Blog number 1640.ಕಳಲೆ ಬಿದಿರ ಮೊಳಕೆ ಇದರ ರುಚಿಕರ ಪೌಷ್ಟಿಕ ಖಾದ್ಯ ಪಶ್ಚಿಮ ಘಟ್ಟ ಮತ್ತು ಈಶಾನ್ಯ ಭಾರತೀಯರಲ್ಲಿ ಹೆಚ್ಚು ಪ್ರಚಲಿತವಾಗಿದೆ ಉಳಿದ ಭಾಗದಲ್ಲಿ ಇದರ ಬಳಕೆ ಜನರಿಗೆ ಗೊತ್ತಿಲ್ಲ.
ಮುಂಗಾರು ಬಂತೆಂದರೆ ಕಳಲೆ ಎಂಬ ಬಿದಿರು ಬೊಂಬಿನ ಮೊಳಕೆಯ ರುಚಿಕರ ಖಾದ್ಯಗಳ ಕಾಲ, ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಜನ ತಾವು ಬೆಳೆಯುವ ಅಕ್ಕಿಯಿಂದ ರೊಟ್ಟಿ ತಯಾರಿಸಿ ಕಳಲೆ ಪಲ್ಯದೊಂದಿಗೆ ಸವಿಯುತ್ತಾರೆ, ಇದರಲ್ಲಿನ ನೈಸರ್ಗಿಕ ವಿಷ ನಿವಾರಿಸಿ ತಿನ್ನುವ ಬಗೆಯ ಮಾಹಿತಿ ತಲತಲಾಂತರದಿಂದ ಜನರಿಗೆ ತಿಳಿದಿದೆ, ಕತ್ತರಿಸಿ ತಂದ ಕಳಲೆ ಸಿಪ್ಪೆ ಎಲ್ಲೆಂದರಲ್ಲಿ ಒಗಿಯುವಂತಿಲ್ಲ ಅದನ್ನು ತಿಂದರೆ ಜಾನುವಾರು ಸಾಯುತ್ತದೆ ಅದೇ ಅರಣ್ಯದಲ್ಲಿ ನೇರವಾಗಿ ತಿಂದರೆ ವಿಷವಾಗಿರುವುದಿಲ್ಲ.
https://youtu.be/UbsFFwn0z28
#ಇದು_ಕಳಲೆ_ಖಾದ್ಯ_ತಿನ್ನುವ_ಕಾಲ_
#ಕಳಲೆ_ಪಲ್ಯ_ಅಕ್ಕಿರೊಟ್ಟಿ_ಪಶ್ಚಿಮಘಟ್ಟ_ಪ್ರದೇಶದ_ಮಲೆನಾಡ_ವಿಶೇಷ.
#ಕಳಲೆ_ಕ್ಯಾನ್ಸರ್_ಹೃದಯ_ಸಂಬಂದಿ_ಕಾಯಿಲೆ_ದೂರ_ಮಾಡುತ್ತದೆ.
#ಈಶಾನ್ಯ_ಭಾರತದಲ್ಲಿ_ಕಳಲೆ_ಮಾಂಸಹಾರ_ಅಡುಗೆಯಲ್ಲಿ_ಹೆಚ್ಚು_ಬಳಕೆ.
ಪ್ರತಿ ವರ್ಷ ಮುಂಗಾರು ಪ್ರಾರಂಭದ ಜೂನ್ - ಜುಲೈ ಮತ್ತು ಆಗಸ್ಟ್ ನಲ್ಲಿ ಬಿದಿರು ಬೊಂಬಿನ ಚಿಗುರು ಅರಳುವ ಕಾಲ, ಬಿದಿರ ಮೆಳೆಯ ಬುಡದಲ್ಲಿ ನಾವು ಸ್ಥಳಿಯವಾಗಿ ಕರೆಯುವ ಕಳಲೆ ಮಣ್ಣಿನಿಂದ ಚುಪಾದ ಬಾಣದಂದೆ ಎದ್ದು ಬಂದು ನೋಡ ನೋಡುತ್ತಲೆ ಮುಗಿಲೆತ್ತರಕ್ಕೆ ಬೆಳೆದು ಬಿದಿರ ಬೊಂಬಾಗಿ ಬಿಡುತ್ತದೆ.
ಭೂಮಿ ಬಿಟ್ಟು ಒಂದೆರೆಡು ಅಡಿ ಬೆಳೆಯುವ ಮುನ್ನ ಕತ್ತರಿಸಿ ಅದರ ಸಿಪ್ಪೆ ತೆಗೆದು ಅದರ ಒಳಗಿನ ಬೊಂಬಿನ ತಿರಳು ಸ್ಲೈಸ್ ಮಾಡಿ ನೀರಲ್ಲಿ ಎರಡರಿಂದ ಮೂರು ದಿನ ನೆನಸಿ ಪ್ರತಿ ದಿನ ನೀರು ಬದಲಿಸಿದರೆ ಮಾತ್ರ ಇದರಲ್ಲಿನ ನೈಸರ್ಗಿಕ ವಿಷ ನಿವಾರಿಸಲು ಸಾಧ್ಯ ನಂತರ ಇದನ್ನು ತರಕಾರಿಯಂತೆ ವಿವಿಧ ರೀತಿಯ ಖಾದ್ಯ ತಯಾರಿಸಬಹುದು.
ಈಶಾನ್ಯ ಭಾರತದಲ್ಲಿನ ವಿಬಿನ್ನ ಬಿದಿರಿನ ಕಳಲೆ ಅರಿಷಿಣ ಪುಡಿಯೊಂದಿಗೆ 10 ರಿಂದ 15 ನಿಮಿಷ ಬೇಯಿಸಿ ನೀರು ತೆಗೆದರೆ ಸಾಕು ಆದರೆ ದಕ್ಷಿಣ ಭಾರತದ ಪಶ್ಚಿಮ ಘಟ್ಟದ ಬಿದಿರಿಗೆ 3 ದಿನ ಬೇಕೇ ಬೇಕು.
ನಾಗಲ್ಯಾಂಡ್, ಮಣಿಪುರ, ಅಸ್ಸಾಂ, ಜಾರ್ಕಂಡ್, ಸಿಕ್ಕಿಂ, ಹಿಮಾಚಲ ಪ್ರದೇಶದಲ್ಲಿ ಇದನ್ನು ಮೀನು ಮಾಂಸಗಳ ಜೊತೆ ಹೆಚ್ಚು ಬಳಸುತ್ತಾರೆ, ವಿನೆಗರ್ ನಲ್ಲಿ ನೆನೆಸಿಟ್ಟು ವರ್ಷ ಪೂರ್ತಿ ಉಪಯೋಗಿಸುತ್ತಾರೆ ಮತ್ತು ಇದನ್ನು ಒಣಗಿಸಿ ಕೂಡ ಇಡುತ್ತಾರೆ ಈಗ ಒಣಗಿದ ಮತ್ತು ಪರ್ಮೆಂಟೆಡ್ ಕಳಲೆ ಅಮೇಜಾನ್, ಪ್ಲಿಪ್ ಕಾರ್ಟ್ನಲ್ಲಿ ಲಭ್ಯವಿದೆ.
ಈಶಾನ್ಯ ಬಾರತದ ಚಗ್ಮಾ ಬುಡಕಟ್ಟು ಜನರ ಹಂದಿಮಾಂಸದ ವಿಶೇಷ ಅಡುಗೆಗೆ ಕಳಲೆ ಬೇಕೇ ಬೇಕು.
ಕಳೆದ ಎರೆಡು ವರ್ಷದ ಹಿಂದೆ ಬಿದಿರು ಸಂಪೂರ್ಣವಾಗಿ (40 ಅಥವ 60 ವರ್ಷಕ್ಕೊಮ್ಮೆ) ಹೂವಾಗಿ ಬಿದಿರಕ್ಕಿ ಆಗಿ ನಾಶವಾಗಿದ್ದರಿಂದ ಕಳಲೆ ಪ್ರಿಯರಿಗೆ ಇದು ದುಬಾರಿ ಆಗಿತ್ತು ಮತ್ತು ಸಿಗುತ್ತಿರಲಿಲ್ಲ.
#ಬಿದಿರಮ್ಮ_ತಾಯಿ_ನೀನ್ಯಾರಿಗಾದೆಯೋ ಎಂಬ ಹಾಡು ನೆನಪಾಯಿತು.
Comments
Post a Comment