಳು ಕೂಡ ಪ್ರಯಾಣಿಕರಿಗೆ ಸಹಕರಿಸುವ ಸೌಮ್ಯ ಸ್ವಭಾವದವರೆ ಆಗಿರುವುದು ಕೂಡ ಈ ಪ್ರವಾಸಿ ವಾಹನ ಸಂಸ್ಥೆಯ ಹಿರಿಮೆ.
ನಮ್ಮ ಲಾಡ್ಜ್ ನ ಟ್ರಾವೆಲ್ ಡೆಸ್ಕ್ ನಿವ೯ಹಣೆ ಇದೇ ಸಂಸ್ಥೆಗೆ ವಹಿಸಿದ್ದೇನೆ ಇವರು ಅನೇಕ ವಷ೯ ಬೆಂಗಳೂರಲ್ಲಿ ದೊಡ್ಡ ಟ್ಯಾಕ್ಸಿ ಸವಿ೯ಸ್ ನಡೆಸಿದ ಅನುಭವ ಹೊಂದಿದ್ದಾರೆ.
ಒಮ್ಮೆ ಇವರ ಸೇವೆ ಪಡೆದವರು ಪುನಃ ಇವರನ್ನೆ ಖಂಡಿತಾ ಹುಡುಕುತ್ತಾರೆ.
ನಾವು ಮಾಡುವ ಉದ್ಯಮದಲ್ಲಿ ಶ್ರದ್ದೆ ಮತ್ತು ಗ್ರಾಹಕರ ಹಿತಚಿಂತನೆಗೆ ಮೊದಲ ಪ್ರಾಶಸ್ತ್ಯ ನೀಡಿದರೆ ಸಣ್ಣ ಹಳ್ಳಿಯಿಂದ ಕೂಡ ದೊಡ್ಡ ಉದ್ಯಮ ಯಶಸ್ವಿ ಆಗಿ ನಡೆಸಬಹುದೆಂಬುದಕ್ಕೆ ರಿಪ್ಪನ್ ಪೇಟೆ ಶಿವಕುಮಾರ್ ಒ0ದು ಮಾದರಿ ಆಗಿದ್ದಾರೆ.
ಇವರ ಸೆಲ್ ನಂಬರ್ 9448681367
Comments
Post a Comment