#Facebook ನಿನ್ನ ಮಹಿಮೆ ಅಪಾರ #
ಸಿದ್ದಾಪುರ ತಾಲ್ಲೂಕಿನ ಒಬ್ಬರ ಮನೆಗೆ ಹೋಗ ಬೇಕಾಗಿತ್ತು, ವಿಳಾಸ ತಪ್ಪಾಗಿ ಪಕ್ಕದ ಮನೆಗೆ ಹೋದಾಗ ಆ ಮನೆಯವರು ಸರಿ ವಿಳಾಸ ತಿಳಿಸಿದರು ವಾಪಾಸು ಬರುವಾಗ ಅರುಣ್ ಪ್ರಸಾದ್ ಅ೦ದ೦ಗೆ ಆಯಿತು ಆದರೆ ದೂರದ ಆ ಊರಲ್ಲಿ ಪರಿಚಿತರಿಲ್ಲವಲ್ಲ ಬೇರೆ ಯಾರ ಬಗ್ಗೆನೋ ಅಂತ ನಿಲ೯ಕ್ಷಿಸಿದೆ.
ಮುಂದೆ ಗೇಟು ದಾಟುವಾಗ ನನ್ನ ಕರೆಯುತ್ತಾ ಒಬ್ಬರು ಬಂದರು ನಾನು ಯಾವತ್ತೂ ಬೇಟಿ ಆಗಿರಲಿಲ್ಲ ಆದರೆ ಅವರ ಚಹರೆ ಚಿರಪರಿಚಿತ ಎನ್ನಿಸುತ್ತಿತ್ತು ಅವರೇ ಮುಂದಾಗಿ "ನಾನು ಅಭಿರಾಮ್ " ಎಂದಾಗ ಮೆದುಳಿನ ಮೆಮೊರಿ ಚಿಪ್ ಕನೆಕ್ಟ್ ಆಯಿತು.
ನನ್ನ FB ಫ್ರೆಂಡ್ ಅಭಿರಾಮ್ ನಿಜ ಗೆಳೆಯರಾದರು ಅವರು ಸಂಬಂದಿಗಳ ಮನೆಗೆ ಬಂದವರು ಅಲ್ಲಿ೦ದ ಹೊನ್ನಾವರಕ್ಕೆ ಹೋದರು.
ಇವರು ರಾಮಚಂದ್ರಪುರದ ಹಾಲಿ ಸ್ವಾಮಿಗಳ ವಿರುದ್ಧದ ಕೇಸಿನಲ್ಲಿ prime witness, ಇವರ ಕನ್ನಡ ಮತ್ತು ಇಂಗ್ಲೀಷ್ ಟಿವಿ ಮಾಧ್ಯಮದಲ್ಲಿನ ಸಂದಶ೯ನ ವೈರಲ್ ಆಗಿತ್ತು ಇವರ ವಿರುದ್ಧ ಮಠ 5 ಕೋಟಿ ಮಾನ ನಷ್ಟ ಕೇಸು ಹಾಕಿತ್ತು ನಂತರ ವಾಪಾಸ್ ಪಡೆಯಿತು ಅಂತಾರೆ ಮತ್ತು ಇವರ ಟಿವಿ ಸಂದಶ೯ನ ಟೆಲಿಕಾಸ್ಟ್ ಮಾಡದಂತೆ ನ್ಯಾಯಾಲಯದ ಪ್ರತಿಬಂದಕ ಆಜ್ನೆ ಇದೆ.
ಒಂದು ಹಂತದಲ್ಲಿ ಇವರಿಗೆ ಜೀವ ಬೆದರಿಕೆಯೂ ಇತ್ತು.
ವಾಮನನಂತೆ ಚಿಕ್ಕ ಮೈಕಟ್ಟಿನ ಪ್ರಚಂಡ ಬುದ್ಧಿವಂತ ಕೆಲವರಿಗೆ ಸೆಲಬ್ರಿಟಿ ಮತ್ತೆ ಕೆಲವರಿಗೆ ವಿಲನ್ ರ೦ತೆ ಕಾಣುವ ಅಭಿರಾಮ ಹೆಗ್ಗಡೆ ಹೀಗೆ ಅಕಸ್ಮಿಕ ಬೇಟಿ ಆದದ್ದು.
ಅವರ ಟಿವಿ ಸಂದಶ೯ನ, ಹಾಯ್ ಬೆಂಗಳೂರಿನ ವರದಿ, ಸದರಿ ಕೇಸಿನ ಚಾಜ್೯ ಶೀಟಿನಲ್ಲಿ ನೋಡಿದ ಅಭಿರಾಮಗೆ ಅವರ ಹೋರಾಟಕ್ಕೆ ನೈತಿಕ ಬೆಂಬಲ ಯಶಸ್ಸು ಹಾರೈಸಿ ವಿದಾಯ ಹೇಳಿದೆ.
Comments
Post a Comment