ಭಾಗ -38, ಆನಂದಪುರಂ ಇತಿಹಾಸ, ಶಿವಮೊಗ್ಗ ಜಿಲ್ಲೆಯ ರಕ್ತಸಿಕ್ತ ಈಸೂರು ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷ್ ಸರ್ಕಾರದ ಕಣ್ಣು ತಪ್ಪಿಸಿ ಭೂಗತರಾಗಲು ಬದರಿನಾರಾಯಣ ಅಯ್ಯ೦ಗಾರರ ಶಿಪಾರಸ್ಸಿನಂತೆ ಸಹಾಯ ಮಾಡಿದ ಆನಂದಪುರಂ ಸ್ವಾತಂತ್ರ್ಯ ಹೋರಾಟಗಾರ ಎ.ರಾಮರಾವ್
#ಆನಂದಪುರಂ_ಇತಿಹಾಸ.
#ಸ್ವಾತಂತ್ರ_ಹೋರಾಟದಲ್ಲಿ_ಆನಂದಪುರಂ
#ಬದರಿನಾರಾಯಣ್_ಅಯ್ಯ೦ಗಾರರ_ಶಿಪಾರಸ್ಸಿನಂತೆ_ರಾಮರಾವ್_ಈಸೂರು_ಹೋರಾಟಗಾರರಿಗೆ_ಸಹಾಯ_ಮಾಡುತ್ತಾರೆ.
#ಸ್ವಲ್ಪ_ರಹಸ್ಯ_ಸೋರಿದ್ದರೂ_ರಾಮರಾವ್_ನೇಣಿಗೆ_ಕೊರಳು_ಕೊಡಬೇಕಾಗಿದ್ದ_ಸಂದರ್ಭ
#ಇತಿಹಾಸದಲ್ಲಿ_ದಾಖಲಾಗದ_ರಹಸ್ಯ_ಕಾರ್ಯಾಚರಣೆ_ಈಸೂರು_ಸ್ವಾತಂತ್ರ_ಹೋರಾಟದಲ್ಲಿ
ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಚಳವಳಿ) 1942 ರಲ್ಲಿ ತೀವ್ರವಾಗಿ ಆಗಸ್ಟ್ 9-1942 ರಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟದ ನೇತಾರರೆಲ್ಲ ಜೈಲು ಸೇರಿದ್ದರು ಆಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಈಸೂರಿನಲ್ಲಿ ಸಾಹುಕಾರ್ ಬಸವಣ್ಯಪ್ಪರ ಮುಂದಾಳತ್ವದಲ್ಲಿ ಪ್ರತಿನಿತ್ಯ ಪ್ರಭಾತ್ ಪೇರಿ ನಡೆಯುತ್ತಿರುತ್ತದೆ.
ಇದು ಬ್ರಿಟೀಶ್ ಸರ್ಕಾರದ ಸ್ಥಳಿಯ ಅಧಿಕಾರಿಗಳಿಗೆ ಅಪತ್ಯ ಆಗುತ್ತದೆ ಈ ಬಿನ್ನಾಭಿಪ್ರಾಯ ದೊಡ್ಡದಾಗಿ 25- ಸೆಪ್ಟೆಂಬರ್-1942 ರಲ್ಲಿ ಈಸೂರಿನ ನಿವಾಸಿಗಳು "ಈಸೂರು ಸ್ವಾತಂತ್ರ್ಯ" ವಾಯಿತೆಂದು ಘೋಷಿಸುತ್ತಾರೆ, ರಾಷ್ಟ್ರದ್ವಜ ಹಾರಿಸುತ್ತಾರೆ ಇದರಿಂದ ಮರುದಿನ ಅಂದರೆ 28- ಸೆಪ್ಟೆಂಬರ್ - 1942 ರಂದು ಈಸೂರಿಗೆ ಬಂದ ಅಮಲ್ದಾರ್ ಚನ್ನಕೃಷ್ಣಪ್ಪ ಮತ್ತು ಪೋಲಿಸ್ ಅಧಿಕಾರಿ ಕೆಂಚೆ ಗೌಡರ ಹತ್ಯೆಯಾಗುತ್ತದೆ.
ಇದರಿಂದ ಬ್ರಿಟೀಷ್ ಸರ್ಕಾರ ಪೋಲಿಸರ ಜೊತೆ ಸೈನ್ಯವನ್ನೂ ಈಸೂರಿಗೆ ಕಳಿಸಿ ನಡೆಸಿದ ದೌರ್ಜನ್ಯದಿಂದ ಇಡೀ ಈಸೂರು ತತ್ತರಿಸುತ್ತದೆ, ಈಸೂರಿನ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲಿಸುತ್ತಿದ್ದ ಸಾಹುಕಾರ್ ಬಸವಣ್ಯಪ್ಪರ ಮನೆ ಲೂಟಿ ಮಾಡಿ, ಬಂಗಾರ ನಗ ನಾಣ್ಯ ದೋಚಿ ಅವರ ಮನೆಯನ್ನೇ ಪೋಲಿಸರು ಮತ್ತು ಸೈನ್ಯ ಸುಟ್ಟು ಹಾಕುತ್ತದೆ.
50 ಜನರ ಮೇಲೆ ಆರೋಪ ಹೊರಿಸಿ 41 ಜನರನ್ನು ಬಂದಿಸುತ್ತಾರೆ, 9 ಜನವರಿ 1943ರಂದು ಮೈಸೂರು ಹೈಕೋಟ್೯ ಮುಖ್ಯ ನ್ಯಾಯದೀಶರು ಈಸೂರು ಸ್ವಾತಂತ್ರ್ಯ ಹೋರಾಟಗಾರರಾದ ಗುರಪ್ಪ, ಮಲ್ಲಪ್ಪ, ಸೂಯ೯ನಾರಾಯಣ ಆಚಾರ್, ಬಿ.ಹಾಲಪ್ಪ, ಜಿ.ಶಂಕರಪ್ಪರಿಗೆ ಮರಣ ದಂಡನೆ ಮತ್ತು ಹಾಲಮ್ಮ, ಪಾರ್ವತಮ್ಮಗೆ ಜೀವಾವದಿ ಶಿಕ್ಷೆ ವಿದಿಸುತ್ತಾರೆ.
ಅವರ ತೀರ್ಪಿನ ಪ್ರಕಾರ 8 ಮಾರ್ಚ್ 1943ರಂದು ಗುರಪ್ಪ ಮತ್ತು ಮಲ್ಲಪ್ಪರನ್ನು, 9 ಮಾರ್ಚ್ 1943ರಂದು ಸೂಯ೯ನಾರಾಯಣ ಆಚಾರಿ ಮತ್ತು ಹಾಲಪ್ಪರನ್ನು, ದಿನಾಂಕ 10 ಮಾರ್ಚ 1943ರಂದು ಜಿ.ಶಂಕರಪ್ಪರನ್ನು ನೇಣಿಗೇರಿಸುತ್ತಾರೆ.
" ಏಸೂರು ಕೊಟ್ಟರೂ ಈಸೂರು ಕೊಡೆವು" ಎಂಬ ಘೋಷಣೆಯ ಈಸೂರು ಸ್ವಾತಂತ್ರ್ಯ ಹೋರಾಟ ಶಿವಮೊಗ್ಗ ಜಿಲ್ಲೆಯ ರಕ್ತಸಿಕ್ತ ಸ್ವಾತಂತ್ರದ ಹೋರಾಟದ ಭೂಮಿ ಆಯಿತು, ಈಸೂರಿನ ಸ್ವಾತಂತ್ರ್ಯ ಹೋರಾಟದ ನೇತಾರ ಸಾಹುಕಾರ್ ಬಸವಣ್ಯಪ್ಪ ಭೂಗತರಾಗುತ್ತಾರೆ ತಮ್ಮ ಭೂಗತ ಜೀವನದಲ್ಲೇ ಇಹಲೋಕ ಯಾತ್ರೆ ಮುಗಿಸುತ್ತಾರೆ.
ಆನಂದಪುರಂ ಈಸೂರಿಗೆ ವಾಹನ ರಸ್ತೆ ಮೂಲಕ 20 ಕಿ.ಮಿ ಆದರೆ ಬಳಸು ದಾರಿಯಲ್ಲಿ ಅರಣ್ಯ ಮೂಲಕ ಸಮೀಪ ಆದ್ದರಿಂದ ಈಸೂರಿನ ಹೋರಾಟಗಾರರರು ಆನಂದಪುರಂನ ಸ್ವಾತಂತ್ರ್ಯ ಹೋರಾಟಗಾರರ ಸಹಾಯ ರಹಸ್ಯವಾಗಿ ಪಡೆಯುತ್ತಾರೆ ಯಾಕೆಂದರೆ ಈಸೂರಿನಲ್ಲಿ ತಲೆ ಮರಿಸಿಕೊಂಡವರಿಗೆ ಆಶ್ರಯ ನೀಡಿದವರಿಗೂ ಪಾಸಿ ಶಿಕ್ಷೆ ನೀಡಲಾಗುವುದೆಂದು ಬ್ರಿಟೀಷ್ ಸಕಾ೯ರ ಘೋಷಿಸಿರುತ್ತದೆ.
ಭೂಗತರಾದ ಬಸವಣ್ಯಪ್ಪರನ್ನು ಕೆಲ ಕಾಲ ಆನಂದಪುರಂ ನಲ್ಲಿ ಬಚ್ಚಿಟ್ಟು ಅವರನ್ನು ತೀರ್ಥಳ್ಳಿಯ ರಹಸ್ಯ ಸ್ಥಳಕ್ಕೆ ತಲುಪಿಸುವ ಕೆಲಸ ಆಗಿನ ಆನಂದಪುರಂ ಪೋಲಿಸ್ ಠಾಣೆ ಎದುರಿನಲ್ಲೇ ಮನೆ ಇದ್ದ ಎ.ರಾಮ್ ರಾವ್ (ಟೈಲರ್ ರಾಮಣ್ಣ ಯಾನೆ ಚಿಪ್ ಗೀರ್ ರಾಮಣ್ಣ ಎಂದೂ ಕರೆಯುತ್ತಿದ್ದರು) ಮಾಡುತ್ತಾರೆ.
ಈ ಕೆಲಸದ ಜವಾಬ್ದಾರಿ ಬದರಿನಾರಾಯಣ ಅಯ್ಯಂಗಾರ್ ಗುಪ್ತವಾಗಿ ವಹಿಸಿರುತ್ತಾರೆ ಅದನ್ನು ಅಷ್ಟೇ ರಹಸ್ಯವಾಗಿ ರಾಮರಾವ್ ನಿರ್ವಹಿಸುತ್ತಾರೆ, ಈ ವಿಚಾರ ಬ್ರಿಟೀಷ್ ಸರ್ಕಾರಕ್ಕೆ ಗೊತ್ತಾಗಿದ್ದರೆ ಎ.ರಾಮರಾವ್ ರನ್ನು ನೇಣಿಗೆ ಏರಿಸದೇ ಬಿಡುತ್ತಿರಲಿಲ್ಲ.
ಆಗಿನ ಮೈಸೂರು ಅರಸರ ಆಶ್ರಯ ಬೆಂಬಲ ಅಯ್ಯಂಗಾರ್ ಕುಟುಂಬದವರಿಗೆ ಇದ್ದಿದ್ದರಿಂದ ಪೋಲಿಸರು ಮತ್ತು ಬ್ರಿಟೀಷ್ ಸೈನ್ಯ ಅಯ್ಯಂಗಾರ್ ಕುಟುಂಬದ ಬಗ್ಗೆ ಅನುಮಾನ ಪಡುವುದಿಲ್ಲ ಈ ವಿಚಾರ ಎಷ್ಟೋ ವರ್ಷ ಅತ್ಯಂತ ರಹಸ್ಯವಾಗಿಟ್ಟ ಎ.ರಾಮರಾವ್1997 ರ ಸುವರ್ಣ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಅಂದರೆ ಘಟನೆ ನಡೆದು 55 ವರ್ಷದ ನಂತರ ಸಾರ್ವಜನಿಕರಿಗೆ ಬಹಿರಂಗ ಮಾಡಿದ್ದರು.
ದೇಶಭಕ್ತ, ದೈವಭಕ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎ. ರಾಮ್ ರಾವ್ ಯಾವಾಗಲೂ ಗಾಂಧಿ ಟೋಪಿ, ಖಾದಿ ವಸ್ತ್ರ ದರಿಸಿ ಮೇಲೆ ಖಾದಿ ವಾಷ್ ಕೋಟ್ ದರಿಸುತ್ತಿದ್ದ ಶಿಸ್ತಿನ ಜೀವನ ಇವರದ್ದಾಗಿತ್ತು,ನಿತ್ಯ ಜೀವನಕ್ಕಾಗಿ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದರು.
ಈಸೂರು ಹೋರಾಟದ ಇತಿಹಾಸದಲ್ಲಿ ಆನಂದಪುರಂನ ಸ್ವಾತಂತ್ರ್ಯ ಹೋರಾಟಗಾರರ ಸಹಾಯ ರಹಸ್ಯವಾಗಿಯೇ ಉಳಿಯಿತು, ರಹಸ್ಯವಾಗಿಡುವ ಅನಿವಾಯ೯ತೆಯೂ ಇತ್ತು.
ಸ್ವಾತಂತ್ರ್ಯ ಹೋರಾಟಗಾರ ಎ.ರಾಮರಾವ್ ರ ತಂದೆ ಅಣ್ಣಪ್ಪ ರಾವ್ ಗೆ ಮೊದಲ ಮಗ ಶಂಬೋಜಿ ರಾವ್ ಎರಡನೆ ಮಗ ದತ್ತೋಬರಾವ್, ಮೂರನೆ ಮಗ ಕಿಟ್ಟಣ್ಣ ಮತ್ತು ನಾಲ್ಕನೆಯವರೆ ಎ.ರಾಮರಾವ್.
ದತ್ತೋಬರಾವ್ ಗೆ ಏಕೈಕ ಪುತ್ರ ಸುರೇಶ್ ಆನಂದಪುರಂ ಮ೦ಡಲ್ ಪಂಚಾಯತ್ ಸದಸ್ಯರಾಗಿದ್ದರು ಆನಂದಪುರಂನ ಪೋಲಿಸ್ ಠಾಣೆ ಎದುರಿನ ಮೂಲ ಮನೆಯಲ್ಲಿ ನೆಲೆಸಿದ್ದಾರೆ ಇವರಿಗೆ ನವೀನ್, ಮದುಕರ್ ಎಂಬ ಇಬ್ಬರು ಪುತ್ರರು ಮತ್ತು ರಜನಿ ಎಂಬ ಪುತ್ರಿ ಬೆಂಗಳೂರಲ್ಲಿ ಸರ್ಕಾರಿ ಸೇವೆಯಲ್ಲಿ ಸಹಾಯಕ ನಿದೇ೯ಶಕರಾಗಿದ್ದಾರೆ.
ಕಿಟ್ಟಣ್ಣರ ಪುತ್ರ ವಿಶ್ವನಾಥ ಗ್ರಾಮ ಲೆಖ್ಖಿಗರಾಗಿದ್ದರು ಇವರಿಗೆ ಮನೋಹರ, ಅಶೋಕ ಮತ್ತು ಪ್ರಬಾಕರ ಎಂಬ ಮೂರು ಮಕ್ಕಳು ಇದರಲ್ಲಿ ಕಂದಾಯ ಇಲಾಖೆಯಲ್ಲಿದ್ದ ಮನೋಹರ್ ಬದುಕಿಲ್ಲ ಉಳಿದವರು ಬೆಂಗಳೂರಲ್ಲಿ ನೆಲೆಸಿದ್ದಾರೆ.
ಮೂರನೆಯವರೆ ಎ.ರಾಮರಾವ್ ಮತ್ತು ಭಾಗಿರಥಿ ಬಾಯಿ ದಂಪತಿಗೆ ಏಕೈಕ ಪುತ್ರ ಶ್ರೀನಿವಾಸ್ ಇವರು ಕಲಾವಿದರಾಗಿದ್ದರು, ಎ.ರಾಮರಾವ್ ಪತ್ನಿ ಭಾಗಿರಥೀ ಬಾಯಿ ಒಂದು ಅವಧಿಗೆ ಆನ೦ದಪುರಂ ವಿಲೇಜ್ ಪಂಚಾಯತ್ ಸದಸ್ಯೆ ಆಗಿದ್ದರು. ಮಗ ಶ್ರೀನಿವಾಸ್ ಗಣಪತಿ ವಿಗ್ರಹ ಮತ್ತು ಭಾಸಿಂಗ ತಯಾರಿಸುತ್ತಿದ್ದರು. ರಾಮ ರಾವ್ ದಂಪತಿ ಮತ್ತು ಮಗ ಶ್ರೀನಿವಾಸ್ ಕೂಡ ಬದುಕಿಲ್ಲ,ಈಗ ಇವರ ಕುಟುಂಬದವರಾರು ಆನಂದಪುರಂ ನಲ್ಲಿ ನೆಲೆಸಿಲ್ಲ.
Comments
Post a Comment