ದೇಶಿ ವಂಶಪಾರಂಪಯ೯ ಕುಂಬಾರಿಕೆಗೆ ಹೊಸ ತನ ನೀಡಿ ಯಶಸ್ವಿ ಆದ ಗುಜರಾತಿನ ಮಿಟ್ಟಿ ಕೂಲ್ ಸಂಸ್ಥೆ ಸ್ಥಾಪಕ ಮನ್ ಸುಕ್ ಬಾಯ್ ಪ್ರಜಾಪತಿ ಸಂಸ್ಥೆಯ ಮಣ್ಣಿನ ನೀರಿನ ಬಾಟಲ್ ನ ನಿಜ ಕಥೆ
#ಬೇಸಿಗೆಯಲ್ಲಿ_ತಣ್ಣನೆ_ನೀರು_ಕುಡಿಯಲು_ಗುಜರಾತಿನ_ಮಿಟ್ಟೀ_ಕೂಲ್_ಮಣ್ಣಿನ_ಬಾಟಲ್.
ಬೆಂಗಳೂರಿನ ಆರುಣ್ ಕುಮಾರ್ ಮತ್ತು ಶಶಿಕುಮಾರ್ ಸಹೋದರರು "ಶ್ರೀ ದಾತ್ರಿ" ಎಂಬ ಬ್ರಾಂಡ್ ನಲ್ಲಿ ಮರದ ಗಾಣದಲ್ಲಿ ಎಣ್ಣೆ ತೆಗೆದು ಮಾರುತ್ತಾರೆ, ಈಗ ಕೆಲ ತಿಂಗಳಿಂದ ಅವರಿಂದ ಖರೀದಿಸುತ್ತೇನೆ, ಇವತ್ತು ನಾಲ್ಕು ಲೀಟರ್ ಎಣ್ಣೆ ಪಾಸ೯ಲ್ ಜೊತೆ ಅತ್ಯುತ್ತಮವಾಗಿ ಪ್ಯಾಕ್ ಮಾಡಿದ ಮಣ್ಣಿನ ಸುಂದರ ಬಾಟಲ್ ಕೂಡ ಕಳಿಸಿದ್ದಾರೆ.
ಇದು ನನಗಾಗಿ ಸಣ್ಣ ಗಿಫ್ಟ್ ಅಂದಿದ್ದಾರೆ, ಇದು ಅಮೇಜಾನ್ ನಲ್ಲಿ ರೂ 550 ಇದೆ, ಇದನ್ನು ಇವರು ಕನಾ೯ಟಕದಲ್ಲಿ 300 ರೂಪಾಯಿಗೆ (ಕೋರಿಯರ್ ಪ್ರತ್ಯೇಕ) ಕಳಿಸುತ್ತಾರಂತೆ.
ಈ ಬಾಟಲ್ ನ ಹಿಂದಿನ ಕಥೆ ಈಗ ಜಗತ್ ಪ್ರಸಿದ್ಧ, ಮಿಟ್ಟೀ ಕೂಲ್ ಅಂದರೆ ಪ್ರಪಂಚದಾದ್ಯಂತ ಪ್ರಖ್ಯಾತಿಗಳಿಸಿದೆ, ವಿದ್ಯುತ್ ಇಲ್ಲದ ಮಣ್ಣಿನ ರೆಪ್ರಿಜರೇಟರ್ ವಿಶ್ವ ಮಾನ್ಯತೆ ಪಡೆದಿದೆ, ಇಲ್ಲಿ ಅಡುಗೆ ಮನೆಯ ಎಲ್ಲಾ ರೀತಿಯ ಅವಶ್ಯಕ ಪಾತ್ರೆ ನವೀನ ರೀತಿಯಲ್ಲಿ ಆಕಷ೯ಕವಾಗಿ ತಯಾರಿಸಿ ಮಾರಾಟ ಮಾಡುತ್ತಾರೆ.
ಇದನ್ನೆಲ್ಲ ಕಂಡು ಹಿಡಿದು ತಯಾರಿಸಿ ಮಾರಾಟ ಮಾಡುವವರು ಕುಂಬಾರಿಕೆ ವೃತ್ತಿ ಜೀವನದ ಕುಟುಂಬದಿಂದ ಬಂದ ಶ್ರೀ ಮನಸುಖ್ ಬಾಯಿ ರಾಘವಜೀ ಬಾಯಿ ಪ್ರಜಾಪತಿ.
ಬಡ ಕುಂಬಾರ ಕುಟುಂಬ ಡ್ಯಾಂ ನಿಮಾ೯ಣದಿಂದ ಮನೆ ಮಠ ಕಳೆದುಕೊಂಡು ಹೊಟ್ಟೆ ಪಾಡಿಗೆ ಗುಜರಾತಿನ ಮೊಬಿ೯ಗೆ ಬರುತ್ತದೆ ಅಲ್ಲಿ 10ನೇ ತರಗತಿಯಲ್ಲಿ ಪ್ರಜಾಪತಿ ಅನುತ್ತೀಣ೯ನಾಗಿ ಖಾಸಾಗಿ ಕೆಲಸಕ್ಕೆ ಸೇರುತ್ತಾರೆ, 2001 ರ ಬುಜ್ ಭೂಕಂಪದ ನಂತರ ಇವರು ಕಂಡು ಹಿಡಿದ ವಿದ್ಯುತ್ ಇಲ್ಲದ ಮಣ್ಣಿನ ರೆಪ್ರಿಜರೇಟರ್ ಮಾರುಕಟ್ಟೆಯಲ್ಲಿ ಮ್ಯಾಜಿಕ್ ಮಾಡುತ್ತದೆ ನಂತರ ಕುಕರ್, ನೀರಿನ ಬಾಟಲಿ, ತವಾ ಎಲ್ಲಾ ಮಣ್ಣಿನಲ್ಲಿ ಸುಂದರವಾಗಿ ತಯಾರಾಗಿ ಮಾರುಕಟ್ಟೆಗೆ ಬಂತು, ಎಲ್ಲವೂ ಅವರ ಹೆಸರಲ್ಲಿ ಪೇಟೆಂಟ್ ಆಗಿದೆ.
ಬಡ ಕುಂಬಾರನ ಮಗ ವಂಶಪಾರಂಪರ್ಯ ಉದ್ಯೋಗ ನಶಿಸುವ ಕಾಲದಲ್ಲಿ ಅದಕ್ಕೂಂದು ಹೊಸ ರೂಪ ನೀಡಿ ಯಶಸ್ವಿಯಾಗಿ ಹೆಸರು, ಹಣ, ಖ್ಯಾತಿ ಮತ್ತು ಪ್ರಶಸ್ತಿಗಳನ್ನು ಪಡೆದ ಈ ಕಥೆ ಎಲ್ಲರಿಗೂ ಪ್ರೇರಣೆ ನೀಡುವಂತದ್ದೇ.
ಉಡುಗೊರೆ ಆಗಿ ನೀಡಿದ ಬೆಂಗಳೂರಿನ ಅರುಣ್ ಕುಮಾರ್ ಮತ್ತು ಶಶಿಕುಮಾರ್ ಗೆ ಧನ್ಯವಾದ ಅಪಿ೯ಸಿ ನಾಲ್ಕು ಮಿಟ್ಟೀ ಕೂಲ್ ಬಾಟಲ್ ಗೆ ಆಡ೯ರ್ ನೀಡಿದೆ.
ಮುಂದಿನ ದಿನದಲ್ಲಿ ಆರೋಗ್ಯಕ್ಕೆ ಸಹಾಯ ಮಾಡುವ ಮಣ್ಣಿನ ಹೆಚ್ಚಿನ ಪಾತ್ರೆ ಖರೀದಿಸುವ ಯೋಚನೆ ಇದೆ.
ಬೇಕಾದವರು ಇವರ ಸೆಲ್ ನಂಬರ್ ಗೆ ವಾಟ್ಸಪ್ ಮಾಡಬಹುದು 9743107454
Comments
Post a Comment