ಪ್ರಸಿದ್ದ ಲೇಖಕ, ಸಂಶೋದಕ ಮತ್ತು ಕಾದಂಬರಿಕಾರ ಅಂಬ್ರಯ್ಯ ಮಠ ಬಿದನೂರು ನಗರದಲ್ಲಿ ವಿಶ್ರಾಂತ ಜೀವನ ಮಾಡುತ್ತಿದ್ದಾರೆ ಅವರು ಬರೆದ ಕೆಳದಿ ಕುಲ ತಿಲಕ ಹಿರಿಯ ವೆಂಕಟಪ್ಪ ನಾಯಕ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ.
#ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ
ಕೆಳದಿ ರಾಜರಲ್ಲಿ ದೀಘ೯ ಕಾಲದ ಆಡಳಿತ ಮಾಡಿದವರು, ಹೆಚ್ಚು ರಾಜ್ಯ ವಿಸ್ತಾರ ಮಾಡಿದವರು, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರನ್ನ ಉದ್ದೇಶ ಪೂವ೯ಕವಾಗಿ ಕಾಣದ ಕೈಗಳು ಬದಿಗೆ ಸರಿಸಲು ಅನೇಕ ಕಾರಣ ಇದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ 2012 ರಲ್ಲಿ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ, ಈ ಪುಸ್ತಕ ಮೂರು ತಿಂಗಳಿಂದ ಅನೇಕ ಬಾರಿ ಕೆಲ ಅಧ್ಯಾಯಗಳನ್ನು ಓದಿ ನನಗೆ ಬೇಕಾಗಿದ್ದ ಅನೇಕ ಮಾಹಿತಿ ಮನನ ಮಾಡಿಕೊಂಡೆ.
ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ ಮತ್ತು ಕೆಳದಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳುವವರು ಓದಲೇ ಬೇಕು.
ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಎಂದರೆ ಅಥ೯ವಾದೀತು ರಾಜ ಮನೆತನದ ಹುನ್ನಾರ, ಅಂತರ್ ಜಾತಿ ಪ್ರೇಮ ವಿವಾಹ ಇದಕ್ಕೆ ಕಾರಣವೇ? ದುರಂತ ನಾಯಕಿ ಚಂಪಕಾರಾಣಿಯಿಂದ ಹೀಗಾಯಿತೆ? ಎಂಬ ಬಗ್ಗೆ ಮುಂದಿನ ದಿನದಲ್ಲಿ ಸಂಶೋದನೆ ಆಗಬೇಕು.
ಮುಂದಿನ ದಿನದಲ್ಲಿ ಇತಿಹಾಸ ಸಂಶೋದಕರು, ಶಾಲಾ ಕಾಲೇಜುಗಳಲ್ಲಿ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ವಿಷಯ ತಿಳಿಸಲು ಈ ಪುಸ್ತಕ ಪ್ರೇರಣೆ ಆಗಬೇಕು.
ಇಟಲಿಯ ಪ್ರವಾಸಿ ಡಲ್ಲೊ ವಿಲ್ಲಾ ಇಕ್ಕೇರಿಯಲ್ಲಿ ವೆಂಕಟಪ್ಪ ನಾಯಕರ ಬೇಟಿ ಮಾಡಿದ ಬಗ್ಗೆ ಬರೆದ ದಾಖಲೆ ಈ ಪುಸ್ತಕದಲ್ಲಿದೆ, ರಾಣಿ ಅಬ್ಬಕ್ಕ, ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ, ಬಿದನೂರಿನ ರಾಣಿ ಅಮ್ಮಿದೇವಮ್ಮ ವೆಂಕಟಪ್ಪ ನಾಯಕರಿಂದ ಸಹಾಯ ಕೇಳಿ ರಾಜ್ಯ ಕಳೆದುಕೊಂಡ ಕಥೆ ಅವರೇ ಪಾತ್ರಗಳಾಗಿ ಈ ಕಾದಂಬರಿಯಲ್ಲಿ ಅಂಬ್ರಯ್ಯ ಮಠರು ಸ್ವಾರಸ್ಯವಾಗಿ ಹೇಳಿಸಿದ್ದಾರೆ.
ಅದೇ ರೀತಿ ಪಟ್ಟದ ರಾಣಿ ಭದ್ರಮ್ಮಾಜಿ, ಚಂಪಕಾ ಮತ್ತು ಶಿವಪ್ಪ ನಾಯಕರಿಂದಲೂ ಇತಿಹಾಸ ನಮಗೆ ಮನನ ಮಾಡುವಂತೆ ಬರೆದಿದ್ದಾರೆ.
ಅನೇಕ ಬರಹ ಕಾದಂಬರಿಗಳನ್ನು ಬರೆದ ಅಂಬ್ರಯ್ಯ ಮಠರು ತಮ್ಮ ಸಂಶೋದನೆಗಾಗಿಯೇ ಕೆಳದಿ ರಾಜರ ಹಾಲಿ ಪಳಯುಳಿಕೆ ಆಗಿರುವ ರಾಜದಾನಿ ಬಿದನೂರು ನಗರದಲ್ಲಿ ನೆಲೆಸಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ಪುಸ್ತಕಕ್ಕಾಗಿ 94812 54412 ಅಂಬ್ರಯ್ಯ ಮಠರ ವಾಟ್ಸ್ ಪ್ ನಂಬರ್ ಗೆ ಸಂಪಕಿ೯ಸಬಹುದು
Comments
Post a Comment