Blog number 2018. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮದ ಕೆಂಜಿಗಾಪುರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ 605 ವಷ೯ಗಳ ಹಿಂದೆ ಗಜ ಬೇಟೆಗಾರ ಬಿರುದಾಂಕಿತ ವಿಜಯನಗರ ಅರಸು ಪ್ರೌಡ ಪ್ರತಾಪರಾಯರಿಂದ ನಿರ್ಮಿಸಲ್ಪಟ್ಟಿದೆ ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ರಥೋತ್ಸವ ನೆರವೇರಲ್ಪಡುತ್ತದೆ.
#ನಮ್ಮ_ಊರಿನ_ಕೆಂಜಿಗಾಪುರದ
#ಶ್ರೀವೀರಭದ್ರ_ಸ್ವಾಮಿ_ದೇವರ_ಜಾತ್ರೆ_ರಥೋತ್ಸವ
#ಪ್ರತಿ_ವರ್ಷ_ಹೋಳಿ_ಹುಣ್ಣಿಮೆಗೆ_ರಥೋತ್ಸವ
#ವಿಜಯನಗರದ_ಅರಸು_ಪ್ರೌಡ_ಪ್ರತಾಪ_ರಾಯ_600_ವರ್ಷದ_ಹಿಂದೆ_ನಿರ್ಮಿಸಿದ_ದಾಖಲೆ
#ಪ್ರೌಡ_ಪ್ರತಾಪರಿಗೆ_ಗಜ_ಬೇಟೆಗಾರ_ಎಂಬ_ಬಿರುದು_ಇತ್ತು.
#ಸಾಗರದ_ವಕೀಲರಾದ_ಶಶಿಭೂಷಣರ_ತಂದೆ_ವಕೀಲ್_ಮರಿಯಪ್ಪನವರು_ಸ್ವಾತಂತ್ರ್ಯ_ಪೂರ್ವದಲ್ಲಿ
#ಆನಂದಪುರಂನ_ದೊಡ್ಡ_ಜಮೀನ್ದಾರರು_ಲೇವಾದೇವಿದಾರರು_ಆಗಿದ್ದರು.
#ಅವರ_ಮನೆದೇವರು_ಕೆಂಜಿಗಾಪುರದ_ಶ್ರೀ_ವೀರಭದ್ರ_ದೇವರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಕೆಂಜಿಗಾಪುರ ಈಗ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಳಿತಕ್ಕೆ ಒಳಪಟ್ಟಿದೆ.
ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ, ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಕೆಂಜಿಗಾಪುರದ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವ ನಡೆಯುತ್ತದೆ.
ಈ ದೇವಾಲಯ ವಿಜಯನಗರ ಸಾಮ್ರಾಜ್ಯದ ಅರಸು ಪ್ರೌಡ ಪ್ರತಾಪ ರಾಯ 1419 ರಲ್ಲಿ ನಿರ್ಮಿಸಿದ ಶಾಸನವಿದೆ (ಪ್ರೌಢಪ್ರತಾಪರಾಯ ಆಡಳಿತ ಅವಧಿ 1422-1446).
ವಿಜಯನಗರದ ಅರಸು ಪ್ರೌಡ ಪ್ರತಾಪ ರಾಯ ಆ ಕಾಲದಲ್ಲಿ ಅರಣ್ಯದಲ್ಲಿನ ಕಾಡಾನೆಗಳನ್ನು ಹಿಡಿದು ಪಳಗಿಸಿ ಅದನ್ನು ತನ್ನ ಸೈನ್ಯದಲ್ಲಿ ಬಳಸುತ್ತಿದ್ದಂತ ಸಾಹಸಿ ಆದ್ದರಿಂದ ಪ್ರೌಢ ಪ್ರತಾಪ ರಾಯರಿಗೆ #ಗಜ_ಬೇಟೆಗಾರ ಎಂಬ ಬಿರುದು ಇತ್ತು.
ಆರುನೂರು ವರ್ಷಗಳ ಹಿಂದೆ ಈ ಪ್ರದೇಶ ದೊಡ್ಡ ಜನ ವಸತಿ ಪ್ರದೇಶ ಆಗಿರಬೇಕು.
ಈ ದೇವಾಲಯ ನಿರ್ಮಾಣವಾಗಿ ಶಾಸನಗಳ ಪ್ರಕಾರ 605 ವರ್ಷಗಳಾಗಿದೆ, ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ದೇವರ ರಥ ಯಡೇಹಳ್ಳಿ ವೃತ್ತ ತಲುಪಿ ಆನಂದಪುರಂನ ಸಂತೆ ಮಾರ್ಕೆಟ್ ತನಕ ರಥ ರಾಜ ಬೀದಿ ಉತ್ಸವ ನಡೆಯುತ್ತಿತ್ತು ನಂತರ ಇದು ಯಡೇಹಳ್ಳಿ ವೃತ್ತಕ್ಕೆ ಸೀಮಿತವಾಗಿದ್ದು ಈಗ ಅದೂ ಬದಲಾಗಿ ದೇವಾಲಯದಿಂದ ಯಡೇಹಳ್ಳಿ ಪ್ರವಾಸಿ ಮುಂದಿರದ ಹಿಂಬಾಗದಲ್ಲಿರುವ ಗಡಿಕಲ್ಲಿನ ತನಕ ಮಾತ್ರ ರಥೋತ್ಸವ ನಡೆಯುತ್ತದೆ.
ಈ ದೇವಾಲಯದ ಅಭಿವೃದ್ಧಿಯಲ್ಲಿ ಸಾಗರದ ಖ್ಯಾತ ವಕೀಲರಾದ ಶಶಿಭೂಷಣರ ಕುಟುಂಬದವರು ದೊಡ್ಡ ಮಟ್ಟದ ದಾನಿಗಳಾಗಿ ಸೇವೆ ಸಲ್ಲಿಸಿದ್ದಾರೆ ಒಂದು ವಿಶೇಷ ಅಂದರೆ ಶಶಿಭೂಷಣರ ಪತ್ನಿ ಶ್ರೀಮತಿ ಸುನಂದಮ್ಮ ಕೆಳದಿ ವಂಶಸ್ಥರು.
Comments
Post a Comment