Blog number 1986.ಕೆ.ಶಿವರಾಮ್ ನೆನಪುಗಳು ಭಾಗ-4. ನಮ್ಮ ಊರಿನ PWD ಗ್ಯಾಂಗ್ ಮನ್ ರಿಗೆ ಸೂಕ್ತ ಇಲಾಖೆಯಲ್ಲಿ ಪೋಸ್ಟಿಂಗ್ ನೀಡಿದ ಶಿವರಾಮ್ ಸಾಹೇಬರ ಮರೆಯಲು ಸಾಧ್ಯವೆ?..
#ಕೆ_ಶಿವರಾಂ_ನೆನಪುಗಳು_ಭಾಗ_4
#ನಮ್ಮ_ಊರಿನ_PWD_ಗ್ಯಾಂಗ್_ಮನ್_ರಿಗೆ
#ಸೂಕ್ತ_ಕಛೇರಿಗಳಲ್ಲಿ_ಪೋಸ್ಟಿಂಗ್_ಕೊಡಿಸಿದ್ದರು
#ಬಡವರಿಗೆ_ಮನೆ_ನಿವೇಶನ_ಕೊಡುವ_ಇವರ_ಕೆಲಸ_ಕೆಲವರಿಗೆ_ಕಣ್ಣು_ಕೆಂಪಾಗಿಸಿತ್ತು
#ದಾವಣಗೆರೆಯಲ್ಲಿ_ಹನ್ನೆರೆಡು_ಸಾವಿರ_ಮನೆ_ನಿರ್ಮಿಸಿ_ಹಂಚಿದ_ದಾಖಲೆ
#ಬಡವರ_ಉದ್ದಾರ_ಸಹಿಸದ_ಸಮಾಜ .
ಶಿವರಾಂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾಗಲೇ ಲೋಕೋಪಯೋಗಿ ಇಲಾಖೆ ತನ್ನ ಗ್ಯಾಂಗ್ ಮನ್ ಗಳನ್ನು ರದ್ದು ಮಾಡುವ ತೀರ್ಮಾನ ಆಗಿತ್ತು, ಅನೇಕ ವರ್ಷಗಳಿಂದ ಪಿಡಬ್ಲುಡಿ ಇಲಾಖೆಯ ದಿನಗೂಲಿ ನೌಕರರಾಗಿದ್ದವರನ್ನು ಸರ್ಕಾರದ ವಿವಿಧ ಇಲಾಖೆಗೆ ಡಿ ದರ್ಜೆ ಹುದ್ದೆಗೆ ನೌಕರರಾಗಿ ನೇಮಿಸುವ ತೀರ್ಮಾನ ರಾಜ್ಯ ಸರ್ಕಾರದ ಸಂಪುಟ ತೆಗೆದುಕೊಂಡಿತ್ತು.
ಆದ್ದರಿಂದ ಅವರೆಲ್ಲ ಸೂಕ್ತ ಪೋಸ್ಟಿಂಗ್ಗಾಗಿ ಒದ್ದಾಡುತ್ತಿದ್ದರು, ನಮ್ಮ ಸಾಗರ ತಾಲೂಕಿನ ಸುಮಾರು 15 ರಿಂದ 20 ಜನ ಅಂತವರಿಗೆ ತಾಲೂಕು ಪಂಚಾಯತ್ ಕಛೇರಿ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಕಛೇರಿ, ಸರ್ಕಾರಿ ಆಸ್ಪತ್ರೆ, ಸರ್ವೆ ಇಲಾಖೆ ಮುಂತಾದ ಕಡೆಗೆ ನನ್ನ ವಿನಂತಿ ಮೇರೆಗೆ ಶಿವರಾಮ ಅವರು ಅವರಿಗೆಲ್ಲ ಉದ್ಯೋಗಾವಕಾಶ ನೀಡಿದ್ದ ನಾನು ಮರೆಯಲಾರೆ.
ನಮ್ಮ ಊರಿನ ತಾವರೆಹಳ್ಳಿವಿಶ್ವನಾಥರಿಗೆ ಸಾಗರದ ಜಿಲ್ಲಾ ಪಂಚಾಯತ್ ಅಸಿಸ್ಟೆಂಟ್ ಇಂಜಿನಿಯರಿಂಗ್ ಕಛೇರಿಗೆ, ಆನಂದಪುರಂ ಹುಚ್ಚರಾಯರಿಗೆ ಆನಂದಪುರಂ ವೆಟನರಿ ಆಸ್ಪತ್ರೆಗೆ, ಗಾಮದ ವೆಟನರಿ ಆಸ್ಪತ್ರೆಗೆ ತಿಮ್ಮಣ್ಣರಿಗೆ, ಗೌತಮಪುರದ ಆಸ್ಪತ್ರೆಗೆ ಲಕ್ಷ್ಮಣ, ಸಾಗರದ ತಾಲ್ಲೂಕು ಪಂಚಾಯಿತಿ ಕಛೇರಿಗೆ ಬಾಬು, ಸೊರಬ ಸರ್ವೆ ಆಫೀಸಿಗೆ ಬಂಗಾರಿ, ಸೊರಬ ಸರ್ವೆ ಆಫೀಸಿಗೆ ಡಾಕಣ್ಣ, ಸಾಗರ ಸರ್ವೆ ಆಫೀಸಿಗೆ ದಾನಪ್ಪ, ಹೊಸನಗರ ಸರ್ವೆ ಆಫೀಸಿಗೆ ಗುಂಡಣ್ಣ ಹೀಗೆ ಅನೇಕರಿಗೆ ಅವರಿಗೆ ಅನುಕೂಲದ ಜಾಗಕ್ಕೆ ಶಿವರಾಂ ರಿಂದ ಪೋಸ್ಟಿಂಗ್ ಮಾಡಿಸಿದ್ದೆ ಅವರೆಲ್ಲ ಈಗ ನಿವೃತ್ತರಾಗಿದ್ದಾರೆ.
ಅತ್ಯಂತ ಆಪ್ತತೆ ಉಂಟಾದ್ದರಿಂದ ನಾನು ಶಿವರಾಮರವರಿಗೆ ಅವರ ಜೀವನದ ಕಥೆಗಳನ್ನು ಪ್ರಶ್ನಿಸುತ್ತಿದ್ದೆ...
ಅವರು ಬಿಡದಿ ಸಮೀಪದ ಉರಗಳ್ಳಿಯಲ್ಲಿ ಜನಿಸಿದವರು, ಅವರಿಗೆ ಓದಿ ಸರ್ಕಾರದ ಉದ್ಯೋಗ ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಇತ್ತು, ಅವರ ತಂದೆ ಕೃಷಿ ಜೊತೆಗೆ ನಾಟಕದ ಮಾಸ್ತರರಾಗಿರುತ್ತಾರೆ.
ಇವರು ವಿದ್ಯಾಭ್ಯಾಸ ಮಾಡುವಾಗ ವಾರದ ಮುದ್ದೆ ಅನ್ನದಲ್ಲಿ ಅಂದರೆ ವಾರಕೊಬ್ಬ ಅನ್ನ ದಾನಿಗಳ ನೆರವಿನಿಂದ ಓದುತ್ತಾರೆ.
ಇವರು ಬೆಂಗಳೂರುನಲ್ಲಿನ ಸೆಂಟ್ರಲ್ ಜೈಲಿನಲ್ಲಿ ಗುಮಾಸ್ತರಾಗಿ ಕೆಲಸ ಪಡೆಯುತ್ತಾರೆ ಆಗ ಜೈಲಿಗೆ ಬರುತ್ತಿದ್ದ ಪೊಲೀಸ್ ಅಧಿಕಾರಿಗಳು, ಅವರ ಜೀಪು ಮಿರ ಮಿರ ಮಿಂಚುವ ಕೆಂಪು ಬೂಟುಗಳು ನೋಡಿ ಶಿವರಾಮ ಅವರಿಗೆ ತಾನೂ ಅಂತಹ ಒಂದು ಹುದ್ದೆಗೆ ಹೋಗಲೇ ಬೇಕೆಂಬ ಆಸೆ ಉಂಟಾಗುತ್ತದೆ.
ಆದ್ದರಿಂದ ಅವರು ಸತತ ಪ್ರಯತ್ನದಿಂದ ಡಿ ವೈ ಎಸ್ ಪಿ ಆಗುತ್ತಾರೆ ಆದರೆ ಆ ನಂತರ ಅವರಿಗೆ ಅನ್ನಿಸುವುದು ಐಎಎಸ್ ಮಾಡಿದರೆ ಮಾತ್ರ ತಾನು ಸ್ವಯಂ ನಿರ್ಧಾರದಿಂದ ಬಡ ಜನರಿಗೆ ಸಹಾಯ ಮಾಡಬಹುದು ಅನ್ನಿಸುತ್ತದೆ.
ಅದಕ್ಕಾಗಿ ಅವರು ಶ್ರಮಪಟ್ಟು ತಾಯ್ನಾಡಿನ ಮಾತೃಭಾಷೆ ಕನ್ನಡದಲ್ಲೇ ಬರೆದು ಐಎಎಸ್ ಪಾಸ್ ಮಾಡುತ್ತಾರೆ ಇದು ನಮ್ಮ ದೇಶದಲ್ಲೇ ಸ್ಥಳಿಯ ಬಾಷೆಯಲ್ಲಿ ಐಎಎಸ್ ಮಾಡಿದ ಪ್ರಥಮರೆಂಬ ದಾಖಲೆ ಆಗುತ್ತದೆ.
ಮೈಸೂರು -ಬೆಂಗಳೂರು- ದಾವಣಗೆರೆ ಜಿಲ್ಲೆಗಳಲ್ಲಿ ಅತ್ಯಂತ ಬಡವರನ್ನ ಹುಡುಕಿ, ಅವರ ಅರ್ಜಿಗಳಿಗೆ ಸಹಿ ಮಾಡಿಸಿ, ನಿವೇಶನ - ಮನೆ ಮಾಡಿಕೊಟ್ಟಿದ್ದು ಇವರ ಕಾರ್ಯವೈಖರಿಯ ವಿಶೇಷ ಆದರೆ ಇದು ಅನೇಕರಿಗೆ ಕಣ್ಣು ಕೆಂಪಾಗಿಸಿತ್ತು.
ಹೀಗೆಲ್ಲ ಈ ಕೂಲಿಕಾರರಿಗೆ ಬಡವರಿಗೆ ಶಿವರಾಮರು ಸರ್ಕಾರದ ಹಣ ಖರ್ಚು ಮಾಡಿ ಬೆಲೆಬಾಳುವ ನಿವೇಶನಗಳನ್ನು ಕೊಡುತ್ತಿದ್ದಾರೆ ಆ ಬಡವರೆಲ್ಲ ಅದನ್ನು ಮಾರಿಕೊಂಡು ಹೋಗುತ್ತಾರೆ ಅಂತ ಅವರೆಲ್ಲ ಶಿವರಾಂ ವಿರುದ್ದ ಮಾತಾಡುತ್ತಾರೆ.
ವ್ಯವಸ್ಥೆ ಸಮಾಜದ ಕೆಳಹಂತದವರನ್ನು ಮುಖ್ಯ ವಾಹಿನಿಗೆ ತರುವುದನ್ನು ಸಹಿಸದ ಜನರ ಲೆಕ್ಕಗಳು ಇವು, ಇದಕ್ಕೆ ಶಿವರಾಮ ಅವರು ಉತ್ತರ "ಇದನ್ನೆಲ್ಲಾ ಪಡೆಯಲಾಗದ ಬಡವರಿಗೆ ದಲಿತರಿಗೆ ನಾವು ಮೊದಲ ಪ್ರಾಶಸ್ತ್ಯದಿಂದ ನೀಡುವ ವ್ಯವಸ್ಥೆ ಬರಬೇಕು, ಅದಕ್ಕಾಗಿ ನನ್ನ ಈ ಕೆಲಸ ಮಾದರಿ ಆಗಲಿ ಎಂದು ನಾನು ಇಂತಹ ಯೋಜನೆಗಳಿಗೆ ಬಹು ಪ್ರಾಮುಖ್ಯತೆ ಕೊಡುತ್ತೇನೆ" ಎನ್ನುತ್ತಿದ್ದರು.
2018 ರಲ್ಲಿ ಆನಂದಪುರದ ನನ್ನ ಹಳೆಯ ಕಚೇರಿಗೆ ಬಂದಿದ್ದರು ಅವತ್ತು ನನ್ನ ಲಾಡ್ಜ್ ರೆಸ್ಟೋರೆಂಟ್ ನ್ನು, ಕಾಟೇಜುಗಳನ್ನು ಮತ್ತು ಹೊಸದಾಗಿ ನಿರ್ಮಿಸುತ್ತಿದ್ದ ಲಾಡ್ಜನ್ನು ವೀಕ್ಷಿಸಿದರು, ಅವರಿಗೆ ನನ್ನ ಚಂಪಕ ಪ್ಯಾರಡೈಸ್ ನ ಮಡಕಾ ದಮ್ ಬಿರಿಯಾನಿ ತುಂಬಾ ಇಷ್ಟವಾಗಿತ್ತು.
Comments
Post a Comment