ಕೆಳದಿ ರಾಜ ವೆಂಕಟಪ್ಪ ನಾಯಕ, ಗೇರುಸೊಪ್ಪೆ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಮತ್ತು ಮಂಗಳೂರಿನ ರಾಣಿ ಅಬ್ಬಕ್ಕಳ ಬಗ್ಗೆ ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ ತನ್ನ ಕೆಲವೇ ದಿನದ ಪ್ರವಾಸದಲ್ಲಿ ಈ ಮೂವರ ಬಗ್ಗೆ ತೆಜೋವದೆ ಮಾಡುವಂತ ಬರಹ ದಾಖಲಿಸಿದ್ದು ಇದು ಸತ್ಯವಲ್ಲ ಅನ್ನುವ ದಾಖಲೆ ಸಹಿತ ವಾದ ಶ್ರೀ ಗಜಾನನ ಶಮಾ೯ರ ಈ ಲೇಖನ ಸಂಶೋದಕರು ಗಮನಿಸಬೇಕು
ದನ್ಯವಾದಗಳು ಗಜಾನನ ಶಮಾ೯ರಿಗೆ, ನಮ್ಮಲ್ಲಿನ ಬಹುತೇಕರು ಸಂಶೋದಕರಾಗಿ ಸಂಶೋಧನೆ ಮಾಡಿದ್ದೇವೆ ಎನ್ನುವುದು ಈ ರೀತಿ ಲಂಡನ್ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪಟ್ಟ ವಿದೇಶಿ ಪ್ರವಾಸಿಗಳ ಪತ್ರಗಳ ಮತ್ತು ಚಿತ್ರಗಳನ್ನು ಆದಾರವಾಗಿಟ್ಟು ಮಾತಾಡುತ್ತಾರೆ ಬರೆಯುತ್ತಾರೆ ಆದರೆ ಕಣ್ಣೆದುರು ಇರುವ, ಕೈಗೆಟುಕುವ ದೂರದಲ್ಲಿರುವ ಸ್ಮಾರಕ ಮತ್ತು ಜನಪದದಲ್ಲಿರುವ ಕಥೆ ಹಾಡುಗಳನ್ನು ಮಾತ್ರ ಒಪ್ಪುವುದೇ ಇಲ್ಲ.
ಇದು ನಮ್ಮ ಊರಿನ ಜನರ ಮಧ್ಯದಲ್ಲಿ ಇರುವ ಸ್ಮಾರಕ, ಪ್ರಚಲಿತ ಕಥೆ, ಲಾವಣಿ ಮತ್ತು ಚಂಪಕಾಳ ವಂಶಸ್ಥರ ಸತ್ಯ ಕಥೆ ಆದರೂ ನನಗೆ ವಿದೇಶಿ ಪ್ರವಾಸಿಗಳು ಬರೆದ ಪತ್ರಗಳನ್ನು ಆದರಿಸಿ ಕುಟುಕುವ ನಮ್ಮ ಸಂಶೋದಕರಿಗೆ ಹೆದರಿ ನನ್ನ ಕಾದಂಬರಿ ಕಾಲ್ಪನಿಕ ಅಂತ ಬರೆದೆ.
ಈಗಲೂ ಸಂಶೋದನೆ ಮಾಡುವವರಿಗೆ ಕುಂಬಳೆ ಕಾಸರಗೋಡಿನ ಅನೇಕ ಮನೆಯಲ್ಲಿರುವ ತಾಮ್ರಪತ್ರಗಳು ಹೊಸ ಇತಿಹಾಸ ಹೇಳುತ್ತದೆ.
ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾದ ಬಗ್ಗೆ ಉಲ್ಲೇಖಿಸಿ ಗಜಾನನ ಶಮಾ೯ರು ಬರೆದ ಪೇಸ್ ಬುಕ್ ಲೇಖನ
ರಾಣಿ ಚೆನ್ನಭೈರಾದೇವಿ, ಹಿರಿಯ ವೆಂಕಟಪ್ಪ ನಾಯಕ ಮತ್ತು ರಾಣಿ ಅಬ್ಬಕ್ಕಳ ಕುರಿತು ಅಸಂಬದ್ಧಗಳನ್ನು ಬರೆದ ಪೀಟ್ರೋ ಡೆಲ್ಲಾವಲ್ಲೆಯೆಂಬ ವಿಕ್ಷಿಪ್ತ ಮನಸ್ಸಿನ ಪ್ರವಾಸಿ...
ನನ್ನ ಸ್ನೇಹಿತರಾದ ಸಾಗರದ ಸಜ್ಜನ, ಗಂಗಾಧರ ನಾಯಕರು ಸೃಜನಶೀಲ ಲೇಖಕ ಅರುಣ ಪ್ರಸಾದರ "ಬೆಸ್ತರ ರಾಣಿ ಚೆಂಪಕ" ಕಾದಂಬರಿಯ ಕುರಿತು ಇಲ್ಲಿ ಉಲ್ಲೇಖಿಸಿದಾಗ ನಡೆದ ಚರ್ಚೆಯಲ್ಲಿ ಇಟಲಿಯ ಪ್ರವಾಸಿ ಡೆಲ್ಲಾವಲ್ಲೆಯ ಕುರಿತು ಪ್ರಸ್ತಾಪ ಬಂತು. ಪೀಟ್ರೋ ಡೆಲ್ಲಾವಲ್ಲೆಯ ಪ್ರಕಾರ ಚಂಪಕ ಬೆಸ್ತರವಳಲ್ಲ, ಮುಸ್ಲಿಂ ಹೆಣ್ಣುಮಗಳು ಎಂಬ ಪ್ರಸ್ತಾಪ ಉಲ್ಲೇಖಗೊಂಡಿತು. ಚಂಪಕಳ ವಂಶಸ್ಥರು ಈಗಲೂ ಇದ್ದಾರೆ ಅವರು ಬೆಸ್ತರು ಎಂದು ಸ್ವತಃ ಲೇಖಕರೇ ಹೇಳಿದರು. ಹಾಗಾದರೆ ಡೆಲ್ಲಾವಲ್ಲೆಯ ಉಲ್ಲೇಖ ಸುಳ್ಳೇ ಎಂಬ ಪ್ರಶ್ನೆ ಬಂದಾಗ ನನಗೆ ಡೆಲ್ಲಾವಲ್ಲೆಯ ಕುರಿತ ಲೇಖನವೊಂದರ ಕೆಲವು ಆಯ್ಧ ಭಾಗಗಳನ್ನು ಇಲ್ಲಿ ಅಂಟಿಸುವ ಇಚ್ಚೆ ಮೂಡಿತು. ಯಾಕೆಂದರೆ ನನ್ನ ಪ್ರಕಾರ ಡೆಲ್ಲಾವಲ್ಲೆ ವಿಕ್ಷಿಪ್ತ ಮನಸ್ಸಿನ, ಪೂರ್ವಾಗ್ರಹವುಳ್ಳ ಒಬ್ಬ ಧರ್ಮಾಂಧ ವ್ಯಕ್ತಿ. ಅವನ ಅನೇಕ ಉಲ್ಲೇಖಗಳು ತಿರಸ್ಕಾರ ಯೋಗ್ಯ. ಆತನ ಅಸಂಬದ್ಧ ಅಪಲಾಪಗಳಿಗೆ ನಿದರ್ಶನಗಳು ಇಲ್ಲಿವೆ. ಇಲ್ಲಿ ಆಂಗ್ಲಭಾಷೆಯಲ್ಲಿರುವ ಉಲ್ಲೇಖಗಳು tavells of pietro Dellavalle ಎಂಬ ಆತನ ಕೃತಿಯಿಂದಲೇ ಆಯ್ದ ಭಾಗಗಳು. ಮೊದಲು ಯಾರು ಈ ಡೆಲ್ಲಾವಲ್ಲೆ ಎಂದು ಗಮನಿಸೋಣ.
ಕ್ರಿಸ್ತಶಕ 1623ರಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದ ಪೀಟ್ರೋ ಡೆಲ್ಲಾವಲ್ಲೆ ಇಟಲಿಯ ರೋಮ್ ನಗರದ ಸುಪ್ರಸಿದ್ಧ, ಶ್ರೀಮಂತ, ಸಂಪ್ರದಾಯಸ್ಥ, ಕುಟುಂಬವೊಂದರಲ್ಲಿ 1586ರಲ್ಲಿ ಜನಿಸಿದವನು. ಆತ ಪೋಪರ ಧಾರ್ಮಿಕ ಸಂಪುಟದಲ್ಲಿ ಪ್ರಥಮ ಸಾಲಿನ ಗೌರವ ಪಡೆಯುತ್ತಿದ್ದ ಧಾರ್ಮಿಕ ಕುಟುಂಬದ ಕುಡಿ. ಡೆಲ್ಲಾವಲ್ಲೆ ಉತ್ತಮ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ಇಟಲಿಯ ಪ್ರತಿಷ್ಟಿತ ಅಕಾಡೆಮಿ ಆಫ್ ಉಮೋರಿಸ್ಟಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, 1611ರಲ್ಲಿ ಸ್ಪೇನ್ ದೇಶದ ಸೈನ್ಯ ಸೇರುತ್ತಾನೆ. ಬ್ಯಾತ್ರೀಚ್ ಬೋರಾಚ್ ಎಂಬ ಯುವತಿಯನ್ನು ಪ್ರೀತಿಸಿ ಆಕೆಯ ವಂಚನೆಗೆ ಬಲಿಯಾಗುತ್ತಾನೆ. ಪ್ರೇಮವೈಫಲ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ. ತನ್ನ ಪ್ರೇಯಸಿಯ ವಂಚನೆಯನ್ನು ಮರೆಯಲು ಊರೂರು ಅಲೆಯುತ್ತ ನೇಪಲ್ಸಿಗೆ ಹೋಗುತ್ತಾನೆ. ತನ್ನ ವೈದ್ಯಮಿತ್ರ ಔಷಧ ಶಾಸ್ತ್ರದ ಪ್ರಾಚಾರ್ಯ ಮ್ಯಾರಿಯೋ ಶ್ಕಿಪಾನೋನ ಸಲಹೆಯಂತೆ ಚಿತ್ತಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ಪೌರಾತ್ಯ ಜಗತ್ತಿನ ಪ್ರವಾಸಕ್ಕಾಗಿ ವೆನಿಸಿನಿಂದ ಕಾನಸ್ಟ್ಯಾಂಟಿನೋಪಲ್ಲಿಗೆ ಪಯಣಿಸುತ್ತಾನೆ. ಅಲ್ಲಿಂದ ಏಷಿಯಾ ಮೈನರ್, ಈಜಿಪ್ತ್, ಮೌಂಟ್ ಸಿನಾಯ್, ಪ್ಯಾಲಸ್ತೀನುಗಳಿಗೆ ಭೇಟಿ ನೀಡಿ ನಂತರ ಬಾಗ್ದಾದಿಗೆ ತೆರಳಿ 1616ರಲ್ಲಿ ಮಾನಿ ಜಿಯೋರಿಡ್ ಎಂಬ ಹದಿನೆಂಟರ ಯುವತಿಯನ್ನು ಮದುವೆಯಾಗುತ್ತಾನೆ. ಮುಂದೆ 1622ರಲ್ಲಿ ದಂಪತಿಗಳು ಪರ್ಶಿಯಾದ ಪ್ರವಾಸದಲ್ಲಿದ್ದಾಗ ಮಾನಿ ಸಾವನ್ನಪ್ಪುತ್ತಾಳೆ. ಈ ದುರಂತದಿಂದ ಆತ ಮತ್ತೆ ಮಾನಸಿಕ ವಿಪ್ಲವಕ್ಕೆ ತುತ್ತಾಗುತ್ತಾನೆ. ತನ್ನ ಮೃತ ಮಡದಿಯ ದೇಹ ಕೆಡದಂತೆ ಅದನ್ನು ಸುಗಂಧವಸ್ತುಗಳನ್ನಿರಿಸಿದ ಶವಪೆಟ್ಟಿಗೆಯಲ್ಲಿಟ್ಟುಕೊಂಡು ತನ್ನ ಪರಿಚಾರಿಕೆ ಮಾರಿಯಾ ಜಿಬಾ ಜೊತೆಗೆ ರೇಶಿಮೆ ವಸ್ತ್ರ ಹೊದೆಸಿದ ಶವಪೆಟ್ಟಿಗೆಯ ಬಗ್ಗೆ ಹಡಗಿನ ಕ್ಯಾಪ್ಟನ್ ಬಳಿ ಸುಳ್ಳು ಹೇಳಿ 1623ರ ಫೆಬ್ರುವರಿ 10ರಂದು ಭಾರತದ ಸೂರತ್ ನಗರಕ್ಕೆ ಬಂದಿಳಿದು, ಕ್ಯಾಂಬೆ ಅಹ್ಮದಾಬಾದನ್ನು ಸುತ್ತಾಡಿ ಗೋವೆಗೆ ಬರುತ್ತಾನೆ. ಅಲ್ಲಿಂದ ಕೆಳದಿಯ ರಾಜಪ್ರತಿನಿಧಿ ವಿಠಲ ಶೆಣೈ ಮತ್ತು ಪೋರ್ಚುಗೀಸ್ ರಾಯಭಾರಿಯೊಂದಿಗೆ 1623ರ ಅಕ್ಟೋಬರ್ 14ರಂದು ಕೆಳದಿಗೆ ಹೊರಡುತ್ತಾನೆ. ಈ ಯಾತ್ರೆಯಲ್ಲಿ ಹೊನ್ನಾವರ ಗೇರುಸೊಪ್ಪೆ, ಕಾನೂರು, ಭಾರಂಗಿ, ತುಮರಿ, ಆವಿನಹಳ್ಳಿಯ ಮೂಲಕ ಇಕ್ಕೇರಿಗೆ ಬಂದು ಅಲ್ಲಿ ಹದಿನೆಂಟು ದಿನವಿದ್ದು ನಂತರ ಮಂಗಳೂರಿಗೆ ಹೋಗಿ ಅಬ್ಬಕ್ಕದೇವಿಯನ್ನು ಭೇಟಿಯಾಗಿ ಮುಂದೆ ಕಲ್ಲೀಕೋಟೆಗೆ ಪ್ರಯಾಣ ಬೆಳೆಸುತ್ತಾನೆ. ಮರಳಿ ಗೋವಾಕ್ಕೆ ತೆರಳಿ, ಅಲ್ಲಿಂದ ಮಸ್ಕಟ್, ನೇಪಲ್ಸ್ ಮೂಲಕ 1626ರ ಮಾರ್ಚ್ 28ಕ್ಕೆ ರೋಮ್ ನಗರವನ್ನು ಸೇರಿ ತನ್ನ ಸತಿಯ ಪಾರ್ಥಿವ ಶರೀರವನ್ನು ರೋಮ್ ನಗರದ ಆರಾಕೋಯ್ಲಿ ಇಗರ್ಜಿಯಲ್ಲಿ ಮಣ್ಣುಮಾಡುತ್ತಾನೆ. ಅವನಿಗೆ ಪೋಪನ ಧಾರ್ಮಿಕ ಮಂಡಲಿಯಲ್ಲಿ ಗೌರವದ ಹುದ್ದೆ ದೊರೆಯುತ್ತದೆ. ಆತ ಪ್ರವಾಸದಲ್ಲಿ ತನ್ನ ಸಂಗಾತಿಯಾಗಿದ್ದ ಪರಿಚಾರಿಕೆಯನ್ನು ವಿವಾಹವಾಗಿ, ಹದಿನಾಲ್ಕು ಮಕ್ಕಳನ್ನು ಪಡೆಯುತ್ತಾನೆ. ಮುಂದೆ ಕ್ಷುಲ್ಲಕ ಜಗಳವೊಂದರಲ್ಲಿ ಪೋಪನ ಕಣ್ಣೆದುರೇ ನಿರಪರಾಧಿ ವ್ಯಕ್ತಿಯೊಬ್ಬನನ್ನು ಕತ್ತಿಯಿಂದ ಇರಿದು ಸಾಯಿಸಿ, ರೋಮ್ ನಗರವನ್ನು ಬಿಟ್ಟು ನೇಪಲ್ಸ್ ನಗರಕ್ಕೆ ಹೋಗಿ ವಾಸಿಸುತ್ತಾನೆ. ಮರಳಿ ಪೋಪನಿಂದ ಕ್ಷಮಾಧಾನ ಪಡೆದು ರೋಮ್ ನಗರಕ್ಕೆ ಬಂದು 1652ರಲ್ಲಿ ಮರಣಹೊಂದುತ್ತಾನೆ. ಇದು ವಿಕ್ಷಿಪ್ತ ಮನಸ್ಸಿನ ಪೀಟ್ರೋ ಡೆಲ್ಲಾವಲ್ಲೆಯ ಸಂಕ್ಷಿಪ್ತ ಜೀವನ ಕಥನ.
ಈತನ ಜೀವನ ಕಥನವನ್ನು ಇಲ್ಲಿ ಉಲ್ಲೇಖಿಸಲು ಕಾರಣ, ಹಿರಿಯ ವೆಂಕಟಪ್ಪ ನಾಯಕ, ಅಬ್ಬಕ್ಕ ಚೆನ್ನಭೈರಾದೇವಿಯ ಬದುಕೂ ಸೇರಿದಂತೆ ಹದಿನಾರನೆಯ ಶತಮಾನದ ಹಲವು ಐತಿಹಾಸಿಕ ಘಟನೆಗಳಿಗೆ ನಮ್ಮ ಕೆಲವು ಇತಿಹಾಸಕಾರರು ಈತನ ಕೃತಿಯನ್ನೇ ಆಧಾರವಾಗಿ ನೆಚ್ಚಿಕೊಂಡಿರುವುದು ಉಚಿತವಲ್ಲ ಎಂಬುದನ್ನು ನಿರೂಪಿಸಲು.
1: ಕೆಳದಿಯ ವೆಂಕಟಪ್ಪ ನಾಯಕನಿಗೆ ರಾಜಲಕ್ಷಣವಿಲ್ಲವೆಂಬ ಆರೋಪ:
From Ikkeri November 22, 1623
Write you from ikkeri, The Royal city and seat of venkatappa Nayaka whither I am come and where I am present. I shall give you an account of the Audience which our Ambassador hath had of this king, who, in my judgement, should at her be called a Regulusor Royolet although the Portugal's and Indians give him the honor of a Royal Title; being he hath in effect neither State, Court nor appearance, befitting a true king.
ಮೊದಲಿಗೆ ಅವನು ಕೆಳದಿಯ ನಾಯಕನನ್ನು ಒಬ್ಬ ರಾಜನೆನ್ನಲು ಒಪ್ಪದೆ ತುಂಡರಸ ಅಥವಾ ಪುಡಿ ಪಾಳೆಯಗಾರನಷ್ಟೇ ಎಂಬರ್ಥದಲ್ಲಿ ಬರೆಯುತ್ತಾನೆ. ಅದಕ್ಕೆ ಆತ ಕೊಡುವ ಕಾರಣ ನಾಯಕನಿಗೆ ರಾಜ್ಯ, ರಾಜಸಭೆ ಅಥವಾ ರಾಜಲಕ್ಷಣ ಕೂಡ ಇಲ್ಲವೆಂಬುದು. ಇದು ಅವನ ಪೂರ್ವಾಗ್ರಹಗಳ ಮೊದಲ ಪರಿಚಯ. ಆತ ಇದಕ್ಕೂ ಮೊದಲು ಹೊನ್ನಾವರದಲ್ಲಿದ್ದಾವಾಗಲೇ, ಹಿರಿಯ ವೆಂಕಟಪ್ಪ ನಾಯಕನ ಎರಡನೆಯ ಪತ್ನಿ ಭದ್ರಮ್ಮನ ಕುರಿತು ಬರೆಯುತ್ತಾನೆ. ನಾಯಕ, ಮುಸ್ಲಿಂ ಹೆಣ್ಣೊಬ್ಬಳ ಜೊತೆ ವಿವಾಹೇತರಸಂಪರ್ಕ ಇರಿಸಿಕೊಂಡಿದ್ದಕ್ಕಾಗಿ ಭದ್ರಮ್ಮ ನಾಯಕನೊಡನೆ ದೈಹಿಕ ಸಂಪರ್ಕ ಇರಿಸಿಕೊಂಡಿರಲಿಲ್ಲವೆಂದು ಬರೆಯುತ್ತಾನೆ. ಜೊತೆಗೆ ಭದ್ರಮ್ಮ, 'ಲಿಂಗವಂತರಲ್ಲೇ ಯಾರನ್ನಾದರೂ ಇಟ್ಟುಕೊಂಡರೆ ತನಗೆ ಬೇಸರವಿಲ್ಲ, ಮಾಂಸ ತಿನ್ನುವ ಮಹಮ್ಮದೀಯ ಹೆಂಗಸನ್ನು ಇಟ್ಟುಕೊಳ್ಳುವುದನ್ನು ಒಪ್ಪಲಾರೆ' ಎಂದು ಹೇಳಿ ನಾಯಕನೊಂದಿಗೆ ಪತ್ನಿಯಂತಿರದೆ ಮಗಳಂತೆ ಇದ್ದಳೆಂದು ಅವರಿಬ್ಬರ ಸಂಸಾರದ ಒಳಗುಟ್ಟನ್ನು, ಮಲಗುವ ಕೋಣೆಯ ಕಿಟಕಿಯಿಂದ ಇಣುಕಿ ಕಣ್ಣಾರೆ ಕಂಡವನಂತೆ ವಿವರಿಸುತ್ತಾನೆ. ಒಂದುವೇಳೆ ಅದು ನಿಜವೇ ಆಗಿದ್ದರೂ ಆತ ಇಟಲಿಯಲ್ಲಿರುವ ತನ್ನ ಗೆಳೆಯನಿಗೆ ಇಲ್ಲಿಯ ನಾಯಕನೊಬ್ಬನ ಸಂಸಾರದ ಒಳಗುಟ್ಟನ್ನು ಜಾಹೀರುಪಡಿಸುವ ಅಗತ್ಯವೇನಿತ್ತೋ ಅರ್ಥವಾಗುವುದಿಲ್ಲ.
2: ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಕುರಿತು ಡೆಲ್ಲಾವಲ್ಲೆಯ ಅಬದ್ದ :
' The last Queen of Garsopa fell in Love with a mean Man and a stranger, into whose power she resign'd herself, together with her whole kingdom. In which act, setting aside her choosing a Lover of base blood, upon which account she was blam'd and hated by the Indians (whore most rigorous observers of Nobility and maintainers of the dignity of their ancestors in all points) as to giving herself up as a prey to her lover, she committed no fault against her honor ; for in these Countries 'tis lawful for such Queens to choose to themselves Lovers or Husbands, one or more, according as they please. But this Man who was so favor'd by the Queen of Garsopa, having thoughts as ignoble as his blood, in stead of corresponding with grati-tude to the Queen's courtesie, design'd to rebell against her and take the kingdom from her; which design for a while he executed, having in process of time gain'd the affection of most of her most eminent vassals. The Queen, seeing her self oppress'd by the Traytor, had recourse to the Portugals, offering them her whole State on condition they would free her from imminent ruine……..'
ಈ ಉಲ್ಲೇಖವನ್ನು ನೋಡಿದರೆ ಆತನ ಪೂರ್ವಾಗ್ರಹ ಮತ್ತು ಮಾನಸಿಕ ವಿಕೃತಿ ಸ್ಪಷ್ಟವಾಗಿ ಅರ್ಥವಾಗುತ್ತದೆ. ಆತ ಭಾರತೀಯ ಪರಂಪರೆ, ಧರ್ಮ, ಸಾಮಾಜಿಕ ಬಹುರೂಪತೆ ಅಥವಾ ಅನನ್ಯತೆಗಳನ್ನು ಅರ್ಥಮಾಡಿಕೊಳ್ಳದೆ ಇಲ್ಲಿಯ ಜಾತಿಬೇಧ, ಸತಿಪದ್ದತಿ ಮುಂತಾದ ಅನಿಷ್ಟಗಳ ಬಗ್ಗೆ ಮಾತ್ರ ಅಗತ್ಯಕ್ಕಿಂತ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತದೆ. ಅನಗತ್ಯವಾಗಿ ಇಲ್ಲಿನ ಕೆಳವರ್ಗದವರ ಕುರಿತು ಕೀಳು ನುಡಿಗಳನ್ನು ಆಡುತ್ತಾನೆ. ರಾಣಿಯು ಒಬ್ಬ ಅಪರಿಚಿತ ಕ್ಷುದ್ರ ಮನುಷ್ಯ (mean Man and a stranger) ನನ್ನು ಪ್ರೀತಿಸಿದ್ದಳೆನ್ನುತ್ತ, ಅವಳು ಆತನ ಬಲಾಡ್ಯತೆಗೆ ತನ್ನನ್ನೂ ತನ್ನ ರಾಜ್ಯವನ್ನೂ ಸಮರ್ಪಿಸಿಕೊಂಡಿದ್ದಳೆಂದು ಬರೆಯುತ್ತಾನೆ. ಈ ಕಾರಣಕ್ಕಾಗಿ ಪ್ರಜೆಗಳು ಅವಳನ್ನು ದೂಷಿಸಿದರು, ಭಾರತೀಯ ರಾಜವನಿತೆಯರು ತಮಗೆ ಇಷ್ಟಬಂದಂತೆ ಒಂದಕ್ಕಿಂತ ಹೆಚ್ಚು ಪುರುಷರನ್ನು ಆಯ್ದುಕೊಳ್ಳುವುದನ್ನು ಸಮಾಜ ಒಪ್ಪುತ್ತಿತ್ತು ಎಂದು ಹೇಳುತ್ತಲೇ, 'ದಾಂಪತ್ಯದ ವಿಷಯದಲ್ಲಿ ಭಾರತೀಯರು ಶುದ್ಧತೆಗೆ ಮಹತ್ವ ಕೊಡುವವರು' ಎಂಬ ವಿರೋಧಾಭಾಸದ ಮಾತನ್ನು ಆಡುತ್ತಾನೆ. ರಾಣಿ ಇಷ್ಟಪಟ್ಟ ಮನುಷ್ಯ, ಅವನ ರಕ್ತದಷ್ಟೇ ನೀಚ (as ignoble as his blood) ಅವನ ರಕ್ತಕ್ಕೆ ತಕ್ಕುದಾಗಿ ನಡೆದುಕೊಂಡ ( True to his blood), 'Mean blood' (ಕ್ಷುದ್ರ ರಕ್ತ) ಎಂದೆಲ್ಲ ಗೊಂಡ ಮತ್ತಿತರ ಕೆಳಜಾತಿಯ ಕುರಿತು ಹಂಗಿಸುತ್ತಾನೆ. ಕೊನೆಗೆ ನಾಯಕನ ಆಕ್ರಮಣದಿಂದ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ರಾಣಿ ಪೋರ್ಚುಗೀಸರಿಗೆ ತನ್ನನ್ನು ಬಿಡಿಸಿದರೆ ತನ್ನ ರಾಜ್ಯವನ್ನು ಒಪ್ಪಿಸುತ್ತೇನೆ ಎಂದಳೆಂದು ಅಬದ್ದ ಬರೆಯುತ್ತಾನೆ. ಆತ ಒಬ್ಬ ಪ್ರವಾಸಿಯಾಗಿ ಬರೆದಿದ್ದರೆ ರಾಣಿ ತನ್ನ ನೌಕರನೊಬ್ಬನನ್ನು ಪ್ರೀತಿಸಿ, ಅವನ ವಂಚನೆಗೆ ಸಿಲುಕಿ ಸೋತಳು ಎಂದಷ್ಟೇ ಹೇಳಬೇಕಿತ್ತು. ಆದರೆ ಆತನಿಗಿದ್ದದ್ದು ಭಾರತೀಯರ ದೌರ್ಬಲ್ಯವನ್ನು ಎತ್ತಿ ತೋರಿಸುವ ವಿಕೃತ ಮನಸ್ಸು. ಯಾಕೆಂದರೆ ಅವನ ಅಂತರಾಳದಲ್ಲಿ ಭಾರತವೊಂದು ಅಪ್ರಬುದ್ಧ, ಅನಾಗರಿಕ ದೇಶವೆಂಬ ಭಾವ ಆಳವಾಗಿ ಬೇರೂರಿತ್ತು. ಹಾಗಾಗಿ ಆತನಿಗೆ ಇಲ್ಲಿಯ ಹೆಣ್ಣುಮಗಳೊಬ್ಬಳು ಐವತ್ತು ವರ್ಷಗಳಿಗೂ ಮಿಕ್ಕು ಆಡಳಿತ ನಡೆಸಿದ್ದನ್ನು, ಅವಳ ರಾಜ್ಯ ಇಟಲಿಗಿಂತ ಶ್ರೀಮಂತವಾಗಿದ್ದನ್ನು, ಅವಳು ಪೋರ್ಚುಗೀಸರಿಗಿಂತ ಬಲಾಡ್ಯಳೆಂಬುದನ್ನು ಸಹಿಸಿಕೊಳ್ಳಲಾಗಲಿಲ್ಲ. ಅದರಲ್ಲೂ ಶ್ವೇತವರ್ಣದ ರಾಣಿ ಎಲಿಜಬೆತ್ತಳ ಸಮಕಾಲೀನಳಾಗಿ ಅವಳಿಗಿಂತ ಸಮರ್ಥಳಾಗಿ, ಅವಳಿಗಿಂತ ದೀರ್ಘಕಾಲ ಕಪ್ಪುಬಣ್ಣದ ಪಾಗನ್ ಹೆಂಗಸೊಬ್ಬಳು ರಾಜ್ಯವಾಳಿದ್ದನ್ನು ಒಪ್ಪಿಕೊಳ್ಳಲಾಗಲಿಲ್ಲ.
ಇನ್ನು ಆತ ಇಕ್ಕೇರಿಗೆ ಬಂದು ಉಳಿದದ್ದು ಕೇವಲ ಹದಿನೆಂಟು ದಿನ. ಅಷ್ಟರಲ್ಲಿ ಅವನು ವೆಂಕಟಪ್ಪ ನಾಯಕನ ವಿವಾಹೇತರ ಸಂಬಂಧ, ಭದ್ರಮ್ಮನ ಅಸಹನೆ, ಚೆನ್ನಭೈರಾದೇವಿಯ ಅನೈತಿಕ ಸಂಬಂಧಗಳ ಕುರಿತೆಲ್ಲ ಅನಗತ್ಯವಾಗಿ ಬರೆಯುತ್ತಾನೆ. ಆತ ಬಂದದ್ದು ಚೆನ್ನಭೈರಾದೇವಿ ಸತ್ತು ಹದಿನೇಳು ವರ್ಷಗಳ ನಂತರ. ಸತ್ತುಹೋಗಿದ್ದ ರಾಣಿಯೊಬ್ಬಳ ಬದುಕಿನ ಮಾಹಿತಿಗಳು ಅವನಿಗೆ ಹೇಗೆ ಸಿಗಲು ಸಾಧ್ಯ? ಅದರ ಬಗ್ಗೆ ಅವನಿಗೆ ಯಾರು ಕತೆ ಹೇಳಿದ್ದಾರು? ಈಗಿನಂತೆ ಬರೆದಿಟ್ಟ ದಾಖಲೆಗಳಂತೂ ಇರುವ ಕಾಲವಲ್ಲ ಅದು. ಇನ್ನು ಯಾರೋ ಸಾಮಾನ್ಯ ಜನರು ಹೇಳಿದರೆನ್ನಲು ಅವನೊಂದಿಗೆ ಸಂಭಾಷಿಸಲು ಅವರಿಗೆ ಭಾಷೆಯ ಸಮಸ್ಯೆ. ಆತ ನಾಯಕನ ಅತಿಥಿಯೆಂಬ ಕಾರಣದಿಂದ ಮನಸ್ಸು ಬಿಚ್ಚಿ ಹೇಳಲು ಭಯ. ಅಗತ್ಯವಿಲ್ಲದಿದ್ದರೂ ಚೆನ್ನಭೈರಾದೇವಿಯ ಕುರಿತು ಅವನು ಉಲ್ಲೇಖಿಸಿದ್ದನ್ನು ಗಮನಿಸಿದರೆ ಆತ ತನ್ನ ಕಿವಿಗೆ ಬಿದ್ದ ವದಂತಿಯೊಂದನ್ನು ತನಗಿಷ್ಟ ಬಂದಂತೆ ರೋಚಕವಾಗಿ ಚಿತ್ರಿಸಿರಬೇಕು. ಇಂದು ನಮಗೆ ಕೆಳದಿಯ ಚರಿತ್ರೆಗೆ ಆಧಾರವಾಗಿರುವ ಕೆಳದಿ ನೃಪ ವಿಜಯದಲ್ಲಿ ಕೂಡ ಅವಳ ಕುರಿತು ಲಕ್ಷದೇಶದ ರಾಣಿಯೆಂದು ಸೊಕ್ಕಿನಿಂದ ಮೆರೆಯುತ್ತಿದ್ದಳು ಎಂದು ಹೇಳಲಾಗಿದೆಯೇ ಹೊರತು ಅವಳ ಅನೈತಿಕತೆಯ ಕುರಿತು ಒಂದು ಪದವೂ ಇಲ್ಲ. ಹಾಗಿದ್ದಾಗ ಆತನಿಗೆ ಅವಳ ಕುರಿತು ಹೇಳಿದವರಾರು? ಆತ ಮೊದಲೇ ಪ್ರೇಯಸಿಯ ವಂಚನೆಯಿಂದ ಹತಾಶನಾಗಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದವ. ಇನ್ನೊಂದು ಹೆಂಡತಿಯ ಪಾರ್ಥಿವ ಶರೀರವನ್ನು ಜೊತೆಯಲ್ಲಿಟ್ಟುಕೊಂಡು ಬಂದವ. ಆತನಿಗೆ ಅತ್ತ ರೋಮನ್ ಕ್ಯಾಥೋಲಿಕ್ ಧರ್ಮದ ಶ್ರೇಷ್ಠತೆಯ ವ್ಯಸನ, ಇತ್ತ ಪಾಗನ್ನರ ಮೇಲಿನ ಅಸಹನೆ. ಇಷ್ಟೆಲ್ಲದರ ನಡುವೆ ಹೆಂಡತಿಯ ಹೆಣದ ಜೊತೆ ಹಲವು ಪೂರ್ವಾಗ್ರಹಗಳ ಶವವನ್ನೂ ಹೊತ್ತು ತಂದಿದ್ದ ವಿಕ್ಷಿಪ್ತ ಮನಸ್ಸಿಗೆ ನೈತಿಕತೆಗಿಂತ ಅನೈತಿಕತೆಯೇ ಹಿತವೆನ್ನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
3: ಅನ್ಯರು ಆರಾಧಿಸುವ ವಿಗ್ರಹಕ್ಕೆ ಉಗುಳಿ ಮತಾಂಧತೆ ಮೆರೆದ ವಿಕೃತ ಮನಸ್ಸು :
ಡೆಲ್ಲವಲ್ಲೆ ಅದೆಷ್ಟು ವಿಕ್ಷಿಪ್ತ ಮನಃಸ್ಥಿತಿಯವನು ಮತ್ತು ಧರ್ಮಾಂಧನೆನ್ನಲು ರಾಣಿ ಅಬ್ಬಕ್ಕನ ಭೇಟಿಗೆಂದು ಹೋದಾಗ ಅವನು ತನ್ನ ದುಭಾಷಿಯನ್ನು ಪ್ರಚೋದಿಸಲು, ಅವನ ಸ್ವಧರ್ಮಾಭಿಮಾನವನ್ನು ಕೆಣಕಲು ಸ್ಥಳೀಯರು ಆರಾಧಿಸುತ್ತಿದ್ದ ಒಂದು ಭೂತದ ವಿಗ್ರಹದ ಮುಖಕ್ಕೆ ಉಗಿದು ಅದು ತನಗೇನೂ ಮಾಡಲಿಲ್ಲವೆಂದು ಜಂಭ ಕೊಚ್ಚಿಕೊಂಡದ್ದು ಕೂಡ ಒಂದು ಉದಾಹರಣೆ. ಆತ ವಿಗ್ರಹವನ್ನು ನೋಡಲು ಹೋಗುವ ಮುನ್ನ ತನ್ನ ಧರ್ಮದ ದೇವದೂತ ಜೀಸಸ್ ನನ್ನು ತನಗೇನೂ ತೊಂದರೆಯಾಗದಂತೆ ಪ್ರಾರ್ಥಿಸಿಕೊಂಡೆನೆಂದು ಹೇಳಿಕೊಳ್ಳುತ್ತಾನೆ. ಒಟ್ಟಿನಲ್ಲಿ ಆತನಿಗೆ ತನ್ನ ದುಭಾಷಿಗೆ ನಿಮ್ಮ ನಿಂಬಿಕೆ ವಿಶ್ವಾಸಗಳು ಅರ್ಥಹೀನ, ನಮ್ಮ ಧರ್ಮ ಮತ್ತು ನಂಬಿಕೆಗಳೇ ಶ್ರೇಷ್ಠ ಎಂದು ಹೇಳಬೇಕಿತ್ತು ಮತ್ತು ಆ ಮೂಲಕ ಭಾರತೀಯರ ಶ್ರದ್ಧೆ ಮತ್ತು ನಂಬಿಕೆಗಳನ್ನು ಅವಹೇಳನಗೈಯ್ಯಬೇಕಿತ್ತು. ತನ್ನ ಕೃತಿಯಲ್ಲಿ, ತಾನು ಭೂತದ ವಿಗ್ರಹದ ಮೇಲೆ ಉಗಿದೆನೆಂದು ಹೆಮ್ಮೆಯಿಂದ ಆತ ಹೇಳಿಕೊಂಡದ್ದು ಹೀಗೆ:
…..here and dedicated this Idol to Brimor,1 (which they say is the name of a great Devil, King of many thousands of Devils) who dwelt here. The same conjecture was after-wards confirm'd to me by others of the Country, all confessing that it was Buto,2 z:e., the Devil ; for so they term him in their Language. When I had seen all, and spit several times in the Idol's face, I came away and return'd home, upbraiding the Brachman with his Cowardice, and telling him that he might see whether my Religion were good or no ; since so powerful and fear'd a Devil could not hurt me when I went to his very house and did him such injuries. Where unto the Braclzman knew not what to answer…..
4 : ವಿಕ್ಷಿಪ್ತ ಮನಃಸ್ಥಿತಿಯ ಪೀಟ್ರೋ ಡೆಲ್ಲಾವಲ್ಲೆ ವರ್ಣಿಸಿದ ರಾಣಿ ಅಬ್ಬಕ್ಕ :
" Her Complexion was as black as that of a natural Ethiopian ; she was corpulent and gross, but not heavy, for she seem'd to walk nimbly enough ; her Age may be about forty years, although the Portugals had describ'd her to me as much older. She was cloth'd, or rather girded at the waist, with a plain piece of thick white Cotton, and bare-foot, …..From the waist upwards the Queen was naked, saving that she had a cloth ty'd round about her Head, and hanging a little down upon her Breast and Shoulders. In brief, her aspect and habit represented rather a dirty Kitchen-wench, or Laundress, than a delicate and noble Queen "
' ….ಎದೆಯವರೆಗೂ ಇಳಿಬಿಟ್ಟ ತಲೆಗೆ ಸುತ್ತಿದ ವಸ್ತ್ರ ಬಿಟ್ಟರೆ ರಾಣಿ ಅಬ್ಬಕ್ಕ ಸೊಂಟದ ಮೇಲ್ಭಾಗ ಬೆತ್ತಲಾಗಿದ್ದಳಂತೆ! ಅವಳ ಬಣ್ಣ ಇತಿಯೋಪಿಯಾ ದೇಶದವರಷ್ಟು ಕಪ್ಪಗಿತ್ತಂತೆ! ಚುರುಕು ನಡೆಯಿದ್ದರೂ ಅವಳು ದಡೂತಿ ಮತ್ತು ಅಸಹ್ಯಕರವಾಗಿದ್ದಳಂತೆ …...ಒಟ್ಟಿನಲ್ಲಿ ಅವಳು ಸುಸಂಸ್ಕೃತಳಾಗಿ ಕಾಣುವ ಬದಲಿಗೆ ಕೊಳಕು ಅಡುಗೆಯವಳಂತೆ ಅಥವಾ ಅಗಸಗಿತ್ತಿಯಂತೆ ಕಾಣುತ್ತಿದ್ದಳಂತೆ…'
ಡೆಲ್ಲಾವಿಲ್ಲೆ ನಮ್ಮವರ ಕುರಿತು ಹೀಗೆಲ್ಲ ಬರೆಯಲು ಮುಖ್ಯ ಕಾರಣವೆಂದರೆ, ವಿದೇಶದಿಂದ ಬರುತ್ತಿದ್ದ ಅವನಂತಹ ಪ್ರವಾಸಿಗಳಿಗೆ ಇಲ್ಲಿನ ಸಂಗತಿಗಳನ್ನು ಆದಷ್ಟು ರೋಚಕವಾಗಿ ಬರೆದು, ತಮ್ಮ ಕೃತಿಯನ್ನು ಯುರೋಪಿನಲ್ಲಿ ಪ್ರಸಿದ್ದವಾಗಿಸಿ ತಮ್ಮ ಹೆಸರನ್ನು ಅಕ್ಷರಲೋಕದಲ್ಲಿ ಚಿರಸ್ಥಾಯಿಗೊಳಿಸಿಕೊಳ್ಳುವ ಚಾಪಲ್ಯ. ಹಾಗಾಗಿ ಅವರಿಗೆ ರಕ್ತಸಿಕ್ತ ರಾಕ್ಷಸಿ ಹೋರಾಟಗಳಲ್ಲಿ ಮತ್ತು ಲಂಪಟ ಕಥನಗಳಲ್ಲಿ ಆಸಕ್ತಿ. ತಾವು ಕಂಡ ವ್ಯಕ್ತಿ ಅಥವಾ ಘಟನೆಗಳನ್ನು ಸಹಜವಾಗಿ ಚಿತ್ರಿಸುವುದಕ್ಕಿಂತ ವಿಕೃತವಾಗಿ ವರ್ಣಿಸುವುದರಲ್ಲೇ ಆಸಕ್ತಿ. ಋಜುತ್ವಕ್ಕಿಂತ ಪಾಶವೀ ಕೃತ್ಯಗಳು, ಅನ್ಯಾಯ, ಅಧರ್ಮ, ಅಪಸವ್ಯ, ಅನಿಷ್ಟಗಳು ಅವರಿಗೆ ಇಷ್ಟ. ಅವರ ಕೃತಿಗಳಲ್ಲಿ ಸತ್ಯಕ್ಕಿಂತ ಸುಳ್ಳು ಕಥನಗಳಿಗೇ ಪ್ರಾಶಸ್ತ್ಯ.
Comments
Post a Comment