#ಕೊರೋನಾ_ನೆನಪುಗಳ_ಡೈರಿ_ಭಾಗ_3
#ಕೊರಾನ_ವಾರಿಯರ್ಸಗೆ_ನೈತಿಕ_ಬೆಂಬಲದ_ಚಪ್ಪಾಳೆ_ಗಂಟೆ_ಜಾಗಟೆ_ದೀಪ_ಬೆಳಗಿದ್ದೆವು
#ಇವತ್ತು_ಸಂಜೆಗೆ_ನಾಲ್ಕು_ವರ್ಷವಾಯಿತು_ಆದಿನ_ಪಕ್ಷಾತೀತವಾಗಿ
#ದೇಶದ_ಪ್ರಧಾನಿ_ಮನವಿ_ಪುರಸ್ಕರಿಸಿದ್ದ_ಹಿರಿಯ_ಕಾಂಗ್ರೇಸ್_ರಾಜಕಾರಣಿ_ಕಾಗೋಡುತಿಮ್ಮಪ್ಪ_ಆದರ್ಶ_ಪ್ರಾಯರು.
#ಸದುದ್ದೇಶದ_ವಿಶ್ವದಾದ್ಯಂತ_ಆಚರಿಸಲಾದ_ಈ_ಬೆಂಬಲವನ್ನು_ಗೇಲಿ_ಮಾಡುವ_ಸಿನಿಕತನ_ವಿಕೃತವಲ್ಲವೆ?
ರಾಜಕೀಯ ಉದ್ದೇಶಕ್ಕಾಗಿ ಯಾರನ್ನೋ ಗುರಿಯಾಗಿಸಿ ನಮ್ಮ ದೇಶವಾಸಿಗಳನ್ನು ಗೇಲಿ ಮಾಡುವುದು ಸರಿಯಲ್ಲ
ಇಡೀ ವಿಶ್ವದಲ್ಲಿ ಕೋರೊನಾ ಎಂಬ ವೈರಸ್ ವಿರುದ್ಧ ಹೋರಾಟ ಪ್ರಾರಂಭವಾಗುವ ಹಂತದಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ದೊಡ್ಡದಿತ್ತು.
ಆರೋಗ್ಯ ಕಾರ್ಯಕರ್ತರು ತಮ್ಮ ಜೀವ ಪಣ ಇಟ್ಟು ಜನರ ಜೀವ ಉಳಿಸಲು ಶ್ರಮ ಪಟ್ಟಿದ್ದಾರೆ ಈ ಅಮೂಲ್ಯ ಕೆಲಸದಲ್ಲಿ ಅನೇಕರು ತಮ್ಮ ಜೀವ ತ್ಯಾಗ ಮಾಡಿದ್ದಾರೆ ಅವತ್ತಿನ ಸಂದರ್ಭ ಮತ್ತು ಅವರ ಕುಟುಂಬಗಳ ಆತಂಕದ ಪರಿಸ್ಥಿತಿ ನೆನಪಿಸಿಕೊಳ್ಳಬೇಕು.
ಅವರು ಮತ್ತು ಅವರ ಕುಟುಂಬ ತಮ್ಮ ಜೀವವನ್ನು ಪಣವಿಟ್ಟು ಸೇವೆ ಮಾಡಬೇಕಾಯಿತು ಈ ಸಂದರ್ಭದಲ್ಲಿ ಅವರಿಗೆ ವಿಶ್ವಾದ್ಯಂತ ನೈತಿಕ ಬೆಂಬಲ ಕೊಡಲು ಎಲ್ಲಾ ದೇಶಗಳ ಸರಕಾರಗಳು ಅವರ ದೇಶದ ಜನರನ್ನ ವಿನಂತಿಸಿತು.
ಅದು ಸಾಮೂಹಿಕವಾಗಿ ಚಪ್ಪಾಳೆ ತಟ್ಟುವ ಮೂಲಕ ಜನತೆ ತಮ್ಮ ನೈತಿಕ ಬೆಂಬಲ ನೀಡುವುದು, ಭಾರತದಂತ ದೇಶದಲ್ಲೂ ಅಂತಹ ಪ್ರಯತ್ನವನ್ನು ಮಾಡಲಾಯಿತು.
ಪ್ರದಾನಿಯವರು ಕರೆ ನೀಡಿ ಭಾರತೀಯ ಪರಂಪರೆಯಂತೆ ಭಾರತೀಯರು ತಮ್ಮ ಮನೆ ಮನೆಯಲ್ಲಿ ಗಂಟೆ, ಜಾಗಟೆ ಬಾರಿಸಿ ಆರೋಗ್ಯ ಕಾರ್ಯಕರ್ತರಿಗೆ ಬೆಂಬಲಿಸಲು ಮತ್ತು ಮನೆ ಎದುರು ದೀಪವನ್ನು ಬೆಳಗಿಸಿ ಅವರನ್ನು ನಾವೆಲ್ಲರೂ ಹುರಿದುಂಬಿಸುತ್ತಿದ್ದೇವೆ ನಿಮ್ಮ ಜೊತೆ ನಾವು ಇದ್ದೇವೆ ಎನ್ನುವ ಸಂದೇಶ ಸಾರಲು ವಿನಂತಿಸಿದರು.
ಕೊರೊನ ವೈರಸ್ ಪ್ರಪಂಚದಿಂದ ನಿರ್ಮೂಲನೆಗಾಗಿ ಭಗವಂತನಿಗೆ ಮಾಡುವ ಸಾಮುಹಿಕ ಪ್ರಾರ್ಥನೆಯೂ ಇದಾಗಿತ್ತು.
ಇದೇ ರೀತಿ ವಿಶ್ವದಾದ್ಯಂತ ದೇಶಗಳು ಮೊಂಬತ್ತಿಯನ್ನು ಬೆಳಗಿಸಿ ಪ್ರಾರ್ಥಿಸಿದ್ದು,ಅನೇಕ ಯುವಶಕ್ತಿ ಸಾಮೂಹಿಕವಾಗಿ ತನ್ನ ಮೊಬೈಲ್ ಗಳನ್ನು ಟಾರ್ಚಾಗಿ ಬೆಳಗಿಸಿ ಬೆಂಬಲಿಸಿತ್ತು.
ನಮ್ಮ ದೇಶವಾಸಿ ಮುಗ್ಧ ಪ್ರಜೆಗಳು ದೇಶದ ಕೆಲ ಭಾಗಗಳಲ್ಲಿ ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳದೆ ಅಥವ ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ತಪ್ಪು ಗ್ರಹಿಕೆ ಆಗಿ ಒಂದು ರೀತಿ ಎಮೋಷನಲ್ ಆಗಿ ಬಾವಿಸಿಕೊಂಡು,ಗುಂಪಾಗಿ ಗಂಟೆ -ಜಾಗಟೆ ಅದು ಸಿಗದಿದ್ದರೆ ಊಟದ ತಟ್ಟೆಗಳನ್ನು ಬಡೆಯುತ್ತಾ "ಗೋ ಗೋ ಕೋರಾನ " ಎಂಬ ಘೋಷಣೆಗಳನ್ನು ಕೂಗುತ್ತಾ ಆ ದಿನ ಸಂಜೆ ಮೆರವಣಿಗೆಗಳನ್ನೂ ಮಾಡಿದ್ದರು ಇದನ್ನೆ ಈಗ ಗೇಲಿಯ ವಿಷಯ ಮಾಡಿದ್ದಾರೆ.
ಪ್ರಧಾನ ಮಂತ್ರಿಗಳ ಈ ಕರೆಗೆ ಅನೇಕ ರಾಜಕಾರಣಿಗಳು ಪಕ್ಷಾತೀತವಾಗಿ ಬೆಂಬಲಿಸಿದರು ಅವರೆಲ್ಲರ ಉದ್ದೇಶ ಮನು ಕುಲಕ್ಕೆ ಗಂಡಾಂತರವಾದ ಈ ವೈರಸ್ ವಿರುದ್ದ ಎಲ್ಲರೂ ಹೋರಾಡಲೇ ಬೇಕೆಂಬ ಕಾಳಜಿ.
ಪ್ರದಾನಿ ಮೋದಿ ಕರೆಯನ್ನ ದೇಶದಾದ್ಯOತ ಜನತೆ ಬೆಂಬಲಿಸಿದ್ದಾರೆ, ಕನಾ೯ಟಕದಲ್ಲಿ ಕಾ೦ಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, JDS ಪಕ್ಷದ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಸ್ವಾಗತಿಸಿದ್ದರು.
ಆದರೆ ಪಕ್ಷ ಆಧಾರಿತ ರಾಜಕಾರಣದ ಕಾರ್ಯಕರ್ತರು ಮತ್ತು ಪಕ್ಷದವರು ತಮ್ಮ ವಿರೋದಿ ಪಕ್ಷದಿಂದ ಆಯ್ಕೆಯಾದ ಪ್ರಧಾನಿಯ ಈ ಮನವಿ ಪುರಸ್ಕರಿಸ ಬಾರದು ಎಂಬ ಆತಂಕಕಾರಿ ಬಾವನೆ ಹೊಂದಿದ್ದರು.
ದೇಶದ ಆರೋಗ್ಯ ಕಾರ್ಯಕರ್ತರನ್ನ ಪುರಸ್ಕರಿಸಿದ್ದು ತಪ್ಪು ಎಂಬಂತೆ ಗೇಲಿ ಮಾಡಲು ಪ್ರಾರಂಭಿಸಿದ್ದರು ಇಲ್ಲಿ ಮಾರಣಾಂತಿಕ ಕೊರಾನ ವೈರಸ್ ನಿಯಂತ್ರಣಕ್ಕಿಂತ ಪಕ್ಷ ರಾಜಕಾರಣದ ಪ್ರತಿಷ್ಟೆ ಅವರಿಗೆ ದೊಡ್ಡದಾಯಿತು.
ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಮಾಜಿ ಮಂತ್ರಿ - ವಿಧಾನಸಭೆ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪನವರು ಕೂಡ ಪ್ರಧಾನ ಮಂತ್ರಿಗಳ ಈ ಮನವಿಯನ್ನು ಪುರಸ್ಕರಿಸಿ ಅವರ ಮನೆ ಎದುರು ಚಪ್ಪಾಳೆ ತಟ್ಟಿ ದೇಶದ ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸಿದರು ಇದು ಅಭಿನಂದನೀಯ ಕಾಯ೯ವೇ ಆಗಿತ್ತು.
ಈ ಘಟನೆ ನಡೆದು ಇವತ್ತಿನ ಸಂಜೆಗೆ ಸರಿಯಾಗಿ 4 ವರ್ಷಗಳಾಯಿತು ಈಗ ಅನೇಕ ಪೋಸ್ಟ್ ಗಳು ಆನಿವರ್ಸರಿ ಎಂಬ ಹೆಸರಲ್ಲಿ ಆ ದಿನ ಮುಗ್ದ ಭಾರತೀಯರು ಗಂಟೆ - ಜಾಗಟೆ- ತಟ್ಟೆ ಶಬ್ದ ಮಾಡಿದ್ದನ್ನು ಗೇಲಿಗಾಗಿ ಬಳಸುತ್ತಿರುವುದು ಸರಿಯಲ್ಲ ಅಷ್ಟಕ್ಕೂ ಅವರೇನು ಕೊರಾನ ವೈರಸ್ ಸ್ಟಾಗತಿಸಿದ್ದೇನಲ್ಲ.
ಇಲ್ಲಿ ಕೊರಾನಾ ವೈರಸ್ ಗೆ ಪಕ್ಷ ಇಲ್ಲ ಅದರ ನಿವಾರಣೆಗಾಗಿ ಯಾವುದೇ ಪಕ್ಷದವರು ಪ್ರಧಾನಿಯಾಗಿದ್ದರು ಮಾಡುವ ಕೆಲಸ ಪ್ರಧಾನಿಯಾದ ಮೋದಿ ಅವರು ಆ ದಿನ ಮಾಡಿದ್ದಾರೆ ಮತ್ತು ಸಾಂಕ್ರಮಿಕ ರೋಗ ತಡೆಗೆ ವಿಶ್ವಸಂಸ್ಥೆಯ ನೀತಿ ನಿಯಮ ಎಲ್ಲಾ ದೇಶಗಳು ಪಾಲಿಸಲೇಬೇಕು ಎಂಬುದನ್ನು ಮರೆಯಬಾರದು.
ಬಿಜೆಪಿ ಮತ್ತು ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವಾಸಿ ಮುಗ್ಧ ಜನರ ಆ ದಿನದ ಘಟನೆಯನ್ನು ಗೇಲಿಯಾಗಿ ಬಳಸುತ್ತಿರುವುದು ಸರಿ ಕಾಣುವುದಿಲ್ಲ.
ಇಲ್ಲಿ ಬಿಬಿಸಿಯ ಲಿಂಕ್ ಒಂದನ್ನು ನೀವು ಕ್ಲಿಕ್ ಮಾಡಿ ನೋಡಿದರೆ ತಿಳಿಯುತ್ತದೆ... https://www.bbc.com/news/av/uk-52054745
ಇಡೀ ವಿಶ್ವ ಅವತ್ತಿನ ಆ ಗಳಿಗೆಯ ಸಂಕಷ್ಟದಲ್ಲಿ ಆರೋಗ್ಯ ಕಾರ್ಯಕರ್ತರನ್ನ ನೈತಿಕ ಬೆಂಬಲ ನೀಡಲು ಈ ರೀತಿ ಚಪ್ಪಾಳೆ, ಮೇಣದಬತ್ತಿ ಬೆಳಗುವುದು, ಮೊಬೈಲ್ ಟಾರ್ಚ್ ಬೆಳಗಿಸುವುದು ಮಾಡುವುದು ದಾಖಲಾಗಿದೆ.
ಈಗಲೂ ಭಾರತದಲ್ಲಿ ಅನೇಕ ಮೂಡನಂಬಿಕೆಗಳು ಇದೆ, ಜಾತಿ ಪದ್ಧತಿಗಳಿದೆ ಅವುಗಳ ಮಧ್ಯೆ ನಾವು ಬದುಕುತ್ತಿಲ್ಲವೆ?...
Comments
Post a Comment