Skip to main content

Blog number 2009. ಕೆಳದಿ ಅರಸರ ಕಾಲದಿಂದ ತೆರಿಗೆ ಇಲ್ಲದ ಗೋಕರ್ಣದ ಉಪ್ಪು... ಸಾಣೆ ಕಟ್ಟಾ ಉಪ್ಪು ಎಂಬ ಹೆಸರು ಬರಲು ಕಾರಣವಾದ ಸಾನು ನಾಯಕ ನಿರ್ಮಿಸಿದ ಒಡ್ಡು

#ಗೋಕರ್ಣದ_ಸಾಣಿಕಟ್ಟಾ_ಉಪ್ಪಿನ_ಕಥೆ.

#ಸಾನು_ನಾಯ್ಕ_ಕಟ್ಟಿದ_ಒಡ್ಡು_ಈ_ಉಪ್ಪಿಗೆ_ಈ_ಹೆಸರು_ಬರಲು_ಕಾರಣ

#ಈ_ಹೆಸರು_ಬರಲು_ಕಾರಣ_ಪುರುಷನ_ಗೌರವಿಸೋಣ.

#ಗೇರುಸೊಪ್ಪೆಯ_ಜೈನಕುಲದ_ಕಾಳುಮೆಣಸಿನ
ರಾಣಿ_ಚೆನ್ನಬೈರಾದೇವಿ_ಆಡಳಿತದಲ್ಲಿ

#ಕೆಳದಿ_ಅರಸರ_ಕಾಲದಲ್ಲಿ_ಗೋಕರ್ಣದ_ಉಪ್ಪಿಗೆ_ಯಾವುದೇ_ತೆರಿಗೆ_ಇರಲಿಲ್ಲ 

#ಆದರೆ_ನಂತರ_ಮೈಸೂರು_ಸಂಸ್ಥಾನ_ಗೋಕರ್ಣ_ಉಪ್ಪಿಗೆ_ತೆರಿಗೆ_ಪ್ರಾರಂಭಿಸಿತ್ತು

#ಪ್ರೆಂಚ್_ಕ್ರಾಂತಿ_ಮಹಾತ್ಮಗಾಂಧಿ_ಅವರ_ಉಪ್ಪಿನ_ಸತ್ಯಾಗ್ರಹ_ಇತಿಹಾಸದ_ಅನೇಕ_ಯುದ್ದಗಳು_ಉಪ್ಪಿಗಾಗಿ

#ವಾರ್ಷಿಕ_10ರಿಂದ_15ಸಾವಿರ_ಟನ್_ಉಪ್ಪು_ಉತ್ಪಾದಿಸುವ

#ದಿ_ನಾಗರಬೈಲು_ಸಾಲ್ಟ್_ಕೋಆಪರೇಟಿವ್_ಸೊಸೈಟಿ

#ಸಾಣಿಕಟ್ಟಾ_ಅಯೋಡಿನ್_ಯುಕ್ತ_ಒಂದು_ಕೇಜಿ_ಉಪ್ಪಿನ_ಬೆಲೆ_20_ರೂಪಾಯಿ.

   ಎಂಟು ಸಾವಿರ ವರ್ಷಗಳಿಂದ ಉಪ್ಪಿನ ಉಲ್ಲೇಖ ದಾಖಲೆ ಆಗಿದೆ,  ಉಪ್ಪಿನ ಗಣಿಯಿಂದ, ಉಪ್ಪುನೀರಿನ ಸರೋವರ ಮತ್ತು ಸಮುದ್ರದಿಂದ ಉಪ್ಪು ಸಂಸ್ಕರಿಸಿ ಬಳಸುವ ಪದ್ಧತಿಗಳು ಇದೆ.
  ಪುರಾತನ ಕಾಲದಲ್ಲಿ ಉಪ್ಪು ಕರೆನ್ಸಿ ರೀತಿ ವಿನಿಮಯ ಆಗುತ್ತಿತ್ತಂತೆ, ಉಪ್ಪಿಗಾಗಿ ಯುದ್ಧಗಳಾಗಿದೆ, ಪ್ರೆಂಚ್ ಕ್ರಾಂತಿಗೆ ಉಪ್ಪು ಕಾರಣವಾಗಿದೆ.
  ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಉಪ್ಪಿನ ಕರ ನಿರಾಕರಣೆಯ ಉಪ್ಪಿನ ಸತ್ಯಾಗ್ರಹ ದೇಶದಾದ್ಯಂತ ಸ್ವಾತಂತ್ರ್ಯ ಚಳವಳಿಗೆ ಬಿರುಸು ತಂದಿತ್ತು.
  ಕೆಳದಿ ಅರಸರ ಕಾಲದಲ್ಲಿ ಗೋಕರ್ಣದ ಉಪ್ಪು ತಯಾರಿಕಾ ಕೇಂದ್ರಕ್ಕೆ ಯಾವುದೇ ತೆರಿಗೆ ಇರಲಿಲ್ಲ ಆದರೆ ಕೆಳದಿ ರಾಜ್ಯ ಅವಸಾನದ ನಂತರ ಮೈಸೂರು ಸಂಸ್ಥಾನ ಗೋಕರ್ಣ ಉಪ್ಪಿಗೆ ತೆರಿಗೆ ವಿದಿಸಲು ಪ್ರಾರಂಬಿಸಿತ್ತು.
  ನವ ಶಿಲಾಯುಗದಿಂದ ಮಾನವ ಉಪ್ಪು ಬಳಸಲು ಪ್ರಾರಂಬಿಸಿರಬೇಕು ಪ್ರತಿ ನಿತ್ಯ ದೇಹಕ್ಕೆ ಉಪ್ಪು ಬೇಕೇ ಬೇಕು ಅದು ಹೆಚ್ಚಾದರೂ ಅನಾರೋಗ್ಯ ಮತ್ತು ಉಪ್ಪು ಬಳಸದಿದ್ದರೂ ಅನಾರೋಗ್ಯಕ್ಕೆ ಕಾರಣ ಆಗುತ್ತದೆ.
 ಸಾಣಿಕಟ್ಟಾ ಉಪ್ಪು ಸದ್ಯದಲ್ಲೇ ಬರಲಿರುವ ಮಾವಿನ ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿಗಾಗಿ ಹೆಚ್ಚು ಬೇಡಿಕೆ ಪ್ರಾರಂಭ ಆಗಿದೆ.
  ಸಾಣೆ ಕಟ್ಟಾ ಉಪ್ಪಿಗೆ ಕರ್ನಾಟಕ ಮಾತ್ರವಲ್ಲ ಗೋವಾ ರಾಜ್ಯದಲ್ಲೂ ಅಪಾರ ಬೇಡಿಕೆ ಇದೆ ಕಾರಣ ಈ ಉಪ್ಪು ಪ್ರಕೃತಿ ದತ್ತವಾದ ಬೌಗೋಳಿಕ ಪರಿಸರವನ್ನು ಬಳಸಿ #ಆಘನಾಶಿನಿ ನದಿ ಅರಬ್ಬಿ ಸಮುದ್ರ ಸೇರುವ ಗೋಕರ್ಣದಲ್ಲಿ ತಯಾರು ಆಗುವುದು ಒಂದು ಕಾರಣ ಇರಬಹುದು.
   ನಮ್ಮ ರಾಜ್ಯದ ಏಕ್ಯೆಕ ಉಪ್ಪು ತಯಾರಾಗುವ ಈ ಕೇಂದ್ರಕ್ಕೆ ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಳಾಗಿದ್ದ ಜೈನ ಕುಲದ ಚೆನ್ನಬೈರಾದೇವಿ ಆಡಳಿತ ಕಾಲದಲ್ಲಿ ಮತ್ತು ಅದರ ನಂತರ ಆಡಳಿತ ಮಾಡಿದ ಕೆಳದಿ ಅರಸರ ಕಾಲದಲ್ಲಿ ಪ್ರೋತ್ಸಾಹವಿತ್ತು ಮತ್ರು ತೆರಿಗೆ ಇರಲಿಲ್ಲ ಆದರೆ ಕೆಳದಿ ಸಂಸ್ಥಾನ ಟಿಪ್ಪು ಸುಲ್ತಾನರ ಆಳ್ವಿಕೆ ವಶಕ್ಕೆ ಬಂದ ನಂತರದಲ್ಲಿ ಮೈಸೂರು ಸಂಸ್ಥಾನ ಉಪ್ಪು ಸರ್ಕಾರದ ಆದಾಯದ ಮೂಲವಾಗಿ ಕರ ವಿದಿಸಿದ ದಾಖಲೆಗಳು ಇದೆ.
   1720 ರಲ್ಲಿ ಕೇವಲ 50 ಎಕರೆ ಪ್ರದೇಶದಲ್ಲಿ ಕೆಲವೇ ಕುಟುಂಬಗಳು ವಂಶ ಪಾರಂಪರ್ಯ ವೃತ್ತಿಯಾಗಿ ಗೋಕರ್ಣದ ಅಘನಾಶಿನಿ ಜಲಾನಯನ ಪ್ರದೇಶದಲ್ಲಿ ಉತ್ಪಾದಿಸಿ ಮಾರಾಟ ಮಾಡುತ್ತಿದ್ದ ಉಪ್ಪು 1975ರಲ್ಲಿ ಸಮುದ್ರದ ಹಿನ್ನೀರು ಅಘನಾಶಿನಿ ನದಿಯ ಅಳಿವೆ ಮೂಲಕ ಒಳನುಸುಳುವ ಕೊಲ್ಲಿಗೆ ಗೋಕರ್ಣ ಮತ್ತು ತೊರ್ಕೆ ಗುಡ್ಡ ಜೋಡಿಸುವ ಒಂದು ಒಡ್ಡು ನಿರ್ಮಿಸಿದ್ದರಿಂದ ಉಪ್ಪು ಉತ್ಪಾದನಾ ಪ್ರದೇಶ 50 ಎಕರೆಯಿಂದ 500 ಎಕರೆಗೆ ವಿಸ್ತಾರವಾಗಿ ಈಗ ವಾರ್ಷಿಕ 15 ಸಾವಿರ ಟನ್ ಉಪ್ಪು ಉತ್ಪಾದನೆಗೆ ಕಾರಣವಾಗಿದೆ.
  ಸ್ಥಳಿಯ ಹಿಂದುಳಿದ ವರ್ಗದ #ಅಗೇರ ಎಂಬ ಜನಾಂಗದವರು ಇಲ್ಲಿನ ಸಂಪ್ರದಾಯಿಕ ಉಪ್ಪು ತಯಾರಕರು ಈಗ ಇತರರೂ ಉಪ್ಪು ಸಂಸ್ಕರಣದ ಕೆಲಸ ಮಾಡುತ್ತಿದ್ದಾರೆ.
   ಇದಕ್ಕೆ ಕಾರಣವಾದವರು ಪಾರಂಪಾರಿಕ ಉಪ್ಪು ಉತ್ಪಾದಿಸುವ ಹಿಂದುಳಿದ ಸಮಾಜದ ಅವಿದ್ಯಾವಂತ ಹಳ್ಳಿಯ ಯುವಕ #ಸಾನು_ನಾಯ್ಕ,ಈತ ತಾಂತ್ರಿಕ ಕೌಶಲ್ಯ ಹೊಂದಿದ್ದ ಯುವಕನಾಗಿದ್ದರಿಂದ ಉಪ್ಪಿನ ಘಟಕಗಳ ಮಾಲಿಕರುಗಳು ಸಾನು ನಾಯ್ಕನ ನೇತೃತ್ವದಲ್ಲಿ ಒಡ್ಡು ಕಟ್ಟಿದ್ದರಿಂದ ಸ್ಥಳಿಯ ಉಪ್ಪು ಉತ್ಪಾದನೆ ಹೆಚ್ಚಾಗಲು ಕಾರಣವಾದ ಸಾನು ನಾಯಕರ ಕೌಶಲ್ಯಕ್ಕಾಗಿ ಈ ಒಡ್ಡಿಗೆ #ಸಾಣಿಕಟ್ಟು (ಪ್ರಾರಂಭದಲ್ಲಿ ಸಾಣು ಕಟ್ಟೆ ನಂತರ ಜನರ ಬಾಯಿoದ ಬಾಯಿಗೆ ಸಾಣಿ ಕಟ್ಟಾ ಆಗಿರಬೇಕು) ಹೆಸರಾಯಿತು,ಈ ಹೆಸರಲ್ಲೇ ಇಲ್ಲಿನ ಉಪ್ಪಿಗೆ ಸಾಣಿಕಟ್ಟಾ ಉಪ್ಪು ಎಂದು ಪ್ರಸಿದ್ಧಿ ಆಯಿತು.
  1952 ರಲ್ಲಿ ಉಪ್ಪು ಉತ್ಪಾದಕರ ಸಹಕಾರ ಸಂಘ ನೊ೦ದಾವಣೆ ಆಯಿತು, 1993 ರಲ್ಲಿ ಸರ್ಕಾರದ ನಿಯಮಾವಳಿಯಂತೆ ಅಯೋಡಿನ್ ಯುಕ್ತ ಉಪ್ಪು ಉತ್ಪಾದಿಸುತ್ತಿದೆ.
   ಈಗ 350 ಸದಸ್ಯರ ಈ ಸಾಣೆಕಟ್ಟಾ ಉಪ್ಪು ಉತ್ಪಾದಕರ ಸಹಕಾರ ಸಂಘ 500 ಎಕರೆ ಪ್ರದೇಶದಲ್ಲಿ 300 ಕುಟುಂಬಗಳ ಸಹಬಾಗಿತ್ವದ ಶ್ರಮದಲ್ಲಿ ವಾರ್ಷಿಕ 15 ಸಾವಿರ ಟನ್ ಉಪ್ಪು ಉತ್ಪಾದಿಸಿದರೂ ಅದರ ಬೇಡಿಕೆಯ ಗುರಿ ಮುಟ್ಟಲಾಗುತ್ತಿಲ್ಲ.
   ದೇಶದಲ್ಲಿ ಗುಜರಾತ್, ತಮಿಳುನಾಡುಗಳು ಮತ್ತು ರಾಜಸ್ತಾನ ಉಪ್ಪು ಉತ್ಪಾದನೆಯಲ್ಲಿ ಮುಂದಿರುವ ರಾಜ್ಯಗಳು ಮತ್ತು ದೇಶದ ಉಪ್ಪು ಉತ್ಪಾದನೆ ಮತ್ತು ಮಾರಾಟದಲ್ಲಿ ಬಹುಪಾಲು ಹೊ೦ದಿರುವ ಟಾಟಾ ಸಾಲ್ಟ್ ಗಳ ಮದ್ಯೆ ಕನಾ೯ಟಕದ ಸಾಣಿಕಟ್ಟಾ ಉಪ್ಪು ಬಹು ಬೇಡಿಕೆ ಪಡೆದಿದೆ.
  ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಸಂಪ್ರದಾಯಿಕ ಉಪ್ಪಿಗೆ ಜೀಯೋ ಗ್ರಾಪಿಕಲ್ ಇಂಡಿಕೇಶನ್ ಟ್ಯಾಗ್ (G I Tag ) ನೀಡಿ ಪ್ರೋತ್ಸಾಹಿಸಲು ವಿಳಂಬ ಮಾಡುತ್ತಿರುವುದು ವಿಷಾದನೀಯ ಆಗಿದೆ..

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...