https://youtu.be/DDEYWL3rWhM?feature=shared
#ನನ್ನ_ಡೈಲಾಗ್_ಒಂದಿದೆ
#ನಾವಿದ್ದಲ್ಲೇ_ಸ್ವರ್ಗ_ಸೃಷ್ಟಿಸಿಕೊಳ್ಳುವುದು
#ಇದು_ನಾವು_ಮಾಡುವ_ಕೆಲಸ_ನಾವು_ಪ್ರೀತಿಸಬೇಕು
#ಇನ್ನೊಬ್ಬರ_ಜೊತೆ_ಹೋಲಿಕೆ_ಸಲ್ಲದು
#ನಮ್ಮದೇ_ಜೀವನದ_ಚೌಕಟ್ಟು_ಇರಲಿ.
ಅನೇಕ ಗೆಳೆಯರು ಕೇಳುತ್ತಾರೆ ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸಿಕೊಳ್ಳುವುದು ಹೇಗೆ.... ಇದನ್ನು ಅಕ್ಷರದಲ್ಲಿ ವಿವರಿಸುವುದು ಕಷ್ಟ ಆದರೆ ಸ್ವತಃ ಅನುಭವಿಸಲು ಸುಲಭ.
ವಯಸ್ಸು 50 ದಾಟುತ್ತಿದ್ದಂತೆ ಈ ಬಗ್ಗೆ ಜಾಗರೂಕರಾಗಬೇಕು, ಪ್ರಾಯದ ಅನೇಕ ಚಟುವಟಿಕೆಗಳಿಂದ ನಿವೃತ್ತರಾಗುತ್ತಾ ಬರಲು ಅಭ್ಯಾಸ ಶುರು ಮಾಡಬೇಕು.
ಆರೋಗ್ಯ ಅತಿ ಮುಖ್ಯ ಆದ್ದರಿಂದ ಅದಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ನಿತ್ಯ ವಾಕಿಂಗ್ ತಪ್ಪಿಸ ಬಾರದು.
ನೆಗಟೀವ್ ವ್ಯಕ್ತಿತ್ವದವರಿಂದ ದೂರವಾಗಬೇಕು, ಸುಳ್ಳು ಭ್ರಮೆ ಬಿಟ್ಟು ಬಿಡಬೇಕು, ಆಸೆಯನ್ನು ತ್ಯಜಿಸುತ್ತಾ ಸಾಗಬೇಕು.
ಸುಳ್ಳು ಹೇಳುವುದು, ಸುಳ್ಳು ಅಶ್ವಾಸನೆ ಸಂಪೂರ್ಣ ಬಿಡಬೇಕು ಇಲ್ಲದಿದ್ದರೆ ಅಂದು ಬಂದುಗಳು ಮಾತ್ರ ಅಲ್ಲ ಸುತ್ತಲಿನವರು ನಮ್ಮನ್ನು ನಂಬುವುದಿಲ್ಲ.
ಯಾರ ಮೇಲೂ ಅವಲಂಬಿತರಾಗಬಾರದು, ಯಾರನ್ನೂ ಹುಡುಕಿ ಕೊಂಡು ಹೋಗಬಾರದು, ಹೊಗಳಿಕೆ ಸನ್ಮಾನಕ್ಕೆ ಹಾತೊರೆಯಬಾರದು, ಎಲ್ಲೆಲ್ಲೂ ತನ್ನನ್ನು ಜನ ಗೌರವಿಸಬೇಕು ಎಂದೆಲ್ಲ ಬಯಸಬಾರದು.
ಶತೃತ್ವ, ಜಿಪುಣತನ, ಹೊಟ್ಟೆಕಿಚ್ಚು, ಇನ್ನೊಬ್ಬರಿಗೆ ಕೆಟ್ಟದು ಬಯಸುವುದು ಮನಸ್ಸಿಂದ ಸಂಪೂರ್ಣ ತೆಗೆದು ಹಾಕ ಬೇಕು.
ಮೇಲಿನ ಅಂಶಗಳನ್ನು ರೂಡಿ ಮಾಡಿಕೊಳ್ಳಲು ನಿತ್ಯ ಜೀವನದಲ್ಲಿ ಕೆಲ ಮಾರ್ಪಾಡುಗಳು ಅವಶ್ಯ... ನಾನು ಬೆಳಿಗ್ಗೆ ನನ್ನ ನಿತ್ಯಕರ್ಮ ಮುಗಿಸಿ ನನ್ನ ಶಂಭೂರಾಮನ ಜೊತೆ ಒಂದು ಗಂಟೆ ನಾನೇ ಸೃಷ್ಟಿಸಿಕೊಂಡ ನನ್ನದೇ ಸೆಕ್ಯುರಿಟಿ ಪೆನ್ಸಿಂಗ್ ಇರುವ ವಾಕಿಂಗ್ ಟ್ರಾಕ್ ನಲ್ಲಿ ವಾಕಿಂಗ್ (ರಾಟ್ ವೀಲರ್ ಶಂಭೂರಾಮನಿಂದ ಬೇರೆಯವರಿಗೆ ಅಪಾಯ ಆಗಬಾರದೆಂದು) ಮಾಡುತ್ತೇನೆ.
ವಾಕಿಂಗ್ ಮುಗಿದ ಮೇಲೆ ನನ್ನದೇ ಗಾರ್ಡನ್ ನಲ್ಲಿ ಪಾಟ್ ಗಳಲ್ಲಿ ಇರುವ ಗಿಡ ಬಳ್ಳಿಗಳಿಗೆ ನೀರುಣಿಸುವುದು ಇದು ಒಂದು ದಿನ ಕೂಡ ನೀರುಣಿಸದೆ ಇರಲು ಸಾಧ್ಯವೇ ಇಲ್ಲ ಯಾಕೆಂದರೆ ಗಿಡ ಬಳ್ಳಿಗಳ ಜೀವ ನಮ್ಮ ಜೀವದೊಂದಿಗೆ ಸೇರಿ ಬಿಟ್ಟಿರುತ್ತದೆ ಈ ನಿತ್ಯದ ಅಭ್ಯಾಸದಲ್ಲಿ.
ಇವೆಲ್ಲ ನಿತ್ಯದ ಬೆಳಗಿನ ರೋಟಿನ್ ಕೆಲಸ ದೇಹಕ್ಕೆ ಆಯಾಸ ಉಂಟು ಮಾಡಿದರೂ ಆ ಹೊತ್ತಿನಲ್ಲಿ ಸಿಗುವ ಈ ಅನುಭೂತಿಗಳು ಸ್ವರ್ಗ ಸಮಾನ.
ನಂತರ ಕಾಫಿ ಹಣ್ಣು ಸೇವಿಸಿ ಯೋಗಾಸನ - ಪ್ರಾಣಯಾಮ-ಕಪಾಲ ಬಾತಿ-ದ್ಯಾನ ಮುಗಿಸಿ ಉಪಹಾರ ನಂತರ ಸ್ನಾನ ಪೂಜೆ ಮುಗಿಸಿ ಮಧ್ಯಾಹ್ನ 12ಕ್ಕೆ ನನ್ನ ಕಛೇರಿಗೆ ಅಲ್ಲಿನ ನಿತ್ಯ ಆಡಳಿತ ವ್ಯವಹಾರ ಮುಗಿಸಿ 3 ರಿಂದ 4 ವಾಪಾಸು ಮನೆಗೆ ಊಟ ವಿಶ್ರಾಂತಿ ನಂತರ 6 ರಿಂದ 9 ಆಫೀಸು ಇದರ ಜೊತೆ ಓದು ಬರವಣಿಗೆ ಮಾತುಕಥೆ ನಂತರ ರಾತ್ರಿ ಮನೆಗೆ ಹಾಲು ಕುಡಿದು ನಿದ್ದೆ ಈ ರೀತಿ ನನ್ನ ನಿತ್ಯ ಜೀವನಕ್ಕೊಂದು ಚೌಕಟ್ಟು ಹಾಕಿಕೊಂಡಿದ್ದೇನೆ.
ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸುವುದು ಎಂದರೆ ಹಳೆಯ ಗಾದೆ ಇದೆಯಲ್ಲ ಚಾಪೆ ಇದ್ದಷ್ಟೇ ಕಾಲು ಚಾಚು ಎನ್ನುವಂತೆ.
Comments
Post a Comment