ಭಾಗ - 12, ಆ ಕಾಲದ ಅಗರ್ಭ ಶ್ರೀಮಂತರ ಈಗ ಶಿಥಿಲವಾಗಿರುವ ಬೃಹತ್ ಮನೆ ಆನಂದಪುರದ ಸಾಹುಕಾರ್ ಚೆನ್ನಪ್ಪ ಶೆಟ್ಟರ ಕುಟುಂಬ ಕೊನೆ ಕೊನೆಗೆ ಅತ್ಯಂತ ಬಡತನ ಅನುಭವಿಸಿದ ಹೊತ್ತಿನ ಊಟಕ್ಕೂ ಸಾಧ್ಯವಾಗದ ಜನ ಮರೆತ ಕಥೆ ನೆನಪಿಸುತ್ತದೆ, ಈ ಮನೆ ಮಲ್ಲೇಶಿ ಮನೆ ಎಂತಲೇ ಜನ ಈಗ ಕರೆಯುತ್ತಾರೆ.
#ಭಾಗ_12
ಆ_ಕಾಲದಲ್ಲಿ_ಆನಂದಪುರದ_ಶ್ರೀಮಂತ_ಮನೆತನ_ಸಾಹುಕಾರ್_ಚೆನ್ನಪ್ಪಶೆಟ್ಟರದ್ದು.
ಎಲ್ಲಾ_ನ್ಯಾಯ_ಪಂಚಾಯಿತಿ_ಇವರ_ಮನೇನಲ್ಲಿ
ಸಾಹುಕಾರ್ ಚೆನ್ನಪ್ಪ ಶೆಟ್ಟರು ಮಾಡದ ಪಂಚಾಯಿತಿ ಮಾತ್ರ ರಾಮ ಕೃಷ್ಣ ಆಯ್ಯಂಗಾರ್ ಮಾಡುತ್ತಿದ್ದರೆಂದರೆ ಆನಂದಪುರಂನ ಮುಖ್ಯ ಬೀದಿಯ ಅರಮನೆ ಅಂತ ಮನೆ, ನೂರಾರು ಎಕರೆ ಭೂ ಹಿಡುವಳಿ, ಲೇವಾದೇವಿ ಮತ್ತು ಅಂಗಡಿ ಮಾಲಿಕರ ಅಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಸ್ಥಾನಮಾನ ಅಥ೯ ಆದೀತು.
ಲಿಂಗಾಯಿತ ಶೆಟ್ಟಿ ಬಣಜಿಗರು ಕೆಳದಿ ಅರಸರ ಕಾಲದಲ್ಲಿ ಶ್ರೀಮಂತ ವರ್ತಕರು, ರಾಜರ ಕಾಲದಲ್ಲಿ ದಾನ ಧರ್ಮ ಮಾಡಿದವರು. ಈ ವರ್ತಕ ವೃಂದದವರೇ ಆದ ಇವರ ಜಾತಿಯವರಾದ ಚೆನ್ನ ಶೆಟ್ಟಿ ಎಂಬುವವರು ಮಾಡಿದ ಉಪಕಾರ, ಕಟ್ಟಿಸಿದ ಕೆರೆಗಾಗಿ ಗೌರವಾರ್ಥಕವಾಗಿ ರಾಜರ ಕಾಲದಲ್ಲಿ ಆ ಹಳ್ಳಿಗೆ ಚೆನ್ನ ಶೆಟ್ಟಿ ಕೊಪ್ಪ ಎಂದು ಹೆಸರಿಸಿದ್ದು ಈಗಲೂ ಮುಂದುವರಿದಿದೆ ಅದು ಈಗ ಆನಂದಪುರಂ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನ ಶೆಟ್ಟಿ ಕೊಪ್ಪ,
ಹೊಸನಗರ ತಾಲ್ಲೂಕಿನ ಬಟ್ಟೆ ಮಲ್ಲಪ್ಪ ಕೂಡ ಖ್ಯಾತ ಬಟ್ಟೆ ವ್ಯಾಪಾರಿ ಮಲ್ಲಪ್ಪ ಶೆಟ್ಟಿ ಹೆಸರು ಅಂತೆ.
ಸಾಹುಕಾರ್ ಚೆನ್ನಪ್ಪ ಶೆಟ್ಟರು ಇಂತಹ ಅಗಭ೯ ಶ್ರೀಮಂತಿಕೆ ಮತ್ತು ಸಾಮಾಜಿಕ ಗೌರವ ಪಡೆದವರಲ್ಲಿ ಅವರ ಮನೆತನದ ಕೊನೆಯವರಾಗಿದ್ದು ದುರಂತ.
ಸಾಹುಕಾರ್ ಚೆನ್ನಪ್ಪ ಶೆಟ್ಟರ ಮನೆ ಈಗ ಶಿಥಿಲಾವಸ್ಥೆಯಲ್ಲಿದೆ ಒಂದು ತರ ಸಮುದ್ರದಲ್ಲಿ ಮುಳುಗಿದ ಟೈಟಾನ್ ಹಡಗಿನಂತೆ ಅನ್ನಿಸುತ್ತದೆ.
ಆ ಕಾಲದಲ್ಲಿ ಇದು ಅರಮನೆಯ ಹಾಗಿತ್ತು, ಕೆಳಗಿನ ನೆಲ ಅಂತಸ್ತಿನಲ್ಲಿ ಅಂಗಡಿ ಮಳಿಗೆ, ಲೇವಾದೇವಿ ಮಾಡುವ ಕಚೇರಿ ಅದರ ಮಧ್ಯ ಒಳ ಹೋದರೆ ಆಳು ಕಾಳುಗಳು ಉಳ್ಳ ಶ್ರೀಮಂತ ಪರಿವಾರ, ಮೇಲಂತಸ್ತಿನಲ್ಲಿ ಪಂಚಾಯ್ತಿಯಂತ ಸಭೆ ನಡೆಸಲು ವಿಶಾಲ ಕಿಟಕಿಗಳುಳ್ಳ ದೊಡ್ಡ ಹಜಾರ ಅದರಿಂದ ಒಳ ಹೋದರೆ ಅತಿಥಿ ಕೊಠಡಿಗಳು ಹೀಗೆ ಇಡೀ ಆನಂದಪುರಕ್ಕೆ ಅತ್ಯಂತ ಭೂಷಣವಾಗಿದ್ದ ಈ ಅರಮನೆ ಅಂತ ಮನೆ ಪಕ್ಕದಲ್ಲೇ ಬ್ರಿಟೀಷರು ಸ್ಥಾಪಿಸಿದ್ದ ಪೋಲಿಸ್ ಠಾಣೆ ಇದ್ದಿದ್ದರಿಂದ ಇಲ್ಲಿ ಸಾಗುವವರಿಗೆ ಗೌರವ ಮತ್ತು ಭಯ ಎರೆಡೂ ಅನುಭವ ಆಗುತ್ತಿತ್ತಂತೆ.
ಸಾಹುಕಾರ್ ಚೆನ್ನಪ್ಪ ಶೆಟ್ಟರಿಗೆ ಮೂವರು ಗಂಡು ಮಕ್ಕಳು ಸಂಗಣ್ಣ ಶೆಟ್ಟರು, ಶಿವಲಿಂಗ ಶೆಟ್ಟರು ಮತ್ತು ಚೆನ್ನಣ್ಣ ಶೆಟ್ಟರ ಅಂತ. ಇತ್ತೀಚಿನವರೆಗೆ ಈ ಮನೆಯಲ್ಲಿ ಸಂಗಣ್ಣ ಶೆಟ್ಟರು ಮತ್ತವರ ಕುಟುಂಬ ಅತ್ಯಂತ ಕಷ್ಟದಿಂದ ಜೀವನ ಮಾಡಿದ್ದರು.
ಸಾಗರದ ಶ್ರೀಮಂತ ಮನೆತನದ ಹೆಣ್ಣು ವಿವಾಹ ಆಗಿದ್ದ ಚೆನ್ನಣ್ಣ ಶೆಟ್ಟರು ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರಿಂದ ಅವರ ಕುಟುಂಬ ತವರು ಮನೆ ಸೇರಿತು.
ಸಾಹುಕಾರ್ ಚೆನ್ನಪ್ಪ ಶೆಟ್ಟರ ನೂರಾರು ಎಕರೆ ಜಮೀನು, ದಿನಸಿ ವ್ಯಾಪಾರ, ಬೆಳ್ಳಿ ಬಂಗಾರದ ಲೇವಾದೇವಿ ಮತ್ತು ಆಳು ಕಾಳಿನ ಭವ್ಯ ಅರಮನೆ ಅಂತ ಮನೆ, ಸಾಮಾಜಿಕವಾಗಿದ್ದ ಗೌರವ ಪ್ರತಿಷ್ಟೆ ನೋಡಿದ್ದ ಆನಂದಪುರದ ನಿವಾಸಿಗಳು ದುಃಖ ಪಡುವಂತಾದದ್ದು ಇವರ ಮಗ ಶಿವಲಿಂಗ ಶೆಟ್ಟರ ಕುಟುಂಬದಿಂದ ಸಾಹುಕಾರ್ ಚೆನ್ನಪ್ಪ ಶೆಟ್ಟರ ನಂತರ ದಿನೇದಿನೇ ಅರ್ಥಿಕವಾಗಿ ಕುಸಿದ ಕುಟುಂಬ ಮಗ ಶಿವಲಿಂಗ ಶೆಟ್ಟರ ನಂತರ ಎರೆಡು ಹೊತ್ತಿನ ಊಟಕ್ಕೂ ಕಷ್ಟ ಪಟ್ಟಿತು. ಇವರ ಮಗ ಮಲ್ಲೇಶ್ (ಸ್ವಲ್ಪ ಬುದ್ದಿ ಮಾಂದ್ಯ ) ಮಾತ್ರ ಕುಟುಂಬ ನಡೆಸಲು ಆನಂದಪುರಂ ನ ಬಸ್ ಸ್ಟ್ಯಾಂಡ್ ನಲ್ಲಿ ಹಮಾಲಿ ಕೆಲಸ ಸಾಯುವ ತನಕ ಮಾಡಿದರು, ಇವರ ಅಕ್ಕ ಒಬ್ಬರು ಮಾತ್ರ ಸಾಗರ ತಾಲ್ಲೂಕಿನ ಆವಿನಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು ಅಂತ ಮಾಹಿತಿ ಇದೆ.
ಈಗಲೂ ಶಿಥಿಲಾವಸ್ಥೆಯ ಬೃಹತ್ ಮನೆ ಸಾಹುಕಾರ್ ಚೆನ್ನಪ್ಪ ಶೆಟ್ಟರ ದರ್ಬಾರು ನೋಡಿದವರಿಗೆ ಮುಳುಗಿದ ಟೈಟಾನ್ ಹಡುಗಿನಂತೆ ಕಾಣುವುದು ಸುಳ್ಳಲ್ಲ.
(ನಾಳೆ ಭಾಗ-12)
Comments
Post a Comment