ಕಲ್ಲು ಹೂವು ಕನ್ನಡದಲ್ಲಿ, ಪತ್ತರ್ ಕಾ ಪೂಲ್ ಹಿಂದಿಯಲ್ಲಿ ಮತ್ತು ಇಂಗ್ಲೀಷ್ ನಲ್ಲಿ Block stone flower ಎನ್ನುವ ಈ ಶಿಲೀಂದ್ರ ಅಥವ ಪಂಗಸ್ ಅಥವ ಹಸಿರು ಪಾಚಿ ಮಾಲಿನ್ಯ ರಹಿತ ಪ್ರದೇಶದಲ್ಲಿ ಬಂಡೆ ಕಲ್ಲಿನಲ್ಲಿ ಅರಳುತ್ತದೆ.
ಇದನ್ನು ಹೂವಾದಾಗ ಸಂಗ್ರಹಿಸಿ ಒಣಗಿಸಿ ಮಾರಾಟ ಮಾಡುವ ಶ್ರಮದ ಕೆಲಸ ಇದೆ ಯಾಕೆಂದರೆ ಗುಡ್ಡಗಾಡಿನಲ್ಲಿ ಮಾತ್ರ ಸಿಗುವ ಇದನ್ನು ಸುಲಭವಾಗಿ ಸಂಗ್ರಹಿಸಲು ಸಾಧ್ಯವಿಲ್ಲ.
ಪಶ್ಚಿಮ ಘಟ್ಟದ ಕಳಸ ಭಾಗದಲ್ಲಿ ಇದನ್ನು ಸಂಗ್ರಹಿಸಿ ಮಾರುವವರನ್ನ 20 ವರ್ಷದ ಹಿಂದೆ ನೋಡಿದ್ದೆ, ನಮ್ಮ ದೇಶದ ಮೊದಲ ಕಲ್ಲು ಹೂವಿನ ಗಾಡ೯ನ್ ಉತ್ತರ ಕಾಂಡದ ಕಮೌನ್ ಪ್ರಾಂತ್ಯದ ಮೂನ್ಷಿಯಾರ್ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಂರಕ್ಷಿಸಿದೆ.
ಇದು ಯುರೋಪು, ಉತ್ತರ ಅಮೇರಿಕಾ ಮತ್ತು ಸೈಬೀರಿಯದಲ್ಲಿ ಮುಖ್ಯ ಆಹಾರ ಆಗಿ ಬಳಸುತ್ತಿದ್ದ ದಾಖಖೆ ಇದೆ.
ಔಷದ, ಆಹಾರ, ಸುಗಂದ ದ್ರವ್ಯ ಮತ್ತು ನೈಸಗಿ೯ಕ ಬಣ್ಣ ತಯಾರಿಯಲ್ಲು ಇದರ ಬಳಕೆ ಇದೆ.
ಇದನ್ನು ಬಹು ಮುಖ್ಯವಾಗಿ ಹೈದ್ರಾಬಾದ್ ಬಿರಿಯಾನಿ ಮತ್ತು ತಮಿಳುನಾಡಿನ ಚೆಟ್ಟಿ ನಾಡು ಮಾಂಸಹಾರಿ ಅಡುಗೆಯಲ್ಲಿ ಬಳಸುತ್ತಾರೆ.
ಮರದ ತೊಗಟೆ ವಾಸನೆ ಇರುವ ಇದು ಬಿರಿಯಾನಿಗೆ ಬಳಸಿದರೆ ಬಿರಿಯಾನಿ ರುಚಿಯೇ ಬೇರೆ, ವೆಜ್ ಬಿರಿಯಾನಿ ಮತ್ತು ವೆಜ್ ಪ್ರೆಯ್ಡ್ ರೈಸ್ ಕೂಡ ಅದ್ವಿತಿಯ ರುಚಿ ಆಗುತ್ತೆ.
ನಮ್ಮ #ಚಂಪಕಾ_ಪ್ಯಾರಾಡೈಸ್ ನಲ್ಲಿ ಮಡಕೆಯಲ್ಲಿ ಮಾಡುವ ಮಡಕಾ ಮಟನ್ ದಂ ಬಿರಿಯಾನಿಯಲ್ಲಿ ಅನೇಕ ಈ ರೀತಿಯ ಮಸಾಲೆಯಲ್ಲಿ ಕಲ್ಲುಹೂವು ಸೇರಿದೆ, ನೂರು ಗ್ರಾಂಗೆ ನೂರರಿಂದ 200 ರೂ ತನಕ ಇದೆ ಅಂದರೆ ಕೇಜಿಗೆ ಒ0ದು ಸಾವಿರದಿಂದ 2000 ತನಕ.
Comments
Post a Comment