ಕುಂಚಿಕಲ್_ಪಾಲ್ಸ್
ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉದ್ಭವ ಆಗುವ ವರಾಹಿ ನದಿಯ ಜಲಪಾತ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿ ಗ್ರಾಮದ ಅರಣ್ಯದಲ್ಲಿದೆ.
ವರಾಹಿ ನದಿಗೆ ಯಡೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಆಣೆಕಟ್ಟು ನಿರ್ಮಾಣವಾಗಿದೆ.
ವರಾಹಿ ನದಿ ಜಲಪಾತವಾಗಿ ಇಲ್ಲಿಂದ ದುಮುಕಿ ಉಡುಪಿ ಜಿಲ್ಲೆಯ ಹೊಸಂಗಡಿಯ ಮೂಲಕ ಕುಂದಾಪುರ ತಾಲೂಕಿನ ಬಸ್ರೂರು,ಗಂಗೊಳ್ಳಿ ಪ್ರದೇಶಗಳಲ್ಲಿ ಹರಿದು ಮುಂದೆ ಸೌಪರ್ಣಿಕಾ, ಕೇದಕ, ಚಕ್ರ ಮತ್ತು ಕುಬ್ಜ ನದಿಗಳನ್ನ ಸಂಗಮಿಸಿ ಅರಬ್ಬಿ ಸಮುದ್ರ ಸೇರುತ್ತದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡು ಗ್ರಾಮದ ದಟ್ಟ ಅರಣ್ಯದಲ್ಲಿ ವರಾಹಿ ನದಿ ಜಲಪಾತ ಇದೆ.
1445 ಅಡಿ ಇದರ ಎತ್ತರ ಇದು ದೇಶದ ಅತ್ಯಂತ ದೊಡ್ಡ ಜಲಪಾತ ಎಂದು ದಾಖಲು ಆಗಿದೆ.
ಇದಕ್ಕೂ ಮೊದಲು ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ 1115 ಅಡಿ ಎತ್ತರದ ಮೇಘಾಲಯ ರಾಜ್ಯದ #ನೋಹಾಕಾಲಿಕೈ ಜಲಪಾತ ಎಂದಾಗಿತ್ತು.
ಈಗ ವರಾಹಿ ನದಿಯ ನಮ್ಮ ಜಿಲ್ಲೆಯ #ಕುಂಚಿಕಲ್_ಪಾಲ್ಸ್ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಎಂಬ ದಾಖಲೆ ನಿರ್ಮಿಸಿದೆ.
ಎರೆಡು ವರ್ಷದ ಹಿಂದೆ ಈ ಬಗ್ಗೆ ನಾನು ಲೇಖನ ಬರೆದಾಗ ಅದನ್ನು #ಟ್ರೋಲ್ ಮಾಡಿ #ಗೇಲಿ ಮಾಡಿದವರು ಅನೇಕರು.
ಕೆಲವರಂತೂ ಇಂತಹ ಜಲಪಾತ ಮಲೆನಾಡಿನಲ್ಲಿ ಊರಿಗೆರೆಡು ಇದೆ ಅಂತೆಲ್ಲ ಬರೆದುಕೊಂಡಿದ್ದರು.
ಈಗ ಈ ಜಲಪಾತದ ಎತ್ತರದ ಬಗ್ಗೆ ಯಾವ ಅಪಸ್ವರ ಇಲ್ಲವಾಗಿದೆ.
ಈ ಜಲಪಾತಕ್ಕೆ ರಸ್ತೆ ನಿರ್ಮಿಸಲು ಹೋಗಬಾರದು ಆದರೆ ಪರಿಸರ ನಾಶ ಮಾಡದೆ ರೋಪ್ ವೇ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು.
ಹಾಗೆ ಸರ್ಕಾರ ಮಾಡಿದರೆ ದೇಶದ ಅತ್ಯಂತ ಎತ್ತರದ ಜಲಪಾತ ವೀಕ್ಷಿಸಲು ದೇಶದಾದ್ಯಂತ ಪ್ರವಾಸಿಗರು ನಮ್ಮ ಜಿಲ್ಲೆಯ ಬಿದನೂರು ನಗರಕ್ಕೆ
ಬರುತ್ತಾರೆ.
90ರ ದಶಕದಲ್ಲಿ ಈ ಜಲಪಾತ ವೀಕ್ಷಿಸಿ ಸುದ್ದಿ ಮಾಡುವ ನನ್ನ ಆಸೆ ಕೊನೆ ಕ್ಷಣದಲ್ಲಿ ರದ್ದಾಗಿತ್ತು.
ಈ ಜಲಪಾತ ನೋಡಿದ ಕುಣಬಿ ಸಮಾಜದ ಮುಖಂಡ #ಕಂಚಿನಕೈ_ಈರಪ್ಪಣ್ಣ ವರಾಹಿ ನದಿ ಮುಳುಗಡೆ
ಸಂತ್ರಸ್ಥರು ಅವರು ಹೇಳುತ್ತಿದ್ದದ್ದು #ಜೋಗ ಜಲಪಾತಕ್ಕಿಂತ ಎರೆಡು ಪಟ್ಟು ದೊಡ್ಡದು ವರಾಹಿ ನದಿಯ ಕುಂಚಿಕಲ್ ಜಲಪಾತ ಅಂತ.
ಇದೆಲ್ಲಕ್ಕಿಂತ ದೊಡ್ಡ ಸಾಕ್ಷಿ ನನಗೆ ಸಿಕ್ಕಿದ್ದು #UPSC EXAMನಲ್ಲಿ ದೇಶದ ಅತ್ಯಂತ ದೊಡ್ಡ ಜಲಪಾತ ಎಂಬ ಪ್ರಶ್ನೆಗೆ ಸರಿ ಉತ್ತರ ಶಿವಮೊಗ್ಗ ಜಿಲ್ಲೆಯ ವರಾಹಿ ನದಿಯ ಕುಂಚಿಕಲ್ ಪಾಲ್ಸ್ ಎಂಬ key Answer.
ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕುಂಚಿಕಲ್ ಪಾಲ್ಸ್ ಫೋಟೋ ಎಂದು ಹರಿದಾಡುವ ಪೋಟೋ ಕುಂಚಿಕಲ್ ಫಾಲ್ಸ್ ದು ಆಗಿರಲಿಲ್ಲ.
ಸಾಮಾಜಿಕ ಜಾಲ ತಾಣದಲ್ಲಿ ಕುಂಚಿಕಲ್ ಪಾಲ್ಸ್ ಬಗ್ಗೆ ನನ್ನ ಬೆಂಬಲಿಸಿ ಆ ದಿನ ಲೇಖನ ಬರೆದವರು ಗೆಳೆಯ ಸಾಹಿತಿ ತೀರ್ಥಹಳ್ಳಿ ತಾಲ್ಲೂಕಿನ ಪ್ರಬಂಧ ಅಂಬುತೀರ್ಥ ಅವರು ಬರೆದ ಲೇಖನ ಓದಿ...
#ಅರುಣ್_ಪ್ರಸಾದ್ ಅವರೆ ಕುಂಚಿಕಲ್ ಪಾಲ್ಸ್ ಇರುವುದು ಸತ್ಯ......
ನಾನು ಹುಟ್ಟಿದ್ದು ವಾರಾಹಿ ನದಿ ಮೂಲದ ಸಮೀಪದ ಕೆದ್ಲುಗುಡ್ಡೆ ಎಂಬ ಊರಿನಲ್ಲಿ.
ನನ್ನ ಅಜ್ಜನ ಮನೆಯಿಂದ ಕೇವಲ ಎರಡು ಕಿಮೀ ದಟ್ಟ ಕಾಡಿನಲ್ಲಿ ವಾರಾಹಿ ನದಿ ಹುಟ್ಟುತ್ತದೆ.
ಜಗತ್ತಿನಲ್ಲಿ ಹುಟ್ಟಿದ ಐದು ಕಿಮೀ ದೂರದೊಳಗೆ ಆಣೆಕಟ್ಟಿನಿಂದ back water ಪ್ರವಹಿಸುವ ಏಕೈಕ ನದಿ ವಾರಾಹಿ ನದಿ ಇರಬಹುದು.
ನಾನು ಒಂದು ವರ್ಷದ ಹಿಂದೆ ವಾರಾಹಿ ನದಿ ಮತ್ತು ವಾರಾಹಿ ಮುಳುಗಡೆ ಸಂತ್ರಸ್ತರ ಬಗ್ಗೆ ಒಂದು ಲೇಖನ ಬರೆದಿದ್ದೆ.
ಒಂದು ವಾರಾಹಿ ನದಿ ಮುಳುಗಡೆ ಮಾಡಿ ಜಗತ್ತಿನ ಅಮೂಲ್ಯ ಅರಣ್ಯ ಸಂಪತ್ತು ನಾಶ ಮಾಡಿ ಇಡೀ ಧಕ್ಷಿಣ ಭಾರತವನ್ನು ಮರುಭೂಮಿ ಯಾಗಿ ಪರಿವರ್ತನೆ ಮಾಡಿದ್ದಾರೆ.
ಈ ಕುಂಚಿಕಲ್ಲು ಜಲಪಾತದ ಸಮೀಪದ ತನಕ ಹೋಗಿ ಜಲಪಾತದ ಸದ್ದು ಕೇಳಿ ಕೊಂಡು ಬಂದಿದ್ದಾರೆ ಕೆಲವರು.
1445 ಅಡಿ ಘಟ್ಟವಂತೂ ಎತ್ತರವಿದೆ ಈ ಸ್ಥಳ ಅರಣ್ಯ ಇಲಾಖೆಯ ಬಳಿ ಇದೆ ಹಾಗಾಗಿ ಅಲ್ಲಿಗೆ ಹೋಗಲು ಸಲೀಸಿಲ್ಲ.
ಕುಂಚಿಕಲ್ಲು ಜಲಪಾತ ನಿಗೂಢವಾಗೇ ಇರಲಿ ಈ ಜಲಪಾತದ ಚಾರಣ ಪ್ರವಾಸ ಅಂತ ಅಲ್ಲೊಂದಷ್ಟು ದುಷ್ಟ ಮನುಷ್ಯರ ದುಷ್ಟ ಮನಸ್ಸು ನೈರ್ಮಲ್ಯ ಹಾಳು ಮಾಡದಿರಲಿ.
#ಮೇಲುಸುಂಕ_ಅಮ್ಮನವರ_ದೇವಸ್ಥಾನ ಅಲ್ಲಿ ನೂರು ವರ್ಷಗಳ ಹಿಂದೆ ಧಕ್ಷಿಣ ಕನ್ನಡ ಮತ್ತು ಮಲೆನಾಡಿನ ನಡುವೆ ಎರಡು ಚೆಕ್ ಪೋಸ್ಟ್ ಇತ್ತು.
ಮೇಲು ಸುಂಕ ಮಲೆನಾಡಿನ ಚೆಕ್ ಪೋಸ್ಟ್ ಆದರೆ ಘಟ್ಟದ ಕೆಳಗೆ ಬಹುಶಃ ಹಾಲಾಡಿ ಸಮೀಪ ಇರಬೇಕು "ಕೆಳ ಸುಂಕ" ಎಂಬ ಊರಿದೆ....
ನಿಮಗೆ ಗೊತ್ತಿರುವ ಶೀರ್ನಾಳಿ ಕುಟುಂಬ (ಶೀರ್ನಾಳಿ ಚಂದ್ರಶೇಖರ್) ಈ ದೇವಸ್ಥಾನದ ಪೂಜೆಗೆ ಬಂದವರು ಈಗ ನನ್ನ ಅಜ್ಜನ ಕುಟುಂಬದವರು ಆ ದೇವಸ್ಥಾನದ ಪೂಜೆ ಮಾಡುತ್ತಾರೆ.
ಸಮಯಾವಕಾಶ ಇದ್ದಿದ್ದರೆ ಜಲಪಾತದ ತನಕ ಹೋಗಿ ಬರ ಬಹುದಿತ್ತು ಸಾರ್ ಅದನ್ನು ನೋಡಿ ಬರುವಷ್ಟು ಸಮಯ ನನ್ನ ಬಳಿ ತುಟ್ಟಿ ಯಾಗಿದೆ ಸಾರ್..
ಇಲ್ಲಿನ ಚಿತ್ರ ಆ ಜಲಪಾತದ್ದು ಬಹುತೇಕ ಅಲ್ಲ ಎತ್ತರ ಖಂಡಿತವಾಗಿಯೂ ಇರುತ್ತದೆ.
ಆದರೆ ಬಲ್ಲವರ ಪ್ರಕಾರ ಅದು ದಟ್ಟವಾದ ಕಾಡಿನಿಂದ ಸುತ್ತುವರಿದ ಜಾಗದಲ್ಲಿದೆ.
ಒಂದಿನ ಇಡಿ ಸಮಯ ಮಾಡಿಕೊಂಡು ಹೋಗಬೇಕು,
ಸ್ಥಳೀಯರನ್ನು ಬಳಸಿಕೊಂಡು ಈ ಗಮ್ಯದ ತನಕ ಹೋಗಿ ಬರಲು ಸಾಧ್ಯ..
ಯಾರೇ ಅಲ್ಲಿಗೆ ಹೋಗುವುದಾದರೆ ಏಪ್ರಿಲ್ ಮೇ ಎರಡು ತಿಂಗಳಲ್ಲಿ ಅಲ್ಲಿಗೆ ಹೋಗಿಬರಬಹುದು.
ಉಳಿದ ಸಮಯದಲ್ಲಿ ಇಂಬುಳ ಗಳ ವಿಪರೀತ ಕಾಟ ಇರುತ್ತದೆ,
ನನಗೆ ಈ ಬಗ್ಗೆ ಬಹಳ ಆಸಕ್ತಿ ಇದೆ...
ಈ ಜಲಪಾತದ ಸಮೀಪದಲ್ಲಿ ನಮಗೆ ಸಂಬಂಧಿಸಿದ ಒಂದು ಅಮ್ಮನವರ ದೇವಸ್ಥಾನವಿದೆ.
ಹಾಗಾಗಿ ನಮಗೆ ಆ ಜಲಪಾತದ ಬಗ್ಗೆ ಸ್ವಲ್ಪಮಟ್ಟಿಗೆ ಮಾಹಿತಿ ಇದೆ....
ಅರಣ್ಯ ಇಲಾಖೆಯ ಭಯಕ್ಕೆ ಜನ ಅಲ್ಲಿಗೆ ಹೋಗಲು ಭಯ ಪಡುತ್ತಾರೆ...
ಇದು ಒಂದು ರೀತಿಯಲ್ಲಿ ಒಳ್ಳೆಯದಾಗಿದೆ..
ಈ ಭಾಗದಲ್ಲಿ ಹತ್ತು ವರ್ಷಗಳ ಹಿಂದಿನ ತನಕವೂ ವಾಟೆ ಬೆತ್ತ ತರಲು ಕಾಡು ಕಾಳುಮೆಣಸು , ಏಲಕ್ಕಿ ತರಲು ಅಲ್ಲಿನ ಕಾಡು ಜನರು ಹೋಗುತ್ತಿದ್ದರು
ಆದರೆ ಅದೂ ಪ್ಲಾಸ್ಟಿಕ್ ಪರ್ಯಾಯ ಬಂದ ಮೇಲೆ ನಿಂತು ಹೋಗಿದೆ.
ನಕ್ಸಲ್ ಚಟುವಟಿಕೆ ಶುರುವಾದ ಮೇಲೆ ಈ ಜನಗಳಿಗೆ ಕಾಡು ಓಡಾಟ ನಿರ್ಬಂಧ ವಾಗಿ ಕಾಡೀಗ ಅಭೇದ್ಯವಾಗಿದೆ...
ಬಹುಶಃ ಒಮ್ಮೆ ಈ ಜಲಪಾತ ಹೊರ ಜಗತ್ತಿಗೆ ಬಂದರೆ ಮತ್ತೆ ಆ ಜಾಗದಲ್ಲಿ ರೋಪ್ ವೇ, ರಸ್ತೆ , ಹೋಟೆಲ್, ರೆಸಾರ್ಟ್
Falls ವ್ಯು ಫೈ ಸ್ಟಾರ್ ಹೋಟೆಲ್ ಗಳು ಶುರುವಾಗಿ ಮತ್ತೆ ಅರಣ್ಯ ನಾಶ ಶರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ..
ಅಲ್ವಾ ಸಾರ್..
ನಮ್ಮ ಬಂಡವಾಳ ಶಾಹಿ ವ್ಯವಸ್ಥೆ ಇದಕ್ಕೆ ಕಾಯ್ತಿರುತ್ತದೆ.
ಹಾಗಾಗಿ ಈ ಜಲಪಾತ ತೆರೆ ಮರೆಯಲ್ಲೇ ಇರಲಿ ಎಂಬುದು ನನ್ನ ಅಭಿಪ್ರಾಯ ಸಾರ್.
ಅಂದಾಜು ಎಂಟು ಕಿಮೀ ಯೊಳಗೆ..
ಫಾಲ್ಸ್ ಘಟ್ಟದ ಅಂಚಿನಲ್ಲಿದೆ ಮಾಣಿ ಆಣೆಕಟ್ಟುಯಿಂದ ಒಂದು ನೀರು ಹೊಸಂಗಡಿಗೆ ಹೋದರೆ ಒಂದು ನೀರು ಜಲಪಾತ ದಲ್ಲಿ ಧುಮ್ಮಿಕ್ಕುತ್ತದೆ ಅದರ ಹತ್ತಿರ ಹೋಗಿದ್ದೇವೆ ಎನ್ನುತ್ತಾರೆ ಕೆಲವರು ನೋಡೋಣ..
ಸದ್ಯದಲ್ಲೇ ಆ ಭಾಗಕ್ಕೆ ಹೋಗುವನಿದ್ದೇನೆ ಸ್ಥಳೀಯ ರಿಂದ ಮಾಹಿತಿ ಪಡೆದು ನಿಮಗೆ ತಿಳಿಸುವೆ..
ವಂದನೆಗಳು ಅರುಣ್ ಪ್ರಸಾದ್ ಅವರಿಗೆ
#ಪ್ರಬಂಧ_ಅಂಬುತೀರ್ಥ
ಇದೇ ರೀತಿ ಕುಂಚಿಕಲ್ ಜಲಪಾತದ ಬಗ್ಗೆ ನನ್ನ ಸರಣಿ ಲೇಖನ ಬೆಂಬಲಿಸಿ ಲೇಖನ ದಾಖಲಿಸಿದವರು ಬಿದನೂರು ನಗರದ ಸಾಹಿತಿ #ಸುದೀಂದ್ರ_ಭಂಡಾರ್ಕರ್, ನಗರದ ಪತ್ರಕರ್ತ ಉರಗ ಸಂರಕ್ಷಕ #ನಾರಾಯಣ_ಕಾಮತ್
ಮತ್ತು ವರಾಹಿ ಜಲಪಾತದ ಕೆಳಗಿನ ಊರಾದ ಹೊಸಂಗಡಿ ಸಮೀಪದ ಸಾಹಿತಿ #ಮುಸ್ತಾಕ್_ಹೆನ್ನಾಬೈಲು ಮಾತ್ರ.
#kunchikalfalls #varahi #river
#waterfalls #malenadu #westernghat
#shivamogga #hosanagara #thirthahalli
Comments
Post a Comment