#ದೇವರಾಜ್_ಅರಸ್_ಅಂತರಾಷ್ಟ್ರೀಯ_ಕುಸ್ತಿ_ಅಸೋಸಿಯೇಷನ್_ಅಧ್ಯಕ್ಷರಾಗಿ
ನಶಿಸುತ್ತಿರುವ ನಮ್ಮ ದೇಶಿ ಕ್ರೀಡೆ ಬಯಲು ಕುಸ್ತಿಗೆ ರಾಜ ಮಹಾರಾಜರ ಕಾಲದಲ್ಲಿ ರಾಜಾಶ್ರಯ ಇತ್ತು ಆದರೆ ಈಗ ಇದು ಜನ ಮನದಿಂದಲೇ ದೂರವಾಗುತ್ತಿದೆ.
ಗರಡಿ ಮನೆ ಎಂಬ ಕುಸ್ತಿ ತರಬೇತಿಯ ಕೇಂದ್ರಗಳು ಹೊಸದಾಗಿ ನಿರ್ಮಾಣ ಆಗುತ್ತಿಲ್ಲ, ಇರುವ ಪುರಾತನ ಗರಡಿ ಮನೆಗಳು ಜನರ ಬೆಂಬಲ ಸಹಾಯ ಸಹಕಾರ ಇಲ್ಲದೆ ಸೊರಗಿದೆ.
ಇವತ್ತಿಗೂ ಜಾತ್ರೆ ಮುಂತಾದ ಸಮಾರಂಭದಲ್ಲಿ ಬಯಲು ಕುಸ್ತಿ ನೋಡಲು ಸೇರುವ ಜನಸಂಖ್ಯೆ ನೋಡಿದರೆ ಅಥ೯ವಾದೀತು ಕುಸ್ತಿ ಪಂದ್ಯಾವಳಿಗೆ ಇರುವ ಆಕಷ೯ಣೆ.
ಈಗ ರಾಜ್ಯದಾದ್ಯಂತ ಇರುವ ಗರಡಿ ಮನೆ ಪುನಶ್ವೇತನಕ್ಕಾಗಿ ಮತ್ತು ಬಯಲು ಕುಸ್ತಿ ಪಂದ್ಯಾವಳಿ ಪುನರ್ ಪ್ರವದ೯ಮಾನಕ್ಕಾಗಿ ಕಾಯ೯ನಿವ೯ಹಿಸುತ್ತಿರುವ ದೇವರಾಜ್ ಅರಸು ಅಂತರಾಷ್ಟಿಯ ಕುಸ್ತಿ ಸಂಘಟನೆಗೆ ಶಿವಮೊಗ್ಗದ ಯುವ ಮುಂದಾಳು, ಜಾತ್ಯಾತೀತ ಜನತಾದಳದ ಮುಖಂಡರಾದ ಅಯನೂರು ಶಿವನಾಯ್ಕರು ಆಯ್ಕೆ ಆಗಿದ್ದಾರೆ.
ಒಂದು ಕಾಲದಲ್ಲಿ ಜಿಲ್ಲೆಯಲ್ಲಿನ ಬಂಜಾರ ಸಮಾಜದ ಸಂಘಟನೆಯಲ್ಲಿ ಪೂರ್ಯಾನಾಯಕರ ಸಂಗಡಿಗರಾಗಿ ಸಂಘಟನೆ ಮಾಡಿ ತಮ್ಮ ಸಮಾಜದವರನ್ನ ವಿದಾನ ಸಭಾ ಸದಸ್ಯರನ್ನಾಗಿ ಮಾಡುವುದರಲ್ಲಿ ಸಫಲರಾದವರು ಈ ಶಿವಾ ನಾಯಕರು.
ರಾಜಕಾರಣದಲ್ಲಿ ಇವರಿಗೆ ಸಿಗಬೇಕಾದ ಸ್ಥಾನಗಳು ಸಿಗದೇ ಇರುವುದು ದುರಂತ ಆದರೂ ಅನೇಕ ಸಾಮಾಜಿಕ ಸಾಂಸ್ಕೃತಿಕ ಕಾಯ೯ಕ್ರಮಗಳನ್ನು ಸಂಘಟನೆಗಳನ್ನು ನಿರಂತರವಾಗಿ ನಡೆಸುಕೊಂಡು ಬರುತ್ತಿರುವ ಶಿವಾನಾಯ್ಕರು ಈಗ ನಶಿಸುತ್ತಿರುವ ಬಯಲು ಕುಸ್ತಿ ಪುನಶ್ಚೇತನಕ್ಕಾಗಿ ಗರಡಿ ಮನೆಗಳ ಮತ್ತು ಪೈಲ್ವಾನರ ಬೇಟಿಗಾಗಿ ರಾಜ್ಯ ಪ್ರವಾಸದಲ್ಲಿದ್ದಾರೆ.
ಹೊಸ ಜವಾಬ್ದಾರಿ ಅವರಿಗೆ ಯಶಸ್ಸು, ಕೀತಿ೯ ದಯಪಾಲಿಸಲಿ ಎಂದು ಹಾರೈಸುತ್ತೇನೆ.
Comments
Post a Comment