ಒಂದು ನೆನಪು ಸಾಗರದಿಂದ ಆಯೋಧ್ಯೆಗೆ ಇಟ್ಟಿಗೆಗಳನ್ನು ಕಳಿಸುವಾಗ ಅದರ ಪೂಜೆ ಸಜ್ಜನ ರಾಜಕಾರಣಿ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ಪೂಜೆ ಮಾಡಿದ್ದರು ( ಆಗ ಅವರು ಮಾಜಿ ಶಾಸಕರಾಗಿರಬೇಕು) ನಮ್ಮ ತಂದೆ ಅವರ ಅನುಯಾಯಿ ಮತ್ತು ಬೆಂಬಲಿಗರು.
ಇವತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ಇಡೀ ದೇಶದಲ್ಲಿ ದೇಣಿಗೆ ಸಂಗ್ರಹ ನಡೆಯುತ್ತಿದೆ, ಇವತ್ತಿಗೆ ಒ0ದು ಸಾವಿರ ಕೋಟಿ ದೇಣಿಗೆ ಸಂದಾಯ ಆಗಿದೆ ಅಂತ ಸಂಚಾಲಕರಾದ ಉಡುಪಿ ಪೇಜಾವರ ನೂತನ ಸ್ವಾಮಿ ಪತ್ರಿಕಾ ಹೇಳಿಕೆ ಇದೆ.
ನಾನು ಮತ್ತು ಸಹೋದರ ನಮ್ಮ ಸಂಸ್ಥೆಯಿಂದ ನಮಗೆ ಸದ್ಯ ಸಾಧ್ಯವಾದಷ್ಟು 1000, 100 ಮತ್ತು 10 ರೂಪಾಯಿ ಕೂಪನ್ ಗಳನ್ನು ಹಣ ನೀಡಿ ರಶೀದಿ ಆಗಿ ಪಡೆದವು.
ಇದು ನಮ್ಮ ದಾಖಲೆಯಲ್ಲಿ ಸಂರಕ್ಷಿಸಿಟ್ಟು ರಾಮ ಮಂದಿರ ನಿಮಾ೯ಣದ ನಂತರ ದೇವಾಲಯ ದರ್ಶನ ನನ್ನ ಕನಸು ಕೂಡ.
ಹಿರಿಯ ಗೆಳೆಯರಾದ ಗನ್ನಿ ಸಾಹೇಬರಿಗೆ ಮೆಕ್ಕಾ ಯಾತ್ರೆ ಕೂಡ ಮಾಡಿಸಿದ್ದು ಸ್ಮರಿಸುತ್ತಾ ದೇವನೊಬ್ಬ ನಾಮ ಹಲವು ಎಂಬ ಸಿದ್ಧಾಂತ ಒಪ್ಪಿದವನು.
ರಾಮ ಮಂದಿರ ಆಯಿತು ರಾಮ ರಾಜ್ಯ ಯಾವತ್ತು ಎಂಬ ಜಿಜ್ಞಾಸೆ ಈ ಕ್ಷಣಕ್ಕೂ ಇದೆ, #ದೇಶದಲ್ಲಿ_ಗಾಂಧಿಜಿ_ಕನಸಿನ_ರಾಮರಾಜ್ಯ_ಆದಷ್ಟು_ಬೇಗ_ಬರಲಿ_ಎಂದು_ಹಾರೈಸುತ್ತೇನೆ.
Comments
Post a Comment