#ಇವತ್ತಿನ ನಮ್ಮ ವಿಶೇಷ ಅತಿಥಿಗಳು#
ಕನಾ೯ಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ ಕನಾ೯ಟಕ ರಾಜ್ಯ ಘಟಕದ ಉಪಾಧ್ಯಕ್ಷರಾಗಿರುವ ಶಿವಮೊಗ್ಗ ದ ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪನವರು ಮತ್ತು ಜಿಲ್ಲಾ ಅಧ್ಯಕ್ಷರು ಸಾಗರದ ಸಭೆಗೆ ಹೋಗುವ ಮಾಗ೯ದಲ್ಲಿ ಬಂದಿದ್ದರು.
ಇವರ ತಂದೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಿಂದ ಶಾಸಕರಾಗಿದ್ದರು, ಇವರನ್ನ ಶಿವಮೊಗ್ಗದಲ್ಲಿ ಈಶ್ವರಪ್ಪರ ವಿರುದ್ಧ ಬಂಗಾರಪ್ಪನವರು ಸಾದರ ಲಿಂಗಾಯಿತರ ಅಭ್ಯಥಿ೯ಯಾಗಿ ನಿಲ್ಲಿಸಿ ಈಶ್ವರಪ್ಪರನ್ನ ಸೋಲಿಸಿದ್ದರು, ಮುಂದಿನ ಚುನಾವಣೆಗೆ ಕಾಂಗ್ರೇಸ್ ನಿಂದ ಇವರ ಮಗ ಶಿವಮೊಗ್ಗ ನಗರಸಭಾ ಕಾಪೊ೯ರೇಟರ್ ಯೋಗೀಶ್ ತಯಾರಾಗುತ್ತಿದ್ದಾರೆ, ಎಣಿಸಿದ೦ತೆ ನಡೆದರೆ ಇದೊಂದು ದಾಖಲೆ.
ನನ್ನ ಮಗಳ ವಿವಾಹ ಆಮOತ್ರಣ ಪೋಸ್ಟ್ ಮಾಡಿದ್ದೆ ಆ ದಿನ ಅವರಿಗೆ ಪೂವ೯ ನಿಗದಿಯಾದ ಕಾಯ೯ಕ್ರಮ ಇರುವುದರಿಂದ ಇವತ್ತೇ ಬೇಟಿ ಆಗಿ ಶುಭ ಹಾರೈಸಿದರು.
ಸದಾ ಕ್ರಿಯಾಶೀಲರಾಗಿರುವ, ಕಾಂಗ್ರೇಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ದೀಘ೯ 8 ವಷ೯ ಸೇವೆ ಸಲ್ಲಿಸಿದ ಇವರನ್ನ ಮುಂದಿನ ದಿನದಲ್ಲಿ ಪಕ್ಷ ಸರಿಯಾಗಿ ಬಳಸಿಕೊಂಡರೆ ಆ ಪಕ್ಷಕ್ಕೆ ಹೆಚ್ಚಿನ ಅನುಕೂಲ ಕೂಡ.
Comments
Post a Comment