#ಇವತ್ತು_ಈ_ವರ್ಷದ_ಗೇರುಹಣ್ಣು_ಸಿಕ್ಕಿದೆ
#ಮೂಳೆ_ಸವಕಳಿ_ತಡೆಯುವ_ಔಷದಿಯುಕ್ತ_ಗೇರು_ಹಣ್ಣು
#ಗೇರು_ಹಣ್ಣಿನಿಂದ_ಪೆನ್ನಿ_ಎಂಬ_ಮಧ್ಯ_ತಯಾರಿಸುತ್ತಾರೆ
#ಗೇರು_ಬೀಜ_ಸಂಸ್ಕರಣೆ_ಮಾರಾಟದಲ್ಲಿ_ವಿಶ್ವದಲ್ಲಿ_ಮುಂಚೂಣಿಯ_ದೇಶಗಳಲ್ಲಿ_ಭಾರತವಿದೆ
#ಶಿಷ್ಯ_ಗೇರುಬೀಸಿನ_ಚೆನ್ನಪ್ಪ_ತಂದು_ಕೊಟ್ಟಿರುವ_ಗೇರು_ಹಣ್ಣು,
https://youtu.be/ikm4LNsKyJ4?feature=shared
ಇವತ್ತು ಬೆಳಿಗ್ಗೆ ಗೇರುಬೀಸಿನ ಚೆನ್ನಪ್ಪ ಗೇರುಹಣ್ಣುಗಳನ್ನು ತಂದು ಕೊಟ್ಟಿದ್ದನ್ನು ತೊಳೆದು ಉಪ್ಪು ನೀರಲ್ಲಿಟ್ಟು ನಂತರ ಕತ್ತರಿಸಿಕೊಂಡು ಹೊಟ್ಟೆ ತುಂಬಾ ತಿಂದು ಸಂತೃಪ್ತಿ ಪಟ್ಟೆ.
ಇದು ಪ್ರತಿ ವರ್ಷ ಆಯಾ ಕಾಲದ ಹಣ್ಣುಗಳನ್ನು ಹೇಗಾದರೂ ಸಂಪಾದಿಸಿ ತಿನ್ನುವ ನನ್ನ ಕ್ರಮ.
ಗೇರು ಹಣ್ಣಿನಲ್ಲಿ ಮೂಳೆ ಸವಕಳಿಯ ಔಷಧಿ ಗುಣಗಳಿದೆ ಆದ್ದರಿಂದ ಈ ಹಣ್ಣಿನ ಸೇವನೆ ಆರೋಗ್ಯಕರ ಕೂಡ.
ಗೋವಾದಲ್ಲಿ ಗೇರು ಹಣ್ಣು ಕೊಳೆಸಿ ಹುದಿ ಬರೆಸಿ ಭಟ್ಟಿ ಇಳಿಸುವ ಮೊದಲ ಹಂತದ #ಉರಾಕ್ ಎಂಬ ಮದ್ಯ ಪ್ರಸಿದ್ಧಿ ಪಡೆದಿದೆ ಪುನಃ ಉರಾಕ್ ಭಟ್ಟಿ ಇಳಿಸಿ #ಪೆನಿ ತಯಾರಿಸುತ್ತಾರೆ.
16ನೇ ಶತಮಾನದಲ್ಲಿ ಪೋರ್ಚ್ ಗೀಸರು ಗೋವಾ ಕರಾವಳಿಯಲ್ಲಿ ಮಣ್ಣಿನ ಸವಕಳಿ ತಡೆಯಲು ತಂದು ನಾಟಿ ಮಾಡಿದ ಈ ಗೇರು ದೇಶದಲ್ಲೇ ಹೆಚ್ಚು ಉದ್ಯೋಗ ರಪ್ತುಗಳಿಗೆ ಕಾರಣವಾಗಿದೆ.
Comments
Post a Comment