#ನOಬಿಕೆಯೆ ದೇವರಲ್ಲವೆ? #
ನನ್ನ ಕೇರಳ ಮೂಲದ ಮಿತ್ರ ಕುಟ್ಟೀಚನ್ ಇವತ್ತು ಬಂದಿದ್ದರು, ಇವರ ನನ್ನ ಗೆಳೆತನಕ್ಕೆ 30 ವಷ೯ ವಾಯಿತು.
ಶ್ರಮ ಜೀವಿ, ಹಠವಾದಿ ಮತ್ತು ಹಸನ್ಮುಕಿ, ಕ್ರಿಸ್ತರ ಪೆಂಥಗೋಸ್ ಪಂಥ ಇವರು ಅವಲಂಬಿಸಿದ್ದಾರೆ.
ನನ್ನ ಇಷ್ಟದ ನೇ೦ದ್ರ ಬಾಳೆ, ಭೂದುಗುOಬಳ ಮತ್ತು ಸುವಣ೯ ಗಡ್ಡೆ ಸರಬರಾಜುದಾರರು.
ಇವತ್ತು ಬ೦ದಾಗ ಇವರ ಕುತ್ತಿಗೆಯಲ್ಲಿ ದೊಡ್ಡ ಪದಕ ನೋಡಿದೆ ವಿಚಾರಿಸಿದಾಗ ಇದು ಇವರು ಮೀನು ಮಾರುಕಟ್ಟೆಯಲ್ಲಿ ಖರೀದಿಸಿದ ಏಡಿಯಲ್ಲಿ ಶಿಲುಬೆ ನೋಡಿ ಅದನ್ನ ಧರಿಸಿದ್ದಾರೆ.
ಜೊತೆಯಲ್ಲಿದ್ದ ಗೆಳೆಯರು ಅಪಹಾಸ್ಯ ಮಾಡಿದಾಗ ಹೇಳಿದೆ ನಾವೆಲ್ಲ ಕಲ್ಲಿನಲ್ಲಿ, ಪ್ರಾಣಿ ಪಕ್ಷಿಗಳಲ್ಲಿ ದೇವರ ನೋಡುವುದನ್ನ ನೆನಪಿಸಿ ಕೊಳ್ಳಿ ಹಾಗಿದ್ದಾಗ ಕುಟ್ಟೀಚನ್ ಅವನ ನಂಬಿಕೆಯ ಏಸು ದೇವನ ಶಿಲುಬೆ ಏಡಿ ಓಡಿನಲ್ಲಿ ಕಂಡಾಗ ಅದನ್ನ ಕುತ್ತಿಗೆಯ ಹಾರದಲ್ಲಿ ಧರಿಸಿದ್ದು ತಪ್ಪೆ? ಅಂತ.
ಪ್ರಕೃತಿಯಲ್ಲಿ ಇಂತಹದೆಲ್ಲ ಸಿಗುವುದು ಕೂಡ ಸೋಜಿಗ.
Comments
Post a Comment