Blog number 2006. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಒಡನಾಟದ ಆನಂದಪುರಂನ ಮಧ್ಯ ಕಣ್ಣೂರಿನ ಅಡುಗೆ ಮನೆ ಮನೆತನದ ಕುಪ್ಪ ನಾಯಕರ ಮರಿ ಮೊಮ್ಮಗ ಯುವ ವಕೀಲ ಮಾಜಿ ಸಾಗರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ನನ್ನ ಅತಿಥಿ
#ನನ್ನ_ಇವತ್ತಿನ_ಅತಿಥಿ_ವಕೀಲರಾದ_ಕಣ್ಣೂರು_ಚೇತನರಾಜ್
#ಸಣ್ಣ_ವಯಸ್ಸಲ್ಲೇ_ಸಾಗರ_ತಾಲ್ಲೂಕ್_ಬಿಜೆಪಿ_ಅಧ್ಯಕ್ಷರಾಗಿದವರು
#ಕೃಷಿ_ಉತ್ಪನ್ನ_ಮಾರುಕಟ್ಟೆ_ಅಧ್ಯಕ್ಷರಾಗಿದ್ದವರು
#ಇವರ_ಮುತ್ತಜ್ಜ_ಕುಪ್ಪನಾಯಕರು_ಬಂಗಾರಪ್ಪರಿಗೆ_ಈ_ಭಾಗದಲ್ಲಿ_ಅತಿಥ್ಯ_ನೀಡಿದವರು
#ಇವರ_ಕಿರಿಯಜ್ಜ_ಡಾಕ್ಟರ್_ಬೋರಪ್ಪನವರು_ಧೀವರ_ಸಮಾಜ_ಮೊದಲ_ವೈದ್ಯರು.
https://youtu.be/xxIQou5hOPk?feature=shared
ಇವತ್ತು ವಕೀಲರು ಮತ್ತು ಮಾಜಿ ಸಾಗರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಚೇತನ್ ರಾಜ್ ಕಣ್ಣೂರು ಬಂದಿದ್ದರು.
ಇವರು ಸಾಗರ ತಾಲೂಕಿನ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದವರು ವಿಷೇಷ ಎಂದರೆ ಅತಿ ಸಣ್ಣ ವಯಸ್ಸಿನಲ್ಲೇ ಇವರು ದೊಡ್ಡ ದೊಡ್ಡ ಹುದ್ದೆ ಪಡೆದದ್ದು.
ಇವರ ತಂದೆಯ ಸಹೋದರಿ ಶ್ರೀಮತಿ ಭೂದೇವಿ ಪರುಶರಾಮ್ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗಿದ್ದಾಗ ನನ್ನ ಜೊತೆ ಬರೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿದ್ದರು.
ಇವರ ಕಿರಿಯಜ್ಜ ಡಾಕ್ಟರ್ ಬೋರಪ್ಪ ದೀವರ ಸಮಾಜದ ಪ್ರಥಮ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ವೈದ್ಯರಾದ ದಾಖಲೆ ಮಾಡಿದವರು, ನಾನು ಅವರನ್ನು ಸಾಗರ ತಾಲೂಕಿನ ಈಡಿಗರ ಸಮಾಜದ ಅಧ್ಯಕ್ಷರಾದ ಟಿ.ವಿ. ಪಾಂಡುರಂಗರ ಮನೆಯಲ್ಲಿ ಬೇಟಿ ಮಾಡಿದ್ದೆ, ನನ್ನ ತಂದೆಯ ನೆನಪು ಅವರು ಆ ದಿನ ಮಾಡಿದ್ದರು.
ಈ ಬಗ್ಗೆ ಹೊಸನಗರ ತಾಲೂಕಿನ ಮಾಜಿ ಶಾಸಕರಾದ ಡಾಕ್ಟರ್ ನಾರಾಯಣಪ್ಪ ತಮ್ಮ ಸಮಾಜದ ಮೊದಲ ವೈದ್ಯರು ಕಣ್ಣೂರಿನ ಡಾಕ್ಟರ್ ಬೋರಪ್ಪ ಅಂದಿದ್ದರು.
1997 ರಲ್ಲಿ ಶಿವಮೊಗ್ಗ ಜಿಲ್ಲಾ ಯುವ ಜನ ಮೇಳವನ್ನು ಆನಂದಪುರಂನಲ್ಲಿ ಆಗಿನ ಶಿವಮೊಗ್ಗ ಸಂಸದರಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ ಉದ್ಘಾಟನೆ ಮಾಡಿಸಿದ್ದೆ ಆಗ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯ.
ಉದ್ಘಾಟನಾ ಸಮಾರಂಭದ ನಂತರ ರಾತ್ರಿ ಬೋಜನ ಸಂಸದ ಬಂಗಾರಪ್ಪರಿಗೆ ನಮ್ಮ ಯಡೇಹಳ್ಳಿಯ ಬ್ರಿಟೀಶ್ ಬಂಗ್ಲೆ ( ಪ್ರವಾಸಿ ಮಂದಿರದಲ್ಲಿ) ಯಲ್ಲಿ ವ್ಯವಸ್ಥೆ ಮಾಡಿದ್ದೆ ಅಲ್ಲಿ ರಾತ್ರಿ ಊಟ ಮಾಡುವಾಗ ಬಂಗಾರಪ್ಪನವರು ಈ ಬ್ರಿಟೀಶ್ ಬಂಗಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಪರಿಹಾರದ ಕೋರ್ಟ್ ನಡೆಯುತ್ತಿದ್ದ ಬಗ್ಗೆ ನೆನಪು ಮಾಡಿಕೊಂಡಿದ್ದರು.
ಆಗ ಅವರ ವಾಸ್ತವ್ಯ ಈ ಚೇತನ್ ರಾಜ್ ಕಣ್ಣೂರಿನ ಮುತ್ತಜ್ಜ ಕುಪ್ಪ ನಾಯಕರ ಮನೆ ಆನಂದಪುರಂ ಸಮೀಪದ ಮಧ್ಯಕಣ್ಣೂರಿನ ಅಡುಗೆ ಮನೆ ಮನೆತನದ್ದು ಅವರ ಮನೆಯ ಹೊಸ ರ್ಯಾಲಿ ಸೈಕಲ್ ನಲ್ಲಿ ನಿತ್ಯ ಕೋಟ್೯ ಕಲಾಪಕ್ಕೆ ಬಂಗಾರಪ್ಪನವರು ಬರುತ್ತಿದ್ದರಂತೆ.
ಇವತ್ತು ಈ ಎಲ್ಲಾ ವಿಚಾರಗಳ ಚರ್ಚಿಸಿದೆವು ಇವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೇಸ್ ಸೇರಿ ಗೋಪಾಲ ಕೃಷ್ಣ ಬೇಳೂರು ಗೆಲುವಿಗೆ ಶ್ರಮಿಸಿದ್ದಾರೆ.
Comments
Post a Comment