ಶಿವಮೊಗ್ಗ ಗ್ರಾಮಾಂತರ ವಿದಾನ ಸಭಾ ಮಾಜಿ ಶಾಸಕಿ, ಗೆಳೆಯ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಸಹ ಸದಸ್ಯರಾಗಿದ್ದ ದಿವಗಂತ ಪೂರ್ಯಾ ನಾಯಕರ ಪತ್ನಿ, ಸಹೋದರಿ ಶ್ರೀ ಮತಿ ಶಾರದಾ ಪೂಯಾ೯ ನಾಯಕರು ನನ್ನ ಮನೆಗೆ ಬಂದಾಗ.
ಬೆಂಕಿ ಚಂಡಿನಂತ ಗೆಳೆಯ ದಿವ೦ಗತ ಪೂರ್ಯನಾಯಕರ ಪತ್ನಿ ಶಿವಮೊಗ್ಗ ಗ್ರಾಮಾಂತರದ ಮಾಜಿ ಶಾಸಕಿ ಸಹೋದರಿ ಶ್ರೀಮತಿ ಶಾರದಾ ಪೂರ್ಯ ನಾಯಕರು ಮಗನ ವಿವಾಹ ಆಹ್ವಾನ ನೀಡಲು ಬಂದಿದ್ದರು.
1995-2000 ದ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ನಾವೆಲ್ಲ ಜಿಲ್ಲಾ ಪಂಚಾಯತ್ ಸದಸ್ಯರು ಕೆಲವೊಂದು ಆಡಳಿತಾತ್ಮಕ ವಿಚಾರಗಳನ್ನು ಚಚಿ೯ಸಲು ಪೂಯಾ೯ ನಾಯಕರ ಮನೆಗೆ ಹೋಗುತ್ತಿದ್ದೆವು ಅಲ್ಲಿ ಶ್ರೀಮತಿ ಶಾರದಮ್ಮ ನಮಗೆಲ್ಲ ಕಾಫಿ ಟೀ ತಯಾರಿಸಿ ತಂದು ಕೊಡುತ್ತಿದ್ದರು.
ದೆಹಲಿಯಲ್ಲಿ ಕಾಯ೯ ನಿಮಿತ್ತ ಹೋಗಿದ್ದ ನಾಯಕರು ಇಹಲೋಕ ತ್ಯಜಿಸಿದ್ದು ದೊಡ್ಡ ದುರಂತ, ಅವರ ಕಳೇಬರ ರಾಜ್ಯ ಸಕಾ೯ರ ದೆಹಲಿಯಿಂದ ತರಿಸಿ ಕೊಡುವ ದೊಡ್ಡ ತನ ತೋರಿದವರು ಆಗಿನ ಮುಖ್ಯಮಂತ್ರಿ ಜೆ.ಹೆಚ್.ಪಾಟೀಲರು.
ಅವತ್ತು ಅಂಜನಾಪುರದಲ್ಲಿ ಪೂಯ೯ ನಾಯಕರ ಅಂತ್ಯ ಸಂಸ್ಕಾರಕ್ಕೆ ಸೇರಿದ್ದ ಜನ ಸ್ತೋಮ 20 ಸಾವಿರಕ್ಕೂ ಹೆಚ್ಚು.
ಸರಣಿ ಶಾಲೆಗಳು, ಪೆಟ್ರೋಲ್ ಪಂಪ್, ಕ್ರಷರ್ ಮುಂತಾದ ಪತಿಯ ಉದ್ಯಮಗಳನ್ನ ಶಾರದಮ್ಮ ಪತಿಯ ಅನುಪ ಸ್ಥಿತಿಯಲ್ಲಿ ಮುಂದುವರಿಸಿ, ರಾಜಕಾರಣದಲ್ಲಿ ಜಾತ್ಯಾತೀತ ಜನತಾದಳದಲ್ಲಿ ಶಾಸಕಿಯಾಗಿ ಸಾದನೆ ಮಾಡಿದವರು.
ಇಬ್ಬರು ಗಂಡು ಮಕ್ಕಳು ಅದರಲ್ಲಿ ದೊಡ್ಡ ಮಗನ ಮದುವೆ ಇದೇ ಪೆಬ್ರುವರಿ ತಿಂಗಳ 15 ಸೋಮವಾರ ಶಿವಮೊಗ್ಗದ ಲಗಾನ್ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಿದ್ದಾರೆ.
ಮಗನ ವಿವಾಹ ಆಹ್ವಾನ ಪತ್ರಿಕೆ ಕೊಡಲು ಮನೆಗೆ ಬಂದಿದ್ದರು, ಪೂಯಾ೯ ನಾಯಕರಿದ್ದಾಗ ಅವರ ಮನೆಯಲ್ಲಿ ಕಾಫಿ ಕುಡಿದ ನೆನಪು ಮಾಡಿ ಬಂದವರಿಗೆಲ್ಲ ಕಾಫಿ ನೀಡಿದೆ ಅವರು ನನ್ನ ಮನೆಗೆ ಬಂದ ನೆನಪಿಗಾಗಿ "ರಾಮಕಥಾ ಮಂಜರಿ" ಪುಸ್ತಕ ನೀಡಿದೆ.
ನಾನು ಕಳಿಸಿದ್ದ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿರುವುದಾಗಿ ತಿಳಿಸಿದರು.
ಮುಂದಿನ ದಿನದಲ್ಲಿಯೂ ಜಾತ್ಯಾತೀತ ಜನತಾ ದಳದಲ್ಲೇ ಮುಂದುವರಿಯುವುದಾಗಿ ತಿಳಿಸಿದರು, ಮುಂದಿನ ಚುನಾವಣೆಯಲ್ಲಿ ಆಯ್ಕೆ ಆಗಿ ರಾಜ್ಯದ ಮಂತ್ರಿಗಳಾಗಿ ಎಂದು ಹಾರೈಸಿದೆ.
Comments
Post a Comment