#ಬಜೆಟ್_ಗ್ಲಾನ್ಸ್_ಹೈಲೈಟ್ಸ್_ಇತ್ಯಾದಿ_ಅರ್ಥವಾಗದ_ಉಸಾಬರಿ.
#ಪತ್ರಿಕೆಗಳಿಗೆ_ಪ್ರತಿವರ್ಷ_ನೀಡುತ್ತಿದ್ದ_ಬಜೆಟ್_ಪ್ರತಿಕ್ರಿಯೆ.
#ಆಯಾ_ಪಕ್ಷದವರು_ಸಮರ್ಥಿಸಿಕೊಳ್ಳುವ_ವಿರೋದಪಕ್ಷಗಳು_ವಿರೋದಿಸುವ_ಬಜೆಟ್
#ರೈತರು_ಸುಗ್ಗಿಯಲ್ಲಿ_ಕೈಸೇರುವ_ಪಸಲು_ಅದರ_ಆದಾಯದಿಂದ
#ಕುಟುಂಬ_ಮತ್ತು_ಕೃಷಿ_ವೆಚ್ಚಗಳ_ನಿರ್ವಹಣೆ_ಅಂದಾಜು_ಮಾಡುವಂತೆ.
#ಯಾವತ್ತೂ_ಅಂದಾಜು_ಮಾಡಿದ್ದು_ಸರಿ_ಹೊಂದುವುದಿಲ್ಲ
#ಸಾರ್ವಜನಿಕ_ಹಣ_ಖರ್ಚು_ಮಾಡಲು_ಲೈಸೆನ್ಸ್_ಪಡೆಯುವ_ವ್ಯವಸ್ಥೆ.
2013 ರ ತನಕ ಪತ್ರಕರ್ತರು ಸರ್ಕಾರಗಳ ಬಜೆಟ್ ಬಗ್ಗೆ ಕೇಳುವುದು ನಾನು ಅವರಿಗೆ ಬಜೆಟ್ ರೈತರ ಪರವಂತಲೋ ಅಥವ ಜನ ವಿರೋದಿ ಅಂತಲೋ ಹೇಳಿಕೆ ನೀಡುವುದು ಮರುದಿನದ ಪತ್ರಿಕೆಯಲ್ಲಿ ನನ್ನ ಹೇಳಿಕೆ ಯಾವ ಯಾವ ಪತ್ರಿಕೆಯಲ್ಲಿ ಬಂತು ಅಂತ ಹುಡುಕುವುದು ಆ ಪತ್ರಿಕೆ ಕಟಿಂಗ್ ಜೋಪಾನ ಮಾಡುವ ಮುರ್ಖತನದ ಕೆಲಸ ನಾನು ಮಾಡುತ್ತಿದ್ದೆ.
ಕೇಳುವ ಪತ್ರಕರ್ತರೂ ನನಗಿಂತ ಬಿನ್ನವಾಗಿರುತ್ತಿರಲಿಲ್ಲ ಅವರಿಗೂ ಈ ಬಜೆಟ್ ಗೊತ್ತಿರುತ್ತಿರಲಿಲ್ಲ.
ಈ ಬಜೆಟ್ ಗಳು ಪ್ರಜಾಪ್ರಭುತ್ವದಲ್ಲಿ ರಾಜರ ಸ್ಥಾನದಲ್ಲಿರುವವವರಿಗೆ ವರ್ಷ ವರ್ಷ ಸರಕಾರದ ಬೊಕ್ಕಸದ ಹಣ ವಿನಿಯೋಗಿಸಲು ಪಡೆಯಬೇಕಾದ ಒಂದು ರೀತಿಯ ಅನುಮತಿ ಮಾತ್ರ.
ಆಯಾ ಪಕ್ಷಗಳ ಅಭಿರುಚಿಗೆ ತಕ್ಕಂತೆ ತೋರಿಸುವ ಕನ್ನಡಿ ಗಂಟು ಅನ್ನುವುದು ಗೊತ್ತಿದ್ದರೂ ಭಾರೀ ಬುದ್ದಿವಂತರಿಗೆ ಮಾತ್ರ ಅರ್ಥ ಆಗುತ್ತದೆ ಎ೦ಬ ಕವಚದಲ್ಲಿ ಕೆಲ ದಿನ ಚ್ಯೂಯಿಂಗ್ ಗಮ್ ನಂತೆ ಚಾನಲ್ ಗಳು ಎಳೆದಾಡುತ್ತದೆ.
ಇವತ್ತಿನ ಬಜೆಟ್ ಬಗ್ಗೆ ನನ್ನ ಅನುಭವದಲ್ಲಿ ಗೊತ್ತಾಗಿದ್ದು ...
APMC ಪುನಃ ಬಂದಿದ್ದರಿಂದ ಶುಂಠಿ ವ್ಯಾಪಾರಿಗಳಿಗೆ ಶೇ. 2 ಹೆಚ್ಚುವರಿ ಹಣ ಪೀಕಬೇಕು ಅಂತ ಶುಂಠಿ ವ್ಯಾಪಾರಿಗಳು ಹೇಳಿದರು.
ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮದ್ಯ ಸಿಗುತ್ತೆ ಅನ್ನುವ ನಿರೀಕ್ಷೆಯಲ್ಲಿದ್ದವರಿಗೆ ಮಧ್ಯದ ಬೆಲೆ ಜಾಸ್ತಿ ಮಾಡಿದ್ದಾರೆ ಎನ್ನುವ ಬೇಸರ ಕೆಲವರದ್ದು.
ಆಡಳಿತ ಪಕ್ಷದವರು ಇದು ಸುಂದರ ಬಜೆಟ್ ಅಂದರು ವಿರೋದ ಪಕ್ಷದವರು ಇದು ಜನ ವಿರೋದಿ ಬಜೆಟ್ ಅಂದರು.
ಆದರೆ ಕುವೆಂಪು ಬರೆದ
"ಕರಿಯರದೋ ಬಿಳಿಯರದೋ ಯಾರಾದದರೇನು..."
"ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ ..."
"ವಿಜಯ ನಗರವೋ? ಮೊಗಲರಾಳ್ವಿಕೆಯೋ? ಇಂಗ್ಲಿಷರೋ?..."
"ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ ....."
"ಕತ್ತಿ ಪರದೇಶಿಯರದ್ದಾದರೆ ಮಾತ್ರ ನೋವೇ?..."
"ನಮ್ಮವರೇ ಹದ ಹಾಕಿ ತಿವಿದರದು ಹೂವೇ?..."
ಎಂಬುದು ಈ ವರ್ಷದ ಬಜೆಟ್ ಗೂ ಮತ್ತು ಮುಂದಿನ ವರ್ಷದ ಬಜೆಟ್ ಗೂ ಅನ್ವಯಿಸುತ್ತದೆ
ಕುವೆಂಪು ಬರೆದ ಪ್ರಶ್ನೆಗೆ ಉತ್ತರವಿಲ್ಲ ಆದರೆ ಮೂರ್ಖನಾಗಿ ಬಜೆಟ್ ಬಗ್ಗೆ ಹತ್ತು ವರ್ಷದ ಹಿಂದೆ ಪ್ರತಿಕ್ರಿಯಿಸುತ್ತಿದ್ದ ನನ್ನ ಅಜ್ಞಾನದ ಬಗ್ಗೆ ನನಗೆ ನಾಚಿಕೆ ಮತ್ತು ಪಶ್ಚಾತ್ತಾಪ ಹಾಗೇ ಉಳಿದಿದೆ.
Comments
Post a Comment