# ನೋಡಿ ಕಲಿ ಮಾಡಿ ತಿಳಿ ಎಂಬ ನಾಣ್ಣುಡಿಯOತೆ#
ಕರಾವಳಿಯವರ ನೆಚ್ಚಿನ ಉಪ್ಪಿನ ಹುಡಿ ಎಂಬ ಬಾಯಿ ನೀರು ತರಿಸುವ ಸೀಗಡಿಯ ಚಟ್ನಿಪುಡಿಗಾಗಿ ಅನೇಕರಲ್ಲಿ ಕೇಳಿದ್ದೆ ಆದರೆ ಸೀಗಡಿ ಇದ್ದರೆ ಕೊಬ್ಬರಿ ಸಿಗಲಿಲ್ಲ ಅಥವ ಕೊಬ್ಬರಿ ಸಿಕ್ಕರೆ ಸೀಗಡಿ ಸಿಗಲಿಲ್ಲ ಅಥವ ಎರಡೂ ಇದ್ದಲ್ಲಿ ಅವರ ಹೋಮ್ ಮಿನಿಸ್ಟರ್ಗೆ ಪುರುಸೊತ್ತು ಆಗಿಲ್ಲ ಎಂಬ ಕಾರಣದಿಂದ ಬಹಳ ವಷ೯ದಿಂದ ಈ ಪದಾಥ೯ ಮರಿಚಿಕೆ ಆಗಿತ್ತು.
ಮೊನ್ನೆ ಕಾರವಾರದ ಮೀನು ಮಾರುಕಟ್ಟೆಯಲ್ಲಿ ಒಣ ಸೀಗಡಿ ನೋಡಿದೆ, ಇದನ್ನ ಮಾರಾಟ ಮಾಡುತ್ತಿದ್ದ ಹೆಣ್ಣು ಮಗಳಲ್ಲಿ ಇದರ ಚಟ್ನಿ ಮಾಡುವ ರೆಸಿಪಿ ತಿಳಿದು ಕೊಂಡು ಬಂದು ಇವತ್ತು ಒಣ ಸೀಗಡಿ ನೀರಲ್ಲಿ ತೊಳೆದು ಬಾಂಡಲಿಯಲ್ಲಿ ಹುರಿದು ಒಣ ಕೊಬ್ಬರಿ, ಮೆಣಸಿನ ಪುಡಿ ಮತ್ತು ಉಪ್ಪಿನ ಮಿಶ್ರಣ ಕೊಬ್ಬರಿ ಎಣೆಯ ಜೊತೆ ಹುರಿದು ಮಿಶ್ರ ಮಾಡಿದೆ.
ಶೇಂದಿಯೋoದಿಗೆ, ಬೀರ್ನೊಂದಿಗೆ ಇದನ್ನ ಹೆಚ್ಚು ಬಳಸುತ್ತಾರೆ, ಊಟದೊಂದಿಗೆ ಈ ಚಟ್ನಿಪುಡಿ ತುಂಬಾ ರುಚಿ. ಮೊಸರನ್ನದ ಜೊತೆ ಒಳ್ಳೆ ಕಾಂಬಿನೇಷನ್.
ನೀವು ಪ್ರಯತ್ನಿಸಿ.
Comments
Post a Comment