#ಶುOಠಿ ಬೆಳೆ ಲಾಭದಾಯಕ ಕೃಷಿ ಇದನ್ನ ರಾಸಾಯನಿಕ ಮುಕ್ತ ಮಾಡುವ ಮತ್ತು ಹೆಚ್ಚು ಲಾಭದಾಯಕ ಮಾಡುವ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿದೆ #
ಶುOಠಿ ಬೆಳೆ ಸಾವಯುವ ಆಗುವ ಪ್ರಕ್ರಿಯೆ ಪ್ರಾರಂಭ ಆಗಬೇಕು
ಶುಂಠಿ ನಮ್ಮ ಭಾಗದ ರೈತರನ್ನ ಹಣವಂತರಾಗಿ ಸಾಲ ಮುಕ್ತರನ್ನಾಗಿಸಿದೆ, ಮನೆ, ವಾಹನ ಖರೀದಿ, ಮದುವೆಗಳಿಗೆ ಸಹಕಾರಿ ಆಗಿದೆ ಈಗಲೂ ನಮ್ಮ ರೈತರು ಬೆಳೆದ ಶುಂಠಿಗೆ ವಿಷಕಾರಿ ಕೀಟನಾಶಕದ ಕಾರಣ ಮುಂದುವರಿದ ದೇಶದಲ್ಲಿ ಪ್ರವೇಶವಿಲ್ಲ, ದೇಶಿಯ ಮಾರುಕಟ್ಟೆ, ಗಲ್ಪ್ ದೇಶಗಳಿಗೆ ಮಾತ್ರ ಸೀಮಿತ ಆಗಿದೆ.
ಇಲ್ಲಿ ಇನ್ನೋOದು ಸ್ವಾರಸ್ಯವಿದೆ ಏನೇOದರೆ ಈ ಕ್ಷೇತ್ರಕ್ಕೆ ಸಂಬಂದ ಪಡದ ಶ್ರೀಮಂತರು, ದೊಡ್ಡ ಬಡ್ಡಿ ಕುಳಗಳು, ಶೇರು ದಲ್ಲಾಳರು ಒಣ ಶುಂಠಿ ಖರೀದಿಸಿ ದಾಸ್ತಾನು ಮಾಡಿ ಬೆಲೆ ಹೆಚ್ಚಿದಾಗ ಲಾಭಕ್ಕೆ ಮಾರಾಟ ಮಾಡುವ ಪ್ರಕ್ರಿಯೆ ಶುಂಠಿ ಉದ್ಯಮಕ್ಕೆ ವರ ಆಗಿದೆ.
ರಾಸಾಯನಿಕವಲ್ಲದ ಸಾವಯವ ಶುಂಠಿಗೆ ಸರಿಯಾದ ಪ್ರೋತ್ಸಾಹ, ಮಾರುಕಟ್ಟೆ ಬೆಂಬಲ ಸದ್ಯ ರೈತರಿಗೆ ದೊರೆಯುತ್ತಿಲ್ಲ ಇದಕ್ಕೆ ಸಂಬಂದ ಪಟ್ಟ ಸಕಾ೯ರ ಅಥವ ಸಂಸ್ಥೆಗಳು ಇನ್ನು ಗಮನಹರಿಸಿಲ್ಲ.
ಶುಂಠಿ ಬೆಳೆಗೆ ಬೆಂಬಲ ನೀಡಿ ರಾಸಾಯನಿಕ ಬಳಕೆ ಮುಕ್ತ ಮಾಡುವಂತ ವ್ಯವಸ್ಥೆ ಬರಬೇಕು ಇದು ಕೃಷಿಕರಲ್ಲಿ ಹೆಚ್ಚು ಉದ್ಯೋಗ ಮತ್ತು ಹಣ ಗಳಿಸುವ ಬೆಳೆ ಆಗಿದೆ ಎನ್ನುವುದು ನಿಸ್ಸಂಶಯ.
Comments
Post a Comment