#ಮು೦ಗಾರು_ಮಳೆಯೇ...
#ಅರಿಷಿಣದ_ಎಲೆಯ_ಸಿಹಿ_ಕಡುಬಿನ_ಕಂಪೇ ....
ಸಿಹಿ ಅಥವ ಸಪ್ಪೆ ಕಡುಬಾಗಲಿ ಮುಂಗಾರು ಮಳೆಯ ಬೆಳಗಿನ ಉಪಹಾರದಲ್ಲಿ ಅರಿಷಿಣದ ಎಲೆಯ ಕಡುಬಿನ ಕಂಪು ನೀಡುವ ಆರೋಮ ಅನುಭವಿಸಿದವರಿಗೇ ಗೊತ್ತು.
ಕಾಯಿತುರಿ ಅಲೇಮನೆ ಬೆಲ್ಲದ ಹೂರಣ ತುಂಬಿದ ಅಕ್ಕಿ ಹಿಟ್ಟಿನ ಕಡಬಿಗೆ ಅರಿಷಿಣದ ಎಲೆ ಸುತ್ತಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ ತೆಗೆಯುವ ಸರಳ ವಿಧಾನದ ಕಡಬು ಮಳೆಗಾಲದ ಪ್ರಾರಂಭದಲ್ಲಿ ಆಗಷ್ಟೆ ಊರಿದ ಅರಿಶಿಣದ ಬೀಜದ ಕೊಂಬು ಬೇರು ಬಿಟ್ಟು ಎಲೆ ಚಿಗುರಿ ಹರಡಿದ ಕಾಲದಲ್ಲಿ ಹೆಚ್ಚು ಅರಿಷಿಣದ ಘಮ!!
ಅರಿಷಿಣ ಆರೋಗ್ಯಕಾರಕ ಅದರ ಎಲೆಯೂ ಕೂಡ.
ಡಯಾಬಿಟೀಸ್ ಇರುವವರಿಗೆ ಅಥವ ಸಿಹಿ ಇಷ್ಟ ಪಡದವರಿಗೆ ಬೆಲ್ಲ ಹೊರತು ಪಡಿಸಿ ಬೇಯಿಸಿದರೆ ಆಯಿತು.
ಇವತ್ತು ಬೆಳಿಗ್ಗಿನ ನನ್ನ ಉಪಹಾರ ಅರಿಷಿಣದ ಎಲೆಯ ಸಿಹಿ ಕಡಬು ಹೊರಗೆ ತಣ್ಣನೆ ಗಾಳಿಯ ಮುಂಗಾರು ಮಳೆ
Comments
Post a Comment