# ಶಿಶುನಾಳ ಷರೀಪರ 5ನೇ ತಲೆಮಾರು#
ಮೊನ್ನೆ 11ನೇ ತಾರೀಖು ಮದುವೆ ಮಾಡಿಕೊಟ್ಟ ಮಗಳು ಅಳಿಯನನ್ನ ಹುಬ್ಬಳ್ಳಿಯಿ೦ದ ಕರೆ ತರುವಾಗ ಶಿಶುನಾಳದ ಬೇಟಿ ಕಾಯ೯ಕ್ರಮ ನಿಗದಿ ಮಾಡಿದ್ದೆ ಅಲ್ಲಿಗೆ ತಲುಪುವಾಗ ರಾತ್ರಿ 8 ಆಗಿತ್ತು ಷರೀಪರ ಸಮಾದಿ ಸುತ್ತ ಅಲ್ಲಲ್ಲಿ ಅಲ್ಲಿನ ವಿದ್ಯಾಥಿ೯ ನಿಲಯದ ವಿದ್ಯಾಥಿ೯ಗಳು ತಮ್ಮ ಓದು ಬರಹದಲ್ಲಿ ನಿರತರಾಗಿದ್ದರು.
ಅಲ್ಲಿನ ಪದ್ದತಿ ಪ್ರಕಾರ ಸಕ್ಕರೆ ಸಮಪಿ೯ಸಿದೆ ಅಲ್ಲಿದ್ದ ಒವ೯ರು ಪ್ರಾಥ೯ನೆ ಮಾಡಿದರು, ಬೇರಾರು ಇರಲಿಲ್ಲವಾದ್ದರಿಂದ ಅವರನ್ನ ಮಾತಿಗೆ ಎಳೆದೆ, ಷರೀಪರ ವಂಶದವರು ಇದ್ದಾರ ಅಂದಾಗ "ನಾನು ಷರೀಪರ 5ನೇ ತಲೇ ಮಾರು" ಅಂದಾಗ ನಮ್ಮ ಮುಂದಿನ ಮಾತುಕತೆ ವಿಡಿಯೋದಲ್ಲಿದೆ.
ಷರೀಪರು ತಮ್ಮ ತಂದೆ ತಾಯಿ ಸಮಾದಿ ಅಕ್ಕಪಕ್ಕ ನಿಮಿ೯ಸಿ ಎರೆಡು ಬೇವಿನಮರ ನಡುತ್ತಾರೆ ಒಂದು ಮಲ್ಲಿಗೆ ಬಳ್ಳಿ ನಡುತ್ತಾರೆ ಪ್ರತಿ ದಿನ ಒಂದು ಮಲ್ಲಿಗೆ ಹೂವಾದರೂ ಅವರ ತಂದೆ ತಾಯಿ ಸಮಾದಿ ಮೇಲೆ ಬೀಳಬೇಕೆಂಬ ಅವರ ಅಭಿಲಾಷೆ ಈಡೇರಿದೆ, ಎರೆಡು ಬೇವಿನಮರ ಈಗ ಸೇರಿ ಒಂದಾಗಿದೆ ಅವರ ತಂದೆ ತಾಯಿ ಸಮಾದಿ ಪಕ್ಕದಲ್ಲೇ ಷರೀಫರ ಸಮಾದಿಯೂ ಆಗಿ ಒಂದೇ ಸ್ಮಾರಕವಾಗಿದೆ.
ಇವರು ಮೂವರ ಸಮಾದಿ ಮೇಲೆ ಷರೀಪರ , ಗುರು ಗೋವೀ೦ದ ಭಟ್ಟರ ವಿಗ್ರಹ ಮಧ್ಯ ಬಸವೇಶ್ವರ ಪ್ರತಿಮೆ ಪ್ರತಿಷ್ಟಾಪಿಸಿದ್ದಾರೆ.
ಷರೀಪರ 22 ಎಕರೆ ಜಮೀನಿನಲ್ಲಿ 2 ಎಕರೆ ಸಮಾದಿಗಾಗಿ ಸ್ಮಾರಕಕ್ಕಾಗಿ ಉಪಯೋಗಿಸಲಾಗಿದೆ ಉಳಿದ 20 ಎಕರೆ ವಂಶಸ್ಥರು ಸಾಗುವಳಿ ಮಾಡುತ್ತಿದ್ದಾರೆ.
8 ಕುಟುಂಬಗಳಿಗೆ ವಷ೯ಕ್ಕೆ ಒಂದಾವತಿ೯ಯOತೆ ಸಮಾದಿ ಪೂಜೆವಹಿಸಿಕೊಂಡಿದ್ದಾರೆ.
ಶಿಶುನಾಳ ಷರೀಪರ ಸ್ಮಾರಕದ ಅಭಿವೃದ್ಧಿ , ವಿಸ್ತರಣೆ ಟ್ರಸ್ಟ್ ಮೂಲಕ ನಿವ೯ಹಿಸಲಾಗುತ್ತಿದೆ ನಾನು ಸಕಾ೯ರದಿಂದ ಇದೆಲ್ಲ ಅಭಿವೃದ್ದಿ ಆಗಿದೆ ಅಂತ ತಪ್ಪು ಗ್ರಹಿಸಿದ್ದೇ.
Comments
Post a Comment