#ಬಾರದ_ಲೋಕಕ್ಕೆ_ತೆರಳಿದ_ಗೆಳೆಯ_ಏಸುಪ್ರಕಾಶ್
#ಪ್ರೌಡಶಾಲಾ_ಸಹಪಾಠಿ
#ಹೆಗ್ಗೋಡು_ನೀನಾಸಂ_ರಂಗ_ಕಲಾವಿದ
#ಚಲನಚಿತ್ರ_ದಾರಾವಾಹಿ_ನಟ
#ಪರಿಸರ_ಹೋರಾಟಗಾರ
#ತಾಯಿಗೆ_ತಕ್ಕ_ಮಗನಾಗಿದ್ದವರು
ನಿನ್ನೆ ರಾತ್ರಿ 8.41 ಕ್ಕೆ #ಏಸುಪ್ರಕಾಶ್ ಗೆ ಪೋನ್ ಮಾಡಿದ್ದೆ ಕೆಲವು ಬಾರಿ ಪ್ರಯತ್ನಿಸಿದೆ ರಿಂಗ್ ಆಗುತ್ತಿತ್ತು ಆದರೆ ರಿಸೀವ್ ಮಾಡಲಿಲ್ಲ...
#ಡಿಜಿಟಲ್_ಮಾಧ್ಯಮದ ನಂದಿನಿ ಆಕರ್ಷ ದಂಪತಿಗಳು ನೀನಾಸಂ - ಕೆ.ವಿ.ಸುಬ್ಬಣ್ಣ ಬಗ್ಗೆ ಕೆಲವು ಎಪಿಸೋಡು ಮಾಡುವ ಉದ್ದೇಶ ಹೊಂದಿದ್ದರಿಂದ ಏಸು ಪ್ರಕಾಶರಿಗೆ ಈ ದಂಪತಿಗಳಿಗೆ ಸಹಕರಿಸಲು ವಿನಂತಿಸಲು ಪೋನ್ ಮಾಡಿದ್ದೆ.
ಏಸು ಪ್ರಕಾಶ್ ಫೋನಿಗೆ ಸಿಗಲಿಲ್ಲ ಅಂದಾಗ #ನೀನಾಸಂ_ಪ್ರಾಂಶುಪಾಲರಾದ_ಗಣೇಶರಿಗೆ ಪೋನ್ ಮಾಡಿದೆ ಅವರೂ ರಿಸೀವ್ ಮಾಡಲಿಲ್ಲ.
ಕೆಲ ಸಮಯದ ನಂತರ ಪ್ರಾಂಶುಪಾಲರೆ ವಾಪಾಸು ಕರೆ ಮಾಡಿದಾಗ ಗೊತ್ತಾಗಿದ್ದು ಏಸು ಪ್ರಕಾಶ್ ಇನ್ನಿಲ್ಲ ಅಂತ.
ಲಿವರ್ ಕ್ಯಾನ್ಸರ್ ಸ್ಟೇಜ್ 4 ಕ್ಕೆ ತಲುಪಿ ದೇಹದ ಅಂಗಾಂಗ ವೈಫಲ್ಯದಿಂದ ನಿನ್ನೆ ಕರಾವಳಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆನ್ನು ನೋವಿದೆ ಅನ್ನುತ್ತಾ ತಮಗೆ ಬಂದ ಕ್ಯಾನ್ಸರ್ ಕಾಯಿಲೆ ಎಲ್ಲರಿಂದ ಮರೆ ಮಾಚಿದ್ದಾರೆ...
ಈ ವಿಚಾರ ಇವರಿಗೆ ಮತ್ತು ಇವರ ದೊಡ್ಡ ಮಗಳಿಗೆ ಬಿಟ್ಟು ಯಾರಿಗೂ ಗೊತ್ತಿರಲಿಲ್ಲ.
ಎರಡು ತಿಂಗಳ ಹಿಂದೆ ಅವರು ಪೋನ್ ಮಾಡಿದ್ದರು ನಮ್ಮ ಕಲ್ಯಾಣ ಮಂಟಪದಲ್ಲಿ ಅವರ ಗೆಳೆಯರಿಗೆ ನಿರ್ದಿಷ್ಟ ದಿನಾಂಕದಂದು ಹಾಲ್ ಬೇಕು ಅಂತ ಆದರೆ ಆ ದಿನಾಂಕ ಬೇರಾರೋ ಬುಕ್ ಮಾಡಿದ್ದರು ಎಂಬ ಮಾಹಿತಿ ತಿಳಿಸಿದಾಗ ನಂತರ ಪೋನ್ ಮಾಡುವುದಾಗಿ ಕರೆ ಅಂತ್ಯಗೊಳಿಸಿದ್ದರು.
2019 ರ ನವೆಂಬರ್ ನಲ್ಲಿ ನಡೆದ ನನ್ನ ಮಗಳ ಮದುವೆಗೆ ಏಸು ಪ್ರಕಾಶ್ ತಮ್ಮ ಪತ್ನಿ ಮತ್ತು ಇಬ್ಬರು ಪುತ್ರಿಯರ ಜೊತೆ ಬಂದಿದ್ದರು ಏಸು ಪ್ರಕಾಶ್ ಅವರ ಪತ್ನಿ ಮತ್ತು ಪುತ್ರಿಯರಿಬ್ಬರೂ ಕಲಾವಿದರು ಪುತ್ರ ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಏಸು ಪ್ರಕಾಶರ ಕುಟುಂಬ ನನ್ನ ಪ್ಯಾಮಿಲಿ ಪ್ರೆಂಡ್ ಕುಟುಂಬ ಅವರ ತಾಯಿಗೆ ಈಗ 85 ವರ್ಷ 60 ರ ದಶಕದಲ್ಲಿ ನಮ್ಮ ಊರಾದ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆಯಲ್ಲಿ #ಲೀಲಾ_ಸಿಸ್ಟರ್ ಎಂದೇ ಜನ ಮನ್ನಣೆ ಪಡೆದು ಸೇವೆ ಸಲ್ಲಿಸಿದ್ದಾರೆ.
ಅನೇಕ ಬಾರಿ ಏಸು ಪ್ರಕಾಶರಿಗೆ ಅವರ ತಾಯಿ ಲೀಲಾವತಿ ಸಿಸ್ಟರ್ ಕರೆದುಕೊಂಡು ಬರಲು ವಿನಂತಿಸಿದ್ದೆ 2021 ರ ನವೆಂಬರ್ ತಿಂಗಳಲ್ಲಿ ತಾಯಿ ಮಗ ಇಬ್ಬರೂ ನನ್ನ ಅತಿಥಿ.
ಉತ್ತರ ಕರ್ನಾಟಕದ ಕೈಮಗ್ಗದ ಸೀರೆ ಉಡುಗೊರೆ ಆಗಿ ನೀಡಿದ್ದೆ ಆ ವರ್ಷದ ಕ್ರಿಸ್ ಮಸ್ ಪ್ರಾರ್ಥನೆಗೆ ನನ್ನ ಮಗ ಉಡುಗೊರೆ ನೀಡಿದ ಸೀರೆಯೇ ಉಡುವುದಾಗಿ ಅವರ ತಾಯಿ ನನ್ನ ಉಡುಗೊರೆ ಸಾರ್ಥಕಗೊಳಿಸಿದ್ದನ್ನ ಏಸು ಪ್ರಕಾಶ್ ಪೋನ್ ನಲ್ಲಿ ತಿಳಿಸಿದ್ದರು.
ಸಾಗರದ ಮುನ್ಸಿಪ್ ಹೈಸ್ಕೂಲ್ ನಲ್ಲಿ ಏಸು ಪ್ರಕಾಶ್ ನನ್ನ ಸಹಪಾಠಿ ಅಲ್ಲಿ #ಮೈಕಲ್_ಡಿಸೋಜ, #ಸ್ಟೀವನ್_ವಿಲ್ಸನ್_ಐಮನ್,.#ಚಾಕೂಲೂಕೋ ಮತ್ತು #ಮ್ಯಾಥ್ಯೂಲೂಕೋ ಎಲ್ಲಾ ನನ್ನ ಸಹಪಾಠಿ ಕ್ರಿಶ್ಚಿಯನ್ ಗೆಳೆಯರು ಆದರೆ ಅವರೆಲ್ಲರ ಹೆಸರಿಗಿಂತ ಬಿನ್ನ ಹೆಸರು ಏಸು ಪ್ರಕಾಶ್ ಇದು ಇತರ ಸಹಪಾಠಿಗಳಿಗೆ ಆಶ್ಚಯ೯.
ಹುಟ್ಟು ಅಕಸ್ಮಿಕ ಸಾವು ನಿರೀಕ್ಷಿತ ಈ ಸಂದರ್ಭದಲ್ಲಿ ಏಸು ಪ್ರಕಾಶ್ ಜೊತೆ ಕಳೆದ ದಿನಗಳ ಸಾಂಗತ್ಯದ ನೆನಪು ಮಾಡುತ್ತಾ ಅವರ ಆತ್ಮಕ್ಕೆ ಸದ್ಗತಿ ಸ್ವರ್ಗ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತೇನೆ.
ಹಾಗೂ ಅವರ ತಾಯಿ 85 ರ ವಯೋಮಾನದ ಲೀಲಾವತಿ ಸಿಸ್ಟರ್, ಪತ್ನಿ - ಇಬ್ಬರು ಪುತ್ರಿಯರಿಗೆ ಮತ್ತು ಪುತ್ರನಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಏಸು ಪ್ರಕಾಶ್ ಅವರ ತಾಯಿ ಜೊತೆ ನಮ್ಮಲ್ಲಿಗೆ ಬಂದ ನೆನಪಿನ ಲೇಖನ ಏಸು ಪ್ರಕಾಶ್ ಸ್ಮರಣೆಗಾಗಿ ಇಲ್ಲಿ ಕ್ಲಿಕ್ ಮಾಡಿ ನೋಡಿ...
https://arunprasadhombuja.blogspot.com/2021/12/66-1960.html.
Comments
Post a Comment