Blog number 2011.ನಿನ್ನೆ ದಿನಾಂಕ 20 ಮಾರ್ಚ್ 2024 ರಲ್ಲಿ ನಮ್ಮ ಊರು ಆನಂದಪುರಂನ ತಾಪ ಮಾನ ಮಧ್ಯಾಹ್ನ 12ಕ್ಕೆ 43 ಡಿಗ್ರಿ ದಾಟಿ 44 ರ ಆಸು ಪಾಸು ತಲುಪಿತ್ತು.
#ನಿನ್ನೆ_ಮದ್ಯಾಹ್ನದ_ತಾಪಮಾನ_ಭಯ_ಉಂಟುಮಾಡಿತ್ತು
#ನನ್ನ_ಉಷ್ಣ_ಮಾಪಕದ_ಮೇಲೆ_ಅನುಮಾನ_ಪಡುವಷ್ಟು
#ಮಾರ್ಚ್_ಮಧ್ಯದಲ್ಲಿ_ಹೀಗಾದರೆ_ಮುಂದಿನ_90_ದಿನ_ಹೇಗಿರಬೇಡ.
#ಮುಂದಿನ_10_ವರ್ಷದಲ್ಲಿ_ನಮ್ಮ_ಊರು_ಬಯಲುಸೀಮೆ_ಆಗಲಿದೆಯಾ_ಎಂಬ_ಅನುಮಾನವಿದೆ.
#ಆನಂದಪುರಂನಿಂದ_ಪೂರ್ವಕ್ಕೆ_10_ಕಿಲೋ_ಮೀಟರ್_ವ್ಯಾಪ್ತಿ_ದಾಟಿದರೆ_ಅಲ್ಲಿ_ಮಳೆ_ಪ್ರಮಾಣ_ಕುಸಿದಿದೆ
ನಿನ್ನೆ ಮಧ್ಯಾಹ್ನ ನಾನು ಆಫೀಸಿನಲ್ಲಿ ಇರುವಾಗ ಮಗ ನಿನ್ನೆಯ ತಾಪಮಾನದ ಚಿತ್ರ (ಉಷ್ಣ ಮಾಪಕದಲ್ಲಿ ದಾಖಲಾಗಿರುವುದನ್ನು) ವಾಟ್ಸಾಪ್ನಲ್ಲಿ ಕಳಿಸಿದ... ನಿನ್ನೆ ನಮ್ಮಲ್ಲಿಗೆ ಬರುವರೆಲ್ಲ ಮತ್ತು ಕೆಲಸಗಾರರು ಹೊರಗಡೆ ವಿಪರೀತ ಬಿಸಿಲಿದೆ ತಾಳಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದರು....
ಹವಾಮಾನ ಹೇಳುವ ಆಕ್ಯೂ ವೆದರ್ ಗರಿಷ್ಟ 39 ಎಂದು ತೋರಿಸುತ್ತಿತ್ತು
ಉಷ್ಣ ಮಾಪಕದ ಫೋಟೋ ನೋಡಿ ನನಗೆ ನಂಬಲಾಗಲಿಲ್ಲ ...ಭವಿಷ್ಯ ಉಷ್ಣ ಮಾಪಕ ಹಾಳಾಗಿರಬಹುದು ಎಂದು ಮಗನಿಗೆ ಇನ್ನೊಮ್ಮೆ ಪರೀಕ್ಷೆ ಮಾಡಲು ಹೇಳಿದೆ ಆಗಲು ಉಷ್ಣ ಮಾಪಕ ಅಷ್ಟೇ ತೋರಿಸಿದ್ದು ಆಶ್ಚರ್ಯ ಉಂಟು ಮಾಡಿತು.
ಉಷ್ಣ ಮಾಪಕ ನಿನ್ನೆ ಮಧ್ಯಾಹ್ನ 12ಕ್ಕೆ 43 ದಾಟಿ 44ರ ಆಸು ಪಾಸಿನಲ್ಲಿ ಇತ್ತು, ಇದು ಮಾರ್ಚ್ ತಿಂಗಳ 20 ಇನ್ನು ಮಳೆಗಾಲ ಶುರುವಾಗಲು ಜೂನ್ 20 ಬರಬೇಕು ಅಂದರೆ ಸುಮಾರು 90 ದಿನಗಳ ಕಾಲ ಮಲೆನಾಡಿನ ಪಶ್ಚಿಮ ಘಟ್ಟದ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ನಮ್ಮ ಊರಿನ ಭೂಪ್ರದೇಶ ಇನ್ನೆಷ್ಟು ಕಾಯುತ್ತದೆ ಎಂದು ಭಯವಾಯಿತು.
ಈಗಾಗಲೇ ನಮ್ಮ ಊರಿನ ಸುತ್ತ ಮುತ್ತಲಿನ ಅನೇಕ ಬೋರ್ ವೆಲ್ ಗಳು ಕೈ ಚೆಲ್ಲಿದೆ ಈ ನೀರಿನ ಆಶ್ರಯದಲ್ಲಿ ಒಣ ಭೂಮಿಯಲ್ಲಿ ಕೃಷಿ ತೋಟಗಾರಿಕೆ ಮಾಡಿಕೊಂಡವರು ಆತಂಕದಲ್ಲಿದ್ದಾರೆ.
1987ರಲ್ಲಿ ನಮ್ಮ ಮನೆಗೆ ಮೊದಲ ಟೇಬಲ್ ಪ್ಯಾನ್ ತಂದಿದ್ದು ಅದು ನಮ್ಮ ತಂದೆಯವರಿಗೆ ನಂತರ 1990ಕ್ಕೆ ಮನೆಯ ವರಾಂಡಕ್ಕೆ ಸೀಲಿಂಗ್ ಫ್ಯಾನ್ ಬರುವ ಅತಿಥಿಗಳಿಗಾಗಿ ನಂತರ ಡೈಲಿಂಗ್ ಹಾಲ್ ಗೆ ಫ್ಯಾನ್ ಬಂತು ಕ್ರಮೇಣ ಎಲ್ಲಾ ರೂಮಿಗೂ ಫ್ಯಾನ್ ಅನಿವಾಯ೯ ಆಯಿತು ಅದರ ಮುಂದುವರಿದ ಭಾಗವಾಗಿ ಏರ್ ಕೂಲರ್ ಬಂದಿದೆ ಈಗ ಏರ್ ಕಂಡಿಷನರ್ ಬೇಕಾಗುವಂತಾಗಿದೆ...
ಆನಂದಪುರಂನ ಪೂರ್ವಭಾಗದಲ್ಲಿ 10 ಕಿ.ಮಿ. ವ್ಯಾಪ್ತಿ ದಾಟಿದರೆ ಅತ್ಯಂತ ಕಡಿಮೆ ಮಳೆ ಬೀಳುವ ಬಯಲು ಸೀಮೆ ಆಗಿದೆ, ಇದು ಮುಂದಿನ 10 ವರ್ಷದಲ್ಲಿ ನಮ್ಮ ಊರಿಗೆ ತಲುಪುವ ಸಾಧ್ಯತೆ ಅಲ್ಲಗಳಿಯುವಂತಿಲ್ಲ.
ಹೀಗಾದರೆ ಹೇಗೆ....
Comments
Post a Comment