ಶಿವಮೊಗ್ಗ ಜಿಲ್ಲಾ ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಇರುವವರು ಈ ಲೇಖನ ಓದಿ ಅಭಿಪ್ರಾಯ ದಾಖಲಿಸಿ.
# ತುಮರಿ ಸೇತುವೆ, ಶಿವಮೊಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ ಗೇಜ್ ಗೆ ಹಣ ಬಿಡುಗಡೆ, ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ ವಸತಿ ಮತ್ತು ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ 2004ರಲ್ಲಿ ನಾನು ನಡೆಸಿದ ಪಾದಯಾತ್ರೆ.#
21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ಮೇಲಿನ ಬೇಡಿಕೆಗಳ ಇಟ್ಟುಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿದ್ದು ಇವರೆಗೆ ಯಾರು ಮುರಿಯದ ದಾಖಲೆ ಆಗಿ ಉಳಿದಿದೆ.
ಸುಮಾರು 360 ಕಿ.ಮಿ. ಆನಂದಪುರಂನ ಮೂರುಘ ಮಠದಿOದ (ಆಚಾಪುರ ಗ್ರಾಮ ಪಂಚಾಯತನಿಂದ)ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇ ನೆಲ್ಲೂರು, ಕಾಗೋಡು, ಸೈ ದೂರು,ಕಾನ್ಲೆ, ಶಿರವಂತೆ, ಯಡ ಜಿಗಳೆಮನೆ, ಖಂಡಿಕ, ತಾಳಗುಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿ ದೇವರ ಬನ, ಬೇಸೂರು, ಆವಿನಳ್ಳಿ, ಹಳೆ ಇಕ್ಕೆ ರಿ, ಬೀಮನ ಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸಿಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು.
ಈ ಪಾದ ಯಾತ್ರೆಗೆ ಪ್ರೇರಣೆ ಮಾಜಿ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆಯವರು ಒಮ್ಮೆ ಅವರ ಮನೆಯಲ್ಲಿ ಅವರನ್ನ ಬೇಟಿ ಆದಾಗ ಅವರು ಅವರ ಹದಿ ವಯಸಲ್ಲಿ ಸಾಗರ ತಾಲ್ಲೂಕಿನ ಆಧ್ಯOತ ಪಾದ ಯಾತ್ರೆ ಮಾಡುವ ಆಸೆ ಪಟ್ಟಿದ್ದು ಈಡೇರಲಿಲ್ಲ ಈಗ ವಯಸ್ಸು ಆಯಿತು ಸಾಧ್ಯವಿಲ್ಲ ನಿಮಗೆ ಪ್ರಾಯ ಇದೆ ಒಂದು ಪಾದಯಾತ್ರೆ ಮಾಡಿ ಬಿಡಿ ಎಂದದ್ದು ಈ ಪಾದಯಾತ್ರೆಗೆ ಕಾರಣ.
ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪಾರ ಮಾಗ೯ದಶ೯ನದಲ್ಲಿ ರೈತ ಸಂಘದ ವಸಂತ ಕುಮಾರರ ಸಹಕಾರದೊಂದಿಗೆ ಸುಮಾರು ನೂರು ಜನ ಗೆಳೆಯರ ತಂಡದೊಂದಿಗೆ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.
ಜನ ಸೇರಿದ ಜಾಗದಲ್ಲಿ ಸಭೆ ನಡೆಯುತ್ತಿತ್ತು ಮೊದಲಿಗೆ ಮೆಣಸಿನ ಸರದ ಚಂದ್ರಪ್ಪರಿOದ ಪ್ರಾಥ೯ನೆ ನಂತರ ಬಿ.ಡಿ.ರವಿಯಿ೦ದ ಸ್ವಾಗತ ಮತ್ತು ಪ್ರಸ್ತಾವನೆ ನಂತರ ನನ್ನ ಭಾಷಣ ಮೊದಲಿಗೆ ಸಭಿಕರಿಗೆ ಪ್ರಶ್ನೆ ಸಿಗಂದೂರು ಯಾರು ನೋಡಿಲ್ಲ? ಅಂತ ಎಲ್ಲರೂ ಮೌನ, ಯಾರೆಲ್ಲ ನೋಡಿದಿರಿ ಅಂದಾಗ ಎಲ್ಲರೂ ನಾವು ನೋಡಿದ್ದೇವೆ ಅನ್ನುತ್ತಿದ್ದರು, ಹೇಗಿದೆ ಅಂದಾಗ? ಸುಂದರವಾಗಿದೆ, ಲಾಂಚ್ ಪ್ರಯಾಣ ಚೆನ್ನಾಗಿರುತ್ತೆ ಅಂತಿದ್ದರು ಆಗ ನನ್ನ ಜನಜಾಗೃತಿ ಮಾತು ಪ್ರಾರ೦ಭ ಆಗುತ್ತಿತ್ತು
" ರಾಜ್ಯದ ವಿದ್ಯುತಗಾಗಿ ಶರಾವತಿ ನದಿಗೆ ಹಿರೇಬಾಸ್ಕರ ಎ೦ಬಲ್ಲಿ ಮೊದಲ ಆಣೆಕಟ್ಟು ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ಇದರಿಂದ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಅತಿ ಕಡಿಮೆ ವೆಚ್ಚದಲ್ಲಿ, ಇದಕ್ಕಾಗಿ ಹೊಸನಗರ ಮತ್ತು ಸಾಗರ ತಾಲ್ಲೂಕಿನ ಲಕ್ಷಾ೦ತರ ಎಕರೆ ಕಾಡು, ಜಮೀನು ಮುಳುಗಡೆ, ನಿರಾಶ್ರೀತರಿಗೆ ಸರಿಯಾದ ಪರಿಹಾರ ಸಿಗಲಿಲ್ಲ, ಇಲ್ಲಿ ಮುಳುಗಡೆಯಿಂದ ಆ ಭಾಗದ ಎರೆಡು ಹೋಬಳಿ ಕರೂರು, ಭಾರಂಗಿಗೆ ರಸ್ತೆ ಸಂಪಕ೯ ಕಳೆದು ಕೊಂಡಿದ್ದು ನಂತರ ಸಕಾ೯ರ ತಾತ್ಕಾಲಿಕವಾಗಿ ಲಾಂಚ್ ಒದಗಿಸಿದೆ ಆದರೆ ಸಂಜೆ ಸೂಯ೯ ಮುಳುಗಿದ ನಂತರ ಲಾಂಚ್ ಸಾಗರದ ಕಡೆಯ ತೀರದಲ್ಲಿ ಬಂದು ನಿಂತರೆ ಮತ್ತೆ ಪ್ರಾರಂಭ ಆಗುವುದು ನಾಳೆ ಬೆಳಿಗ್ಗೆ ಅಷ್ಟರಲ್ಲಿ ಯಾರಿಗಾದರು ಕಾಯಿಲೆ ಆದರೆ ಅಥವ ಹೆಣ್ಣು ಮಗಳಿಗೆ ಹೆರಿಗೆ ನೋವು ಶುರುವಾದರೆ ಸಮೀಪದ ಸಾಗರಕ್ಕೆ ಹೋಗಲು ಕೊಗಾರು ಮಾಗ೯ವಾಗಿ ಕಾಗ೯ಲ್ ಮುಖಾಂತರ ಸಾಗರ ಆಸ್ಪತ್ರೆಗೆ 100 ಕಿ.ಮಿ. ಗಳನ್ನ 3 ಗಂಟೆ ಪ್ರಯಾಣ ಮಾಡಿ ತಲುಪ ಬೇಕು ಅಂದಾಗ ಜನ ತಮ್ಮ ಮೊಜು ಮಸ್ತಿನ ತುಮರಿ ಲಾಂಚ್ ಪ್ರಯಾಣದಿಂದ ಜನರ ಸಂಕಷ್ಟದ ಕಡೆ ಹೊರಳುತ್ತಿದ್ದರು .
ಇದೇ ರೀತಿ ಹಂದಿಗೋಡು ಕಾಯಿಲೆ ಬಗ್ಗೆ, ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಜನ ಏಡ್ಸ್ ಅಂತಿದ್ದರು ಆಗ ಅವರಿಗೆ ವಿಶ್ವದಲ್ಲಿ ಮೊದಲ ಸಾರಿ ಸಾಗರ ತಾಲ್ಲೂಕಿನ ಹಂದಿಗೋಡಲ್ಲಿ ಕಂಡು ಬಂದ ನೀಗೂಡ ಕಾಯಿಲೆಯಿ೦ದ ಮನುಷ್ಯ ಅಂಗವಿಕಲನಾಗುತ್ತಾನೆ, ಸಂದಿಗಳ ಮೂಳೆ ಬೆಳೆದು ವಿಪರೀತ ನೋವು ಅನುಭವಿಸಿ ಕುಳ್ಳಾಗುತ್ತಾನೆ ಇದಕ್ಕೆ ಈ ವರೆಗೆ ಕಾರಣ ಕಂಡು ಹಿಡಿಯಲಾಗಲಿಲ್ಲ, ಔಷದಿಯೂ ಇಲ್ಲ ಅದರಿಂದ ಇದಕ್ಕೆ ಹಂದಿಗೋಡು ನಿಗೂಡ ಕಾಯಿಲೆ ಅಂತ ಹೆಸರು ಅಂದಾಗ ಸಭೆಯಲ್ಲಿ ನಿಶ್ಯಬ್ದ.
1952ರಲ್ಲಿ ಕಾಗೋಡು ಸತ್ಯಾಗ್ರಹ ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ನಡೆಯಿತು "ಉಳುವವನೆ ಹೊಲದೊಡೆಯಾ" ಎ೦ಬ ಕಾನೂನು ಜಾರಿಗಾಗಿ ಆ ಚಳವಳಿಯಿ೦ದಲೆ ಇವತ್ತು ಗೇಣಿಜಮೀನು ಪಡೆಯಲು ಸಾಧ್ಯವಾಯಿತು ಈ ಚಳವಳಿ ಬೆಂಬಲಿಸಿ ಸಮಾಜವಾದಿ ಪಾಟಿ೯ಯ ನೇತಾರ ಸಂಸದ ಸದಸ್ಯ ಡಾ|| ರಾಮಮನೋಹರ ಲೋಹಿಯ ಸಾಗರಕ್ಕೆ ರೈಲಿನಲ್ಲಿ ಬಂದು ಕಾಗೋಡಿಗೆ ಹೋಗಿ ಚಳವಳಿಗಾರರನ್ನ ಬೆಂಬಲಿಸಿ ಸಭೆಯಲ್ಲಿ ಮಾತಾಡಿ ಬಂದು ಸಾಗರದ ರೈಲು ನಿಲ್ದಾಣದ ವಿಶ್ರOತಿ ಕೊಠಡಿಯಲ್ಲಿ ರಾತ್ರಿ ತಂಗಿದ್ದಾಗ ಅವರನ್ನ ಬಂದಿಸಲಾಗಿತ್ತು 1952ರಲ್ಲಿ ಹಾಗಾಗಿ ಹಾಲಿ ಸಾಗರ ಜOಬಗಾರು ಹೆಸರಿನ ಸಾಗರ ರೈಲು ನಿಲ್ದಾಣಕ್ಕೆ ಡಾII ರಾಮ ಮನೋಹರ ಲೋಹಿಯ ರೈಲು ನಿಲ್ದಾಣ ಅಂತ ಹೆಸರಿಡಬೇಕು ಇದಕ್ಕೆ NDA ಸಕಾ೯ರದಲ್ಲಿ ಉಪಪ್ರದಾನಿ ಆಗಿದ್ದ ಲಾಲ್ ಕೃಷ್ಣ ಅಡ್ವಾನಿಗೆ ಮನವಿ ನೀಡಿದ್ದು ಅವರು ಕನಾ೯ಟಕ ಸಕಾ೯ರ, ಶಿವಮೊಗ್ಗ ಜಿಲ್ಲಾಡಳಿತದ ಮತ್ತು ಸಾಗರ ನಗರಸಭೆಯ ಒಪ್ಪಿಗೆ ಪತ್ರದ ಪ್ರಕಾರ ಹೆಸರು ಬದಲಾವಣೆಗೆ ಕೇಂದ್ರ ಸಕಾ೯ರದ ಒಪ್ಪಿಗೆ ನೀಡಿದ್ದಾರೆ ರೈಲ್ವೆ ಇಲಾಖೆ ಈ ನಾಮಕರಣ ಮಾಡುವ ಕೆಲಸ ಬಾಕಿ ಇದೆ.
ಜೋಗ ಜಲಪಾತ ನೋಡುವವರು 1975ರ ನಂತರ ಕಡಿಮೆ ಆದರು ಈ ರೀತಿ ಪ್ರವಾಸಿಗಳು ಕಡಿಮೆ ಆಗಲು ಕಾರಣ ಇಲ್ಲಿನ ಮೂಲ ಸೌಕಯ೯ದ ಕೊರತೆ ವಿಶ್ವದ ಸುಂದರ ಜಲಪಾತ ನೋಡಲು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಒದಗಿಸಿದರೆ ಪ್ರವಾಸಿಗಳು ಹೆಚ್ಚಾದರೆ ರಾಜ್ಯಕ್ಕೆ, ಜಿಲ್ಲೆಗೆ ಮತ್ತು ನಮ್ಮ ತಾಲ್ಲೂಕಿನ ಆದಾಯಕ್ಕೆ ಅನುಕೂಲ ಹಾಗಾಗಿ ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ ಅನೇಕ ಕಡೆ ಎಲ್ಲಾ ಸರಿ ತುಮರಿ ಸೇತುವೆ ಸಾಧ್ಯವೇ ಇಲ್ಲ ಅಂತ ಗೇಲಿ ಮಾಡುತ್ತಿದ್ದ ಮುಖ೦ಡರು ಸಿಗುತ್ತಿದ್ದರು ಅಲ್ಲಿವರೆಗೆ ಸಾಗರದ ಜನ ಮನದಲ್ಲಿ ತುಮರಿ ಸೇತುವೆ ಅಸಾಧ್ಯ ಎಂಬ ಬಾವನೆ ಮನೆ ಮಾಡಿತ್ತು.
ಇವತ್ತು ತುಮರಿ ಸೇತುವೆಗೆ 19 - ಪೆಬ್ರವರಿ -2018 ಶoಕು ಸ್ಥಾಪನೆ ಇದೆ, ಈಗಾಗಲೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ಗೇಜ್ ಆಗಿ ರೈಲು ಬರುತ್ತಿದೆ, ಜೋಗ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಿ ಯೋಜನೆಯ ನೀಲಿ ನಕ್ಷೆ ತಯಾರಾಗಿದೆ, ಹಂದಿಗೋಡು ಸಕಾ೯ರದ ಗಮನ ಸೆಳೆದು ಹಿಂದೆ ಮುಖ್ಯಮ೦ತ್ರಿ ಆಗಿದ್ದ ಕುಮಾರಸ್ವಾಮಿ ಹಂದಿಗೋಡಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು ಇನ್ನು ಈ ಕಾಯಿಲೆಗೆ ಕಾರಣ ಸಂಶೋದನೆ ಆಗಬೇಕು, ಔಷದಿ ಕಂಡು ಹಿಡಿಯುವ ಕೆಲಸ ಆಗಬೇಕು.
ಸಾಗರ ರೈಲು ನಿಲ್ದಾಣದ ನಾಮಕರಣದ ಅಂತಿಮ ಅನುಮತಿ ಸಿಗಬೇಕಾಗಿದೆ.
ಹೀಗೆ ಮಾಜಿ ಶಾಸಕರಾದ ಎಲ್.ಟಿ. ಹೆಗ್ಗಡೆಯವರ ಮಾತಿನ ಪ್ರಭಾವದಿ೦ದ ಅವತ್ತು ನಾನು ಮತ್ತು ನನ್ನ ಸಹಪಾಟಿಗಳು ಅನೇಕ ಪ್ರಗತಿ ಪರರ ಸಹಕಾರದಿಂದ ನಡೆಸಿದ ಪಾದಯಾತ್ರೆಯ ಜನ ಜಾಗೃತೆಯ ಪ್ರಮುಖ ಬೇಡಿಕೆಗಳು ಅನೂಷ್ಟಾನಗೊಳ್ಳುತ್ತಿರುವುದು ಸಂತೋಷ ತಂದಿದೆ, ಇದನ್ನ ಈ ಹಂತಕ್ಕೆ ತರಲು ಪ್ರಯತ್ನಿಸಿದ ಮತ್ತು ಮಂಜೂರುಗೊಳಿಸಿದ ಮಹನೀಯರೆಲ್ಲರಿಗೆ ಕೃತಜ್ಞತೆಗಳು.
ಮುಂದಿನ ದಿನದಲ್ಲಿ ರಾಜಕೀಯದಲ್ಲಿ ಅಭಿವೃದ್ಧಿಯಲ್ಲಿ ಆಸಕ್ತಿ ಇರುವವರು ಈಡೇರದ ಅನೇಕ ಬೇಡಿಕೆಗಳ ಮಂಜೂರಾತಿಗೆ ಪ್ರಯತ್ನಿಸಲಿ ಎಂದು ಹಾರೈಸುತ್ತೇನೆ.
Comments
Post a Comment