Blog number 1989. ಮಲಂದೂರು ಮೇಷ್ಟರೆಂಬ ಸಜ್ಜನರು ಆನಂದಪುರಂನಲ್ಲಿ ದಿನಸಿ - ಬಟ್ಟೆ-ಹೋಟೆಲ್ ಉದ್ಯಮ ಸ್ಥಾಪಿಸಿ ನಂತರ ದೊಡ್ಡ ಜಮೀನ್ದಾರರಾದ ಕಥೆ.
#ಆನಂದಪುರಂ_ಇತಿಹಾಸ_ಪುಸ್ತಕದಲ್ಲಿ
#ಜಮೀನ್ದಾರ್_ಮಲಂದೂರು_ ಮೇಷ್ಟರ_ಲೇಖನ_ಇಲ್ಲದಿದ್ದರೆ_ಪೂರ್ಣ_ಆಗುವುದಿಲ್ಲ
#ಆನಂದಪುರಂನ_ಮೊದಲ_ಹೋಲ್_ಸೇಲ್_ದಿನಸಿ_ಮಂಡಿ_ಮಾಡಿದವರು
#ಸ್ವಾತಂತ್ರ್ಯ_ಪೂವ೯ದಲ್ಲಿ_ಆನಂದಪುರಂ_ಶಿಕ್ಷಕರು
#ನಂತರ_ಶ್ರೀಮಂತ_ಭೂಮಾಲಿಕರಾದರು
#ಇವರ_ಪುತ್ರ_ಸತ್ಯನಾರಾಯಣ್_ಮುಂಬೈಯಲ್ಲಿ_ಐಎಎಸ್_ಕೋಚಿಂಗ್_ಸೇರಿದ್ದರು
#ರೈಲು_ಅಪಘಾತದಿಂದ_ಅವರ_ಗುರಿ_ಸಾದಿಸಲು_ಆಗಲಿಲ್ಲ
ಆನಂದಪುರಂನ ಕೆ.ವಿ.ಸುರೇಶರು ನಾನು ಬರೆಯುತ್ತಿರುವ #ಆನಂದಪುರಂ_ಇತಿಹಾಸ ಪುಸ್ತಕಕ್ಕೆ ಹೆಚ್ಚಿನ ಮಾಹಿತಿ ಸಹಕಾರ ನೀಡುವವರಲ್ಲಿ ಅವರು ಪ್ರಮುಖರು ಅವರು ಈ ಪುಸ್ತಕದಲ್ಲಿ ಮಲಂದೂರು ಮೇಷ್ಟರ ಲೇಖನ ಇರಲೇಬೇಕು ಅನ್ನುತ್ತಿದ್ದರು ಆದರೆ ಅವರ ಪೋಟೋ ಸಂಗ್ರಹ ಸಾಧ್ಯವಾಗಿರಲಿಲ್ಲ.
ಮೊನ್ನೆ ಮಧ್ಯಾಹ್ನ ಮಲಂದೂರು ಮೇಷ್ಟರ ಮೊಮ್ಮಕ್ಕಳು ಅಂದರೆ ಸತ್ಯನಾರಾಯಣರ ಮಕ್ಕಳಾದ ಶ್ರೀಮತಿ ವಿದ್ಯಾಸೂರ್ಯಕುಮಾರ್, ಶ್ರೀಮತಿ ಜ್ಯೋತಿ ಸಂಜೀವ್, ರಮೇಶ್, ಗೀತಾಂಜಲಿ ದತ್ತಾತ್ರೇಯ ಮತ್ತು ಹರೀಶ್ ಸಾಗರದ ಅವರ ಸಂಬಂದಿಗಳ ಮನೆಯ ನಾಗ ಪ್ರತಿಷ್ಟಾಪನೆಯ ವಾರ್ಷಿಕೋತ್ಸವಕ್ಕೆ ಹೋಗುವಾಗ ನನ್ನ ಕಛೇರಿಗೆ ಬಂದಿದ್ದರು.
ಒಂದು ವಿಶೇಷ ಅಂದರೆ ಇವರ ತಂದೆ ಸತ್ಯನಾರಾಯಣಣ್ಣ ಮತ್ತು ನನ್ನ ತಂದೆ ಗಳಸ್ಯ ಕಂಠಸ್ಯ ಸ್ನೇಹಿತರು, ವಿದ್ಯಾ ನನ್ನ ಅಕ್ಕ ಉಮಾದೇವಿ ಕ್ಲಾಸ್ ಮೇಟ್, ರಮೇಶ ನನ್ನ ಕ್ಲಾಸ್ ಮೇಟ್, ಗೀತಾಂಜಲಿ ನನ್ನ ಪತ್ನಿಯ ಕ್ಲಾಸ್ ಮೇಟ್ ಆದರೂ ಕೆಲವು ವರ್ಷಗಳಿಂದ ಪರಸ್ಪರ ಭೇಟಿ ಇರಲಿಲ್ಲ.
ಇವರ ತಂದೆ ಆ ಕಾಲದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸೈನ್ಸ್ ಪದವಿ ವ್ಯಾಸಂಗ ಮಾಡಿದವರು ನಂತರ ಐಎಎಸ್ ಮಾಡಬೇಕೆಂದು ಮುಂಬೈನಲ್ಲಿ ತರಬೇತಿಗೆ ಸೇರಿದ್ದರು ಆಗ ಮು೦ಬೈ ಕನ್ನಡ ಸಂಘದ ಅಧ್ಯಕ್ಷರಾದವರು ಆದರೆ ದುರಾದೃಷ್ಟ ಅವರು ರೈಲು ಅಪಘಾತದಿಂದ ಬದುಕಿ ಬಂದದ್ದೇ ಹೆಚ್ಚು ದೇಹದ ಬಲಬಾಗ ಹೆಚ್ಚು ಜಖಂ ಆಗಿತ್ತು ಮುಖಕ್ಕೆ ಆ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಆಗಿತ್ತು ಇಲ್ಲದಿದ್ದರೆ ಅವರು ಐಎಎಸ್ ಅಧಿಕಾರಿ ಆಗಿ ದೊಡ್ಡ ಮಟ್ಟದಲ್ಲಿರುತ್ತಿದ್ದರು.
50 ವರ್ಷದ ಹಿಂದೆ ನಮ್ಮ ಬಾಲ್ಯದಲ್ಲಿ ನಮ್ಮ ತಂದೆ ಮತ್ತು ಅವರ ಗೆಳೆಯರು ಸತ್ಯನಾರಾಯಣಣ್ಣರ ಅಸಾದಾರಣ ನೆನಪಿನ ಬುದ್ದಿಶಕ್ತಿ ಬಗ್ಗೆ ಮಾತಾಡುವುದು ಕೇಳಿದ್ದೆ.
ಇವರ ತಂದೆ ಆನಂದಪ್ಪನವರನ್ನು ಆ ಕಾಲದಲ್ಲಿ ಆನಂದಪುರಂ ನಿವಾಸಿಗಳು ಕರೆಯುತ್ತಿದ್ದದ್ದು ಮಲಂದೂರು ಮೇಷ್ಟರೆಂದೇ ಕಾರಣ ಅವರು ಕರಾವಳಿಯ ಉಡುಪಿ ಜಿಲ್ಲೆಯಿಂದ ತೀರ್ಥಹಳ್ಳಿಗೆ ವಲಸೆ ಬಂದವರು ನಂತರ ನೆಲೆಸಿದ್ದು ಆನಂದಪುರಂನ ಮಲಂದೂರಿನಲ್ಲಿ ಆ ಕಾಲದಲ್ಲಿ ಆನಂದಪುರಂನ ನೂರಾರು ಪ್ರತಿಷ್ಟಿತ ಭೂಮಾಲಿಕರ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿದ ಮಾಸ್ತರಾಗಿದ್ದರಿಂದ #ಮಲಂದೂರು_ಮೇಷ್ಟರೆಂದೆ ಎಂದೇ ಹೆಸರಾದರು.
ಏಳು ಅಡಿ ಎತ್ತರ ಇದ್ದರಂತೆ ಲೆಖ್ಖಾಚಾರದಲ್ಲಿ ವ್ಯಾಪಾರದಲ್ಲಿ ಅವರಿಗಿದ್ದ ಬುದ್ಧಿಶಕ್ತಿಯಿಂದ ಆನಂದಪುರಂನಲ್ಲಿ ಅವರು ಕಟ್ಟಿದ ಸಾಮ್ರಾಜ್ಯ ಸಣ್ಣದಲ್ಲ ಅವರ ಮಂಡಿಗೆ ಎಲ್ಲಾ ರೀತಿಯ ದಿನಸಿ ಹುಬ್ಬಳ್ಳಿಯಿಂದ ಬರುತ್ತಿತ್ತು ಆನಂದಪುರಂನ ಸುತ್ತ ಮುತ್ತಲಿನ ರೈತರ ಮನೆಗೆ ದಿನಸಿ ತಲುಪಿಸುವ ವ್ಯವಸ್ಥೆ ಮಲಂದೂರು ಮಾಸ್ತರದ್ದು ಈ ಕಾಲದ ಡೋರ್ ಡೆಲೆವರಿ ಸಿಸ್ವಂ ಆ ಕಾಲದಲ್ಲಿ ಅವರು ಜಾರಿಗೆ ತಂದಿದ್ದರು ಅಷ್ಟೆ ಅಲ್ಲ ಡೋರ್ ಡೆಲವರಿ ಪಡೆದ ಗ್ರಾಹಕರು ವರ್ಷಕ್ಕೊಮ್ಮೆ ಪಾವತಿ ಮಾಡುವಂತ ಒವರ್ ಡ್ರಾಪ್ಟ್ ಸಿಸ್ಟಂ ಕೂಡ ಅವರದ್ದು.
ಯಶಸ್ವಿಯಾಗಿ ನಡೆದ ಅವರ ಈ ದಿನಸಿ ಮಂಡಿ ವ್ಯವಹಾರದಿಂದ ಅವರು ನೂರಾರು ಎಕರೆ ಭೂಮಿ ಹೊಂದಿದ ಜಮೀನ್ದಾರರು ಆಗಿದ್ದರು.
ಮಲಂದೂರು ಮೇಷ್ಟರಿಗೆ ಇಬ್ಬರು ಪತ್ನಿಯರು ಮೊದಲ ಪತ್ನಿಗೆ ಇಬ್ಬರು ಗಂಡು ಮಕ್ಕಳು ದೊಡ್ಡ ಮಗ ನಾಗಪ್ಪರ ಕುಟುಂಬ ಸಮೀಪದ ಹೊಸೂರಿನಲ್ಲಿ ನೆಲೆಸಿದೆ ನವೀನ ಸುರೇಂದ್ರ ಸಹೋದರ ಕುಟುಂಬ ಅಲ್ಲಿದೆ.
ಎರಡನೆ ಮಗ ಶೀನಪ್ಪರ ಮಗ ಶೇಖರ ಪೂಜಾರರು ಮುರುಘಾಮಠದಲ್ಲಿ ಹೋಟೆಲ್ ದಿನಸಿ ಅಂಗಡಿ ನಡೆಸುತ್ತಿದ್ದಾರೆ ಇವರ ಮಗ ದಯಾನಂದ ಪೂಜಾರಿ ಭಾರತೀಯ ಸೈನ್ಯದಲ್ಲಿದ್ದಾರೆ ಅಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿ ಅನೇಕ ಪ್ರಶಸ್ತಿಗೆ ಭಾಜನರಾಗಿ ಅಲ್ಲಿ ತರಬೇತುದಾರರಾಗಿದ್ದಾರೆ.
ಮಲಂದೂರು ಮೇಷ್ಟರ ಎರಡನೆ ಪತ್ನಿ ಶ್ರೀಮತಿ ಚಿಕ್ಕಮ್ಮರ ಮಗ ಸತ್ಯನಾರಾಯಣರ ಮಕ್ಕಳು ಈಗ ಚೋರಡಿಯಲ್ಲಿ ಹಾಗು ಬೆಂಗಳೂರಲ್ಲಿ ಕೃಷಿ ವ್ಯವಹಾರ ಮಾಡುತ್ತಿದ್ದಾರೆ.
ಕಿರಿಯ ಮೊಮ್ಮಗಳಾದ ಶ್ರೀಮತಿ ಗೀತಾಂಜಲಿ ದತ್ತಾತ್ರೇಯ ಶಿವಮೊಗ್ಗ ಜಿಲ್ಲಾ ಮಹಿಳಾ ಈಡಿಗ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾರೆ.
ಸತ್ಯನಾರಾಯಣಣ್ಣರ ಪುತ್ರ ರಮೇಶ್ ಚೋರಡಿಯಲ್ಲಿ ವ್ಯವಹಾರ ಮಾಡುತ್ತಾರೆ ಇವರು ನನ್ನ ಕ್ಲಾಸ್ ಮೇಟ್ ಇವರ ತಮ್ಮ ಅಜ್ಜನ ಬಗ್ಗೆ ಹೇಳಿದ ಮಾಹಿತಿ ಈ ವಿಡಿಯೊದಲ್ಲಿದೆ.
https://youtu.be/tm1hK6IiSEs?feature=shared
Comments
Post a Comment