ಭಾಗ - 44, ಆನಂದಪುರಂ ಇತಿಹಾಸ, ಕೆಳದಿ ಅರಸ ವೀರಭದ್ರ ನಾಯಕರಿಂದ 1632 ರಲ್ಲಿ ನಿರ್ಮಾಣಗೊಂಡ ಆನಂದಪುರಂ ಜಾಮೀಯ ಮಸೀದಿ, ಟಿಪ್ಪು ಸುಲ್ತಾನರು ಪ್ರಾರ್ಥನೆ ಮಾಡಿದ ಮಸೀದಿ, ಮೈಸೂರು ಅರಸರು ಭೂದಾನ ನೀಡಿದ ದಾಖಲೆಗಳು ಇರುವ ಆನಂದಪುರಂ ಜಾಮೀಯ ಮಸೀದಿಗೆ 2032 ರಲ್ಲಿ ನಾಲ್ಕುನೂರನೇ ವಾರ್ಷಿಕೋತ್ಸವ.
#ಆನಂದಪುರಂ_ಇತಿಹಾಸ.
#ಆನಂದಪುರಂ_ಜಾಮಿಯಾ_ಮಸೀದಿ_2032ಕ್ಕೆ_400_ವರ್ಷ_ಆಗಲಿದೆ.
#ಕೆಳದಿ_ಅರಸರು_ನಿರ್ಮಿಸಿ_12_ವರಹ_ಭೂಮಿ_ದಾನವೂ_ನೀಡಿದ್ದರು.
#ಟಿಪ್ಪೂಸುಲ್ತಾನರು_ಈ_ಮಸೀದಿಯಲ್ಲಿ_ಪ್ರಾರ್ಥನೆ_ಮಾಡಿದ್ದರು.
#ಕೆಳದಿ_ಅರಸರ_ದಾರ್ಮಿಕ_ಸೌಹಾದ೯ತೆಗೆ_ಪ್ರತೀಕ_ಆನಂದಪುರಂ_ಮಸೀದಿ.
#ಮೈಸೂರು_ರಾಜರು_1872ರಲ್ಲಿ_ಮಸೀದಿಗೆ_ಬೇಟಿನೀಡಿದ_ಸಂದರ್ಭದಲ್ಲಿ_2ಎಕರೆ7ಗುಂಟೆ_ತರಿಜಮೀನು_ದಾನನೀಡಿದ್ದರು.
ಆನಂದಪುರಂ ಇತಿಹಾಸ ಸುತ್ತ ಮುತ್ತಲಿನ ಬೇರಾವುದೇ ಊರಿಗಿಂತ ಹೆಚ್ಚು ಇತಿಹಾಸದ ಪುಟದಲ್ಲಿ ದಾಖಲಾಗಿದೆ, ಹೆಚ್ಚಿನ ಅಧ್ಯಯನ ಮತ್ತು ಸ೦ಶೋದನೆಯಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ದೊರೆಯುವುದು ಖಚಿತ.
ಆನಂದಪುರಂ ಜಾಮಿಯಾ ಮಸೀದಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಮೊಗ್ಗದಿಂದ ಸಾಗರ ಕಡೆ ಹೋಗುವಾಗ ಎಡ ಭಾಗದಲ್ಲಿ ಬೃಹತ್ ಜೋಡಿ ಮಿನಾರ್ ಗಳಿಂದ ನವೀಕರಣಗೊಂಡು ನಮಾಜು ನಡೆಯುತ್ತಿದೆ ಇದರ ಎದುರಿಗೇ ವಿದ್ಯಾ ಮಂತ್ರಿ ಆಗಿದ್ದ ಸ್ಥಳಿಯ ಕೊಡುಗೈ ದಾನಿ ಜಮೀನ್ದಾರರು, ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ನಿರ್ಮಿಸಿದ ದಾನಿ ರಾಮಕೃಷ್ಣ ಅಯ್ಯಂಗಾರ್ ಪುತ್ರ ಬದರಿನಾರಾಯಣ ಅಯ್ಯಂಗಾರ್ ಪ್ರಾಥಮಿಕ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆ ಇದೆ.
ಆನಂದಪುರಂ ಜಾಮಿಯಾ ಮಸೀದಿ ಉಲ್ಲೇಖ ಕೆಳದಿ ಶಾಸನದಲ್ಲಿರುವಂತೆ 1632 ರಲ್ಲಿ ಕೆಳದಿ ರಾಜ ವೀರಭದ್ರನಾಯಕರು (ಆಳ್ವಿಕೆ 1629-1945) ಮಲವಕೊಪ್ಪದ ತಾವರೇಕೆರೆ ಸಮೀಪ (ಈಗಿನ ಮಸೀದಿ ಸ್ಥಳಕ್ಕೆ ಆಗ ಕರೆಯುತ್ತಿದ್ದ ಹೆಸರು) ನಿರ್ಮಿಸಿ ಮಸೀದಿಯ ದಾರ್ಮಿಕ ಸೇವೆಗಾಗಿ ಯಡೇಹಳ್ಳಿಯ ತಾವರೆಕೆರೆ ಸಮೀಪ (ಈಗಿನ ಯಡೇಹಳ್ಳಿ ಗೌರಿಕೆರೆ ಕೆಳಗಿನ ಗುಂಡಿಬೈಲಿನಲ್ಲಿ) 12 ವರಹಾ ಭೂಮಿ ದಾನ ಮಾಡಿದ ಉಲ್ಲೇಖವಿದೆ.
ಆನಂದಪುರಂ ಕೋಟೆಯನ್ನು ಟಿಪ್ಪು ಸುಲ್ತಾನರ ಸೇನಾಧಿಕಾರಿ ಮತ್ತು ಕೆಳದಿ ರಾಜದಾನಿ ಬಿದನೂರಿನ ಆಡಳಿತಾಧಿಕಾರಿ ಹಯಾತ್ ಖಾನ್ ರಿಂದ ವಶಪಡಿಸಿ ಕೊಂಡ ಬ್ರಿಟೀಶ್ ತುಕಡಿ ನಂತರ ಅವರುನಡೆಸಿದ ಬೇಕರ ಹತ್ಯಾಕಾಂಡದಿಂದ ಆನಂದಪುರಂ ನಲ್ಲಿ ಸೈನಿಕರಲ್ಲದೆ ಸುಮಾರು ನಾನೂರು ಸ್ತ್ರಿಯರ ಹತ್ಯೆ ಮಾಡಿದ ವಿಚಾರ ತಿಳಿದ ಟಿಪ್ಪು ಸುಲ್ತಾನ್ ತನ್ನ ಸೈನ್ಯ ಕಳಿಸಿ ಆನಂದಪುರಂ ಕೋಟೆ ಪುನಃ ವಶಪಡಿಸಿಕೊಂಡು ಬ್ರಿಟೀಷ್ ಸೈನ್ಯದ ಮುಖಂಡ ಜನರಲ್ ಮ್ಯಾಥ್ಯೂ ಮತ್ತು ಸಂಗಡಿಗರನ್ನು ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಬಂದಿಸಿಟ್ಟು ಕಾಲಾಪಾನಿ ಶಿಕ್ಷೆಯ ಮರಣದಂಡನೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಈ ಘಟನೆ ನಂತರ ಟಿಪ್ಪು ಸುಲ್ತಾನ್ ಆನಂದಪುರಂಗೆ ಬಂದು ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಹೊರಬಂದಾಗ ಆನಂದಪುರಂನ ಅಗ್ರಹಾರದ ಬ್ರಾಹ್ಮಣರು ಟಿಪ್ಪು ಸುಲ್ತಾನರಿಗೆ ರಂಗನಾಥ ಸ್ವಾಮಿ ದೇವಾಲಯಕ್ಕೆ ಆಹ್ವಾನಿಸುತ್ತಾರೆ (ಹಿಂದಿನ ರಾತ್ರಿಯೇ ಕೋದಂಡರಾಮ ದೇವರನ್ನು ರಂಗನಾಥ ಅಂತ ಮರು ನಾಮಕರಣ ಮಾಡಿರುತ್ತಾರೆ) ಟಿಪ್ಪು ಸುಲ್ತಾನರು ರಂಗನಾಥ ಸ್ವಾಮಿ ದೇವಾಲಯ ಸಂದರ್ಶಿಸಿ ನಂತರ ಆನಂದಪುರಂ ಕೋಟೆಗೆ ಬೇಟಿ ನೀಡಿ ಬಿದನೂರು ರಾಜಧಾನಿಗೆ ತಲುಪುತ್ತಾರೆ.
1872 ರಲ್ಲಿ ಮೈಸೂರು ಅರಸರು ಆನಂದಪುರಂ ಇಕ್ಕೇರಿ ಬೇಟಿಯ ಸವಾರಿ ಬಂದಾಗ ಆನಂದಪುರಂ ಜಾಮೀಯ ಮಸೀದಿಯಲ್ಲಿ ಅವರನ್ನು ಸ್ವಾಗತಿಸಿ ಗೌರವಿಸಿದಾಗ ಅರಸರು ಆಚಾಪುರ ಗ್ರಾಮದಲ್ಲಿ 2 ಎಕರೆ 7 ಗುಂಟೆ ತರಿ ಜಮೀನು ದಾನವಾಗಿ ನೀಡಿದ ದಾಖಲೆ ಇದೆ.
ಮೈಸೂರು ಸರ್ಕಾರ 1958ರಲ್ಲಿ ಮಸೀದಿ ಆಸ್ತಿಯನ್ನು ಮುಜರಾಯಿ ಇಲಾಖೆಯಿಂದ ಪ್ರತ್ಯೇಕ ಬೋರ್ಡ್ ರಚಿಸಿ ಅದರ ಸುಪರ್ಧಿಗೆ ನೀಡಿತು, ಇದರಿಂದ ಮಸೀದಿ ಕಮಿಟಿ ರಚಿಸಿ ಪ್ರತಿ ವರ್ಷ ವಕ್ಪ್ ಬೋರ್ಡ್ ಗೆ ವಾರ್ಷಿಕ ಲೆಖ್ಖ ಪತ್ರ ಸಲ್ಲಿಸುವ ಕಾನೂನು ಜಾರಿ ಆಯಿತು.
ಸದರಿ ಆದೇಶದಂತೆ ಆನಂದಪುರಂ ಜಾಮೀಯ ಮಸೀದಿಗೆ ಮೊದಲ ಅಧ್ಯಕ್ಷರಾದವರು ಶ್ರೀಯುತ ತಾಜ್ ಷೀರ್ ಸಾಬ್, ಎರಡನೆ ಅಧ್ಯಕ್ಷರು ತಾವರೆ ಹಳ್ಳಿ ಸ್ಯೆಯದ್ ಅಹಮದ್ ಸಾಬ್ ಮೂರನೇ ಅಧ್ಯಕ್ಷರಾಗಿ ದಾಸಕೊಪ್ಪದ ಸ್ಯೆಯದ್ ಅಮೀರ್ ಸಾಬ್, ನಾಲ್ಕನೇ ಅಧ್ಯಕ್ಷರಾಗಿ ಅಬ್ದುಲ್ ಯಹ್ಯಾ ಸಾಬ್ (1968 ರಿಂದ 1988) ನಂತರದ ಐದನೇ ಅಧ್ಯಕ್ಷರಾಗಿ ಅಬ್ದುಲ್ ವಾಜೀದ್ ಸಾಬ್ ಆರನೇ ಅಧ್ಯಕ್ಷರಾಗಿ ಟಿಪ್ ಟಾಪ್ ಹಸನರ್ ಸಾಬ್ (ಸಾಗರದ ಟಿಪ್ ಟಾಪ್ ಇಬ್ರಾಹಿ೦ ಸಾಬ್ ರ ಸಹೋದರ) ಹಾಲಿ ಈಗಿನ ಏಳನೆ ಅಧ್ಯಕ್ಷರಾಗಿ ಯಡೇಹಳ್ಳಿಯ ನಗರದ ಬುಡನ್ ಸಾಬ್ ರ ಮೊಮ್ಮಗ ಮತ್ತು ಹಸನ್ ಸಾಹೇಬರ ಮಗ ಉದ್ಯಮಿ ಶೇಖ್ ಉಮ್ಮರ್ ಸಾಬ್ (ಯಡೇಹಳ್ಳಿ ಶೇಖ್ ಆಹಮದ್ ಮತ್ತು ಶೇಖ್ ಅಮೀರ್ ಸಹೋದರ) ಇದ್ದಾರೆ.
ವಾಜೀದ್ ಸಾಬ್ ಮತ್ತು ಹಸನರ್ ಸಾಬ್ ಅಧ್ಯಕ್ಷರಾಗಿದ್ದಾಗ ಅವರಿಗೆಲ್ಲ ಯಡೇಹಳ್ಳಿಯ ಹಾಜಿ ಅಬ್ದುಲ್ ಗನ್ನಿಸಾಬ್ ರ ಸಹಕಾರ ಹೆಚ್ಚು ನೀಡಿದ್ದರೆಂದು ಸ್ಮರಿಸುತ್ತಾರೆ
ಆಯಾ ಕಾಲದ ಕಮಿಟಿಯ ಆಡಳಿತದಲ್ಲಿ ಅಭಿವೃದ್ದಿ ಕಾಣುತ್ತಿರುವ ಆನಂದಪುರಂ ಜಾಮಿಯಾ ಮಸೀದಿ ಕೇವಲ ಪ್ರಾರ್ಥನ ಮಂದಿರ ಮಾತ್ರವಲ್ಲ ಕೆಳದಿ ಅರಸರ, ಟಿಪ್ಪು ಸುಲ್ತಾನರ ಮತ್ತು ಮೈಸೂರು ಅರಸರ ಕೃಪಕಟಾಕ್ಷ ಪಡೆದ ಐತಿಹಾಸಿಕವಾದ ಮೌಲ್ಯಗಳುಳ್ಳ ಜಾಮೀಯಾ ಮಸೀದಿ ಆಗಿದೆ.
Comments
Post a Comment