#ಆನಂದಪುರಂನ_ಅಭಿವೃದ್ಧಿಗಾಗಿ_ಆಯ್ಯಂಗಾರರ_ಕುಟುಂಬದ_ಎಲ್ಲಾ_ಕೊಡುಗೆಯಲಿ
#ವೇದನಾರಾಯಣಭಟ್ಟರ_ಕುಟುಂಬದ_ಒಂದಲ್ಲಾ_ಒಂದು_ರೀತಿಯ_ಬೌದ್ಧಿಕ_ಸಹಾಯ_ಸಹಕಾರ_ಮರೆಯುವಂತಿಲ್ಲ
#ದಾರವಾಡ_ಜಿಲ್ಲೆಯ_ಕೋಳಿವಾಡದಿಂದ_ತೀರ್ಥಹಳ್ಳಿ_ಬೊಮ್ಮರಸನ_ಅಗ್ರಹಾರಕ್ಕೆ
#ಅಲ್ಲಿಂದ_ಆನಂದಪುರಂಗೆ_ಬಂದು_ನೆಲೆಸಿದ
#ವೇದನಾರಾಯಣ್_ಭಟ್ಟರ_ಕುಟುಂಬ.
ದೂರದ ದಾರವಾಡ ಜಿಲ್ಲೆಯ ಕೋಳಿವಾಡದಿಂದ ಆ ಕಾಲದ ಮಂತ್ರಿ ಬೊಮ್ಮರಸರ ಆಶ್ರಯ ಕೋರಿ ತೀರ್ಥಹಳ್ಳಿಗೆ ಬಂದು ತೀರ್ಥಳ್ಳಿಯ ಬೊಮ್ಮರಸ ಅಗ್ರಹಾರದಲ್ಲಿ ನೆಲೆಸಿದ ಕುಟುಂಬ ನಂತರ ಆನಂದಪುರಂನ ಅಗ್ರಹಾರಕ್ಕೆ ಬಂದು ನೆಲೆಸಿದ ಇತಿಹಾಸ ಇರುವ ಈ ಕುಟುಂಬ ಅಯ್ಯಂಗಾರರ ಕುಟುಂಬ ಆನಂದಪುರಕ್ಕೆ ಬರುವುದಕ್ಕಿಂತ ಮೊದಲೇ ಆನಂದಪುರಂ ನಲ್ಲಿ ನೆಲೆಸಿದವರು.
ಏಕಾಂಬರೇಶ್ವರ ಭಟ್ಟರು ಆ ಕಾಲದಲ್ಲಿ ಗಿಳಾಲಗುಂಡಿ ಮತ್ತು ಕೆರೆಹಿತ್ತಲು ಪಟೇಲರ ಜೊತೆ ಶ್ಯಾನುಬೋಗಿಕೆ ವೃತ್ತಿ ನಡೆಸುತ್ತಿದ್ದರು, ಪ್ರಖ್ಯಾತರಾದ ಪುರಾತನ ದ್ವಾರಕಾ ನಗರ ಸಂಶೋದಿಸಿದ ಡಾ.ಎಸ್. ಆರ್.ರಾವ್ ತಂದೆ ಆನಂದಪುರಂನ ಇವರ ಮಾಲಿಕತ್ವದ ಮನೇನಲ್ಲಿ ವಾಸವಾಗಿದ್ದಾಗಲೆ ಆ ಮನೇನಲ್ಲಿ ಡಾ.ಎಸ್.ಆರ್.ರಾವ್ ಜನಿಸಿದ್ದು ಇತಿಹಾಸ.
(ಡಾ. S.R. ರಾವ್)
ಇವರ ಪುತ್ರರೆ ವೇದನಾರಾಯಣ ಭಟ್ಟರು, ಇವರು ಸರ್ಕಾರದ ಆಹಾರ ಇಲಾಖೆಯಲ್ಲಿದ್ದರು, ಆನಂದಪುರ೦ನ ಅಯ್ಯಂಗಾರರ ಮಿಲ್ ನಲ್ಲಿ ಲೇವಿ ಸಂಗ್ರಹಕ್ಕೆ ನಿಯೋಜಿತರಾಗಿದ್ದಾಗಲೇ ದೂರ ಪ್ರದೇಶಕ್ಕೆ ವರ್ಗಾವಣೆ ಆಗುತ್ತದೆ, ಆಗ ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲಯ್ಯಂಗಾರರು ಇವರನ್ನು ಹೋಗ ಕೊಡದೆ ತಮ್ಮ ಅಕ್ಕಿ ಗಿರಣಿಯ ಜವಾಬ್ದಾರಿ ವಹಿಸುತ್ತಾರೆ.
(ವೆಂಕಟಚಲಾಯ್ಯಂಗಾರ್)
ವೇದನಾರಾಯಣ ಭಟ್ಟರು ಅಕ್ಕಿ ಗಿರಣಿಯ ಜವಾಬ್ದಾರಿ ಜೊತೆಗೆ ತಂದೆಯ ನಂತರ ವಂಶಪಾರಂಪರ್ಯ ವೃತ್ತಿಯಾದ ಗಿಳಾಲಗುಂಡಿ ಮತ್ತು ಕೆರೆ ಹಿತ್ತಲು ಶ್ಯಾನುಬೋಗಿಕೆಯನ್ನು ಮುಂದುವರಿಸುತ್ತಾರೆ ಆಗ ಗಿಳಾಲಗುಂಡಿ ಪಟೇಲರಾಗಿ ಗಂಗಾಧರ ಗೌಡರು ಮತ್ತು ಕೆರೆಹಿತ್ತಲ ಪಟೇಲರಾಗಿ ರೇವಪ್ಪ ಗೌಡರ ತಂದೆ ಇರುತ್ತಾರೆ.
ಆ ಕಾಲದಲ್ಲಿ ಆನಂದಪುರಂ ನಲ್ಲಿ ಮಿತ್ರ ಸಂಘ ಎಂಬ ಅತ್ಯುತ್ತಮ ಯುವಕ ಸಂಘ ಊರಲ್ಲಿ ನಾಟಕ ಕಲಿತು ಪ್ರದರ್ಶನ ಮಾಡುತ್ತಿತ್ತು, ಈ ನಾಟಕಗಳಲ್ಲಿ ವೇದ ನಾರಾಯಣ ಭಟ್ಟರು ಪ್ರಸಿದ್ಧ ಕಲಾವಿದರಾಗಿದ್ದರು ಆಗ ಭದ್ರಾವತಿ ಮತ್ತು ಜೋಗ್ ಪಾಲ್ಸ್ ನಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ದೆಯಲ್ಲಿ ವೇದ ನಾರಾಯಣ ಭಟ್ಟರು ಸತತವಾಗಿ ರಾಜ್ಯ ಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.
ಪ್ರಖ್ಯಾತ ಬೇಲೂರು ಕೃಷ್ಣಮೂರ್ತಿಗಳು ಬರೆದ "ಪಜೀತಿ" ಎಂಬ ನಾಟಕದಲ್ಲಿ ಬರುವ ಮುರಾರಿ ಪಾತ್ರ ಇವರದ್ದು.
ಆ ಕಾಲದ ಶಿಸ್ತಿನ ಸಿಪಾಯಿ ಬಿರುದಿನ ದೈಹಿಕ ಶಿಕ್ಷಕರಾಗಿದ್ದ ಎಸ್.ಆರ್.ಕೃಷ್ಣಪ್ಪ (SRK) ಕೂಡ ಈ ನಾಟಕ ತಂಡದಲ್ಲಿ ನಟಿಸುತ್ತಿದ್ದರು, ಬೇಲೂರು ಕೃಷ್ಣಮೂರ್ತಿಗಳು ಮತ್ತು SRK ಆತ್ಮೀಯ ಗೆಳೆಯರು, ಒಂದಾಗಿ ಓದಿದವರು ಹಾಗಾಗಿ ಬೇಲೂರು ಕೃಷ್ಣಮೂರ್ತಿಗಳು ಆನಂದಪುರಂ ನಲ್ಲಿ ಒಮ್ಮೆ ನಾಟಕ ಪ್ರದರ್ಶನದ೦ದು ಬಂದಿರುತ್ತಾರೆ.
ಆ ಕಾಲದಲ್ಲಿ ಪ್ರಭಾಕರ್, ರಾಜ ರಾಮ್ ಕಾಮತ್, ಬ್ಯಾಂಕ್ ಮ್ಯಾನೇಜರ್ ಆಗಿದ್ದ ಸಾಗರ ಉದಯ ಕಲಾವಿದ ವೃಂದದ ರಾಘವೇಂದ್ರ "ಮಿತ್ರ ಸಂಘ"ದಲ್ಲಿ ಸಕ್ರಿಯರಾಗಿದ್ದರು.
ನಂತರ ಮಿತ್ರ ಸಂಘದಲ್ಲಿ ಇವರ ಪುತ್ರ ರಂಗನಾಥ ಭಟ್ಟರು, ತಿಂಡಿ ಕೃಷ್ಣಣ್ಣ, ನಮ್ಮ ತಂದೆ ಕೃಷ್ಣಪ್ಪ, ಕೆರೆಹಿತ್ತಲು ಲಿಂಗಾರ್ಜುನ ಗೌಡರು, ಜೋಗಿ ಹನುಮಂತಣ್ಣ ಮುಂತಾದವರು ಮುಂದುವರಿದಿದ್ದರು.
ವೇದ ನಾರಾಯಣ ಭಟ್ಟರು ಇಂಗ್ಲೀಷ್ ಬಾಷೆಯಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದರು, ಅಪಾರ ಓದು ಬರವಣಿಗೆ ಜೊತೆಗೆ ತಮ್ಮ ಕೆಲಸದಲ್ಲಿ ಶಿಸ್ತು ಅಳವಡಿಸಿಕೊಂಡಿದ್ದ ದೈವಭಕ್ತರಾಗಿದ್ದರು ಆದ್ದರಿಂದಲೇ ಅಯ್ಯಂಗಾರ್ ಕುಟುಂಬ ತಮ್ಮ ದೈನಂದಿನ ಪತ್ರ ವ್ಯವಹಾರ, ಸರ್ಕಾರದ ಜೊತೆ ಸಂಪರ್ಕಕ್ಕಾಗಿ ವೇದ ನಾರಾಯಣ ಭಟ್ಟರಿಗೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಿದ್ದರು, ವೇದನಾರಾಯಣ ಭಟ್ಟರು ಆನಂದಪುರಂ ವಿಲೇಜ್ ಪಂಚಾಯತ್ ಗೆ ಸುಮಾರು 30 ವರ್ಷ ಸತತವಾಗಿ ಸದಸ್ಯರಾಗಿರುತ್ತಾರೆ ಮತ್ತು ಒಂದು ಅವಧಿಗೆ ಉಪಾದ್ಯಕ್ಷರೂ ಆಗಿರುತ್ತಾರೆ.
ಇದಕ್ಕೊಂದು ಉದಾಹರಣೆ ಆಗಿನ ಆನಂದಪುರಂ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರುಗಳು ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರನ್ನು ವಿದಾನ ಸೌದದಲ್ಲಿ ಬೇಟಿ ಮಾಡಿ ಆನಂದಪುರಂಗೆ ಜ್ಯೂನಿಯರ್ ಕಾಲೇಜು ಮಂಜೂರು ಮಾಡಿಸಲು ವಿನಂತಿಸುತ್ತಾರೆ, ಅದಕ್ಕೆ ಪೂರಕವಾಗಿ ಕಾಲೇಜು ಮಂಜೂರು ಮಾಡಲು ವಿದ್ಯಾ ಮಂತ್ರಿಗಳು ತಯಾರಾಗುತ್ತಾರೆ ಆದರೆ ಇವರಾರು ದಾಖಲೆ, ಲಿಖಿತ ಮನವಿ ಒಯ್ದಿರುವುದಿಲ್ಲ ಆದ್ದರಿಂದ ತಕ್ಷಣ ವೇದನಾರಾಯಣ ಭಟ್ಟರನ್ನು ಕರೆತರಲು ಹೇಳುತ್ತಾರೆ. ರಾತ್ರೋ ರಾತ್ರಿ ಆನಂದಪುರದ ಉದ್ದಿಮೆದಾರರಾಗಿದ್ದ ಯಹ್ಯಾ ಸಾಹೇಬರು ತಮ್ಮ ಜೀಪಿನಲ್ಲಿ ವೇದ ನಾರಾಯಣ ಭಟ್ಟರನ್ನು ಬೆಂಗಳೂರಿನ ವಿಧಾನ ಸೌದಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ವಿದ್ಯಾ ಮಂತ್ರಿಗಳಿಗೆ ಆನಂದಪುರಂಗೆ ಕಾಲೇಜು ಮಂಜೂರಾತಿ ಮಾಡಲು ಬೇಕಾದ ಪೂರಕ ಬರವಣಿಗೆಯ ಮನವಿ ದಾಖಲೆಗಳನ್ನು ವೇದನಾರಾಯಣ ಭಟ್ಟರು ಪೂರೈಸುತ್ತಾರೆ ಮತ್ತು ಕಾಲೇಜು ಮಂಜೂರು ಮಾಡಿಸಿಕೊಂಡು ಊರಿಗೆ ಬರುತ್ತಾರೆ.
ವೇದನಾರಾಯಣ ಭಟ್ಟರಿಗೆ ಏಳು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು. ಮಾದವ ಭಟ್ಟರು, ಗಂಗಾಧರ ಭಟ್ಟರು, ರಂಗನಾಥ ಭಟ್ಟರು, ಸುಂದರೇಶ ಭಟ್ಟರು, ಕೇಶವಮೂರ್ತಿ ಭಟ್ಟರು, ಕೃಷ್ಣಮೂರ್ತಿ ಭಟ್ಟರು, ಮಗಳು ಪ್ರೇಮಾ ಕುಮಾರಿ ಮತ್ತು ಸುರೇಶ್ ಕುಮಾರ್ ಭಟ್ಟರು.
ಕೂಡ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯ೦ ನಿವೃತ್ತಿ ಪಡೆದು ಸಾಗರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ.
ಗಂಗಾಧರ ಭಟ್ಟರು ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ನಿವೃತ್ತರಾಗಿದ್ದಾರೆ
(ಗಂಗಾಧರ್ ಭಟ್ಟರು )
ಇವರಿಗೆ ಬಾಲಚಂದ್ರ, ರಾಘವೇಂದ್ರ ಎಂಬ ಇಬ್ಬರು ಪುತ್ರರು, ಇಂದಿರಾ ಮತ್ತು ಸುವರ್ಣ ಎಂಬ ಇಬ್ಬರು ಪುತ್ರಿಯರಿದ್ದಾರೆ ಬಾಲಚಂದ್ರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಭಾಗಿ ಆಗಿ ಕಾರ್ಗಿಲ್ ಪ್ರಶಸ್ತಿ ಪಡೆದಿದ್ದಾರೆ, ರಾಘವೇಂದ್ರ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
ಕಂದಾಯ ಇಲಾಖೆಯಲ್ಲಿ ನೌಕರಿ ಮಾಡಿ ನಿವೃತ್ತರಾಗಿದ್ದಾರೆ ಇವರಿಗೆ ದಾವಣಗೆರೆಯಲ್ಲಿ ಮೆಡಿಕಲ್ ಕಂಪನಿಯಲ್ಲಿ ವ್ಯವಸ್ಥಾಪಕ ವೃತ್ತಿ ಮಾಡುವ ಕಿರಣ್ ಕುಮಾರ್ (ಕಿರಣ್ ಕುಮಾರ್)
ಎಂಬ ಪುತ್ರ ಮತ್ತು ಶಿವಮೊಗ್ಗದಲ್ಲಿ ಶಿಕ್ಷಕಿ ಆಗಿರುವ ಪೂರ್ಣಿಮಾ ಎಂಬ ಪುತ್ರಿ.
ನಿವೃತ್ತರಾಗಿ ಆನಂದಪುರಂ ನಲ್ಲಿ ವಾಸವಾಗಿದ್ದಾರೆ ಇವರ ಪುತ್ರ ದೀಪು ಆನಂದಪುರಂ ನಲ್ಲಿ ಕೌಶಲ್ಯ ತರಬೇತಿ ಕೇಂದ್ರ ನಡೆಸುತ್ತಿದ್ದಾರೆ ( ದೀಪು ಪವಿ)
ಇವರ ಪುತ್ರಿ ದಿವ್ಯ ಕಾಲೇಜಿನಲಿ ಉಪನ್ಯಾಸಕಿ ಆಗಿ ಚಿತ್ರದುರ್ಗದಲ್ಲಿ ನೆಲೆಸಿದ್ದಾರೆ.
ಬೆಂಗಳೂರಲ್ಲಿ ನೆಲೆಸಿದ್ದಾರೆ ಇವರ ಪುತ್ರ ಅನಿಲ್ ಭಟ್ಟರು ಪ್ರತಿಷ್ಠಿತ ಮಣಿಪಾಲು ಸಂಸ್ಥೆಯ ಆಸ್ಪತ್ರೆಯಲ್ಲಿ ಆರ್ತೋಪೆಡಿಕ್ ಡಿಪಾರ್ಟ್ಮೆಂಟ್ ಡೀನ್ ಆಗಿದ್ದಾರೆ ( ಡಾ.ಅನಿಲ್ ಭಟ್ )
ದೇಶದ ಕೆಲವೇ ಪ್ರಖ್ಯಾತ ವೈದ್ಯರ ಸಾಲಿನಲ್ಲಿದ್ದಾರೆ, ಇವರ ಇನ್ನೊಬ್ಬ ಪುತ್ರ ಸುನಿಲ್ ಕುಮಾರ್ ಅಮೇರಿಕಾದಲ್ಲಿ ಉದ್ಯೋಗಿ ಆಗಿದ್ದಾರೆ, ಮಗಳು ಅನಿತಾ.
ವೇದ ನಾರಾಯಣ ಭಟ್ಟರ ಏಕೈಕ ಪುತ್ರಿ ಪ್ರೇಮ ಕುಮಾರಿಯವರಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು, ಪುತ್ರ P.S. ಕೃಷ್ಣಮೂರ್ತಿ ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್, ಮಗಳು ಅಶ್ವಿನಿ ಶಿಕ್ಷಕಿ ಆಗಿದ್ದಾರೆ ಇನ್ನೊಬ್ಬ ಮಗಳು ಬೆಂಗಳೂರಲ್ಲಿದ್ದಾರೆ.
ಕೃಷ್ಣಮೂರ್ತಿಯವರು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿಯಲ್ಲಿ ಡಿಸ್ಟ್ರಿಕ್ಟ್ ಹೆಲ್ತ್ ಸೂಪರಿಡೆಂಟ್ ಆಗಿ ನಿವೃತ್ತರಾಗಿದ್ದಾರೆ (ಕೃಷ್ಣಮೂತಿ೯ ಭಟ್ )
ಇವರ ಇಬ್ಬರು ಪುತ್ರರು ರಘುನಂದನ್, ಚೇತನ್ ಅಮೇರಿಕಾದಲ್ಲಿ ನೆಲೆಸಿದ್ದಾರೆ.
ಕೊನೆಯ ಪುತ್ರ ಅತ್ಯಂತ ಬುದ್ದಿವಂತ ಮತ್ತು ನೆನಪಿನ ಶಕ್ತಿ ಹೊಂದಿರುವ ಕೆ.ವಿ.ಸುರೇಶ್ ಕುಮಾರ್ ಶಿವಮೊಗ್ಗದಲ್ಲಿ ಸ್ವಂತ ಮಾರುಕಟ್ಟೆ ಉದ್ಯಮ ನಡೆಸಿಕೊಂಡಿದ್ದಾರೆ
(ಕೆ.ವಿ.ಸುರೇಶ್ ಕುಮಾರ್)
ಇವರಿಗೆ ಏಕೈಕ ಪ್ರತ್ರಿ ಸುಪ್ರಿಯ ಇವರನ್ನು ಅಕ್ಕನ ಮಗ ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಆಗಿರುವ P.S. ಕೃಷ್ಣಮೂರ್ತಿಗೆ ಮದುವೆ ಮಾಡಿ ಕೊಟ್ಟಿದ್ದಾರೆ.
ಆನಂದಪುರಂನ ಅಭಿವೃದ್ಧಿಗೆ ಅಯ್ಯಂಗಾರರ ಎಲ್ಲಾ ಕೊಡುಗೆಯಲ್ಲಿ ವೇದ ನಾರಾಯಣ ಭಟ್ಟರ ಕುಟುಂಬದ ಒಂದಲ್ಲಾ ಒ0ದು ರೀತಿಯ ಬೌದ್ದಿಕ ಸಹಾಯ ಸಹಕಾರ ಮರೆಯುವಂತಿಲ್ಲ.
ನಾಳೆ ಭಾಗ- 19
Comments
Post a Comment