Skip to main content

#ಹಲವಾರಿ ಮಠದ ನೂತನ ಸ್ವಾಮೀಜಿ ಶ್ರೀ ಜಗದೀಶ್ ಜೀ #

# ನಮ್ಮ ಇವತ್ತಿನ ಅತಿಥಿಗಳು ಗೋರಕಪುರದ ಬಾರ ಪಂತ್ ಗೆ (ನಾಥ ಪoತದ) ಸೇರಿದ ಉಡುಪಿ ಜಿಲ್ಲೆಯ ಹಲವಾರಿ ಮಠದ ಶ್ರೀ ಜಗದೀಶ್ ಸ್ವಾಮಿಜಿ#
  2017ರಲ್ಲಿ ನಾಸಿಕ್ ನಿ೦ದ ನಡೆದು ಬಂದ 630 ಸನ್ಯಾಸಿಗಳ ಬಾರ ಪಂತ್ ಯಾತ್ರೆ ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಕಮಲಶಿಲೆ ಹತ್ತಿರದ 5000ಕ್ಕೂ ಹೆಚ್ಚು ವಷ೯ದ ಇತಿಹಾಸ ಪ್ರಸಿದ್ದ ಹಲವಾರಿ ಮಠಕ್ಕೆ ಶ್ರೀ ಜಗದೀಶ್ ಸ್ವಾಮಿಜಿಯವರನ್ನ ಮಠದ ಅಧಿಪತಿ ಆಗಿ ನಿಯಮಿಸಿದ್ದಾರೆ.
  ಈ ಮಠದಲ್ಲಿ 34 ವಷ೯ ದೀಘ೯ ಅವದಿಗೆ ಸ್ವಾಮಿಗಳಾಗಿದ್ದ ಶ್ರೀ ಸೋಮನಾಥ ಪೀರ್ ಸ್ವಾಮಿಜಿ ಬಾರ ಪಂತ್ ಬರುವ 2 ವಷ೯ ಮೊದಲೇ ಇಹಲೋಕ ತ್ಯಜಿಸಿದ್ದರು.
  ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆದಿತ್ಯನಾಥರು ಗೋರಕ್ ಪುರದ ಸಂತರು ಇವರಿಗೆ ಮುಖ್ಯಸ್ಥರು.
   ಹಿಂದಿನ ಸೋಮನಾಥ ಪೀರ್ ಸ್ವಾಮಿಗಳು ನನ್ನ ಗುರುಗಳು ಇವತ್ತು ಅವರ ಕೃಪಕಟಾಕ್ಷ ನನ್ನ ಮೇಲಿದೆ ಅಂತಹ ಅನೇಕ ಆಗೋಚರ ಅನುಭವ ನನ್ನ ಮೇಲೆ ಆಗುತ್ತಿರುತ್ತದೆ.
  ಆದಿಚುಂಚನ ಗಿರಿ ಸ್ವಾಮಿಜಿಗಳ ಆಮಂತ್ರಣದ ಮೇರೆಗೆ ಆದಿಚುಂಚನಗಿರಿಯ ಕಾಲ ಬೈರವೇಶ್ವರ ಸನ್ನಿದಿಗೆ ಹೋಗುವ ಮಾಗ೯ದಲ್ಲಿ ನಮ್ಮ ನೂತನ ಲಾಡ್ಜ್ ಕಚೇರಿಗೆ ಆಗಮಿಸಿದ್ದರು.        ಸೋಮನಾಥ ಪೀರ್ ಸ್ವಾಮಿಗಳು ಇದ್ದಾಗ ಕುಂದಾಪುರದಿಂದ ಬರುವಾಗ  ಒಂದು ರಾತ್ರಿ ನಾನು ಹಲವಾರಿ ಮಠಕ್ಕೆ ಹೋದಾಗ ಇದೇ ಜಗದೀಶ್ ಸ್ವಾಮಿಜಿ (ಆಗ ಪೀಟಾದೀಶರಾಗಿರಲಿಲ್ಲ) ಅಲ್ಲಿಗೆ ಬಂದು ತಂಗಿದ್ದರು ಅವರೇ ನಮಗೆ ಗೋದಿ ರೊಟ್ಟಿ ಆಲೂ ಪಲ್ಯ ಮಾಡಿ ಬಡಿಸಿದ್ದರು ಅದನ್ನ ನೆನಪಿಸಿದೆ ಅವರಿಗೂ ನೆನಪಾಯಿತು.
  ಜನವರಿ ತಿಂಗಳಲ್ಲಿ ನಮ್ಮ ಊರಾದ ಯಡೇಹಳ್ಳಿಯ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವರ 14 ನೇ ವಷ೯ದ ಜಾತ್ರಾ ಮಹೋತ್ಸವದ ರಥ ಉತ್ಸವ 28 ಜನವರಿ 2020 ಮ೦ಗಳವಾರದಂದು ಉದ್ಘಾಟನೆಗೆ ಬರಲು ಒಪ್ಪಿದ್ದಾರೆ.
   ಹಿರಿಯ ಸೋಮ ನಾಥಪೀರ್ ಸ್ವಾಮಿಜಿ 2009ರ ಜಾತ್ರಾ ಮಹೋತ್ಸವದ ರಥ ಉತ್ಸವವನ್ನ ಉದ್ಘಾಟಿಸಿದ್ದರು ಈ ಸಂದಭ೯ದಲ್ಲಿ ಅವರ ಗಮನಕ್ಕೂ ತರಲಾಯಿತು.
  ಪ್ರತಿ 12 ವಷ೯ಕ್ಕೆ ಮಹಾರಾಷ್ಟ್ರದ ನಾಸಿಕ್ ನಿಂದ ಕುಂಭಮೇಳದ ಮರುದಿನ ಪ್ರಾರಂಭಿಸಿ ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಬರುವ ನೂರಾರು ಸಾದು ಸಂತರ ಬಾರ ಪಂತ್ ಯಾತ್ರೆ ಸಾಗರದ ಗಣಪತಿ ದೇವಸ್ಥಾನದಲ್ಲಿ ತಂಗಿ ನಂತರ ಆಲಗೇರಿ ಮಂಡ್ರಿ, ಬಿದನೂರು ನಗರ, ಹಲವಾರಿ ಮಠ ಮುಖಾಂತರ ಮಂಗಳೂರಿನ ಕದ್ರಿ ಮಠದಲ್ಲಿ ಸಮಾಪ್ತಿಯಾಗುತ್ತದೆ ಸುಮಾರು 6 ತಿಂಗಳ ಕಾಲ ಪಾತ್ರ ದೇವತೆಯನ್ನ ತಲೆ ಮೇಲೆ ಹೊತ್ತು ತರುತ್ತಾರೆ, ಇದರ ಬಗ್ಗೆ ಕನ್ನಡದ ಪ್ರಖ್ಯಾತ ಸಾಹಿತಿ ರಹಮತ್ ತರೀಕೆರೆ ಒಂದು ಸಂಶೋದನ ಗ್ರ೦ಥವೇ ತಂದಿದ್ದಾರೆ.
  ನೂತನ ಸ್ವಾಮಿಜಿಗಳ ಆಗಮನ ಆಶ್ರೀವಾದದಿಂದ ನನಗೆ ಸಂತೃಪ್ತಿಯ ಬಾವನೆ ಪ್ರಾಪ್ತಿ ಆಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...