ಮಲೆನಾಡು ಗಿಡ್ದ ತಳಿ ಪಶ್ಚಿಮ ಘಟ್ಟದ ಗೋತಳಿ, ದಿನನಿತ್ಯ ಕಾಡಂಚಿನಲ್ಲಿ ಮೇಯ್ದು ಸಂಜೆ ಕೊಟ್ಟಿಗೆ ಸೇರಿ ಅದರ ಗಾತ್ರಕ್ಕೆ ತಕ್ಕಂತೆ ಕೊಂಚ ಹಾಲು ನೀಡುತ್ತದೆ ಹಾಗಾಗಿ ಇವತ್ತಿನ ಹತ್ತಾರು ಲೀಟರ್ ಹಾಲು ನೀಡುವ ಸುದಾರಿತ ತಳಿಯಿಂದ ಮಲೆನಾಡು ಗಿಡ್ಡ ಮಲೆನಾಡಿನ ಕೊಟ್ಟಿಗೆಗಳಲ್ಲಿಯೇ ಕಾಣುವುದಿಲ್ಲ.
ಇಂತಹ ಅಲ್ಪ ಪ್ರಮಾಣದ ಹಾಲು ಒಂದು ರೀತಿ ಸಾವಯವ ಹಾಲು ಕೂಡ ಯಾಕೆಂದರೆ ಮಲೆನಾಡು ಗಿಡ್ದಕ್ಕೆ ಪಶು ಆಹಾರ, ಹಾರ್ಮೋನ್ ಚುಚ್ಚುಮದ್ದು ಯಾರೂ ಹಾಕುವುದಿಲ್ಲ.
ಈ ದನಗಳ ಹಾಲು ಕರೆಯುವುದು ಕೂಡ ಸ್ವಲ್ಪ ಕಷ್ಟ ಸಾಧ್ಯ ಹಾಗಾಗಿ ಇದರ ಹಾಲು ಹೆಪ್ಪು ಹಾಕಿ ಮೊಸರು ಮಾಡಿ ಕಡೆದು ಬೆಣ್ಣೆ ತೆಗೆದು ತುಪ್ಪ ಮಾಡುವ ಆದುನಿಕ ಗೃಹಣಿಯರ ಸಂಖ್ಯೆ ಕೂಡ ಕಡಿಮೆ ಹಾಗಾಗಿ ಮಾರುಕಟ್ಟೆಯಲ್ಲಿ ಎಮ್ಮೆ, ಸುದಾರಿತ ತಳಿಯ ಬೆಣ್ಣೆ ತುಪ್ಪ ಸುಲಭದಲ್ಲಿ ಸಿಕ್ಕ ಹಾಗೆ ಮಲೆನಾಡು ಗಿಡ್ಡದ ಬೆಣ್ಣೆ ತುಪ್ಪ ಮಾತ್ರ ಸಿಗುವುದಿಲ್ಲ.
ಮಲೆನಾಡು ಗಿಡ್ಡ ದನದ ಗಿಣ್ಣಿನ ಹಾಲಿನ ಗಿಣ್ಣ ತಿನ್ನಿಸಿದ ಗೆಳೆಯರಾದ ಶಿವರಾಂ ಪಾಟೀಲರು ಮಲೆನಾಡು ಗಿಡ್ಡದ ತುಪ್ಪ ತಂದುಕೊಟ್ಟಿದ್ದಾರೆ, ಅದನ್ನು ಬಿಸಿ ಮಾಡಿದಾಗ ಇಡೀ ಮನೆ ತುಂಬ ನಿಜ ತುಪ್ಪದ ಸುವಾಸನೆ, ತಣ್ಣಗಾದಂತೆ ಹರಳು ಹರಳು ಆದ ಪ್ರಪಂಚದಲ್ಲೇ ಅತ್ಯಂತ ರುಚಿಕರ ತುಪ್ಪ, ಸಾವಯವ ತುಪ್ಪ ಅನೇಕ ವರ್ಷದ ನಂತರ ಸವಿಯುವ ಅವಕಾಶ ಮಾಡಿದರು.
ಸೋಷಿಯಲ್ ಮೀಡಿಯಾದಲ್ಲಿ ಮಲೆನಾಡು ಗಿಡ್ಡದ ತುಪ್ಪ ಅಂತ ಅನೇಕರಿಂದ ತರಿಸಿ ಪೂಜಾ ದೀಪಕ್ಕೆ ಬಳಸುವಂತೆ ಅನೇಕ ಆತ್ಮನಿಬ೯ರ ಮಹಿಳಾ ಮಣಿಗಳಿಂದ ಮೋಸ ಹೋಗಿದ್ದು ಇನ್ನೊಂದು ಕಥೆ.
ಸುಮಾರು 250 ಗ್ರಾಂ ತುಪ್ಪ ನೀಡಿದ ಶಿವರಾಂ ಪಾಟೀಲರು ಯಾವ ಕಾರಣಕ್ಕೂ ಹಣ ಪಡೆಯಲು ಒಪ್ಪಲಿಲ್ಲ ನಂತರ ಈ ತುಪ್ಪಕ್ಕೆ ಇರುವ ಬೆಲೆ ಇತ್ಯಾದಿ ವಿವರಿಸಿದರೂ ಹೂಂ ಅನ್ನಲಿಲ್ಲ ನಂತರ ಶುದ್ಧ ತುಪ್ಪ ದಯಪಾಲಿಸಿದ ಮಲೆನಾಡ ಗಿಡ್ಡ ಮಾತೆಗೆ ಹಿಂಡಿ ತಂದು ಹಾಕಿ ಅಂತ ಅವರ ಜೇಬಿಗೆ 500 ರೂಪಾಯಿ ಒತ್ತಾಯದಿಂದ ಹಾಕಿದೆ.
ಮಲೆನಾಡು ಗಿಡ್ದ ದನದ ಶುದ್ಧ ತುಪ್ಪಕ್ಕೆ ಇವತ್ತು ಕೆಜಿಗೆ 2000 ನೀಡಿದರೂ ಸಿಗುವ ಸಾಧ್ಯತೆ ತುಂಬಾ ಕಡಿಮೆಯೆ.
Comments
Post a Comment