ರೂಪಾ೦ತರಕಾರಿ ಕೊರಾನಾ ಎರಡನೆ ಅಲೆಗೆ ಜೀವ ತೆತ್ತ ಯುವಕ ಕಂಚಾಳಸರ ಗಣಪತಿ ( 45 ವರ್ಷ) ಗೆ ಶ್ರದ್ದಾಂಜಲಿಗಳು, ಮೈ ಮರೆಯದೇ ಜನ ಜಾಗೃತರಾಗಿರಬೇಕು.
#ಶ್ರದ್ಧಾ೦ಜಲಿಗಳು
#ಆನಂದಪುರಂ_ಸಮೀಪದ_ಕಂಚಾಳಸರದ_ಗಣಪತಿ.
ಗೌತಮಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಾಳಸರದ ಯಲಂದೂರು ನಾರಾಯಣಪ್ಪರ ದೊಡ್ಡ ಮಗ ಗಣಪತಿ 45 ವರ್ಷ ಕೊರಾನದಿಂದ ಮೃತರಾದ ಸುದ್ದಿ ಗೌತಮಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಸಂಗಣ್ಣನ ಕೆರೆ ಹಿರಿಯಣಪ್ಪ ನಿನ್ನೆ ತಿಳಿಸಿದಾಗ ತುಂಬಾ ಬೇಸರ ಆಯಿತು.
ಇವರ ತಂದೆ ನಮ್ಮ ಅಕ್ಕಿ ಗಿರಣಿ ಇದ್ದಾಗ ಅಕ್ಕಿ ಮಾಡಿಸಲು ಎತ್ತಿನಗಾಡಿಯಲ್ಲಿ ಬರುವಾಗ ಗಣಪತಿ ಸಣ್ಣ ಚುರುಕಿನ ಸುಂದರ ಬಾಲಕ.
ಅಂಬ್ಲಿಗೋಳ ದಟ್ಟ ಅರಣ್ಯದ ಮಧ್ಯದ ಸಣ್ಣ ಹಳ್ಳಿ ಕಂಚಾಳಸರ ಮುಖ್ಯ ಸಾರಿಗೆ ಸಂಪರ್ಕದ ರಸ್ತೆಗೆ ಸುಮಾರು 8 ಕೀ ಮಿ ಒಳಗಿದೆ, ಕೊರಾನಾ ರೂಪಾಂತರಗೊಂಡು ಸಣ್ಣ ವಯಸ್ಸಿನವರನ್ನೆ ಬಲಿ ಪಡೆಯುತ್ತಿರುವುದು ಅಪಾಯಕಾರಿ ಮುನ್ಸೂಚನೆ.
18 ವರ್ಷ ಮೇಲ್ಪಟ್ಟ 45 ವರ್ಷದ ಒಳಗಿನವರಿಗೆ ಸಿಗದ ಲಸಿಕೆ ಕಾರಣದಿಂದ ಯುವಜನತೆ ಹೆಚ್ಚು ಜಾಗೃತರಾಗಬೇಕಾದ ಅನಿವಾಯ೯ತೆ ಇದೆ.
"ಕೊರಾನಾ ಎಲ್ಲಿದೆ? ಅನ್ನುವ ವಿತಂಡವಾದ, ಸಣ್ಣ ವಯಸ್ಸಿನವರಿಗೆ ಕೊರಾನಾ ಬರುವುದಿಲ್ಲ, ನಮ್ಮದು ಹಳ್ಳಿ ದಟ್ಟ ಅರಣ್ಯದ ಮಧ್ಯ ಇದೆ ಕೊರಾನಾ ಇಲ್ಲ, ಮಾಸ್ಕ್ ಬೇಕಾಗಿಲ್ಲ, ಎಲ್ಲಾ ಸುಳ್ಳು" ಇತ್ಯಾದಿ ವಾದ ಮಾಡುವ ಕಾಲ ಅಲ್ಲ ಇದು.
ಹೊರಗಿನ ಜನಸಂಪರ್ಕ ಮಾಡುವವರು ಮಾಸ್ಕ್ ಹಾಕುವುದರಿಂದ ಸೋಂಕು ತಗಲುವುದಿಲ್ಲ, ಮಾಸ್ಕ ಹಾಕದಿದ್ದರೆ ಸೋಂಕು ತಗಲುತ್ತದೆ, ತಗಲಿಸಿಕೊಂಡವರ ಅದೃಷ್ಟ ಇದ್ದರೆ ( ನಿರೋದಕ ಶಕ್ತಿ ಇದ್ದರೆ) ತೊಂದರೆ ಆಗದಿರಬಹುದು ಆದರೆ ಇವನಿಂದ ಯಾರ ಸಂಪರ್ಕ ಮಾಡದ ಮನೆಯ ಹಿರಿ ಕಿರಿಯರು ಅಪಾಯಕ್ಕೆ ಗುರಿ ಆಗಬಹುದು, ಅಷ್ಟೇ ಅಲ್ಲ ಇವರ ಸಂಪರ್ಕಕ್ಕೆ ಬರುವ ನೂರಾರು ಜನರಿಗೆ ಕಾಯಿಲೆ ಹರಡುತ್ತಾ ಇಡೀ ಸಮಾಜಕ್ಕೆ ಕಂಟಕಕ್ಕೆ ಕಾರಣ ಆಗುತ್ತಾನೆ (Super spreader).
ಮಾಸ್ಕ್ ಧರಸಿಯೂ ಕೈಯನ್ನು ಸೋಪಿನಿಂದ ತೊಳೆಯದೇ (ಅಥವ ಸ್ಯಾನಿಟೈಸರ್ ಬಳಸದೇ) ಮುಖ, ಕಣ್ಣು, ಮೂಗು ಮತ್ತು ಬಾಯಿಗೆ ತಾಗಿಸಿದರೆ ಕೊರಾನ ಸುಲಭವಾಗಿ ದೇಹ ಸೇರುತ್ತದೆ ಆದ್ದರಿಂದ ಕನಿಷ್ಟ ಮಾಸ್ಕ್ ಸ್ಯಾನಿಟೈಸರ್ ಗಳಿಂದಲೇ ನಾವು ಕೊರಾನಾದಿಂದ ಸಲೀಸಾಗಿ ಬಚಾವಾಗಬಹುದು. ಜೊತೆಗೆ ನಿಮ್ಮಮನೆಯ ಗೇಟ್ ಮತ್ತು ಬಾಗಿಲಿಗೆ ಬೀಗ ಹಾಕಿ, ಬೇರೆಯವರೂ ನಿಮ್ಮ ಮನೆಯ ಒಳಗೆ ಬರುವುದು ಬೇಡ ಹಾಗೆಯೇ ನೀವು ಕೂಡ ಬೇರೆಯವರ ಮನೆಗೆ ಹೋಗುವುದು ಬೇಡ.
ಈ ಮೂಲಕ ನಿಮ್ಮ ಮನೆಯ #ಆರೋಗ್ಯರಕ್ಷಾಕವಚ ನಿರ್ಮಿಸಿಕೊಂಡರೆ ಈ ಗಂಡಾಂತರಕಾರಿ ಕೊರಾನದ ಮುಂದಿನ ಅಪಾಯಕಾರಿ ಅಲೆ ಸುಲಭದಲ್ಲಿ ಎದುರಿಸಬಹುದು.
ಶಿವಮೊಗ್ಗದ ನಾರಾಯಣ ಹೃದಯಾಲಯ, ಸಜಿ೯ ಮುಂತಾದ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಿದೆ (680 ರೂಪಾಯಿ ಪಾವತಿ ಮಾಡಬೇಕು) ತಕ್ಷಣ ಪಡೆಯುವವರು
https://www.cowin.gov.in/home
ಈ ಲಿಂಕ್ ನಲ್ಲಿ ಮೊದಲು ಪೋನ್ ನಂಬರ್ ಮತ್ತು ಆದಾರ ಕಾರ್ಡ್ ನಮೂದಿಸಿ ರಿಜಿಸ್ಟರ್ ಮಾಡಬೇಕು ನಂತರ ದಿನಾಂಕ ಮತ್ತು ಸಮಯ (ಶೆಡ್ಯೂಲ್ ) ಲಸಿಕೆ ಲಭ್ಯದ ಆದಾರದಲ್ಲಿ ನಿಗದಿ ಮಾಡಿ ಅಲ್ಲಿಗೆ ಹೋಗಿ ಲಸಿಕೆ ಪಡೆಯಬಹುದು.
ಸರ್ಕಾರದಿಂದ ಲಸಿಕೆ 18 ವರ್ಷ ಮೇಲ್ಪಟ್ಟವರಿಗೆ ಸದ್ಯದಲ್ಲೆ ಎಲ್ಲಾ ಸ್ಥಳಿಯ ಆರೋಗ್ಯ ಕೇಂದ್ರದಲ್ಲಿ ಲಭ್ಯವಾಗಲಿದೆ ಎನ್ನುವ ಮಾಹಿತಿ ಇದೆ.
(ದಯಮಾಡಿ ಹೆಚ್ಚು ಜನರಿಗೆ ಮಾಹಿತಿಗಾಗಿ ಶೇರ್ ಮಾಡಿ)
ದಯಮಾಡಿ ನಿರ್ಲಕ್ಷಿಸದೆ ಕುಟುಂಬದ ಆದಾರ ಸ್ಥಂಭವಾದವರನ್ನು ರಕ್ಷಿಸಿಕೊಳ್ಳಲು ಮರೆಯಬೇಡಿ.
Comments
Post a Comment